ETV Bharat / sukhibhava

ನಿದ್ರೆ ಬಗ್ಗೆ ತಪ್ಪು ಕಲ್ಪನೆ ಬೇಡ; ಅಸಲಿ ವಿಷಯ ತಿಳಿಯಿರಿ

author img

By ETV Bharat Karnataka Team

Published : Dec 5, 2023, 12:43 PM IST

Updated : Dec 5, 2023, 2:49 PM IST

Sukhibhava: ರಾತ್ರಿ ಎಷ್ಟು ಗಂಟೆ ನಿದ್ದೆಬೇಕು. ಗೊರಕೆ ಒಳ್ಳೆಯದಾ, ಬೆಳಗಿನ ನಿದ್ದೆಯ ಲಾಭವೇನು ಎಂಬೆಲ್ಲಾ ವಿಚಾರದ ಬಗ್ಗೆ ಇಲ್ಲಿದೆ ಮಾಹಿತಿ

there-are-many-confusions-and-misconceptions-about-sleep

ಹೈದರಾಬಾದ್​: ನಿದ್ದೆ ಎಂಬುದು ದೇಹಕ್ಕೆ ಅತ್ಯವಶ್ಯಕ. ಆದರೆ, ಈ ನಿದ್ದೆ ಬಗ್ಗೆ ಹಲವು ಗೊಂದಲ ಮತ್ತು ತಪ್ಪು ಕಲ್ಪನೆಗಳು ಅನೇಕರಲ್ಲಿದೆ. ಕೆಲವರು ಕಡಿಮೆ ನಿದ್ದೆ ಒಳ್ಳೆಯದು ಎಂದರೆ, ಮತ್ತೆ ಕೆಲವು ಉತ್ತಮ ಗುಣಮಟ್ಟದ ನಿದ್ದೆ ಅವಶ್ಯ ಎನ್ನುತ್ತಾರೆ. ಹಾಗಾದರೆ ನಿದ್ದೆ ಕುರಿತು ಸ್ಪಷ್ಟವಾಗಿ ತಿಳಿಯಬೇಕಾದದ್ದು ಏನು ಎಂಬುದಕ್ಕೆ ಇಲ್ಲಿದೆ ಉತ್ತರ!

ಐದು ಗಂಟೆ ನಿದ್ದೆ ಸಾಕಾ?: ಕೆಲವು ಮಂದಿ ಐದು ಗಂಟೆಯ ನಿದ್ದೆ ದೇಹಕ್ಕೆ ಸಾಕು ಎನ್ನುತ್ತಾರೆ. ಆದರೆ, ಇದು ಎಲ್ಲರಿಗೂ ಅನ್ವಯಿಸುವುದಿಲ್ಲ. ಕೆಲವರು ಐದು ಅಥವಾ ಆರು ಗಂಟೆ ನಿದ್ರೆ ಮಾಡಿದರೂ ಸಾಕು ದಿನವಿಡಿ ಚುರುಕಾಗಿರುತ್ತಾರೆ. ಆದರೆ, ಕೆಲವು ಮಂದಿ ಆ ರೀತಿ ಇರುವುದಿಲ್ಲ. ತಜ್ಞರು ಶಿಫಾರಸು ಮಾಡುವಂತೆ ಪ್ರತಿಯೊಬ್ಬರು 7-8 ಗಂಟೆ ನಿದ್ದೆ ಮಾಡಲೇಬೇಕು. ನಿಮಗೆ ಸಾಕಷ್ಟು ನಿದ್ರೆ ಆಗದೇ ಹೋದಲ್ಲಿ ನಿಮ್ಮ ಉತ್ಸಾಹ ಮತ್ತು ಬುದ್ದಿವಂತಿಕೆ ಕುಗ್ಗುತ್ತದೆ. ಇದರಿಂದ ಕೆಲಸದಲ್ಲಿ ಕೌಶಲ್ಯದ ಕೊರತೆ ಎದುರಾಗುತ್ತದೆ. ಅಲ್ಲದೇ, ಸ್ಥೂಲಕಾಯ, ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಕೂಡ ಹೆಚ್ಚಾಗುತ್ತದೆ.

ಬೆಳಗಿನ ಹೊತ್ತಿನ ನಿದ್ದೆ ಸಾಕಾಗುವುದಿಲ್ಲ: ರಾತ್ರಿ ಉತ್ತಮವಾದ ನಿದ್ದೆ ಆಗಿಲ್ಲ ಎಂದರೆ ನಿದ್ದೆ ಅಮಲು ಕಾಡುತ್ತದೆ. ಇದರಿಂದ ಬೆಳಗಿನ ಹೊತ್ತು ಮಲಗಿದರೆ, ಹೊಸ ತಾಜಾತನ ಮೂಡುತ್ತದೆ ಎಂದು ಭಾವಿಸುತ್ತೇವೆ. ಆದರೆ, ತಜ್ಞರು ಹೇಳುವಂತೆ ರಾತ್ರಿ ನಿದ್ರೆಯನ್ನು ಸರಿದೂಗಿಸಲು ಸಾಧ್ಯವಿಲ್ಲ. ಬೆಳಗಿನ ನಿದ್ದೆ ರಾತ್ರಿ ನಿದ್ದೆಯಂತೆ ನಾಲ್ಕು ಹಂತ ಹೊಂದಿರುವುದಿಲ್ಲ. ನಿದ್ದೆಯಲ್ಲಿನ ಮೂರನೇ ಹಂತ ನಮ್ಮ ದೇಹದ ಪ್ರತಿರೋಧಕ ವ್ಯವಸ್ಥೆ ಬಲಗೊಳಿಸಲು ಮತ್ತು ಗಾಯಗಳನ್ನು ಮಾಯಿಸಲು ಅಗತ್ಯವಾಗಿದೆ. ಅಲ್ಲದೇ ಬೆಳಗಿನ ನಿದ್ದೆಯಲ್ಲಿ ಅಪಾಯದ ಅಂಶ ಕೂಡ ಇದೆ. ನಿದ್ರಾ ಹೀನತೆ ಅಥವಾ ಸ್ಲೀಪ್​ ಅಪ್ನೀಯ ಸಮಸ್ಯೆಗಳಿಗ ಕಾರಣವಾಗುವ ಜೊತೆಗೆ ರಾತ್ರಿ ನಿಮಗೆ ಬೇಗ ಮಲಗಲು ಬಿಡುವುದಿಲ್ಲ. ದೇಹದ ಜೈವಿಕ ಗಡಿಯಾರಕ್ಕೆ ಇದರಿಂದ ಅಡ್ಡಿಯಾಗುತ್ತದೆ. ಈ ಹಿನ್ನೆಲೆ ಬೆಳಗಿನ ನಿದ್ದೆ ಬಗ್ಗೆ ಎಚ್ಚರದಿಂದ ಇರಬೇಕು. ಬೆಳಗಿನ ಹೊತ್ತು 30 ನಿಮಿಷಕ್ಕಿಂತ ಹೆಚ್ಚಿನ ಅವಧಿ ನಿದ್ದೆ ಮಾಡಬೇಕು. ಮಧ್ಯಾಹ್ನ 3 ಗಂಟೆ ಬಳಿಕ ನಿದ್ರೆ ಮಾಡಬೇಡಿ. ನಿಮಗೆ ಸಂಜೆ ಬಳಿಕ ನಿದ್ರೆ ಬಂದರೂ ಎಚ್ಚರದಿಂದ ಇರಿ. ಇಲ್ಲದೇ ಹೋದಲ್ಲಿ ರಾತ್ರಿ ಉತ್ತಮ ನಿದ್ದೆ ಸಾಧ್ಯವಾಗುವುದಿಲ್ಲ.

ಗೊರಕೆ ಬಗ್ಗೆ ಇರಲಿ ಕಾಳಜಿ: ಅನೇಕ ಮಂದಿ ಗೊರಕೆ ಹೊಡೆಯುತ್ತಾ ಮಲಗುವುದರಿಂದ ಇತರರಿಗೆ ತೊಂದರೆ ಆಗುವುದಿಲ್ಲ ಎಂದು ಭಾವಿಸುತ್ತಾರೆ. ಆದರೆ, ಇದು ದೊಡ್ಡ ಸಮಸ್ಯೆ. ಗೊರಕೆ ಎಂಬುದು ಗಾಢ ನಿದ್ರೆಯ ಚಿಹ್ನೆ ಎಂದು ಭಾವಿಸುವುದು ತಪ್ಪು. ಗೊರಕೆಯು ಸ್ಲೀಪ್​ ಅಪ್ನೀಯ ಸಮಸ್ಯೆ ಲಕ್ಷಣ. ಕೆಲವು ಮಂದಿ ಮಲಗಿದಾಗ ಅವರ ಗಂಟಲಿನಲ್ಲಿ ಗೊರಕೆ ಸದ್ದಿನಿಂದ ಗಾಳಿಯಾಡುವುದನ್ನು ತಡೆಯುತ್ತದೆ. ಇದರಿಂದ ಅವರಿಗೆ ಉಸಿರಾಡುವುದು ಕಷ್ಟವಾಗುತ್ತದೆ. ಕೆಲವು ಮಂದಿ ಜೋರಾಗಿ ಗೊರಕೆ ಹೊಡೆದಾಗ ಅವರು ಗಾಢ ಉಸಿರು ತೆಗೆದು ಕೊಳ್ಳುತ್ತಾರೆ. ಅವರು ಉಸಿರು ನಿಂತಾಗ ರಕ್ತದಲ್ಲಿನ ಆಮ್ಲಜನಕ ಕಡಿಮೆಯಾಗುತ್ತದೆ. ಇದು ನಿದ್ರೆಯಿಂದ ಎಚ್ಚರ ಮಾಡುತ್ತದೆ. ಕೆಲವು ಮಂದಿ ಒಂದು ಗಂಟೆಯಲ್ಲೇ ಅನೇಕ ಬಾರಿ ಎಚ್ಚರಗೊಳ್ಳುತ್ತಾರೆ. ಇದಕ್ಕೆ ಕಾರಣವೂ ರಕ್ತದಲ್ಲಿನ ಆಮ್ಲಜನಕ ಕೊರತೆ ಆಗಿರುತ್ತದೆ. ಇದು ರಕ್ತದೊತ್ತಡಕ್ಕೆ ಕೂಡ ಕಾರಣವಾಗುತ್ತದೆ. ಸ್ಲೀಪ್​ ಅಪ್ನೀಯ ಹೃದಯ ಸಮಸ್ಯೆ, ಹೃದಯ ಸ್ತಂಭನ, ಮಧುಮೇಹ, ಅಕಾಲಿಕ ಸಾವಿಗೆ ಕಾರಣವೂ ಆಗುತ್ತದೆ. ಇದರಲ್ಲಿನ ಮತ್ತೊಂದು ಅಂಶ ಎಂದರೆ ಗೊರಕೆ ಹೊಡೆಯುವವರಿಗೆ ಎಲ್ಲಾ ಸ್ಲೀಪ್​ ಅಪ್ನೀಯ ಸಮಸ್ಯೆ ಇರುತ್ತದೆ ಎಂದೆನ್ನಿಲ್ಲ. ಶೇ 20ರಷ್ಟು ಮಂದಿಯಲ್ಲಿ ಇದು ಕಾರಣವಾಗತ್ತದೆ. ಈ ಹಿನ್ನೆಲೆಯಲ್ಲಿ ವೈದ್ಯರ ಬಳಿ ಸಮಾಲೋಚಿಸಿ ಪರಿಹಾರ ಕಂಡುಕೊಳ್ಳುವುದು ಉಚಿತ.

ಎಲ್ಲೆಂದರಲ್ಲಿ ಅಲ್ಲಿ ನಿದ್ರೆ: ಕೆಲವು ಮಂದಿ ಮಲಗಿದಾಕ್ಷಣ ನಿದ್ರೆಗೆ ಜಾರುತ್ತಾರೆ. ಇದನ್ನು ಉತ್ತಮ ಆರೋಗ್ಯ ಲಕ್ಷಣ ಎಂದು ಕೊಳ್ಳುತ್ತಾರೆ. ಆದರೆ, ಇದು ಎಲ್ಲ ವೇಳೆಯಲ್ಲೂ ಸರಿಯಲ್ಲ. ಕೆಲವರಿಗೆ ಯಾವುದೇ ಮಾನಸಿಕ ಒತ್ತಡ, ನೋವು ಅಥವಾ ಕಷ್ಟ ಇಲ್ಲದಾಗ ತಕ್ಷಣಕ್ಕೆ ನಿದ್ರೆ ಬರುವುದಿಲ್ಲ. ಆದರೆ ಕೆಲವು ಮಂದಿ ಕೂತಲ್ಲಿ, ನಿಂತಲ್ಲಿ ನಿದ್ದೆ ಮಾಡುತ್ತಿದ್ದರೆ ಇದು ನಿದ್ರೆ ಅಭಾವ ಆಗಿರುತ್ತದೆ. ಈ ಬಗ್ಗೆ ಹೆಚ್ಚಿನ ಕಾಳಜಿ ಬೇಡ. ರಾತ್ರಿ ಉತ್ತಮ ನಿದ್ರೆ ಮಾಡುವ ಮೂಲಕ ಇದನ್ನು ಸರಿ ಮಾಡಬಹುದು.

ಮೆಲಟೋನಿನ್​ ಸಾಮಾನ್ಯ: ಕೆಲವು ಮಂದಿ ನಿದ್ರೆ ಮಾಡಲು ಮೆಲಟೋನಿನ್​ ಹಾರ್ಮೋನ್​ ಮಾತ್ರೆಗಳನ್ನು ಸೇವಿಸುತ್ತಾರೆ. ಇದು ನೈಸರ್ಗಿಕ ಹಾರ್ಮೋನ್​. ಇದರಿಂದ ಯಾವುದೇ ಸಮಸ್ಯೆ ಇಲ್ಲ ಎಂದು ಭಾವಿಸುತ್ತಾರೆ. ಕಡಿಮೆ ಡೋಸ್​ನ ಮೆಲಟೋನಿನ್​ ಸಾಮಾನ್ಯವಾಗಿ ಸುರಕ್ಷಿತ. ಆದರೆ, ಹೆಚ್ಚಿನ ಪ್ರಮಾಣದಲ್ಲಿ ಇದರ ಸೇವನೆ, ತಲೆನೋವು, ರಕ್ತದೊತ್ತಡ, ಬೆಳಗಿನ ಹೊತ್ತು ನಿದ್ರೆ, ವಾಂತಿಗೆ ಕಾರಣವಾಗುತ್ತದೆ. ಮಲಗುವ ಒಂದು ಅಥವಾ ಎರಡು ಗಂಟೆ ಮೊದಲು 0.3 ಎಂಜಿ ಮೆಲಟೊನಿನ್​ ಸೇವನೆ ಮಾಡಬಹುದು. ವೈದ್ಯರು ಕೂಡ ಸುಧಾರಿತ ಪ್ರಮಾಣದಲ್ಲಿ ಇದರ ಸೇವನೆಗೆ ಅಡ್ಡಿ ಇಲ್ಲ ಎನ್ನುತ್ತಾರೆ. ಆದರೆ, ಇದರ ಪ್ರಮಾಣ ಹೆಚ್ಚು ಮಾಡಲು ವೈದ್ಯರ ಸಲಹೆ ಅಗತ್ಯ ಎನ್ನುತ್ತಾರೆ.

ಇದನ್ನೂ ಓದಿ: ಮಹಿಳೆಯರೇ, ನಿದ್ದೆ ಕಡಿಮೆ ಮಾಡುವುದರಿಂದಲೂ ಬರುತ್ತೆ ಮಧುಮೇಹ: ಅಧ್ಯಯನ

Last Updated : Dec 5, 2023, 2:49 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.