ETV Bharat / sukhibhava

Pitta Dosha: ಪಿತ್ತ ದೋಷ ನಿವಾರಣೆಗೆ ಈ 3 ಸಲಹೆ ಪಾಲಿಸಿ, ಸಾಕು!

Tips to prevent Pitta Dosha: ಪಿತ್ತ ದೋಷ ಅನೇಕರನ್ನು ಕಾಡುವ ಸಮಸ್ಯೆ. ಜೀವನ ಶೈಲಿಯಲ್ಲಿ ಕೆಲವು ಮಾರ್ಪಾಡು ಮಾಡುವ ಮೂಲಕ ಇದರ ನಿವಾರಣೆ ಸಾಧ್ಯವಿದೆ.

these three tips can prevent  pitta dosha

author img

By

Published : Aug 16, 2023, 5:12 PM IST

ನವದೆಹಲಿ: ಎದೆ ಉರಿ, ಉರಿಯೂತ, ಆಮ್ಲತೆ, ಹಸಿವು ಹಾಗು ಬಾಯಾರಿಕೆ ಹೆಚ್ಚಳ ನಿಮಗೆ ಆಗುತ್ತಿದ್ದರೆ ಇದು ಪಿತ್ತ ದೋಷದ ಸಮಸ್ಯೆಯೆಂದೇ ತಿಳಿಯಿರಿ. ಈ ಎಲ್ಲಾ ಗುಣಲಕ್ಷಣಗಳು ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಹಸಿವಿನ ಲಕ್ಷಣವೂ ನಿಮ್ಮಲ್ಲಿ ಕೋಪದೊಂದಿಗೆ ಒತ್ತಡ ಹೆಚ್ಚಿಸುತ್ತದೆ. ಈ ಲಕ್ಷಣಗಳು ದೇಹದಲ್ಲಿನ ಪಿತ್ತ ದೋಷದ ಅಸಮತೋಲನದ ಲಕ್ಷಣಗಳಾಗಿವೆ.

ಆಯುರ್ವೇದದ ಪ್ರಕಾರ, ಪ್ರತಿಯೊಬ್ಬರ ದೇಹವನ್ನು ಮೂರು ಶಕ್ತಿ ಚಟುವಟಿಕೆ ನಿಯಂತ್ರಿಸುತ್ತದೆ. ಅವುಗಳೆಂದರೆ ವಾತ ದೋಷ, ಪಿತ್ತ ದೋಷ ಮತ್ತು ಕಫ ದೋಷ. ಪಿತ್ತ ದೋಷ ಸಾಮಾನ್ಯವಾಗಿ ಚಯಾಪಚಯನ ಕಾರ್ಯಾಚರಣೆ ಆಗಿದೆ. ಈ ದೋಷದ ಅಸಮತೋಲನ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಪಿತ್ತ ದೋಷವನ್ನು ನಿಮ್ಮ ಜೀವನಶೈಲಿಯಲ್ಲಿನ ಮೂರು ಬದಲಾವಣೆ ನಡೆಸುವ ಮೂಲಕ ಸುಧಾರಣೆ ಮಾಡಬಹುದು.

1. ಪಿತ್ತ ದೋಷದ ಆಹಾರ ಪದ್ದತಿ ಪಾಲಿಸಿ: ದೇಹಕ್ಕೆ ನೈಸರ್ಗಿಕವಾಗಿ ತಂಪು ಮಾಡುವಂತಹ ಆಹಾರಗಳನ್ನು ಸೇವಿಸುವ ಮೂಲಕ ನಿಯಂತ್ರಣ ಮಾಡಬಹುದು. ನೈಸರ್ಗಿಕ ಸಿಹಿ ರುಚಿಯ ಆಹಾರಗಳನ್ನು ಆರಿಸಿಕೊಳ್ಳಿ. ಹೂಕೋಸು, ಸೌತೆಕಾಯಿ, ಹಸಿರು ಸೊಪ್ಪು, ಕುಂಬಳಕಾಯಿ, ಬಟಾಣಿ, ತುಪ್ಪ, ತೆಂಗಿನಕಾಯಿ ಮತ್ತು ಸೇಬನ್ನು ಆಹಾರದಲ್ಲಿ ಸೇರಿಸಿ. ಬಾದಾಮಿಯನ್ನು ಪಿತ್ತಾಹಾರ ಎಂದು ಪರಿಗಣಿಸಲಾಗಿದ್ದು, ಪಿತ್ತ ದೋಷದ ಸಮಾತೋಲನ ಕಾಪಾಡಬಹುದು. ಆದಾಗ್ಯೂ, ನೆನೆಸಿ, ಸಿಪ್ಪೆ ತೆಗೆದ ಬಾದಾಮಿಯನ್ನು ಸೇವಿಸುವುದು ಉತ್ತಮ. ಬಾದಾಮಿಯೂ ವಾತ ಮತ್ತು ಪಿತ್ತದ ಅಸಮತೋಲನ ನಿವಾರಿಸುವ ಜೊತೆಗೆ ದೇಹದ ಆಂತರಿಕ ಶಾಖವನ್ನು ಕಡಿಮೆ ಮಾಡುತ್ತದೆ. ಖಾರವಾದ, ಬಿಸಿ ಮತ್ತು ಉಳಿ ಆಹಾರವನ್ನು ಸೇವಿಸದೇ ಇರುವುದು ಉತ್ತಮ.

2. ಯೋಗಾಭ್ಯಾಸ: ಯೋಗಾಭ್ಯಾಸವು ದೇಹದ ಸಮತೋಲನ ಕಾಪಾಡುವಲ್ಲಿ ಸಹಾಯ ಮಾಡುತ್ತದೆ. ವಿಶೇಷವಾಗಿ, ಪಿತ್ತ ದೋಷಕ್ಕೆ ಇರುವಂತೆ ಭುಜಂಗಾಸಾನ, ಮಾರ್ಜರಿಆಸನ, ಶಿಶು ಆಸನ, ಪಶ್ಚಿಮೊತ್ತಸಾ, ಶವಾಸನ ಅಭ್ಯಾಸ ಮಾಡುವುದು ಸೂಕ್ತ. ಇದು ದೈಹಿಕ ಚಟುವಟಿಕೆಯ ಸುಧಾರಣೆ ಮಾಡುವ ಜೊತೆಗೆ ಶಾಖದ ನಿರ್ವಹಣೆ ಮಾಡುತ್ತದೆ. ಧ್ಯಾನದ ಅಭ್ಯಾಸ ದೇಹವನ್ನು ಶಾಂತಗೊಳಿಸಿ, ಪಿತ್ತದ ಮಟ್ಟ ನಿರ್ವಹಣೆ ಮಾಡುತ್ತದೆ.

3. ವಿಶ್ರಾಂತಿ ಮತ್ತು ಪುನರ್ನಿಮಾಣ: ದೇಹ ಮತ್ತು ಮನಸ್ಸಿಗೆ ವಿಶ್ರಾಂತಿ ನೀಡುವ ಮೂಲಕ ಒತ್ತಡವನ್ನು ನಿವಾರಿಸಿ. ಇದಕ್ಕಾಗಿ ನಡಿಗೆ ಚಟುವಟಿಕೆ, ಉಸಿರಾಟದ ವ್ಯಾಯಾಮ, ಸಂಗೀತ ಕೇಳುವಿಕೆಯಂತಹ ಮನಸಿಗೆ ಹಿತ ನೀಡುವ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಇದು ಒಳಗಿನಿಂದ ಶಾಂತಿಯನ್ನು ಮೂಡಿಸಲು ಸಹಾಯಕ.

ಇದನ್ನೂ ಓದಿ: ಕೆಟ್ಟ ಕೊಬ್ಬು ಕರಗಿಸಲು ಬೇಕು ಉತ್ತಮ ಪೋಷಕಾಂಶಗಳು: ಇಲ್ಲಿದೆ ಸಂಪೂರ್ಣ ಡೀಟೇಲ್ಸ್​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.