ETV Bharat / sukhibhava

ನಿಮ್ಮ ನಿದ್ದೆಗೆ ಅಡ್ಡಿಪಡಿಸುವ ಅಭ್ಯಾಸಗಳಿವು; ಮೊದಲು ಬದಲಾಯಿಸಿಕೊಳ್ಳಿ - ನಿದ್ದೆ ಸಮಸ್ಯೆ ಉಲ್ಬಣ

ರಾತ್ರಿ ಸಮಯದಲ್ಲಿ ರೂಢಿಸಿಕೊಳ್ಳುವ ಅಭ್ಯಾಸಗಳು ನಿದ್ದೆ ಮೇಲೆ ಸಾಕಷ್ಟು ಪ್ರತಿಕೂಲ ಪರಿಣಾಮ ಬೀರುವುದು ಮಾತ್ರವಲ್ಲ, ಆರೋಗ್ಯದ ಮೇಲೂ ಇವು ಪರಿಣಾಮ ಬೀರುತ್ತವೆ.

these Habits disrupt your sleep ; Change it first

author img

By

Published : May 2, 2023, 3:10 PM IST

ಬೆಂಗಳೂರು: ಉತ್ತಮವಾದ ಊಟದ ಅಭ್ಯಾಸ ರೂಢಿಸಿಕೊಳ್ಳುವುದರ ಜೊತೆಗೆ ರಾತ್ರಿ ಉತ್ತಮ ನಿದ್ದೆ ಮಾಡುವುದು ಅವಶ್ಯ. ಈ ನಿದ್ದೆ ಸಮಸ್ಯೆ ಉಲ್ಬಣವಾಗುವವರೆಗೂ ಯಾರೂ ಕೂಡ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ರಾತ್ರಿ ಸಮಯದಲ್ಲಿ ರೂಢಿಸಿಕೊಳ್ಳುವ ಅಭ್ಯಾಸಗಳು ನಿದ್ದೆ ಮೇಲೆ ಸಾಕಷ್ಟು ಪ್ರತಿಕೂಲ ಪರಿಣಾಮ ಬೀರುವುದು ಮಾತ್ರವಲ್ಲ, ಆರೋಗ್ಯದ ಮೇಲೂ ಇವು ಪರಿಣಾಮ ಬೀರುತ್ತವೆ. ಇದರಿಂದಾಗಿ ನಮ್ಮ ನಿದ್ರೆಯ ಅಭ್ಯಾಸವನ್ನು ಬದಲಾಯಿಸುವುದು ಅತ್ಯವಶ್ಯಕ. ಇದು ಜೀವನ ಮಟ್ಟ ಸುಧಾರಣೆಗೂ ಸಹಾಯ ಮಾಡುತ್ತದೆ.

ಈ ಸಂಬಂಧ ದಿ ಸ್ಲೀಪ್​ ಕಂಪನಿಯ ಸಹ ಸಂಸ್ಥಾಪಕಿಯಾಗಿರುವ ಪ್ರಿಯಾಂಕಾ ಸಾಲೋಟ್​ ಪ್ರಮುಖವಾಗಿ ಐದು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ನಿದ್ದೆ ಅಭ್ಯಾಸಗಳು ಉತ್ತಮ ನಿದ್ರೆಗೆ ತೊಡಕಾಗುತ್ತದೆ ಎಂದಿದ್ದಾರೆ.

ಸ್ಕ್ರೀನ್​ ಟೈಂ: ರಾತ್ರಿ ಮಲಗುವ ಮುನ್ನ ಒಮ್ಮೆ ಮೊಬೈಲ್​, ಲ್ಯಾಪ್​ಟಾಪ್​ ಅಥವಾ ಕಂಪ್ಯೂಟರ್​ ಮೇಲೆ ಕಣ್ಣು ಆಡಿಸುವುದು ಅನೇಕ ಜನರ ಅಭ್ಯಾಸ. ಆದರೆ, ಈ ಅಭ್ಯಾಸ ಬಹಳ ಕೆಟ್ಟದ್ದು. ಸ್ಕ್ರೀನ್​ ಬೆಳಕು. ಮೊಬೈಲ್​ ವೀಕ್ಷಣೆ ವೇಳೆ ಹೊರಹೊಮ್ಮುವ ಬೆಳಕು ನಿದ್ರೆಯ ಕ್ರಮಕ್ಕೆ ಅಡ್ಡಿ ಪಡಿಸುತ್ತದೆ. ಅನೇಕ ಮಂದಿ ಟಿವಿ, ಮೊಬೈಲ್​, ಲ್ಯಾಪ್​ಟಾಪ್​​ ವೀಕ್ಷಣೆ ಬಳಿಕ ನಿದ್ರಿಸಲು ಕಷ್ಟಪಡುತ್ತಾರೆ. ಈ ಹಿನ್ನೆಲೆ ನಿದ್ದೆ ಸಮಯದಲ್ಲಿ ಇಂತಹ ಗ್ಯಾಜೆಟ್​ಗಳಿಂದ ದೂರು ಇರುವುದು ಉತ್ತಮ. ಇದಕ್ಕೆ ಪರ್ಯಯಾವಾಗಿ ಓದುವ ಅಭ್ಯಾಸ ರೂಢಿಸಿಕೊಳ್ಳುವುದು ಉತ್ತಮ.

ವ್ಯಾಯಾಮ : ವ್ಯಾಯಾಮ ದೇಹಕ್ಕೆ ಅಗತ್ಯ. ಆದರೆ, ಮಲಗುವ ಮುನ್ನ ನಡೆಸುವ ವ್ಯಾಯಾಮಗಳು ನಿದ್ರೆ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ವ್ಯಾಯಾಮದ ವೇಳೆ ಬಿಡುಗಡೆಯಾಗುವ ಶಕ್ತಿಗಳು, ಹಾರ್ಮೋನುಗಳು ಹೆಚ್ಚು ಕ್ರಿಯಾಶೀಲರಾಗುವಂತೆ ನೋಡಿಕೊಳ್ಳುತ್ತವೆ. ಇದರಿಂದ ನಿದ್ರೆಗೆ ಭಂಗ ಉಂಟಾಗುತ್ತದೆ. ಭಾರೀ ವ್ಯಾಯಾಮದ ಬದಲಾಗಿ ಸ್ಟ್ರೆಚಿಂಗ್​​ ಅಥವಾ ಸರಳ ಯೋಗಾಭ್ಯಾಸ ಉತ್ತಮ.

ಊಟದ ಅಭ್ಯಾಸ: ರಾತ್ರಿ ಹೆಚ್ಚಿನ ಪ್ರಮಾಣದಲ್ಲಿ ಊಟ ಮಾಡುವ ಅಭ್ಯಾಸ ಕೂಡ ನಿದ್ರೆ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೆ, ಹೆಚ್ಚಿನ ಕೆಫಿನ್​ ಸೇವನೆ ನಿದ್ದೆಗೆ ತೊಡಗಾಗುತ್ತದೆ. ಕೆಫಿನ್​ ಅಂಶಗಳು ನಮ್ಮನ್ನು ಎಚ್ಚರದಿಂದ ಇರಲು ಪ್ರೇರೇಪಿಸುವ ಹಿನ್ನೆಲೆ ರಾತ್ರಿ ಸಮಯದಲ್ಲಿ ಹೆಚ್ಚು ಪ್ರಮಾಣದ ಕೆಫಿನ್​ ಅಂಶ ಸೇವಿಸದಿರುವುದು ಉತ್ತಮ.

ಬೆಳಕು ಮತ್ತು ಶಬ್ದದ ಪ್ರಭಾವ : ರಾತ್ರಿಯ ನಿದ್ದೆ ಸಮಯದಲ್ಲಿ ಶಾಂತವಾದ ಮಂದ ಬೆಳಕಿನ ವಾತಾವರಣ ಕಾಯ್ದುಕೊಳ್ಳುವುದು ಅತ್ಯವಶ್ಯಕ. ತೀವ್ರ ಬೆಳಕು ಮತ್ತು ಶಬ್ದ ನಿದ್ದೆಗೆ ಕಿರಿಕಿರಿ ಉಂಟು ಮಾಡುತ್ತದೆ. ಇದರಿಂದ ರಾತ್ರಿ ಮಲಗುವ ಕೋಣೆ ಶಾಂತ ಮತ್ತು ನೈರ್ಮಲ್ಯದಿಂದ ಇರುವಂತೆ ನೋಡಿಕೊಳ್ಳುವುದು ಅವಶ್ಯಕ.

ಆರೋಗ್ಯಕರ ಜೀವನ ಶೈಲಿಯನ್ನು ಕಾಪಾಡಿಕೊಳ್ಳಲು ನಿದ್ರೆ ಅತ್ಯವಶ್ಯಕವಾಗಿದೆ. ಈ ಹಿನ್ನೆಲೆ ನಿದ್ರೆ ಸಂಬಂಧಿತ ವಿಚಾರಗಳನ್ನು ನಿರ್ಲಕ್ಷ್ಯ ಮಾಡಬಾರದು. ಉತ್ತಮ ಗುಣಮಟ್ಟದ ನಿದ್ದೆ ಮೇಲೆ ದಿನವೂ ಕೂಡ ತೀರ್ಮಾನವಾಗುವುದರಿಂದ ಮಲಗುವ ಮುನ್ನ ಕೆಲವು ಒಳ್ಳೆಯ ಅಭ್ಯಾಸ ರೂಢಿಸಿಕೊಳ್ಳುವುದು ಅವಶ್ಯ.

ಇದನ್ನೂ ಓದಿ: ಇದೇ ಕಾರಣಕ್ಕೆ ಬೆಳಗ್ಗೆ ಎದ್ದಾಕ್ಷಣ ಟೀ ಸೇವನೆ ಒಳ್ಳೆಯದಲ್ಲ ಎನ್ನುವುದು! ಹಾಗಾದರೆ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.