ETV Bharat / sukhibhava

ಬೇಸಿಗೆಯಲ್ಲಿ ತಂಪು ಮಾತ್ರವಲ್ಲ, ಮನಸ್ಸಿಗೆ ಉಲ್ಲಾಸವನ್ನು ನೀಡುತ್ತದೆ ಈ ಬಗೆ ಬಗೆಯ ಲಸ್ಸಿಗಳು

author img

By

Published : Apr 28, 2023, 11:15 AM IST

ಬೇಸಿಗೆಯ ತಾಪದ ವಿರುದ್ಧ ದೇಹವನ್ನು ತಂಪಾಗಿಸಿ, ನವೋಲ್ಲಾಸ ನೀಡುತ್ತವೆ ಪಂಜಾಬಿನ ಸಂಪ್ರಾದಾಯಿಕ ಪಾನೀಯವಾದ ಲಸ್ಸಿ.

These types of lassi are not only cool in summer but also refreshing to the mind

ಬೆಂಗಳೂರು: ಬೇಸಿಗೆ ಬಂತೆಂದರೆ ಸಾಕು ದೇಹ ತಂಪು ಪಾನೀಯಗಳನ್ನು ಬೇಡುತ್ತದೆ. ಸುಡು ಬಿಸಿಲಿನಿಂದ ರಕ್ಷಣೆ ಜೊತೆ ಆರೋಗ್ಯಯುತ ಪಾನೀಯಗಳ ಆಯ್ಕೆ ವಿಚಾರದಲ್ಲಿ ಲಸ್ಸಿ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ಪಂಜಾಬ್​​ನ ಸಂಪ್ರಾದಾಯಿಕ ಪಾನೀಯವಾದ ಈ ಲಸ್ಸಿ ಇಂದು ಎಲ್ಲಡೆ ಎಲ್ಲರ ಮನಗೆದ್ದಿದೆ. ಹೆಚ್ಚಿನ ಆರೋಗ್ಯಯುತ ಅಂಶ ಇದರಲ್ಲಿದ್ದು, ಶಾಖದಿಂದ ದೇಹವನ್ನು ಕಾಪಾಡುತ್ತದೆ. ಈ ಲಸ್ಸಿಗಳು ಮೊಸರಿನಿಂದ ಮಾಡಲ್ಪಟ್ಟಿರುತ್ತದೆ. ಇದರಿಂದ ಮೊಸರಿನ ಉತ್ತಮ ಅಂಶ ದೇಹ ಸೇರುತ್ತದೆ. ಲಸ್ಸಿ ದೇಹವನ್ನು ಶಾಖದಿಂದ ತಂಪು ಮಾತ್ರ ಮಾಡುವುದಿಲ್ಲ. ಇದು ಮನಸ್ಸನ್ನು ಉಲ್ಲಾಸಿತಗೊಳಿಸಲಾಗಿದೆ. ಇನ್ನು ಈ ಲಸ್ಸಿಯಲ್ಲೂ ಸಂಪ್ರಾದಾಯಿಕ ಲಸ್ಸಿಗಳ ಹೊರತಾಗಿ ಅನೇಕ ರೀತಿಯ ರುಚಿಕರ ಲಸ್ಸಿಗಳಿವೆ. ಈ ಬೇಸಿಗೆಯ ಬೇಗೆಯನ್ನು ಹೊಡೆದೂಡಿಸಲು ಈ ವಿಧ ವಿಧದ ರುಚಿಕರ ಲಸ್ಸಿಗಳು ಸಹಾಯ ಮಾಡಲಿದೆ.

ಸ್ವೀಟ್​ ಲಸ್ಸಿ
ಸ್ವೀಟ್​ ಲಸ್ಸಿ

ಸ್ವೀಟ್​ ಲಸ್ಸಿ: ಸಾಂಪ್ರಾದಾಯಿಕ ಲಸ್ಸಿ ಎಂದರೆ ಅದು ಸ್ವೀಟ್​ ಲಸ್ಸಿ. ಎಷ್ಟೇ ವಿಧದ ಲಸ್ಸಿ ಬಂದರೂ ಈ ಸ್ವೀಟ್​ ಲಸ್ಸಿ ಅನೇಕರ ಅಚ್ಚು ಮೆಚ್ಚು. ಗಟ್ಟಿ ಮೊಸರಿಗೆ ಕೊಂಚ ನೀರು ಮತ್ತು ಸಕ್ಕರೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡುವ ಮೂಲಕ ಸುಲಭವಾಗಿ ಇದನ್ನು ತಯಾರಿಸಬಹುದು. ಇದಕ್ಕೆ ಬೇಕಾದಲ್ಲಿ ಕೊಂಚ ಕ್ರೀಮ್​ ಅನ್ನು ಮೇಲೆ ಸೇರಿಸಬಹುದು. ಬೇಸಿಗೆಯ ರಜೆ ಮೋಜಿನಲ್ಲಿ ಇವು ಮಕ್ಕಳಿಗೆ ಸಖತ್​ ಖುಷಿ ನೀಡುವುದು ಸುಳ್ಳಲ್ಲ.

ಮಾವಿನ ಲಸ್ಸಿ
ಮಾವಿನ ಲಸ್ಸಿ

ಮಾವಿನ ಲಸ್ಸಿ: ಬೇಸಿಗೆಯಲ್ಲಿ ಮಾವು ಯಥೇಚ್ಚವಾಗಿ ಮಾರುಕಟ್ಟೆಗೆ ಬರುವ ಹಿನ್ನಲೆ ಈ ಮಾವಿನ ಲಸ್ಸಿಯನ್ನು ಒಮ್ಮೆ ರುಚಿ ನೋಡಲೇಬೇಕು. ಮೊಸರಿನ ಜೊತೆಗೆ ಮಾವಿನ ತಿರಳನ್ನು ಹಾಕಿ, ಮ್ಯಾಂಗೋ ಶೇಕ್​ ರೀತಿ ಇದನ್ನು ತಯಾರಿಸ ಬಹುದು. ಹಣ್ಣಿನ ರಾಜ ಮಾವು ಈ ಲಸ್ಸಿಯ ಸ್ವಾದ ಹೆಚ್ಚಿಸುವುದು ಸುಳ್ಳಲ್ಲ.

ಚಾಕೋಲೆಟ್​ ಲಸ್ಸಿ
ಚಾಕೋಲೆಟ್​ ಲಸ್ಸಿ

ಚಾಕೋಲೆಟ್​ ಲಸ್ಸಿ: ಬೇಸಿಗೆಯ ರಜೆಯಲ್ಲಿ ಮಕ್ಕಳ ಆರೋಗ್ಯದ ಜೊತೆ ರುಚಿಗೂ ಆದ್ಯತೆ ನೀಡಬೇಕು ಎಂದರೆ, ಇದು ಅತ್ಯುತ್ತಮ. ಚಾಕೋಲೆಟ್​, ಮೊಸರು, ಕ್ರೀಮ್​ನ ಈ ಲಸ್ಸಿ ಮಕ್ಕಳಿಗೆ ಬಾಯಿ ರುಚಿ ಹೆಚ್ಚಿಸುತ್ತದೆ. ಜೊತೆಗೆ ಶಾಖದಿಂದಲೂ ರಕ್ಷಣೆ ಮಾಡುತ್ತದೆ.

ಕೇಸರ್​ ಲಸ್ಸಿ
ಕೇಸರ್​ ಲಸ್ಸಿ

ಕೇಸರ್​ ಲಸ್ಸಿ: ಸ್ವೀಟ್​ ಲಸ್ಸಿಗೆ ಕೆಲವು ದಳಗಳ ಕೇಸರಿಯನ್ನು ಸೇರಿಸುವ ಮೂಲಕ ಅದರ ಬಣ್ಣದ ಜೊತೆಗೆ ರುಚಿಯನ್ನು ಬದಲಾವಣೆ ಮಾಡಬಹುದು. ತಣ್ಣಗೆ ಇದನ್ನು ಸೇವಿಸುವುದರಿಂದ ಮನಸ್ಸಿಗೂ ಮುದ ನೀಡುತ್ತದೆ. ಇದರ ಜೊತೆಗೆ ಬೇಕಾದಲ್ಲಿ ಸ್ವಲ್ಪ ಏಲಕ್ಕಿ ಪುಡಿಯನ್ನು ಸೇರಿಸಬಹುದು.

ಸಾಲ್ಟ್​ ಲಸ್ಸಿ
ಸಾಲ್ಟ್​ ಲಸ್ಸಿ

ಸಾಲ್ಟೇಡ್​ ಲಸ್ಸಿ: ಇದು ಕೂಡ ಪಂಜಾಬಿನ ಸಂಪ್ರದಾಯಿಕ ಲಸ್ಸಿಯಾಗಿದ್ದು, ಇದು ಚಾಸ್​ ಎಂದೇ ಜನಪ್ರಿಯವಾಗಿದೆ. ಮೊಸರಿಗೆ ಉಪ್ಪು, ಕೊಂಚ ಕೊತ್ತಂಬರಿ, ಶುಂಠಿಯಂತಹ ಕೆಲವು ಮಸಾಲೆಗಳನ್ನು ಸೇರಿಸುವ ಮೂಲಕ ಇದರ ರುಚಿ ಅದ್ಬುತವಾಗಿಸಬಹುದು. ಮಜ್ಜಿಗೆಯ ರೂಪಕ್ಕಿಂತ ಕೊಂಚ ಗಟ್ಟಿಯಲ್ಲಿ ಇದು ಇರುತ್ತದೆ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಇದಲ್ಲಿ ಕಡಿಮೆ ಕ್ಯಾಲೋರಿ, ಕೊಬ್ಬು ಇದ್ದು, ಹೆಚ್ಚುನ ಪ್ರೋಟಿನ್​ ಮತ್ತು ವಿಟಮಿನ್​ ಇರುತ್ತದೆ.

ಇದನ್ನೂ ಓದಿ: ಬೇಸಿಗೆ ಬೇಗೆಯನ್ನು ಈ ಪಾನೀಯದೊಂದಿಗೆ ಹೊಡೆದೋಡಿಸಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.