ETV Bharat / sukhibhava

ಅಳುಕಿಲ್ಲದೇ ಆರಂಭಿಸಬಹುದು ವೃತ್ತಿ ಜೀವನದ ಸೆಕೆಂಡ್​ ಇನ್ಸಿಂಗ್ಸ್‌: ಸಹಾಯ ಮಾಡುತ್ತೆ ಈ ಸಂಸ್ಥೆಗಳು - ಕೆಲಸಕ್ಕೆ ಮರಳುವ ಕುರಿತು ಚಿಂತೆ ನಡೆಸಿದರೂ

ದೀರ್ಘಾವಧಿ ಬಿಡುವಿನ ಬಳಿಕ ಮತ್ತೆ ಕೆಲಸ ಆರಂಭಿಸುವ ಮಹಿಳೆಯರಲ್ಲಿ ಕೌಶಲ್ಯ ಅಭಿವೃದ್ಧಿಗೆ ಬೆಂಬಲ ನೀಡುತ್ತಿವೆ ಸಂಸ್ಥೆಯ ಈ ಹೊಸ ಕಾರ್ಯಕ್ರಮಗಳು..

these-companies-provide-opportunities-to-women-who-are-thinking-of-starting-the-second-inning-of-their-career

author img

By

Published : Mar 15, 2023, 1:57 PM IST

ಎರಡು ಮಕ್ಕಳಾದ ಬಳಿಕ ಮನೆ, ಮಕ್ಕಳ ಆರೈಕೆಯಲ್ಲಿ ತೊಡಗುವ ಮಹಿಳೆಯರಿಗೆ ಕಾಡುವ ಸಹಜವಾಗಿ ಪ್ರಶ್ನೆ ಎಂದರೆ ಯಾಕಾಗಿ ಇಷ್ಟೆಲ್ಲಾ ಓದಬೇಕಿತ್ತು ಎಂಬುದು. ಈ ವೇಳೆ ದೀರ್ಘಾವಧಿ ಬಿಡುವಿನ ಬಳಿಕ ಮತ್ತೆ ಕೆಲಸಕ್ಕೆ ಮರಳುವ ಕುರಿತು ಚಿಂತೆ ನಡೆಸಿದರೂ, ಓಡುತ್ತಿರುವ ಜಗತ್ತಿನಲ್ಲಿ ಎಲ್ಲವೂ ಬದಲಾಗುತ್ತಿರುತ್ತದೆ. ಕೆಲಸದಲ್ಲೂ ಇದು ಹೊರತಲ್ಲ ಎಂಬ ಪ್ರಶ್ನೆ ಕೂಡ ಕಾಡದೇ ಇರಲಾರದು. ಇಂತಹ ಮನಸ್ಥಿತಿಯಲ್ಲಿ ಅನೇಕ ಮಹಿಳೆಯರು ಹೊಸತನಕ್ಕೆ ಒಗ್ಗಿ ಕೆಲಸ ಮಾಡೋಣ್ವಾ ಅಥವಾ ಬೇಡವೇ ಎಂದು ಚಿಂತಿಸುತ್ತಿರುತ್ತಾರೆ. ಕೆಲಸದಲ್ಲಿ ದೀರ್ಘ ಕಾಲದ ಬಿಡುವಿನ ಬಳಿಕ ಮತ್ತೆ ಉದ್ಯೋಗದಲ್ಲಿ ತೊಡಗುವ ಜೊತೆಗೆ ಮನೆಯನ್ನೂ ತೂಗಿಸಿಕೊಂಡು ಸೆಕೆಂಡ್​ ಇನ್ಸಿಂಗ್​ ಆರಂಭಿಸುತ್ತೇನೆ ಎಂಬ ಮಹಿಳೆಯರಿಗೆ ಅನೇಕ ಅವಕಾಶಗಳಿವೆ. ಅವುಗಳನ್ನು ಪತ್ತೆ ಮಾಡುವುದು ಅವಶ್ಯವಾಗಿದೆ.

ಮಹಿಳೆಯರ ಶಕ್ತಿ ಮತ್ತು ಸಾಮರ್ಥ್ಯವನ್ನು ಗಮನಿಸಿ ಕೆಲ ಸಂಸ್ಥೆಗಳು ಎಲ್ಲಾ ಕ್ಷೇತ್ರಗಳಲ್ಲಿ ಅವರಿಗೆ ಅವಕಾಶವನ್ನು ನೀಡುತ್ತಿದೆ. ಬ್ರೇಕ್​ ಬಳಿಕದ ಎರಡನೇ ಇನ್ಸಿಂಗ್​ ಶುರು ಮಾಡುವ ಮಹಿಳೆಯರಿಗೆ ಇಂತಹ ಸಂಸ್ಥೆ ಸಹಾಯ ಮಾಡುತ್ತಿದೆ. ಅದರಲ್ಲೂ ಕೆಲ ಕಂಪನಿಗಳಂತೂ ಬ್ರೇಕ್​ ಬಳಿಕ ಮತ್ತೆ ಉದ್ಯೋಗ ಆರಂಭಿಸುವ ಮಹಿಳೆಯರಿಗೆ ಕೆಲವು ವಿಶೇಷ ತರಬೇತಿಗಳನ್ನು ನೀಡುವ ಮೂಲಕ ಅವರನ್ನು ಸಮರ್ಥರನ್ನಾಗಿಸುವ ಮೂಲಕ ಅವರಲ್ಲಿನ ಅಳುಕನ್ನು ಹೋಗಲಾಡಿಸುತ್ತದೆ. ಮಹಿಳೆಯರು ಬ್ರೇಕ್​ ಪಡೆದ ಕಾಲದಲ್ಲಿ ಅಭಿವೃದ್ಧಿ ಹೊಂದಿದ ಕೌಶಲ್ಯಗಳ ಕುರಿತು, ಅದರ ನಿರ್ವಹಣೆ, ಮಾರುಕಟ್ಟೆಯ ಅವಶ್ಯಕತೆ ಮತ್ತು ಉದ್ಯೋಗ ಅವಕಾಶಗಳ ಕುರಿತು ಕೆಲವು ಕೌಶಲ್ಯಗಳನ್ನು ಕಲಿಸುವ ಅನೇಕ ತರಬೇತಿಗಳು ಕಾರ್ಯಕ್ರಮಗಳಿವೆ. ಇವು ಮಹಿಳೆಯರ ಸೆಕೆಂಡ್​ ಇನ್ಸಿಂಗ್​ಗೆ ಬೇಕಾದ ಸಂಪೂರ್ಣ ಬೆಂಬಲ ನೀಡುತ್ತದೆ.

ಟಾಟಾ- ಸೆಕೆಂಡ್​ ಕೆರಿಯರ್​ ಇನ್ಸ್​ಪೈರಿಂಗ್​ ಪೊಸಿಬಿಲಿಟಿಸ್​ (ಎನ್​ಸಿಐಪಿ): ಬ್ರೇಕ್​ ಬಳಿಕ ತಮ್ಮ ಕಾರ್ಯಕ್ಷೇತ್ರಕ್ಕೆ ಪ್ರವೇಶಿಸಲು ಅಗತ್ಯವಾದ ಸಂಪನ್ಮೂಲಗಳೊಂದಿಗೆ ಕೌಲಶ್ಯ ತರಬೇತಿಗಳನ್ನು ಕಂಪನಿ ನೀಡುತ್ತದೆ. ಐಟಿ, ಇಂಜಿನಿಯರಿಂಗ್​, ಮ್ಯಾನುಫ್ಯಾಕ್ಚರಿಂಗ್​, ಹ್ಯೂಮನ್​ ರಿಸೋರ್ಸ್​ ಮ್ಯಾನೇಜ್​ಮೆಂಟ್​​ ಹೀಗೆ ಹಲವಾರು ವಿಭಾಗಗಳಲ್ಲಿ ನಿಮ್ಮಿಷ್ಟದ ಕ್ಷೇತ್ರಗಳನ್ನು ಆರಿಸಿಕೊಂಡು, ತಜ್ಞರಿಂದ ಮಾರ್ಗದರ್ಶನ ಪಡೆಯಬಹುದು. ಈ ಸಂಸ್ಥೆ ಮೂರು ತಿಂಗಳಿನಿಂದ ವರ್ಷದವರೆಗಿನ ಎರಡು ಕೋರ್ಸ್​​ಗಳನ್ನು ನಡೆಸುತ್ತದೆ. ಇದಕ್ಕಾಗಿ ಈ ಸಂಸ್ಥೆಯ ವೆಬ್​ಸೈಟ್​ನಲ್ಲಿ ನೋಂದಾಣಿ ಮಾಡಿಕೊಳ್ಳುವುದು ಅವಶ್ಯಕ. ಈ ಪ್ರಕ್ರಿಯೆ ಬಳಿಕ ಖಾಲಿ ಇರುವ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಹ ಅಭ್ಯರ್ಥಿಗಳು ಸಂಘಟನೆಯನ್ನು ಪ್ರತಿನಿಧಿಸಬಹುದಾಗಿದೆ.

ಕಾಂಗ್ನಿಜೆಟ್​- ರಿಟರ್ನ್​ಶಿಪ್​ ಪ್ರೋಗ್ರಾಂ: ದೀರ್ಘ ಕಾಲದ ಬಿಡುವಿನ ಬಳಿಕ ಬಹುತೇಕ ಮಹಿಳೆಯರು ತಮ್ಮ ಕೆಲಸಕ್ಕೆ ಮತ್ತೆ ಸೇರಲು ಇಚ್ಚಿಸುವುದಿಲ್ಲ. ಅಂತಹ ಜನರಿಗಾಗಿ ಕಾಂಗ್ನಿಜೆಟ್​ ಈ ರಿಟರ್ನ್​ಶಿಪ್​ ಪ್ರೋಗ್ರಾಂ ಅನ್ನು ತಂದಿದೆ. 12 ವಾರಗಳ ವಿಶೇಷ ಕಾರ್ಯಕ್ರಮವನ್ನು ಸಂಸ್ಥೆ ಮಾಡುತ್ತದೆ. ಈ ಮೂಲಕ ಮಾರುಕಟ್ಟೆಯ ಅವಶ್ಯಕತೆಗೆ ಅನುಗುಣ ಮತ್ತು ಇತರೆ ಅಗತ್ಯ ಸಂಪನ್ಮೂಗಳಿಗೆ ಅನುಸಾರ ಅಭ್ಯರ್ಥಿಗಳನ್ನು ಸಿದ್ದಪಡಿಸಲಾಗುವುದು. ಈ ಕಾರ್ಯಕ್ರದ ತರಬೇತಿಯಲ್ಲಿ ಮೆರಿಟ್​ ಪಡೆದ ಅಭ್ಯರ್ಥಿಗಳನ್ನ ತಮ್ಮ ಸಂಸ್ಥೆಯಲ್ಲಿಯೇ ಪೂರ್ಣ ಕಾಲಿಕ ನೌಕರರನ್ನಾಗಿ ಆಯ್ಕೆ ಮಾಡುತ್ತದೆ ಕಾಗ್ನಿಜೆಂಟ್​ ಸಂಸ್ಥೆ.

ವಿಪ್ರೋ- ಬಿಗಿನ್​ ಅಗೈನ್: ಕೆಲಸದ ಜಂಜಾಟದಿಂದ ಬಿಡುವು, ತಾಯ್ತಾನ, ಹಿರಿಯರ ಕಾಳಜಿ, ಪ್ರವಾಸ ಅಥವಾ ತಮ್ಮ ಹವ್ಯಾಸ ಸೇರಿದಂತೆ ಇನ್ನಿತರ ಕಾರಣದಿಂದ ಅನೇಕ ಮಂದಿ ಉದ್ಯೋಗಕ್ಕೆ ಕೆಲ ಕಾಲ ಗುಡ್​ ಬೈ ಹೇಳುವುದು ಸಹಜ. ಆರು ತಿಂಗಳು ಸೇರಿದಂತೆ ಒಂದು ವರ್ಷಗಳ ಕಾಲ ಕೆಲಸದಿಂದ ಬ್ರೇಕ್​ ಪಡೆದ ಮಹಿಳಾ ಉದ್ಯೋಗಿಗಳು ಸಂಸ್ಥೆಗೆ ಮತ್ತೆ ಉದ್ಯೋಗಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.

ಆಕ್ಸೆಂಚರ್​- ಕೆರಿಯರ್​ ರಿಬೋಟ್​​: ಬ್ರೇಕ್ ​ಬಳಿಕ ಮತ್ತೆ ಕೆಲಸ ಬೇಕು ಎನ್ನುವವರಿಗೆ ಆರು ತಿಂಗಳ ಕಾಲದ ವಿಶೇಷ ತರಬೇತಿ ಅವಕಾಶವನ್ನು ನೀಡಲಾಗುವುದು. ಇದು ಅಭ್ಯರ್ಥಿಗಳಿಗೆ ಉದ್ಯಮದ ತಜ್ಞರ ಮತ್ತು ನಾಯಕರ ಜೊತೆಗೆ ಅನೇಕ ಕ್ಷೇತ್ರದಲ್ಲಿ ಜೊತೆ ಕೆಲಸ ಮಾಡುವ ಅವಕಾಶ ನೀಡಿ, ಅವರಲ್ಲಿ ಆತ್ಮ ವಿಶ್ವಾಸ ಮೂಡಿಸುತ್ತದೆ. ಕೌಶಲ್ಯ ಅಭಿವೃದ್ಧಿ ಆಗುವುದರಿಂದ ಉದ್ಯೋಗ ಮರಳಿ ಪಡೆಯಲು ಹೊಸ ದಾರಿ ಸಿಗುತ್ತದೆ. ಫೈನಾನ್ಸ್​- ಅಕೌಂಟಿಂಗ್​ ಮತ್ತು ಬಿಪಿಒ ಹಿನ್ನೆಲೆಯಲ್ಲಿ ಹೊಂದಿರುವ ಯಾರಾದರೂ ತಮ್ಮ ಸಂಪೂರ್ಣ ಮಾಹಿತಿಯೊಂದಿಗೆ ಸಂಸ್ಥೆಯ ವೆಬ್​ಸೈಟ್​ನಲ್ಲಿ ರಿಜಿಸ್ಟರ್​ ಮಾಡಬಹುದಾಗಿದೆ.

ಇದರ ಹೊರತಾಗಿ ಅನೇಕ ಕಾರ್ಪೊರೇಟ್​ ಕಂಪನಿಗಳು ಮಹಿಳಾ ಉದ್ಯೋಗಿಗಳಿಗೆ ಬೆಂಬಲ ನೀಡುವ ಮೂಲಕ ಮತ್ತೊಮ್ಮೆ ಅವರ ವೃತ್ತಿ ಜೀವನವನ್ನು ಮರು ಆರಂಭಿಸಲು ಸಹಾಯ ಮಾಡುತ್ತದೆ. ಅಂತಹ ಕೆಲ ಸಂಸ್ಥೆ ಮತ್ತು ಅದರ ವಿವರ ಇಂತಿದೆ. ಜಿಇ ಇಂಡಿಯಾ- ರಿಸ್ಟಾರ್ಟ್​, ಗೂಗಲ್​- ಜಿ ಕೆರಿಯರ್​, ಗೋಲ್ಡ್​​ಮ್ಯಾನ್​ ಸಾಚ್​- ರಿಟರ್ನ್​​ಶಿಪ್​, ಆಕ್ಸಿಸ್​ ಬ್ಯಾಂಕ್​- ರಿ ಕನೆಕ್ಟ್​​, ಗೋದ್ರೇಜ್​- ಕೆರಿಯರ್​ 2.0, ಹಿಂದೂಸ್ಥಾನ್​​ ಯುನಿಲಿವರ್​- ಕೆರಿಯರ್​ ಬೈ ಚಾಯ್ಸ್​, ಮಹೀಂದ್ರ ಲಾಜಿಸ್ಟಿಕ್​- ಸೆಕೆಂಡ್​ ಕೆರಿಯರ್​ ಪ್ರೋಗ್ರಾಂ.

ಇದನ್ನೂ ಓದಿ: ಋತುಚಕ್ರದ ಸಮಸ್ಯೆಗೆ ಎಂದಿಗೂ ನಿರ್ಲಕ್ಷ್ಯ ಮಾಡಬೇಡಿ; ಸಮಸ್ಯೆ ಕಾರಣವಾದಿತು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.