ETV Bharat / sukhibhava

ಅನಾರೋಗ್ಯಕರ ಆಹಾರ ತಿನ್ನುವ ಬಯಕೆಗೆ ಕಾರಣ ಮೆದುಳು

ಮೆದುಳಿಗೆ ಉಪಪ್ರಜ್ಞೆಯ ಬಯಕೆಗಳಿಂದಾಗಿ ಅನಾರೋಗ್ಯಕರ ಹೆಚ್ಚಿನ ಸಕ್ಕರೆ ಮತ್ತು ಫ್ಯಾಟ್​ಯುಕ್ತ ಆಹಾರ ತಿನ್ನುವ ಬಯಕೆ ಮೂಡುತ್ತದೆ.

Blame your brain for craving for unhealthy sugary foods
ಅನಾರೋಗ್ಯಕರ ಆಹಾರ ತಿನ್ನುವ ಬಯಕೆಗೆ ಕಾರಣ ಮೆದುಳು
author img

By

Published : Mar 23, 2023, 8:45 PM IST

ಲಂಡನ್​: ಜಂಕ್​ ಫುಡ್​ಗಳು ಯಾರಿಗೆ ತಾನೇ ರುಚಿಸುವುದಿಲ್ಲ ಹೇಳಿ. ಚಾಕೊಲೇಟ್​ ಬಾರ್​, ಕ್ರಿಸ್ಪ್ಸ್​, ಫ್ರೈಗಳನ್ನು ಒಮ್ಮೆ ತಿಂದರೆ ಮತ್ತೆ ತಿನ್ನಬೇಕು ಎಂದು ಅನ್ನಿಸದೇ ಇರಲಾರದು. ಹೆಚ್ಚಿನ ಕೊಬ್ಬು ಮತ್ತು ಸಕ್ಕರೆ ಅಂಶವಿರುವ ಆಹಾರಗಳು ನಮ್ಮ ಮನಸ್ಥಿತಿಯನ್ನು ಬದಲಾಯಿಸುತ್ತಚೆ. ಈ ಆಹಾರಗಳನ್ನು ಒಮ್ಮೆ ತಿಂದರೆ ಅರಿವಿಲ್ಲದೆ, ಹೆಚ್ಚಿನ ಹೈ ಫ್ಯಾಟ್​ (ಕೊಬ್ಬಿನಾಂಶ)ಯುಕ್ತ ಆಹಾರವನ್ನು ಸೇವಿಸಲು ಮನಸು ಹಂಬಲಿಸುವಂತೆ ಮಾಡುತ್ತದೆ ಮೆದುಳು.

ಮೆದುಳಿನ ಉತ್ತೇಜನ: ಈ ಆಹಾರಗಳನ್ನು ಸಣ್ಣ ಪ್ರಮಾಣದಲ್ಲಿ ಸೇವನೆ ಮಾಡಿದರೂ, ಮೆದುಳು ಈ ಆಹಾರಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡುವಂತೆ ಉತ್ತೇಜಿಸುತ್ತದೆ ಎಂದು ಸಂಶೋಧನೆ ತಿಳಿಸಿದೆ. ಈ ಸಂಬಂಧ ಜರ್ಮನಿಯಲ್ಲಿನ ಮಾಕ್ಸ್​ ಪ್ಲಾಂಕ್​ ಇನ್ಸ್​ಟಿಟ್ಯೂಟ್​ ಫಾರ್​ ಮೆಟಾಬೊಲಿಸಂ ರಿಸರ್ಜ್​ ಮತ್ತು ಅಮೆರಿಕದ ಯೇಲ್​ ಯುನಿವರ್ಸಿಟಿ ಸಂಶೋಧನೆ ನಡೆಸಿದೆ.

ಹೆಚ್ಚಿನ ಕೊಬ್ಬಿನ ಮತ್ತು ಹೆಚ್ಚಿನ ಸಕ್ಕರೆಯುಕ್ತ ಆಹಾರ ಸೇವಿಸಬೇಕು ಎಂಬ ಹಂಬಲಕ್ಕೆ ಪಾಶ್ಚಾತ್ಯ ಡಯಟ್​ ಎನ್ನಲಾಗುವುದು. ಇದು ಸಹಜ ಅಥವಾ ಅಧಿಕ ತೂಕದ ಬೆಳವಣಿಗೆ ಕಾರಣವಾಗಬಹುದು. ಮೆದುಳು ಈ ಆದ್ಯತೆಯನ್ನು ಕಲಿಯುತ್ತದೆ ಎಂದು ನಾವು ಭಾವಿಸುತ್ತೇವೆ ಎಂದು ಸಂಶೋಧನೆ ಪ್ರಮುಖ ಲೇಖಕರಾಗಿರುವ ಶರ್ಮಿಲಿ ಎಡ್ವಿನ್​ ಥಾನರಾಜ್​ ತಿಳಿಸಿದ್ದಾರೆ

ಎಂಟು ವಾರ ಅಧ್ಯಯನ: ಈ ಕುರಿತು ಸಂಶೋಧನೆ ಸಂಶೋಧಕರು ಒಂದು ಗುಂಪಿನ ಸ್ವಯಂಸೇವಕರಿಗೆ ತಮ್ಮ ಸಾಮಾನ್ಯ ಆಹಾರದ ಜೊತೆಗೆ ಎಂಟು ವಾರಗಳವರೆಗೆ ದಿನಕ್ಕೆ ಸಾಕಷ್ಟು ಕೊಬ್ಬು ಮತ್ತು ಸಕ್ಕರೆಯನ್ನು ಹೊಂದಿರುವ ಸಣ್ಣ ಪುಡಿಂಗ್ ಅನ್ನು ನೀಡಿದರು. ಇತರ ಗುಂಪಿನವರು ಅದೇ ಸಂಖ್ಯೆಯ ಕ್ಯಾಲೋರಿಗಳನ್ನು ಒಳಗೊಂಡಿರುವ ಆದರೆ ಕಡಿಮೆ ಕೊಬ್ಬನ್ನು ಹೊಂದಿರುವ ಪುಡಿಂಗ್ ಅನ್ನು ಪಡೆದರು.

ಎಂಟು ವಾರಗಳ ಕಾಲ ಈ ಅಧ್ಯಯನದ ಬಳಿಕ ಹೆಚ್ಚಿನ ಸಕ್ಕರೆ ಮತ್ತು ಅಧಿಕ ಫ್ಯಾಟ್​ ಹೊಂದಿರುವ ಪುಡಿಂಗ್​ ಸೇವಿಸಿದ ಜನರಲ್ಲಿ ಕೊಬ್ಬು ಮತ್ತು ಹೆಚ್ಚಿನ ಸಕ್ಕರೆಯ ಆಹಾರಗಳಿಗೆ ಮೆದುಳಿನ ಪ್ರತಿಕ್ರಿಯೆ ಹೆಚ್ಚಾಗಿತ್ತು. ಇದು ಡೋಪಮಿನರ್ಜಿಕ್ ವ್ಯವಸ್ಥೆಯನ್ನು ಸಕ್ರಿಯಗೊಳಿಸಿತು. ಮೆದುಳಿನಲ್ಲಿನ ಪ್ರದೇಶವು ಪ್ರೇರಣೆ ಮತ್ತು ಪ್ರತಿಫಲಕ್ಕೆ ಕಾರಣವಾಗಿದೆ. ಉಪಪ್ರಜ್ಞೆಯಿಂದ ಲಾಭದಾಯಕ ಆಹಾರವನ್ನು ಆದ್ಯತೆ ನೀಡಲು ಕಲಿಯುತ್ತದೆ. ಮೆದುಳಿನಲ್ಲಿನ ಈ ಬದಲಾವಣೆಗಳ ಮೂಲಕ, ನಾವು ಅರಿವಿಲ್ಲದೆ ಯಾವಾಗಲೂ ಬಹಳಷ್ಟು ಕೊಬ್ಬು ಮತ್ತು ಸಕ್ಕರೆಯನ್ನು ಹೊಂದಿರುವ ಆಹಾರಗಳಿಗೆ ಆದ್ಯತೆ ನೀಡುತ್ತೇವೆ

ತೂಕದಲ್ಲಿ ಹೆಚ್ಚಳ ಕಂಡು ಬಂದಿಲ್ಲ: ಈ ಅವಧಿ ವೇಳೆ ಹೆಚ್ಚಿನ ಸಕ್ಕರೆ ಮತ್ತು ಕೊಬ್ಬನ್ನು ಸೇವಿಸಿದವರು ಹೆಚ್ಚಿನ ತೂಕವನ್ನು ಪಡೆದಿಲ್ಲ. ಜೊತೆಗೆ ಅವರ ರಕ್ತದ ಸಕ್ಕರೆ ಮಟ್ಟ ಮತ್ತಿ ಕೊಲೆಸ್ಟ್ರಾಲ್​ನಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ಆದಾಗ್ಯೂ ಸಕ್ಕರೆ ಆಹಾರಗಳಿಗೆ ಆದ್ಯತೆ ಮುಂದುವರೆಸಲಾಗುವುದು ಎಂದು ಸಂಶೋಧನೆಯಲ್ಲಿ ಊಹಿಸಲಾಗಿದೆ. ಮಿದುಳಿನಲ್ಲಿ ಹೊಸ ಸಂಪರ್ಕಗಳು ಆಗುತ್ತದೆ. ಇದು ಅಷ್ಟು ಬೇಗ ಮರೆಯುವುದಿಲ್ಲ. ಉಪಪ್ರಜ್ಞೆಯಲ್ಲಿ ಈ ಕಲಿಕೆ ಮುಂದುವರೆಯುತ್ತದೆ ಎಂದು ಸಂಶೋಧನೆ ತಿಳಿಸಿದೆ.

ಇದನ್ನೂ ಓದಿ: ಪ್ರತಿನಿತ್ಯ ಮುಡಿಯಷ್ಟು ಒಣ ಹಣ್ಣು ಸೇವಿಸಿ; ಹೃದಯದ ಸಮಸ್ಯೆ ಕಡಿಮೆಯಾಗುತ್ತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.