ETV Bharat / sukhibhava

ಮಗುವಿನ ನೆನಪಿನ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತವೆ ಈ ಪೋಷಕಾಂಶಗಳು!... ಮಕ್ಕಳಿಗೆ ಈ ಎಲ್ಲ ಆಹಾರ ನೀಡ್ತಿದ್ದೀರಿ ಅಲ್ವಾ? - ಪ್ರತಿಯೊಬ್ಬ ಪೋಷಕರ ಇಚ್ಛೆ

ಬೆಳೆಯುವ ಮಕ್ಕಳಿಗೆ ಯಾವ ಆಹಾರಗಳು ಅವರ ನೆನಪಿನ ಶಕ್ತಿ ವೃದ್ಧಿಸಲು ಸಹಾಯವಾಗುತ್ತದೆ ಎಂಬ ಮಾಹಿತಿ ಇಲ್ಲಿದೆ.

these-nutrients-help-in-increasing-the-childs-memory

author img

By ETV Bharat Karnataka Team

Published : Oct 21, 2023, 4:15 PM IST

ಮಕ್ಕಳು ಓದಿನಲ್ಲಿ ಮುಂದಿರಬೇಕು ಎಂಬುದು ಪ್ರತಿಯೊಬ್ಬ ಪೋಷಕರ ಇಚ್ಛೆ. ಇದಕ್ಕೆ ಉತ್ತಮ ವಿದ್ಯಾಭ್ಯಾಸದ ಜೊತೆಗೆ ಅವರಿಗೆ ಪೋಷಕಾಂಶಗಳು ಅಗತ್ಯ. ಈ ಪೋಷಕಾಂಶಗಳು ಅವರು ನೆನಪಿನ ಶಕ್ತಿ ವೃದ್ಧಿಸಲು ಸಹಾಯ ಮಾಡುತ್ತದೆ. ಮಕ್ಕಳಿಗೆ ಸರಿಯಾದ ಪೋಷಣೆ ಸಿಗದೇ ಹೋದರೆ ಅವರಲ್ಲಿ ಓದಿನಲ್ಲಿ ಎಕಾಗ್ರತೆ ಮತ್ತು ಗ್ರಹಿಸುವಿಕೆ ಸಾಧ್ಯವಾಗದೇ ಹೋಗುತ್ತದೆ. ಈ ಹಿನ್ನಲೆ ಮಕ್ಕಳಿಗೆ ನೀಡುವ ಆಹಾರಗಳು ಅವರ ಒಟ್ಟಾರೆ ಆರೋಗ್ಯವನ್ನು ಸುಧಾರಿಸುವಂತೆ ಇರಬೇಕು. ಬೆಳೆಯುವ ಮಕ್ಕಳಿಗೆ ಯಾವ ಆಹಾರಗಳು ಅವರ ನೆನಪಿನ ಶಕ್ತಿ ವೃದ್ಧಿಸಲು ಸಹಾಯವಾಗುತ್ತದೆ ಎಂಬ ಮಾಹಿತಿ ಇಲ್ಲಿದೆ.

ಬ್ಲೂಬೆರ್ರೆ: ಇದು ಮಿದುಳಿ ಆರೋಗ್ಯಕ್ಕೆ ಉತ್ತಮ ಆಹಾರವಾಗಿದೆ. ಇದು ಮಿದುಳಿನ ನರದ ವ್ಯವಸ್ಥೆಯನ್ನು ಸಕ್ರಿಯವಾಗಿರಿಸಿ, ಸರಾಗ ಚಟುವಟಿಕೆಗೆ ಅನುವು ಮಾಡಿಕೊಡುತ್ತದೆ.

ಬ್ರಾಕೊಲಿ: ಇದರಲ್ಲಿ ವಿಟಮಿನ್​ ಕೆ ಸಮೃದ್ಧವಾಗಿದ್ದು, ಇದು ನೆನಪಿನ ಶಕ್ತಿ ಸುಧಾರಣೆಗೆ ಸಹಾಯ ಮಾಡುತ್ತದೆ. ಇದು ಕೂಡ ಕೇಂದ್ರದ ನರದ ವ್ಯವಸ್ಥೆ ಉತ್ತಮವಾಗಿ ಕಾರ್ಯ ನಿರ್ವಹಿಸಲು ಸಹಾಯ ಮಾಡುತ್ತದೆ. ಇದನ್ನು ಮಕ್ಕಳಿಗೆ ನೀಡುವುದು ಕೂಡ ಉತ್ತಮ ಆಯ್ಕೆ ಆಗಿದೆ.

ಡ್ರೈ ಫ್ರುಟ್ಸ್​​ ​​: ಇದು ಕೂಡ ಆರೋಗ್ಯಕ್ಕೆ ಉತ್ತಮವಾಗಿದ್ದು, ಇದನ್ನು ಡಯಟ್​ನಲ್ಲಿ ಬಳಕೆ ಮಾಡಬಹುದಾಗಿದೆ. ಇದರಿಂದ ದೇಹಕ್ಕೆ ಬೇಕಾದ ಪ್ರೋಟಿನ್​, ಕೊಬ್ಬಿನ ಆಮ್ಲ, ವಿಟಮಿನ್​ ಮತ್ತು ಮಿನರಲ್ಸ್​ ಅಂಶಗಳು ಹೆಚ್ಚಿದೆ. ಅದರಲ್ಲೂ ವಾಲ್ನಟ್​, ಪಿಸ್ತಾ ಮತ್ತು ಬಾದಾಮಿಗಳು ನರಗಳ ವ್ಯವಸ್ಥೆಯನ್ನು ಆರೋಗ್ಯವಾಗಿರಿಸಿ, ನೆನಪಿನ ಶಕ್ತಿಯನ್ನು ವೃದ್ಧಿಸುವಂತೆ ಮಾಡುತ್ತವೆ.

ಮೀನು: ಮಕ್ಕಳಿಗೆ ಅತ್ಯುತ್ತಮ ಆಹಾರದ ಆಯ್ಕೆಯಲ್ಲಿ ಇದು ಒಂದಾಗಿದೆ. ಮೀನಿನಲ್ಲಿನ ಒಮೆಗಾ 3 ಫ್ಯಾಟಿ ಆ್ಯಸಿಡ್​ಗಳು ಮಿದುಳಿನ ಕಾರ್ಯಾಚರಣೆಯನ್ನು ಸುಧಾರಣೆ ಮಾಡುತ್ತದೆ.

ಹಸಿರು ತರಕಾರಿ: ಹಸಿರು ತರಕಾರಿ ಮತ್ತು ಸೊಪ್ಪುಗಳು ಕೂಡ ಮಗುವಿನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಇದು ಮೆಟಾಬಾಲಿಸಂ ಅನ್ನು ಸುಧಾರಣೆ ಮಾಡುತ್ತದೆ. ದೇಹಕ್ಕೆ ಪೋಷಕಾಂಶವನ್ನು ಒದಗಿಸುತ್ತದೆ. ಮಲಬದ್ಧತೆಯನ್ನು ತಡೆಯುತ್ತದೆ. ರಕ್ತ ಹೀನತೆಯನ್ನು ನಿವಾರಣೆ ಮಾಡಿ, ಇದು ಕೂಡ ನರ ವ್ಯವಸ್ಥೆ ಕಾರ್ಯಾಚರಣೆಗೆ ಉತ್ತಮ ಪೋಷಕಾಂಶವನ್ನು ನೀಡುತ್ತದೆ.

ಮೊಟ್ಟೆ: ಮಕ್ಕಳಿಗೆ ನಿತ್ಯ ಮೊಟ್ಟೆಯನ್ನು ನೀಡಬೇಕು. ಮೊಟ್ಟೆಯಲ್ಲಿನ ಹಳದಿ ಕೋಲಿನ್​ ಸಮೃದ್ದವಾಗಿದೆ. ಇದು ನೆನಪಿನ ಶಕ್ತಿ ಸುಧಾರಣೆ ಮಾಡುತ್ತದೆ. ವಿಟಮಿನ್​ ಎ, ಬಿ2, ಬಿ5, ಬಿ6, ಡಿ, ಕೆ, ಫಾಸ್ಪರಸ್​ ಮತ್ತು ಸೆಲೆನಿಯಂಗಳು ಮಿದುಳಿನ ಆರೋಗ್ಯಕ್ಕೆ ರಕ್ಷಣೆ ನೀಡುತ್ತದೆ.

ಇದನ್ನೂ ಓದಿ: MIND DIET: ಮೈಂಡ್​ ಡಯಟ್​ನಿಂದ ನೆನಪಿನ ಶಕ್ತಿ ಸುಧಾರಣೆ ಆಗುವುದಿಲ್ಲ.. ಅಧ್ಯಯನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.