ETV Bharat / sukhibhava

ಮದ್ಯ ಸೇವನೆಗೆ ಆರೋಗ್ಯಕರ ಮಿತಿ ಇಲ್ಲ, ಕ್ಯಾನ್ಸರ್‌ ಕಟ್ಟಿಟ್ಟ ಬುತ್ತಿ: ವಿಶ್ವ ಆರೋಗ್ಯ ಸಂಸ್ಥೆ - ಈಟಿವಿ ಭಾರತ್​ ಕನ್ನಡ

ಆಲ್ಕೋಹಾಲ್ ಅನ್ನು​ ಇಂತಿಷ್ಟೇ ಸೇವಿಸಿದರೆ ಯಾವುದೇ ಸಮಸ್ಯೆಯಾಗದು ಎಂಬ ಸುರಕ್ಷತೆಯ ಮಾನದಂಡವಿಲ್ಲ. ಆಲ್ಕೋಹಾಲ್​ ಸೇವನೆ ಅನೇಕ ರೀತಿಯ ಕ್ಯಾನ್ಸರ್​​ಗೆ ಕಾರಣವಾಗಬಹುದು ಎಂದು WHO ಹೇಳುತ್ತದೆ.

ಮದ್ಯ ಸೇವನೆಯ ಆರೋಗ್ಯಕರ ಮಿತಿ ಇಲ್ಲ; ವಿಶ್ವ ಆರೋಗ್ಯ ಸಂಸ್ಥೆ
there-is-no-safe-amount-of-alcohol-consumption-here-is-the-world-health-organization-analysis
author img

By

Published : Jan 13, 2023, 12:40 PM IST

ಮದ್ಯ ಸೇವನೆಗೆ ಆರೋಗ್ಯಕರ ಮಿತಿ ಎಂಬುದಿಲ್ಲ. ಎಷ್ಟೇ ಪ್ರಮಾಣದ ಕುಡಿತವೂ ವ್ಯಕ್ತಿಯೊಬ್ಬನ ಆರೋಗ್ಯಕ್ಕೆ ಹಾನಿಕಾರಕವೇ ಆಗಿದೆ ಎಂಬುದನ್ನು ಲ್ಯಾನ್ಸೆಟ್​ ಪಬ್ಲಿಕ್​ ಹೆಲ್ತ್​ ಜರ್ನಲ್​ನಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಪ್ರಕಟಿಸಿದೆ. ಇಂಟರ್​ ನ್ಯಾಷನಲ್​ ಏಜೆನ್ಸಿ ಫಾರ್ ರಿಸರ್ಚ್​ನ ಕ್ಯಾನ್ಸರ್, ಆಲ್ಕೋಹಾಲ್ ಜೊತೆಗೆ ಕಲ್ನಾರಿನ, ವಿಕಿರಣ ಮತ್ತು ತಂಬಾಕು ಸೇವನೆ ಹೆಚ್ಚಿನ ಅಪಾಯದ ಗುಂಪು 1 ಕಾರ್ಸಿನೋಜೆನ್ ಅಪಾಯ ಹೊಂದಿದೆ. ಇದು ಕ್ಯಾನ್ಸರ್​ಗೆ ಹೆಚ್ಚಿನ ಕೊಡುಗೆ ನೀಡುತ್ತದೆ ಎಂದು ತಿಳಿಸಲಾಗಿದೆ.

ಮದ್ಯವೂ ಕನಿಷ್ಠ ಎಂದರೂ ಏಳು ರೀತಿಯ ಕ್ಸಾನ್ಸರ್​​ಗೆ ಕಾರಣವಾಗುತ್ತದೆ ಎಂಬುದನ್ನು ಹಿಂದಿನ ಅಧ್ಯಯನದಲ್ಲಿ ಏಜೆನ್ಸಿ ತಿಳಿಸಿದೆ. ಸಾಮಾನ್ಯ ಕ್ಯಾನ್ಸರ್​ನಿಂದ ಮಹಿಳೆಯರ ಸ್ತನ ಕ್ಯಾನ್ಸರ್​ವರೆಗೆ ಇದು ಹಲವು ರೀತಿಯ ಕ್ಯಾನ್ಸರ್​ ಒಳಗೊಂಡಿದೆ. ಜೊತೆಗೆ ಇದು ಅನ್ನನಾಳ, ಯಕೃತ್​​ ಮತ್ತು ಕೊಲೆಸ್ಟ್ರಾಲ್​ ಕ್ಯಾನ್ಸರ್​​ ಜೊತೆಗೆ ಸಂಬಂಧ ಹೊಂದಿದೆ. ಬೆಲೆ ಮತ್ತು ಗುಣಮಟ್ಟದ ಹೊರತಾಗಿ ಯಾವುದೇ ರೀತಿಯ ಮದ್ಯ ಪಾನೀಯಗಳು ಕ್ಯಾನ್ಸರ್​ ಅಭಿವೃದ್ಧಿಗೆ ಕಾರಣವಾಗುತ್ತದೆ.

ಕ್ಯಾನ್ಸರ್​ಗೆ ಕಾರಣವಾಗುತ್ತಿರುವ ಆಲ್ಕೋಹಾಲ್​: ಯುರೋಪಿಯನ್​ ಪ್ರದೇಶದಲ್ಲಿ ಕ್ಯಾನ್ಸರ್​ ಸಾವಿಗೆ ಕಾರಣವಾಗುತ್ತಿದೆ. ಹಗುರದಿಂದ ಸಾಧಾರಣ ಮದ್ಯ ಸೇವನೆ ಅದು 20 ಗ್ರಾಗಿಂತ ಕಡಿಮೆ ಶುದ್ದ ಮದ್ಯ ಸೇವನೆ 23 ಸಾವಿರ ಮಂದಿಯಲ್ಲಿ ಹೊಸ ರೀತಿಯ ಕ್ಯಾನ್ಸರ್​​ಗೆ ಕಾರಣವಾಗಿದೆ. ಅರ್ಧಕ್ಕಿಂತ ಹೆಚ್ಚಿನ ಕ್ಯಾನ್ಸರ್​ ಆಲ್ಕೋಹಾಲ್​ನೊಂದಿಗೆ ಸಂಬಂಧ ಹೊಂದಿದ್ದು, ಮಹಿಳೆಯರಲ್ಲಿ ಶೇ 50ರಷ್ಟು ಮಂದಿಯಲ್ಲಿ ಸ್ತನ ಕ್ಯಾನ್ಸರ್​ಗೂ ಕಾರಣವಾಗಿದೆ.

ಆಲ್ಕೋಹಾಲ್​ ಸೇವನೆಗೆ ಸುರಕ್ಷತೆ ಮಟ್ಟ ಇಲ್ಲ: ನಿರ್ದಿಷ್ಟ ಮಟ್ಟದ ಅಥವಾ ಕಡಿಮೆ ಮಟ್ಟ ಎಂದು ವೈಜ್ಞಾನಿಕ ಸಾಕ್ಷ್ಯಗಳಿದ್ದರೆ ಮೂಲಕ ಆಲ್ಕೋಹಾಲ್​ ಸೇವನೆಯ ಸುರಕ್ಷತೆಯ ಮಟ್ಟವನ್ನು ಸಾಬೀತು ಪಡಿಸಬಹುದು. ಇದರಿಂದ ಯಾವುದೇ ಅನಾರೋಗ್ಯದ ಅಪಾಯವಿಲ್ಲ ಎಂದು ಅರ್ಥೈಸಬಹುದು. ಹೃದಯರೋಗದ ಸಮಸ್ಯೆ ಟೈಪ್​2 ಡಯಾಬಿಟಿಸ್​ ಕ್ಯಾನ್ಸರ್​​ ಅಪಾಯಕ್ಕೆ ಆಲ್ಕೋಹಾಲ್​ ಪರಿಣಾಮ ಬೀರುತ್ತದೆ ಎಂಬುದರ ಸಂಬಂಧ ಯಾವುದೇ ಅಧ್ಯಯನ ಸಾಬೀತುಪಡಿಸಿಲ್ಲ. ಆದರೆ, ಅತಿ ಹೆಚ್ಚಿನ ಕುಡಿತವು ಹೃದಯ ಸಮಸ್ಯೆ ಅಪಾಯಕ್ಕೆ ಕಾರಣ ಎಂಬ ಪುರಾವೆ ಇವೆ. ಕೆಲವು ಅಧ್ಯಯನಗಳು ಸೂಚಿಸಿದ ಅನುಸಾರ ಆಲ್ಕೋಹಾಲ್ ಸೇವನೆಯ ಸಂಭಾವ್ಯ ರಕ್ಷಣಾತ್ಮಕ ಪರಿಣಾಮಗಳು, ಆಯ್ಕೆ ಮಾಡಿದ ಹೋಲಿಕೆ ಗುಂಪುಗಳು ಮತ್ತು ಬಳಸಿದ ಸಂಖ್ಯಾಶಾಸ್ತ್ರೀಯ ವಿಧಾನಗಳೊಂದಿಗೆ ಸಂಪರ್ಕ ಹೊಂದಿದ್ದು, ಇತರ ಸಂಬಂಧಿತ ಅಂಶಗಳನ್ನು ಪರಿಗಣಿಸದಿರಬಹುದು ಎನ್ನಲಾಗಿದೆ.

ಆಲ್ಕೋಹಾಲ್​ ಪಾನೀಯದಲ್ಲಿ ಎಚ್ಚರಿಕೆ ಅವಶ್ಯಕ: ಆಲ್ಕೋಹಾಲ್​ ಕ್ಯಾನ್ಸರ್​​ಗೆ ಕಾರಣವಾಗುತ್ತದೆ ಎಂಬ ಭಾವನೆ ಬಹುತೇಕ ದೇಶದ ಜನರಲ್ಲಿ ಸೃಷ್ಟಿಯಾಗಿದೆ ಎನ್ನುತ್ತಾರೆ ಕ್ಯಾರಿನಾ ಫೆರೆರಿಯಾ ಬೊರ್ಗಸ್. ತಂಬಾಕುಗಳಲ್ಲಿ ಅಪಾಯಕಾರಿ ಎಂಬ ಸಂದೇಶವನ್ನು ನೀಡುವಂತೆ ಆಲ್ಕೋಹಾಲ್​ ಹೊಂದಿರುವ ಪಾನೀಯಗಳಲ್ಲೂ ಸಂದೇಶವನ್ನು ನೀಡಬೇಕು ಎಂಬುದನ್ನು ಅವರು ತಿಳಿಸುತ್ತಾರೆ.

ಇದನ್ನೂ ಓದಿ: ಭಾರತದಲ್ಲಿ ತಯಾರಿಸಲಾಗುವ ವಿಶಿಷ್ಟವಾದ ಚಹಾದ ಬಗೆಗಳಿವು.. ತಯಾರಿಸುವ ವಿಧಾನ ಹೀಗಿದೆ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.