ETV Bharat / sukhibhava

ಡೇಟಿಂಗ್​ ಮಾಡಲು ಮತ್ತು ಸಂಬಂಧ ಮುರಿಯಲು ಈ ಅಂಶಗಳು ಪ್ರಮುಖ ಕಾರಣ ಇವುಗಳಂತೆ..! - ನೈತಿಕ ಮೌಲ್ಯದಲ್ಲಿ ಸಾಮ್ಯತೆ ಅಗತ್ಯ

ಡೇಟಿಂಗ್ ಆ್ಯಪ್​ಗಳು ಹೊಸ ಸಂಬಂಧಗಳು ಹುಟ್ಟಿಗೆ ಕಾರಣವಾಗುವ ಜೊತೆಗೆ ಸಂಬಂಧ ಮುರಿಯಲು ಕೂಡ ಕಾರಣವಾಗುತ್ತದೆ. ಯುವ ಜನತೆಯಲ್ಲಿ ಸಂಬಂಧ ಮುರಿಯಲು ಪ್ರಮುಖ ಕಾರಣಗಳ ಕುರಿತು ಡೇಟಿಂಗ್​ ಆ್ಯಪ್​ವೊಂದು ವಿಶ್ಲೇಷಣೆ ನಡೆಸಿದೆ.

ಡೇಟಿಂಗ್​ ಮಾಡಲು ಮತ್ತು ಸಂಬಂಧ ಮುರಿಯಲು ಈ ಅಂಶಗಳು ಪ್ರಮುಖ ಕಾರಣ ಇವಂತೆ..!
these-factors-are-the-main-reasons-for-dating-and-relationship-breakups
author img

By

Published : Feb 6, 2023, 5:25 PM IST

ನವದೆಹಲಿ: ಡೇಟಿಂಗ್​ ಆ್ಯಪ್​ಗಳಲ್ಲಿ ಟೈರ್​ 1 ಮತ್ತು ಟೈರ್​ 2 ನಗರಗಳ 25 ರಿಂದ 35 ವರ್ಷದ 12 ಸಾವಿರ ಬಳಕೆದಾರರು ಇದ್ದಾರೆ ಎಂದು ಪ್ರಖ್ಯಾತ ಡೇಟಿಂಗ್​ ಆ್ಯಪ್​ವೊಂದು ತಿಳಿಸಿದೆ. ಈ ಡೇಟಿಂಗ್​ ಆ್ಯಪ್​ನಲ್ಲಿ ಒಬ್ಬ ಬಳಕೆದಾರರಿಗೆ ಮತ್ತೊಬ್ಬ ವ್ಯಕ್ತಿ ಪ್ರೊಫೈಲ್​ ಇಷ್ಟವಾಗಲು ಮತ್ತು ಸಂಬಂಧವನ್ನು ಮುರಿದುಕೊಳ್ಳಲು ಕಾರಣ ಏನು ಎಂಬುದರ ಕುರಿತು ಡೇಟಿಂಗ್​ ಮತ್ತು ಫ್ರೆಂಡ್​ಶಿಪ್​ ಆ್ಯಪ್​ ಸಮೀಕ್ಷೆ ನಡೆಸಿದೆ.

ಈ ಆ್ಯಪ್​ಗಳು ಯುವಕರನ್ನು ಅರ್ಥೈಸಿಕೊಳ್ಳುವಿಕೆಗೆ ಹಲವು ಪ್ರಶ್ನೆಗಳನ್ನು ಕೇಳಿದೆ. ವರದಿಯ ಅನುಸಾರ 30 ವರ್ಷಕ್ಕಿಂತ ಮೇಲ್ಪಟ್ಟ ಸುಮಾರು 24 ಪ್ರತಿಶತದಷ್ಟು ಜನರು, ಉದ್ಯೋಗ ಮತ್ತು ಶಿಕ್ಷಣದ ಮಟ್ಟವನ್ನು ಆಧಾರಿಸಿ ವ್ಯಕ್ತಿಯನ್ನು ತಿರಸ್ಕರಿಸುತ್ತಾರೆ. ಇಂತಹ ಪ್ರಮುಖ ವಿಷಯಗಳ ಹೊರತಾಗಿ ಅನೇಕ ವಿಚಾರಗಳಿಗೆ ಪ್ರೊಫೈಲ್​ ತಿರಸ್ಕರಿಸುತ್ತಾರೆ ಎಂದು ಸಮೀಕ್ಷೆಯ ಸಂಶೋಧನೆಗಳಲ್ಲಿ ತಿಳಿಸಲಾಗಿದೆ.

ಡೇಟಿಂಗ್​ ಆ್ಯಪ್​ ಸಂಸ್ಥಾಪಕ ಮತ್ತು ಸಿಇಒ ರವಿ ಮಿಟ್ಟಲ್​ ಪ್ರಕಾರ, ಕಳೆದ ತಿಂಗಳು ಸರಿ ಸುಮಾರು 24 ಮಿಲಿಯನ್​ ಚಾಟ್​​ಗಳ ವಿನಿಮಯ ಆಗಿದೆ. ವಯಸ್ಸು ಮತ್ತು ನೈತಿಕ ಮೌಲ್ಯಗಳು ಡೇಟರ್​ಗಳ ನಡುವೆ ಒಪ್ಪಂದಕ್ಕೆ ಬಾರದ ವಿಷಯಗಳಾಗಿದೆ. ಬಹುತೇಕ ಡೇಟರ್​ಗಳು ಪ್ರೋಫೈಲ್​ಗಳು ಸತ್ಯಾಂಶಗಳಿಂದ ಸರಿಯಾಗಿ ಇರಬೇಕು ಎಂದು ಬಯಸುತ್ತಾರೆ. ಇತ್ತೀಚೆಗೆ ನಾವು ರಿಯಲ್​ ಟೈಮ್​ ಡಾಟಾದ ವೈಶಿಷ್ಟವನ್ನು ಕೂಡ ಬಳಕೆದಾರರಿಗೆ ನೀಡಿದ್ದಾರೆ. ಈ ಮೂಲಕ ಅನುಮಾನ ವ್ಯಕ್ತವಾದ ಪ್ರೊಫೈಲ್​ ವಿರುದ್ಧ ತಕ್ಷಣಕ್ಕೆ ಕ್ರಮಕ್ಕೆ ಮುಂದಾಗಲಾಗುವುದು

ನೈತಿಕ ಮೌಲ್ಯದಲ್ಲಿ ಸಾಮ್ಯತೆ ಅಗತ್ಯ: ಟೈರ್​ 1 ಮತ್ತು ಟೈರ್​ 2 ನಗರಗಳಲ್ಲಿ ವಾಸಿಸುವ ಶೇ 34ರಷ್ಟು ಡೇಟರ್​ಗಳು ನೈತಿಕ ಮೌಲ್ಯ ಮತ್ತು ಚಿಂತನೆ ಕುರಿತು ಗಮನ ಹರಿಸುತ್ತದೆ. ಸಂಬಂಧದ ಬಳಿಕ ಈ ಕುರಿತು ಪ್ರಶ್ನಿಸುವುದು ಏತಕ್ಕೆ ಎಂದು ಪ್ರಶ್ನಿಸಿದಾಗ ಅವರು ವಿಭಿನ್ನ ಚಿಂತನೆಗಳು ತೊಂದರೆ ಮತ್ತು ಬ್ರೇಕ್​ ಅಪ್​ಗೆ ಕಾರಣವಾಗುತ್ತದೆ ಎನ್ನುತ್ತಾರೆ. ಅಲ್ಲದೇ ನಿಮ್ಮ ಮೌಲ್ಯಗಳನ್ನು ಅವರು ಅರ್ಥ ಮಾಡಿಕೊಳ್ಳದಿರುವುದು ಅಥವಾ ಗೌರವ ನೀಡದರಿವುದು ಉತ್ತಮ ಅನುಭವವನ್ನು ನೀಡುವುದಿಲ್ಲ ಎನ್ನತ್ತಾರೆ ಅವರು.

ಹಸಿರು ಕಣ್ಣಿನ ಮಾನ್​​ಸ್ಟರ್​ ಉತ್ತಮ: ಹೊಟ್ಟೆ ಉರಿಗೆ ಒಳಗಾಗುವುದು ಕೂಡ ಶೇ 37 ಡೇಟರ್​ಗಳಲ್ಲಿ ಕಂಡು ಬರುತ್ತಿರುವುದಾಗಿ ತಿಳಿಸಲಾಗಿದೆ. 25 ರಿಂದ 30 ವರ್ಷದ ಉದ್ಯೋಗಿಗಳು ಕಾರಣ ರಹಿತವಾಗಿ ಸಂಬಂಧದಲ್ಲಿ ಹೊಟ್ಟೆ ಉರಿಗೆ ಒಳಗಾಗುವುದು ಕೂಡ ಗಂಭೀರ ಸಮಸ್ಯೆಯಾಗಿದೆ. ಇದರಿಂದ ನಂಬಿಕೆ ಮತ್ತು ಜೀವನ ನಿಯಂತ್ರಣ ತಪ್ಪುವ ಸಮಸ್ಯೆ ಕಾಣ ಬಹುದಾಗಿದೆ.

ವಯಸ್ಸು ಕೇವಲ ಅಂಕಿ ಅಷ್ಟೇ: ಮಹಿಳೆಯರು ವಯಸ್ಸಿನಲ್ಲಿ ರಾಜಿಗೆ ಸಿದ್ದರಾಗಿರುತ್ತಾರೆ. 26 ರಿಂದ 29 ವರ್ಷದ ಶೇ 26ರಷ್ಟು ಮಹಿಳೆಯರು ಐದು ವರ್ಷ ದೊಡ್ಡವರು ಮತ್ತು ಕಡಿಮೆ ವಯಸ್ಸಿನ ಪುರಷರೊಂದಿಗೆ ಡೇಟಿಂಗ್​ ಸಿದ್ದರಾಗುತ್ತಾರೆ. 30 ವರ್ಷಕ್ಕಿಂತ ಹೆಚ್ಚಿನ ಮಹಿಳೆಯರು ತಮಗಿಂತ 5ರಿಂದ ಆರು ವರ್ಷದ ಪುರಷರ ಪ್ರೋಫೈಲ್​ ಒಪ್ಪಿಗೆ ಮಾಡುತ್ತಾರೆ.

ಎಲ್ಲಿ ವಾಸಿಸುತ್ತೀರಾ? : ಟೈರ್​ 1 ನಗರದಲ್ಲಿ ವಾಸಿಸುವ ಜನರು ವಾಸಿಸುವ ಸ್ಥಳದ ಬಗ್ಗೆ ರಾಜಿಗೆ ಮುಂದಾಗುವುದಿಲ್ಲ. ದೆಹಲಿ ಮತ್ತು ಬೆಂಗಳೂರಿನಲ್ಲಿ ವಾಸಿಸುವ ಶೇ 22ರಷ್ಟು ಪುರುಷರು ಇತರೆ ನಗರ ಅಥವಾ ಸ್ಥಳದ ಹುಡುಗಿಯರೊಂದಿಗೆ ಡೇಟಿಂಗ್​ ನಡೆಸಲು ಹಿಂಜರಿಯುತ್ತಾರೆ. ಕಾರಣ ಅವರು ಲಾಂಗ್​​ ಡಿಸ್ಟನ್ಸ್ ಸಂಬಂಧ ಹೊಂದಲು ಇಷ್ಟ ಪಡುವುದಿಲ್ಲ. ಶೇ 9ರಷ್ಟು ಮಂದಿ ಇದಕ್ಕೆ ಒಪ್ಪಿಗೆ ಸೂಚಿಸುತ್ತಾರೆ.

ಮೋಸಗಾರರಿಗೆ ಅವಕಾಶ ಇಲ್ಲ: ಶೇ 29ರಷ್ಟು ಮಹಿಳೆ ಮತ್ತು ಪುರುಷರು ಸಂಬಂಧದಲ್ಲಿ ಮೋಸ ಇದೆ ಎಂದು ಕಂಡು ಬಂದಾಕ್ಷಣ ಅದನ್ನು ಮುರಿಯಲು ಮುಂದಾಗುತ್ತಾರೆ. ಈ ಹಿಂದೆ ತಮ್ಮ ಮಾಜಿ ಪ್ರೇಮಿಗಳಿಗೆ ಮೋಸ ಮಾಡಿದ್ದಾರೆ, ನಂಬಿಕೆ ಕಳೆದುಕೊಂಡಿದ್ದಾರೆ ಎಂದು ತಿಳಿದು ಬಂದರೆ, ಅದರಿಂದ ದೂರ ಸಾಗುತ್ತಾರೆ.

ಚಟ ಕೂಡ ಸಂಬಂಧ ಮುರಿಯಲು ಕಾರಣ: ಟೈರ್​ 1 ಮತ್ತು ಟೈರ್​ 2 ನಗರದ ಶೇ 21ರಷ್ಟು ಪುರುಷ ಮತ್ತು ಮಹಿಳೆಯರು ಆಕರ್ಷಿತವಲ್ಲದ ಮತ್ತು ಅನಾರೋಗ್ಯಕರ ಹವ್ಯಾಸ ಹೊಂದಿದ್ದರೆ, ಅವರ ಸಂಬಂಧ ಮುರಿಯಲು ಮುಂದಾಗುತ್ತಾರೆ.

ಇದನ್ನೂ ಓದಿ: ನಿಮ್ಮ ಫಿಟ್ನೆಸ್ ಹೆಚ್ಚಿಸಿಕೊಳ್ಳಬೇಕೇ: ಹಾಗಾದರೆ 5 ಆರೋಗ್ಯಕರ ಆಯುರ್ವೇದ​ ಪದಾರ್ಥಗಳನ್ನು ನೀವೂ ಟ್ರೈ ಮಾಡಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.