ETV Bharat / sukhibhava

ಉತ್ತಮ ನಿದ್ರೆಗೆ ಸಹಾಯಕವಾಗಲಿವೆ ಈ 5 ನೈಸರ್ಗಿಕ ಗಿಡಮೂಲಿಕೆಗಳು!

ನಿದ್ರಾ ಸಮಸ್ಯೆ ಪರಿಹಾರಕ್ಕೆ ನೈಸರ್ಗಿಕ ಗಿಡಮೂಲಿಕೆಗಳು ಪರಿಹಾರ ಆಗಿದ್ದು, ಇದರಿಂದ ಯಾವುದೇ ಅಡ್ಡ ಪರಿಣಾಮ ಇರುವುದಿಲ್ಲ

ಉತ್ತಮ ನಿದ್ರೆಗೆ ಸಹಾಯಕವಾಗಲಿದೆ ಈ 5 ನೈಸರ್ಗಿಕ ಗಿಡಮೂಲಿಕೆ
These 5 natural herbs will help you sleep better
author img

By

Published : Feb 6, 2023, 3:47 PM IST

ನವದೆಹಲಿ: ನಿದ್ದೆ ಎಂಬುದು ಹಲವು ಸಮಸ್ಯೆಗಳಿಗೆ ಪರಿಹಾರ ನೀಡುವ ನೈಸರ್ಗಿಕ ವಿಧಾನ. ಉತ್ತಮ ಗುಣಮಟ್ಟದ ನಿದ್ರೆಯಿಂದ ನಿಮ್ಮ ದಿನ ಕೂಡ ಚೆನ್ನಾಗಿರುತ್ತದೆ. ರಾತ್ರಿ ಸಮಯ ಕನಿಷ್ಟ 7 ರಿಂದ 9 ಗಂಟೆ ಉತ್ತಮ ನಿದ್ರೆ ಮಾಡುವುದರಿಂದ ನೀವು ವಿಶ್ರಾಂತಿ ಜೊತೆ ಹೊಸತನ ಕಾಪಾಡಿಕೊಳ್ಳಬಹುದು. ಆದರೆ, ಕೆಲವು ಸಮಯ ಉತ್ತಮ ನಿದ್ರೆ ಮಾಡುವುದು ಕಷ್ಟಕರವಾಗಿರಲಿದೆ. ನಿದ್ರೆ ತಜ್ಞರ, ಕೆಲವು ನೈಸರ್ಗಿಕ ಗಿಡ ಮೂಲಿಕೆಗಳು ನಿದ್ದೆಯ ಈ ಸಮಸ್ಯೆಗೆ ಪರಿಹಾರ ಆಗಲಿದೆ. ಈ ಸಂಶೋಧನೆಯನ್ನು ಡಾ ನಯನತಾರಾ ಶಾಂತಿ ವೈದ್ಯಕೀಯವಾಗಿ ಪರಿಶೀಲನೆ ನಡೆಸಿದ್ದಾರೆ.

ಗಿಡ ಮೂಲಿಕೆಗಳು ಹೇಗೆ ನಿದ್ದೆಯನ್ನು ಉತ್ತೇಜಿಸುತ್ತದೆ: ನೈಸರ್ಗಿಕ ಗಿಡ ಮೂಲಿಕೆಯಲ್ಲಿ ನಿದ್ರೆಯನ್ನು ಉತ್ತೇಜನಗೊಳಿಸುವ ಅಂಶಗಳಿರುತ್ತವೆ. ಅವು ನರಗಳನ್ನು ಶಾಂತಗೊಳಿಸಿ, ಇಂದ್ರಿಯಗಳನ್ನು ಎಚ್ಚರಿಸುವ ಮೂಲಕ ಉತ್ತಮ ನಿದ್ರೆ ಬರುವಂತೆ ನೋಡಿಕೊಳ್ಳುತ್ತದೆ. ಜೀವನಶೈಲಿ, ಆತಂಕ ಮತ್ತು ಒತ್ತಡದಿಂದ ನಿದ್ರೆಯ ಕೊರತೆ ಆಗ್ಗಿಂದಾಗೆ ಕಾಡುತ್ತದೆ. ಒತ್ತಡವೂ ನರ ವ್ಯವಸ್ಥೆಯ ಉತ್ಪಾದನೆ ಮೇಲೆ ಪರಿಣಾಮ ಬೀರುತ್ತದೆ. ಆದರೆ, ಕೆಲವು ಗಿಡ ಮೂಲಿಕೆಯನ್ನು ತೆಗೆದುಕೊಳ್ಳುವುದರಿಂದ ಇದಕ್ಕೆ ಪರಿಹಾರ ಕಾಣಬಹುದು. ನೈಸರ್ಗಿಕ ಗಿಡಮೂಲಿಕೆಯನ್ನು ಟ್ರೈಪೊಫೋನ್​, ಅಮಿನೊ ಆ್ಯಸಿಟ್, ಸೆರೊಟಿನಿನ್​​ ಸಿಂಥಸಿಸಿ ಅಭಿವೃದ್ಧಿ ಮಾಡುತ್ತದೆ. ಸೆರೊಟೊನಿನ್​ ಮಟ್ಟ ರಾಸಾಯನಿಕ ಅಸಮತೋಲನಕ್ಕೆ ಕಾರಣವಾಗುತ್ತದೆ. ಇದು ನಿದ್ರೆ ಸಮಸ್ಯೆ, ನಿದ್ರಾಹೀನತೆಗೆ ಕಾರಣವಾಗಿದೆ.

ಲ್ಯಾವೆಂಡರ್​: ಖಿನ್ನತೆ, ಉದ್ರೇಕಕಾರಿ ಅಂಶವನ್ನು ಕಡಿಮೆ ಮಾಡುವಲ್ಲಿ ಲ್ಯಾವೆಂಡರ್​ ಸಹಾಯ ಮಾಡಲಿದ್ದು, ಇದು ಉತ್ತಮ ನಿದ್ರೆ ಬರುವಂತೆ ಮಾಡುತ್ತದೆ. ಲ್ಯಾವೆಂಡರ್​ ಗಿಡಮೂಲಿಕ ನರಗಳನ್ನು ಶಾಂತಗೊಳಿಸಿ, ಆತಂಕದ ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ಮೂಡ್​ ಬದಲಾವಣೆಯನ್ನು ನಿಯಂತ್ರಣಕ್ಕೆ ತರುತ್ತದೆ. ದಿನದಲ್ಲಿ ಒತ್ತಡ ಕಡಿಮೆ, ಆತಂಕ ಮತ್ತು ಸಕಾರಾತ್ಮಕ ಮನಸ್ಥಿತಿ ನಿರ್ಮಾಣ ಮಾಡುವುದರಿಂದ ರಾತ್ರಿಯಲ್ಲಿ ಉತ್ತಮ ನಿದ್ರೆಗೆ ಸಹಕಾರಿಯಾಗಿದೆ. ಈ ಲ್ಯಾವೆಂಡರ್​ನಲ್ಲಿ ಸ್ಟ್ರೇ ಮತ್ತು ಇನ್​ಹೇಲ್​ ಮೂಲಕ ಪಡೆಯಬಹುದು

ಕ್ಯಾಮೊಮೈಲ್​: ಕೊಮೊಲೈಲ್​ ಪುರಾತನ ಔಷಧೀಯ ಗಿಡಮೂಲಿಕೆ ಆಗಿದೆ. ಕೊಮೊಲೈಲ್​ ಸಾಮರ್ಥ್ಯದ ಕುರಿತು ಮಾರ್ಡನ್​ ಡೇ ಅಧ್ಯಯನ ಕೂಡ ಸಾಬೀತು ಪಡಿಸಿದೆ. ಇದು ಆತಂಕ, ನರಗಳ ವ್ಯವಸ್ಥೆ ಮತ್ತು ನಿದ್ರಾಹೀನತೆ ಸಮಸ್ಯೆ ಕಡಿಮೆ ಮಾಡುತ್ತದೆ. ಮಗುವಿಗೆ ಪ್ರಸವ ನೀಡಿದ ಬಳಿಕ ತಾಯಿ ಉತ್ತಮ ನಿದ್ರೆ ಕೊರತೆ ಮತ್ತು ಖಿನ್ನತೆಯಿಂದ ಬಳಲುತ್ತಿದ್ದರೆ, ಎರಡು ವಾರಗಳ ಕಾಲ ಪ್ರತಿ ರಾತ್ರಿ ಕೊಮೊಲೈನ್​ ಟೀ ಸೇವಿಸುವುದರಿಂದ ಪರಿಹಾರವನ್ನು ಕಾಣಬಹುದು ಎಂದು ಅಧ್ಯಯನ ಹೇಳಿದೆ. ನರಗಳ ವಿಶ್ರಮಿಸುವಿಕೆ ಇದು ಪ್ರಮುಖವಾಗಿ ಕಾರ್ಯ ನಿರ್ವಹಿಸುತ್ತದೆ. ಈ ಕೊಮೊಲೈಲ್​ ಹೂವಿನ ಸುವಾಸನೆಯನ್ನು ಪಡೆದರೂ ಅದರಿಂದ ಉತ್ತಮ ಪರಿಣಾಮ ಕಾಣಬಹುದು.

ವಲೆರಿಯನ್​: ವಲೆರಿಯನ್​ ಗಿಡಮೂಲಿಕೆ ನಿದ್ರಾ ಹೀನತೆ , ವಿಶ್ರಾಂತಿ ಇಲ್ಲದಿರುವಿಕೆ ಮತ್ತು ಒತ್ತಡದ ರೋಗಿಗಳಿಗೆ ಉತ್ತಮ ಔಷಧವಾಗಿದೆ. ವಲೆರೆನಿಕ್ ಬುಡದಲ್ಲಿರುವ ವಲೆರೆನಿಲ್​​ ಆಮ್ಲವೂ ನ್ಯೂರೊಟ್ರಾನ್ಸ್​ಮಿಟ್ಟರ್​ ಜಿಎಬಿಎಗೆ ಸುಧಾರಿಸಲು ಸಹಾಕಾರಿ. ಇದು ಉತ್ತಮ ನಿದ್ರೆ ಬರುವಂತೆ ಮಾಡುವುದರ ಜೊತೆ ಆತಂಕ ನಿವಾರಣೆ ಔಷಧವಾಗಿ ಕಾರ್ಯ ನಿರ್ವಹಿಸುತ್ತದೆ. ಈ ವಲೆರಿಯನ್​ ಅನೇಕ ಅಂಗಡಿಗಳಲ್ಲಿ ಟ್ಯಾಬ್ಲೆಟ್​​ ರೀತಿ ಸಿಗುತ್ತದೆ.

ಪ್ಯಾಷನ್​ ಫ್ಲವರ್​: ಪ್ಯಾಷನ್​ ಫ್ಲವರ್​ನಲ್ಲಿ ನರಗಳನ್ನು ಶಾಂತಗೊಳಿಸುವು ಫ್ಲೇವನಾಯ್ಡ್ಸ್​​ಗಳನ್ನು ಹೊಂದಿರುತ್ತದೆ. ಇದು ಒತ್ತಡ ಕಡಿಮೆ ಮಾಡಿ ಉತ್ತಮ ನಿದ್ರೆ ಬರುವಂತೆ ಮಾಡುತ್ತದೆ. ಈ ಹೂವು ಉತ್ತಮ ರುಚಿಯನ್ನು ಹೊಂದಿದ್ದು, ಅನೇಕ ಔಷಧಗಳಲ್ಲಿ ಬಳಕೆ ಮಾಡುತ್ತಾರೆ

ಅಶ್ವಗಂಧ: ಅಶ್ವಗಂಧ ಪ್ರಮುಖವಾಗಿ ನಿದ್ರಾಹೀನತೆ ಕೊರತೆ ನಿವಾರಣೆಗೆ ಉತ್ತಮ ಗಿಡಮೂಲಿಕಾ ಔಷಧಿಯಾಗಿದೆ. ಆತಂಕ ಸೇರಿದಂತೆ ಹಲವು ರೀತಿಯ ಸಮಸ್ಯೆಗಳಲ್ಲಿ ಅಶ್ವಗಂಧ ಪ್ರಮುಖವಾಗಿದೆ ಎಂಬುದನ್ನು ಈಗಾಗಲೇ ಅನೇಕ ಅಧ್ಯಯನಗಳು ತಿಳಿಸಿದೆ. ಇದನ್ನು ಮಾತ್ರೆ ರೂಪದಲ್ಲಿ ಕೂಡ ಪಡೆಯಬಹುದಾಗಿದೆ.

ಗಿಡಮೂಲಿಕೆಗಳ ಬಳಕೆ ಹೇಗೆ

ಹರ್ಬಲ್​ ಟೀ: ಗಿಡಮೂಲಿಕೆಗಳನ್ನು ಚಹಾದ ರೀತಿ ಬಳಕೆ ಮಾಡಿ ಸೇವಿಸಬಹುದು. ನೀರನ್ನು ಚೆನ್ನಾಗಿ ಕುದಿಸಿ ಅದಕ್ಕೆ ಈ ಗಿಡಮೂಲಿಕೆಗಳನ್ನು ಹಾಕಬಹುದು. 20 ನಿಮಿಷಗಳ ಹಾಗೇ ಬಿಟ್ಟರೆ, ಗಿಡಮೂಲಿಕೆಯ ಸಾರಾ ನೀರಿನಲ್ಲಿ ಇಳಿಯುತ್ತದೆ. ಬಳಿಕ ಅದನ್ನು ಕೂಡಿಯಬಹುದು. ದಿನದಲ್ಲಿ ಎರಡರಿಂದ ಮೂರು ಬಾರಿ ಈ ರೀತಿ ಹರ್ಬಲ್​ ಟೀ ಕುಡಿಯಬಹುದು.

ಪ್ರಮುಖ ಎಣ್ಣೆಗಗಳಲ್ಲಿ: ಗಿಡಮೂಲಿಕೆ ಎಣ್ಣೆಗಳನ್ನು ಬಿಸಿ ನೀರಿಗೆ ಹಾಕಿ ಮಲಗುವ ಮುನ್ನ ಸ್ನಾನ ಮಾಡುವುದರಿಂದ ನಿದ್ರೆ ಸಮಸ್ಯೆಗೆ ಪರಿಣಾಮ ಕಾಣಬಹುದು. ಈ ಗಿಡಮೂಲಿಕೆ ಎಣ್ಣೆಗಳನ್ನು ಆಲಿವ್​, ತೆಂಗಿನ ಕಾಯಿ ಸೇರಿದಂತೆ ಇನ್ನಿತರ ಎಣ್ಣೆಗಳ ಜೊತೆ ಬೆರೆಸಿ, ಹಣೆ, ಕುತ್ತಿಗೆ, ಎದೆ, ಕೈ ಮತ್ತು ಕಾಲಿಗೆ ಮಸಾಜ್​ ಮಾಡಿ. ನಿಮ್ಮ ತ್ವಚೆ ಸೆನ್ಸಿಟಿವ್​ ಆಗಲಿದೆ. ಇದರಿಂದ ನಿಮ್ಮ ಸಮಸ್ಯೆ ಪರಿಹಾರವಾಗಲಿದೆ.

ಆರೋಮಥೆರಪಿ: ಗಿಡಮೂಲಿಕೆಗಳು ಉತ್ತಮ ಸುಗಂಧವನ್ನು ಬೀರುವುದರಿಂದ ಅವುಗಳನ್ನು ಕ್ಯಾಂಡಲ್​ ಆಗಿ ಬಳಕೆ ಮಾಡುವ ಮೂಲಕ ಅದರ ವಾಸನೆ ಪಡೆಯುವ ಮೂಲಕ ಉತ್ತಮ ಪರಿಣಾಮ ಕಾಣಬಹುದು

ಪೂರಕಗಳು: ಈ ಗಿಡಮೂಲಿಕೆಗಳು ಔಷಧ ಅಂಗಡಿಗಳಲ್ಲಿ ಮಾತ್ರೆ ಸೇರಿದಂತೆ ಇನ್ನಿತರ ಮಾದರಿಯಲ್ಲಿ ಸಿಗಲಿದೆ. ಈ ಮೂಲಕ ಪೂರಕವಾಗಿ ಸೇವಿಸಬಹುದು.

ನಿದ್ರೆಯ ಮಧ್ಯೆದಲ್ಲಿ ಪದೇ ಪದೇ ಎಚ್ಚರ ಆಗುವುದು ಅಥವಾ ಮಲಗಿದಾಕ್ಷಣ ನಿದ್ರೆಗೆ ಜಾರದಿರುವುದು ಕೂಡ ನಿದ್ರೆ ಭಂಗಕ್ಕೆ ಕಾರಣ. ಇದು ವಂಶವಳಿ, ಪರಿಸರ, ನಿದ್ರೆ ಹವ್ಯಾಸ ಮತ್ತು ಇತರೆ ಮನೋಜೀವಶಾಸ್ತ್ರ ಅಂಶಗಳು ಕಾರಣಬಾಗುತ್ತದೆ. ನಿದ್ರೆಯ ಸಮಸ್ಯೆ ಸೇರಿದಂತೆ ಅನೇಕ ತೊಂದರೆಗಳ ಪರಿಹಾರಕ್ಕೆ ನೈಸರ್ಗಿಕ ಗಿಡಮೂಲಕೆ ಹೆಚ್ಚು ಅಗತ್ಯವಾಗಿದೆ. ಈ ಗಿಡ ಮೂಲಿಕೆಗಳಿಂದ ಯಾವುದೇ ಅಡ್ಡ ಪರಿಣಾಮ ಇಲ್ಲದೇ ಇರುವುದರಿಂದ ಇದರ ಬಳಕೆ ಮಾಡಬಹುದಾಗಿದೆ.

ಇದನ್ನೂ ಓದಿ: ನಿಮ್ಮ ಡಯಟ್‌ನಲ್ಲಿ ಈ ಆಹಾರ ಸೇರಿಸಿ, ಕ್ಯಾನ್ಸರ್‌ ಅಪಾಯ ಕಡಿಮೆ ಮಾಡಿಕೊಳ್ಳಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.