ಬೆಂಗಳೂರು: ಸೂರ್ಯ ನೆತ್ತಿ ಸುಡುತ್ತಿರುವಾಗ ತಣ್ಣಗೆ ಐಸ್ಕ್ರೀಂ ಅಥವಾ ತಂಪು ಪಾನೀಯವನ್ನು ತಿನ್ನಲು ಮನಸು ಬಯಸುತ್ತದೆ. ಅದರಲ್ಲೂ ಕ್ಯಾಂಡಿಗಳು ಬಿಸಿಲಿನ ಬೇಗೆ ಓಡಿಸಲು ಅತ್ಯುತ್ತಮವಾಗಿರುತ್ತದೆ. ರುಚಿಕರ ತಾಜಾ ಹಣ್ಣಿನ ಕ್ಯಾಂಡಿಗಳು ನೀರಿನ ಅಂಶದ ಜೊತೆಗೆ ದೇಹವನ್ನು ತಣ್ಣಾಗಾಗಿಸುತ್ತದೆ. ಇನ್ನು ಈ ಕ್ಯಾಂಡಿಗಳು ಮನೆಯಲ್ಲಿಯೇ ಸರಳವಾಗಿ ಮಾಡಿಕೊಳ್ಳಬಹುದು. ಉತ್ತಮ ವಿಟಮಿನ್ ಮತ್ತು ಆ್ಯಂಟಿ ಆಕ್ಸಿಡೆಂಟ್ ಇರುವ ಹಣ್ಣುಗಳ ಈ ಕ್ಯಾಂಡಿಗಳು ಎಲ್ಲ ವಯೋಮಾನದವರಿಗೆ ಅಚ್ಚುಮೆಚ್ಚು.
ಮ್ಯಾಂಗೋ ಕ್ಯಾಂಡಿ: ಬೇಸಿಗೆಯಲ್ಲಿ ಮಾವಿನ ಹಣ್ಣು ಯಥೇಚ್ಛವಾಗಿ ಸಿಗುವ ಹಿನ್ನೆಲೆ ಇದನ್ನು ತಯಾರಿಸಬಹುದು. ಈ ಹಣ್ಣು ರುಚಿಕರ ಆರೋಗ್ಯಕರವಾಗಿರುವ ಹಿನ್ನೆಲೆ ಮಕ್ಕಳು ಕೂಡ ಇಷ್ಟಪಟ್ಟು ಸವಿಯುತ್ತಾರೆ. ಮಾವಿನ ಈ ರುಚಿಕರ ಕ್ಯಾಂಡಿ ಮಾಡುವ ವಿಧಾನ ಕೂಡ ಸುಲಭವಾಗಿದ್ದು, ಮನ ತಣಿಸುತ್ತದೆ. ಅಧಿಕ ರಕ್ತದೊತ್ತಡ ಕಡಿಮೆ ಮಾಡಿ, ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.
ಕಲ್ಲಂಗಡಿ ಕ್ಯಾಂಡಿ: ಬೇಸಿಗೆಯ ಬೇಗೆ ಓಡಿಸುವ ಜೊತೆಗೆ ದೇಹವನ್ನು ನಿರ್ಜಲೀಕರಣಗೊಳ್ಳದಂತೆ ಇದು ಕಾಡುತ್ತದೆ. ಕಲ್ಲಂಗಡಿಯಲ್ಲಿ ಶೇ 92ರಷ್ಟು ಪ್ರತಿಶತ ನೀರಿನಾಂಶ ಇರುವ ಹಿನ್ನಲೆ ಇದು ಈ ಕಾಲಮಾನಕ್ಕೆ ಹೆಚ್ಚು ಸೂಕ್ತವಾಗುತ್ತದೆ. ರುಚಿಕರ ಈ ಕ್ಯಾಂಡಿಗಳು ಕೂಡ ಬಾಯಲ್ಲಿ ನೀರಿರುವಂತೆ ಮಾಡುತ್ತದೆ. ಇದರಲ್ಲಿ ವಿಟಮಿನ್ ಎ ಅಂಶ ಹೆಚ್ಚು ಇದ್ದು, ಆ್ಯಂಟಿ ಆಕ್ಸಿಡೇಂಟ್ ಗುಣಗಳು ಆರೋಗ್ಯಕ್ಕೆ ಹೆಚ್ಚು ಪ್ರಯೋಜನ ನೀಡುತ್ತದೆ. ರಕ್ತದೊತ್ತಡ ನಿಯಂತ್ರಿಸುವ ಜೊತೆಗೆ ಹೃದಯ ಆರೋಗ್ಯ ಕಾಪಾಡುವಲ್ಲಿ ಕಲ್ಲಂಗಡಿ ಸಹಾಯ ಮಾಡುತ್ತದೆ.
ಸ್ಟ್ರಾಬೆರಿ ಕ್ಯಾಂಡಿ: ಸಮೃದ್ದ ಪೋಷಕಾಂಶವಾಗಿರುವ ಸ್ಟ್ರಾಬೆರಿಗಳ ಕ್ಯಾಂಡಿಗಳನ್ನು ಸುಲಭವಾಗಿ ಮನೆಯಲ್ಲಿ ತಯಾರಿಸಬಹುದು. ಸರಳವಾಗಿ ಬೇಗವಾಗಿ ರುಚಿಕರವಾದ ಕ್ಯಾಂಡಿಗಳು ತಯಾರಿಸಬಹುದು. ಊರಿಯುತ ನಿವಾರಣೆ ಜೊತೆಗೆ ಒತ್ತಡವನ್ನು ಕಡಿಮೆ ಮಾಡುವ ಶಕ್ತಿ ಈ ಸ್ಟ್ರಾಬೆರಿಗೆ ಇದೆ. ಇದರಲ್ಲಿನ ಪಾಲಿಪೆನಲ್ ಹಲವು ರೋಗಗಳ ವಿರುದ್ಧ ಹೋರಾಡುತ್ತದೆ.
ನಿಂಬೆ ಕಿವಿ: ಹುಳಿ ಸಿಹಿ ಮಿಶ್ರಣಗಳ ರುಚಿಗಳು ಈ ಬೇಸಿಗೆ ಬಿಸಿಯಲ್ಲಿ ಇನ್ನಷ್ಟು ಕಡಿಮೆ ಮಾಡುವಂತೆ ಮಾಡುತ್ತದೆ. ನಿಂಬೆ ರಸ, ಸಕ್ಕರೆ, ಕಿವಿ ಹಣ್ಣನ್ನು ನೀರಿನೊಂದಿಗೆ ಚೆನ್ನಾಗಿ ಬೆರಸಿ ಅದನ್ನು ಫ್ರಿಜ್ ಮಾಡಿ ಸವಿಯಬಹುದು. ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಚಯಪಯನ ವೃದ್ಧಿ ಮಾಡುವ ಜೊತೆಗೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಇದು ನಿಯಂತ್ರಿಸುತ್ತದೆ. ಇದರ ಮತ್ತೊಂದು ಪ್ರಮುಖ ಗುಣ ಎಂದರೆ, ತಕ್ಷಣಕ್ಕೆ ಇದು ಶಕ್ತಿ ಮತ್ತು ಮೂಡ್ ರಿಫ್ರೇಶ್ ಮಾಡುವಲ್ಲಿ ಸಹಾಯ ಮಾಡುತ್ತದೆ.
ಕಿತ್ತಳೆ: ಕ್ಯಾಂಡಿಗಳಲ್ಲಿ ಅತ್ಯಂತ ಜನಪ್ರಿತೆ ಹೊಂದಿರುವ ಕ್ಯಾಂಡಿ ಅದು ಕಿತ್ತಳೆ. ಇದನ್ನು ಕೂಡ ಸುಲಭವಾಗಿ ಮಾಡಬಹುದಾಗಿದೆ. ಇದು ಕೂಡ ಹುಳಿ-ಸಿಹಿ ಮಿಶ್ರಣದ ಅನುಭೂತಿ ಹೊಂದಿದ್ದು, ಇದರಲ್ಲಿನ ವಿಟಮಿನ್ ಸಿ ಬಿಸಿಲಿನ ವಿರುದ್ಧ ಹೋರಾಡಲು ಚೇತರಿಕೆ ನೀಡುತ್ತದೆ. ಕೋಶಗಳು ಹಾನಿಯಾಗದಂತೆ ತಡೆಯುತ್ತದೆ. ರಕ್ತ ಹೀನತೆ ವಿರುದ್ಧ ಹೋರಾಡಲು ಸಾಧ್ಯವಾಗುತ್ತದೆ. ಕೀಟಾಣುಗಳ ವಿರುದ್ಧ ಹೋರಾಟ ಮಾಡಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ಬೇಸಿಗೆಯಲ್ಲಿ ಸವಿಯಲೇ ಬೇಕು ಈ 8 ಮಾವಿನ ರುಚಿ!