ಹೈದರಾಬಾದ್: ಪ್ರತಿ ವರ್ಷ ಜನವರಿ 3 ಅನ್ನು ಅಂತಾರಾಷ್ಟ್ರೀಯ ಮನಸ್ಸು- ದೇಹ ಸ್ವಾಸ್ಥ್ಯ ದಿನ ಎಂದು ಸ್ಮರಿಸಲಾಗುತ್ತದೆ. ಹಳೆಯ ಮತ್ತು ಸ್ಥಳೀಯ ಚಿಕಿತ್ಸಾ ಪದ್ಧತಿಗಳು, ಆಯುರ್ವೇದ ಔಷಧಗಳು, ಪೂರ್ವ ತತ್ವಶಾಸ್ತ್ರಗಳು ಮತ್ತು ಯೋಗ ಎಲ್ಲವೂ ಆರೋಗ್ಯಕರ ಮನಸ್ಸು, ಭಾವನೆಗಳು ಮತ್ತು ದೇಹವು ಪರಸ್ಪರ ಸಂಬಂಧ ಹೊಂದಿದೆ. ಆತಂಕ, ಒತ್ತಡ ಮತ್ತು ಸಂಬಂಧಿತ ಸಮಸ್ಯೆಗಳೊಂದಿಗಿನ ಹೋರಾಡಲು ಸಹಾಕಾರಿಯಾಗಿದೆ. ಅಂತಾರಾಷ್ಟ್ರೀಯ ಮನಸ್ಸು-ದೇಹ ಸ್ವಾಸ್ಥ್ಯ ದಿನದ ಸಂದರ್ಭದಲ್ಲಿ, ನಿಮ್ಮ ಮನಸ್ಸನ್ನು ಶಾಂತಗೊಳಿಸಲು ಸಹಾಯ ಮಾಡುವ 5 ಯೋಗ ಆಸನಗಳು ಇಲ್ಲಿವೆ.
![ಮಾನಸಿಕ ನೆಮ್ಮದಿಗೆ ಸಹಾಕಾರಿಯಾಗಲಿದೆ ಈ 5 ಯೋಗಾಸಾನ](https://etvbharatimages.akamaized.net/etvbharat/prod-images/17382385_anulom-vilom.jpg)
ಅನುಲೊಮ ವಿಲೋಮ: ಇದು ಪ್ರಣಾಯಾಮದ ಒಂದು ನಿರ್ದಿಷ್ಟ ವಿಧ ಅಥವಾ ಯೋಗದಲ್ಲಿ ಉಸಿರಾಟ ನಿಯಂತ್ರಿಸುತ್ತದೆ. ಮೂಗಿನ ಒಂದು ಹೊಳ್ಳೆಯನ್ನು ಮುಚ್ಚಿ, ಉಸಿರು ತೆಗೆದುಕೊಳ್ಳಬಹುದು. ಮತ್ತೊಂದು ಹೊಳ್ಳೆ ಮುಚ್ಚಿ ಉಸಿರು ಹೊರ ಬಿಡಬೇಕು. ಈ ಪ್ರಕ್ರಿಯೆಯನ್ನು ಪುನರಾವರ್ತನೆ ಮಾಡಬೇಕು. ಈ ರೀತಿ ಮಾಡುವುದರಿಂದ ನರ ವ್ಯವಸ್ಥೆಯನ್ನು ಉತ್ತಮಗೊಳಿಸುತ್ತದೆ. ಕಡಿಮೆ ಒತ್ತಡ ಮೂಡುತ್ತದೆ.
![ಮಾನಸಿಕ ನೆಮ್ಮದಿಗೆ ಸಹಾಕಾರಿಯಾಗಲಿದೆ ಈ 5 ಯೋಗಾಸಾನ](https://etvbharatimages.akamaized.net/etvbharat/prod-images/17382385_bhujangasana.jpg)
ಭುಜಂಗಾಸನ: ಹತಾ ಯೋಗದ ರೀತಿ ಬೆನ್ನನ್ನು ಬಾಗಿಸುವ ಯೋಗವಾಗಿದೆ. ಹೊಟ್ಟೆಯ ಮೇಲೆ ಮಲಗಿ, ದೇಹವನ್ನು ಎತ್ತಬೇಕು. ಭುಜಂಗಾಸನ ಕೂಡ ಒತ್ತಡವನ್ನು ಕಡಿಮೆ ಮಾಡುತ್ತದೆ. ಇದು ಕೈ, ಭುಜ ಮತ್ತು ಹಿಂಬದಿ ಬಲಗೊಳಿಸುತ್ತದೆ.
ಇದನ್ನು ಮಾಡುವುದು ಹೇಗೆ? ಮೊದಲು ನಿಧಾನವಾಗಿ ಹೊಟ್ಟೆಯ ಮೇಲೆ ಮಲಗಿ. ಈಗ ಎರಡು ಹಸ್ತಗಳನ್ನು ಪಕ್ಕೆಲುಬಿನ ಪಕ್ಕದಲ್ಲಿ ಊರಿ ನೆಲಕ್ಕೆ ಒತ್ತಿ. ಕಾಲ್ಬೆರಳುಗಳನ್ನು ಹಿಂದೆ ಚಾಚಿ. ಈ ಸ್ಥಿತಿಯಲ್ಲಿ ಸಂಪೂರ್ಣವಾಗಿ ಎದೆಯ ಭಾಗ ಮೇಲಕ್ಕೆ ಬಂದಿರಬೇಕು. ದೃಷ್ಟಿ ಮೇಲೆ, ಎರಡು ಭುಜಗಳು ಹಿಂದಕ್ಕೆ, ಎರಡು ಮೊಣಕೈಗಳ ಮಧ್ಯದಲ್ಲಿ ನಾಭಿಯ ಭಾಗ ಬಂದಿರಬೇಕು. ಕಾಲ್ಬೆರಳಿನ ತುದಿಯಿಂದ ತೊಡೆಯ ಭಾಗದವರೆಗೆ ಶರೀರ ಸಂಪೂರ್ಣವಾಗಿ ನೆಲಕ್ಕೆ ತಾಗಿರಬೇಕು. ಈ ಸ್ಥಿತಿಯಲ್ಲಿ ಸಹಜವಾದ ಉಸಿರಾಟ ಕ್ರಿಯೆ ಇರಬೇಕು. ಹಾಗೆ ಉಸಿರನ್ನು ಹೊರಹಾಕುತ್ತ ಪೂರ್ತಿ ಕೆಳಗೆ ಬರಬೇಕು. ಹಣೆಯನ್ನು ನೆಲಕ್ಕೆ ತಾಗಿಸಿ ವಿಶ್ರಾಂತಿಯನ್ನು ಮಾಡಬೇಕು.
![ಮಾನಸಿಕ ನೆಮ್ಮದಿಗೆ ಸಹಾಕಾರಿಯಾಗಲಿದೆ ಈ 5 ಯೋಗಾಸಾನ](https://etvbharatimages.akamaized.net/etvbharat/prod-images/17382385_836_17382385_1672723211455.png)
ಬಾಲಾಸನ: ಒತ್ತಡ ಮತ್ತು ಆತಂಕ ಕಡಿಮೆ ಮಾಡಲು ಇರುವ ಉತ್ತಮ ಮಾರ್ಗ. ಮೊಣಕಾಲನ್ನು ಮಡಚಿ ದೇಹವನ್ನು ನೆಲಕ್ಕೆ ಬಾಗಬೇಕು. ಕೈಗಳನ್ನು ಮುಂಚಕ್ಕೆ ಚಾಚಿ, ಹಣೆಯನ್ನು ನೆಲಕ್ಕೆ ಮುಟ್ಟಿಸಬೇಕು. ಇದೇ ಸ್ಥಿತಿಯಲ್ಲಿ 10 ನಿಮಿಷ ಇದ್ದು, 10 ಬಾರಿ ದೀರ್ಘ ಉಸಿರನ್ನು ಎಳೆದುಕೊಂಡು ಬಿಡಬೇಕು.
![ಮಾನಸಿಕ ನೆಮ್ಮದಿಗೆ ಸಹಾಕಾರಿಯಾಗಲಿದೆ ಈ 5 ಯೋಗಾಸಾನ](https://etvbharatimages.akamaized.net/etvbharat/prod-images/17382385_balasana.jpg)
ವೃಕ್ಷಾಸನ: ಒಂದು ಕಾಲನ್ನು ಮಡಚಿ ಮತ್ತೊಂದು ಕಾಲಿಗೆ ಇಡಬೇಕು. ವೃಕ್ಷಾಸಾ ಬೆಟ್ಟಾಕೃತಿ ಮುಂದುವರೆದ ಆಸನವಾಗಿದೆ. ಇದು ನಿಮ್ಮ ದೇಹದ ಸಮತೋಲನ ಕಾಯ್ದುಕೊಳ್ಳುವ ಜೊತೆಗೆ ಏಕಾಗ್ರತೆಯನ್ನು ವೃದ್ದಿಸುತ್ತದೆ. ಕಾಲಿನ ಮಾಂಸಗಳಿಗೆ ಶಕ್ತಿಯನ್ನು ಒದಗಿಸುತ್ತದೆ. ಈ ಭಂಗಿಯಲ್ಲಿ ನಿಲ್ಲುವುದರಿಂದ ನರಗಳ ಸಮತೋಲನ ಕಾಪಾಡಲು ತುಂಬಾ ಸಹಕಾರಿ. ದೃಷ್ಟಿಯನ್ನು ಒಂದು ಕಡೆ ನೆಟ್ಟು, ದೇಹವನ್ನು ಬ್ಯಾಲೆನ್ಸ್ ಮಾಡುವುದರಿಂದ ನರಗಳು ಬಲವಾಗುತ್ತವೆ. ಮಾನಸಿಕ ಒತ್ತಡ ಕಡಿಮೆಯಾಗುವುದೆಂದು ವಿಜ್ಞಾನ ಹೇಳಿದೆ. ಬೆನ್ನು ಮೂಳೆಯನ್ನು ಬಲಪಡಿಸುತ್ತದೆ. ಇನ್ನು ಈ ಆಸನ ಮಾಡುವುದರಿಂದ ನರಗಳು ಬಲವಾಗುತ್ತವೆ. ಅಷ್ಟೇ ಅಲ್ಲ ಕಾಲಿನ ಮಂಡಿ ಹಾಗೂ ಸೊಂಟ ಬಲಗೊಳ್ಳುತ್ತದೆ.ತಾಳ್ಮೆ ಹೆಚ್ಚಿಸುವುದು,ಏಕಾಗ್ರತೆ ಹೆಚ್ಚುತ್ತದೆ.
![ಮಾನಸಿಕ ನೆಮ್ಮದಿಗೆ ಸಹಾಕಾರಿಯಾಗಲಿದೆ ಈ 5 ಯೋಗಾಸಾನ](https://etvbharatimages.akamaized.net/etvbharat/prod-images/17382385_savasana.jpg)
ಶವಾಸಾನ: ಯೋಗಾಸನ ಮಾಡುವವರ ಮೆಚ್ಚಿನ ಆಸನ ಇದಾಗಿದೆ. ಮಲಗಿಕೊಳ್ಳುವುದಷ್ಟೇ ಎಂಬ ಸರಳ ಅಂಶದ ಕಾರಣಕ್ಕೆ ಇದನ್ನು ನಿರ್ಲಕ್ಷಿಸಬಾರದು. ಮ್ಯಾಟ್ಮೇಲೆ ಮಲಗಿ ಕಣ್ಣನ್ನು ಮುಚ್ಚಬೇಕು. ಈ ಸಣ್ಣ ಆಸನ, ಉದ್ದೇಶ ಪೂರ್ವಕ ಚಲನವಲನ ಒತ್ತಡ ಕಡಿಮೆ ಮಾಡುತ್ತದೆ. ಇದು ಆಯಾಸವನ್ನು ನಿವಾರಿಸಲು ಮತ್ತು ದೈಹಿಕ ಮತ್ತು ಮಾನಸಿಕ ವಿಶ್ರಾಂತಿ ಪಡೆಯಲು ಸಹಾಯ ಮಾಡುತ್ತದೆ. ತೀವ್ರವಾಗಿ ದಣಿದಿರುವಾಗ ಮತ್ತು ಕ್ಷಣಾರ್ಧದಲ್ಲಿ ಕೆಲಸಕ್ಕೆ ಮರಳಬೇಕಾದಾಗ ಈ ಆಸನವನ್ನು ಸಹ ಮಾಡಬಹುದು.
ಇದನ್ನೂ ಓದಿ: ಕೆಮ್ಮು, ನೆಗಡಿಯಿಂದ ಬಳಲುತ್ತಿದ್ದೀರಾ? ಈರುಳ್ಳಿ ರಸ ಸೇವಿಸಿ