ETV Bharat / sukhibhava

Black Pepper: ಕಾಳು ಮೆಣಸಿನಿಂದ ಆಗುವ ಪ್ರಮುಖ ಆರು ಪ್ರಯೋಜನಗಳಿವು.. ತಪ್ಪದೇ ನಿಮ್ಮ ಆಹಾರದಲ್ಲಿ ಸೇರಿಸಿ! - ಕರಿ ಮೆಣಸನ್ನು ಆಹಾರ ಪದ್ಧತಿ

ಭಾರತೀಯ ಮಸಾಲೆಗಳಲ್ಲಿ ಕಾಳು ಮೆಣಸು ಪ್ರಮುಖವಾಗಿದೆ. ಅನೇಕ ಔಷಧೀಯ ಗುಣ ಹೊಂದಿರುವ ಈ ಮೆಣಸಿನ ಬಳಕೆ ಪ್ರತಿನಿತ್ಯ ಮಾಡುವುದರಿಂದ ಅದ್ಬುತ ಪ್ರಯೋಜನ ಪಡೆಯಬಹುದಾಗಿದೆ.

The main six benefits of black pepper are; Include it in your diet without fail

author img

By

Published : Jun 20, 2023, 12:04 PM IST

ನವದೆಹಲಿ: ಅದ್ಬುತ ಆರೋಗ್ಯ ಪ್ರಯೋಜನ ಹೊಂದಿರುವ ಹಿನ್ನೆಲೆ ಬಹುತೇಕರು ಕಾಳು ಅಥವಾ ಕರಿ ಮೆಣಸನ್ನು ಆಹಾರ ಪದ್ಧತಿಯಲ್ಲಿ ಬಳಕೆ ಮಾಡುತ್ತಾರೆ. ಇದು ಆರೋಗ್ಯದ ಜೊತೆ ರುಚಿ, ಸ್ವಾದವನ್ನು ಕೂಡ ಹೆಚ್ಚಿಸುತ್ತದೆ. ಕಾಳು ಮೆಣಸಿನಲ್ಲಿ ಅನೇಕ ರಾಸಾಯನಿಕ ಅಂಶಗಳಿದ್ದು, ಇದು ಆರೋಗ್ಯಕ್ಕೆ ಬಲು ಉಪಯೋಗವಾಗಿದೆ. ಓಲಿಯೊರೆಸಿನ್‌ಗಳು ಮತ್ತು ಆಲ್ಕಲಾಯ್ಡ್‌ಗಳು ಪೈಪೆರಿನ್ ಮತ್ತು ಚಾವಿಸಿನ್ ಇದರಲ್ಲಿ ಇದ್ದು, ಇದು ಹೆಚ್ಚು ಆಂಟಿ ಆಕ್ಸಿಡೆಂಟ್​ ಗುಣಗಳನ್ನು ಹೊಂದಿದೆ. ಈ ಅಂಶಗಳು ದೀರ್ಘಕಾಲದ ಅನಾರೋಗ್ಯದ ಅಪಾಯ ಕಡಿಮೆ ಮಾಡುತ್ತದೆ. ಹಾಗಾದರೆ ಕಾಳು ಮೆಣಸು ಯಾವ ರೀತಿ ಆರೋಗ್ಯ ಪ್ರಯೋಜನ ಹೊಂದಿದೆ ಎಂಬ ಪ್ರಮುಖ ಅಂಶಗಳು ಇಲ್ಲಿದೆ.

ಕ್ಯಾನ್ಸರ್​ ತಡೆ
ಕ್ಯಾನ್ಸರ್​ ತಡೆ

ಕ್ಯಾನ್ಸರ್​ ತಡೆ: ಕರಿ ಮೆಣಸಿನಲ್ಲಿ ಪೈಪೆರಿನ್​ ಇದ್ದು, ಇದು ಕ್ಯಾನ್ಸರ್​ ತಡೆಯುವ ಶಕ್ತಿ ಹೊಂದಿದೆ. ಅರಿಶಿಣದೊಂದಿಗೆ ಇದನ್ನು ಮಿಶ್ರಣ ಮಾಡಿದಾಗ ಇದರಲ್ಲಿ ಕ್ಯಾನ್ಸರ್​​ ವಿರೋಧಿ ಗುಣವಾದ ಆಂಪ್ಲಿಪೈಡ್​ ದುಪ್ಪಟ್ಟುಗೊಳ್ಳುತ್ತದೆ. ಈ ಮಸಾಲೆಯಲ್ಲಿ ವಿಟಮಿನ್​ ಸಿ, ವಿಟಮಿನ್​ , ಫ್ಲವೊನೊಯ್ಡ್​​ ಮತ್ತು ಕ್ಯಾರೊಟೆನ್ಸ್​​ನಂತಹ ಆಂಟಿ ಆಕ್ಸಿಡೆಂಟ್​ ಗುಣ ಇದ್ದು, ರೋಗದ ವಿರುದ್ಧ ಹೋರಾಡುತ್ತದೆ.

ಜೀರ್ಣಕ್ರಿಯೆಗೆ ಸುಲಭ
ಜೀರ್ಣಕ್ರಿಯೆಗೆ ಸುಲಭ

ಜೀರ್ಣಕ್ರಿಯೆಗೆ ಸುಲಭ: ಕಾಳು ಮೆಣಸನ್ನು ಹಾಗೆಯೇ ತಿನ್ನುವುದರಿಂದ ಹೊಟ್ಟೆಯಲ್ಲಿ ಇದು ಹೈಡ್ರೊಕ್ಲೊರಿಕ್​ ಆ್ಯಸಿಡ್​ ಬಿಡುಗಡೆ ಮಾಡುತ್ತದೆ. ಇದು ಆರೋಗ್ಯಯುತ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಜೊತೆಗೆ ಕರಳನ್ನು ಶುದ್ದಗೊಳಿಸುತ್ತದೆ. ಹೈಡ್ರೊಕ್ಲೊರಿಕ್​ ಆ್ಯಸಿಡ್​ ಹೆಚ್ಚುವರಿಯಾಗಿ ಜೀರ್ಣಾಂಗವ್ಯೂಹದ ಸಮಸ್ಯೆಯಿಂದ ಪರಿಹಾರ ನೀಡುತ್ತದೆ. ಈ ಹಿನ್ನೆಲೆ ಯಾವುದೇ ಋತುಮಾನ ಇದ್ದರೂ, ಪ್ರತಿ ಆಹಾರದಲ್ಲಿ ಕಾಳು ಮೆಣಸು ಸೇರಿಸುವುದು ಅದ್ಬುತ ಪ್ರಯೋಜನ ನೀಡುತ್ತದೆ.

ತೂಕ ಇಳಿಕೆಗೆ ಸಹಾಯಕ
ತೂಕ ಇಳಿಕೆಗೆ ಸಹಾಯಕ

ತೂಕ ಇಳಿಕೆಗೆ ಸಹಾಯಕ: ಆಹಾರಕ್ಕೆ ಅತ್ಯಂತ ಹೆಚ್ಚಿನ ಪೋಷಕಾಂಶವನ್ನು ಈ ಕಾಳು ಮೆಣಸು ನೀಡುತ್ತದೆ. ಜೊತೆಗೆ ಇದರಲ್ಲಿನ ಪೈಟೊನ್ಯೂಟ್ರಿಯೆಂಟ್ಸ್​​​ಗಳು ಕೊಬ್ಬಿನ ಜೀವಕೋಶದಲ್ಲಿ ಬೇಗ ಕರಗಿ, ಚಯಾಪಚಯನವನ್ನು ಹೆಚ್ಚಿಸುತ್ತದೆ. ತಾಜಾ ಕರಿ ಮೆಣಸನ್ನು ಸೇವಿಸಿದಾಗ ಇದು ಬೆವರುವಿಕೆಗೆ ಕಾರಣವಾಗುತ್ತದೆ. ಇದರಿಂದ ದೇಹದ ವಿಷದ ಅಂಶ ಹೊರಗೆ ಹೋಗುತ್ತದೆ.

ರಕ್ತದ ಸಕ್ಕರೆ ಅಂಶ ಅಭಿವೃದ್ಧಿ
ರಕ್ತದ ಸಕ್ಕರೆ ಅಂಶ ಅಭಿವೃದ್ಧಿ

ರಕ್ತದ ಸಕ್ಕರೆ ಅಂಶ ಅಭಿವೃದ್ಧಿ: ಅನೇಕ ಪ್ರಯೋಜನ ಹೊರತಾಗಿ, ಕಾಳು ಮೆಣಸು ಗ್ಲೊಕೋಸ್​ ಮೆಟಾಬಾಲಿಸಂ ಅನ್ನು ಅಭಿವೃದ್ಧಿ ಪಡಿಸುತ್ತದೆ. ಈ ಹಿನ್ನೆಲೆ ಮಧುಮೇಹ ಹೊಂದಿರುವವರು ತಮ್ಮ ದೈನಂದಿನ ಅಹಾರದಲ್ಲಿ ಇದನ್ನು ಸೇರಿಸಬಹುದು. ಇನ್ಸುಲಿನ್​​ ಸೂಕ್ಷ್ಮತೆಗೆ ಬಂದಾಗ ಇದು ಅದ್ಬುತಗಳನ್ನು ಮಾಡಿ, ಉತ್ತಮ ಪರಿಣಾಮಕ್ಕೆ ಕಾರಣವಾಗುತ್ತದೆ.

ಚರ್ಮ ಸಂಬಂಧಿತ ಸಮಸ್ಯೆಗೆ ಪರಿಹಾರ
ಚರ್ಮ ಸಂಬಂಧಿತ ಸಮಸ್ಯೆಗೆ ಪರಿಹಾರ

ಚರ್ಮ ಸಂಬಂಧಿತ ಸಮಸ್ಯೆಗೆ ಪರಿಹಾರ: ಕಾಳು ಮೆಣಸು ಚರ್ಮಕ್ಕೆ ರಕ್ಷಣೆಯನ್ನು ನೀಡುತ್ತದೆ. ತ್ವಚೆಯ ಮೊಡವೆ ಸೇರಿದಂತೆ ಕಲೆ ನಿವಾರಣೆಗೆ ಸಹಾಯ ಮಾಡುತ್ತದೆ. ಇದರಿಂದ ನೈಸರ್ಗಿಕ ಬಣ್ಣ ಹಿಂದಿರುಗಲು ಸಹಾಯ ಮಾಡುತ್ತದೆ. ಕಾಳು ಮೆಣಸನ್ನು ಸೇವಿಸುವುದರಿಂದ ಬೇಗ ವಸ್ಸಾಗುವಿಕೆ, ಸುಕ್ಕು ಮತ್ತು ಚರ್ಮ ಸಂಬಂಧಿತ ಸಮಸ್ಯೆಗೆ ಪರಿಹಾರ ಕಾಣಬಹುದು. ಜೊತೆಗೆ ಇದು ಕಪ್ಪು ವರ್ತುಲಗಳನ್ನು ನಿವಾರಣೆ ಮಾಡುತ್ತದೆ.

ವಿಶೇಷ ಸೂಚನೆ: ಕರಿ ಮೆಣಸಿನ ಉತ್ತಮ ಅಂಶಗಳನ್ನು ಹೊಂದಿದ್ದರೂ, ಅನೇಕ ಮಂದಿ ಇದರ ಅಲರ್ಜಿ ಹೊಂದಿರುತ್ತಾರೆ. ಈ ಹಿನ್ನಲೆ ಇವುಗಳ ಬಳಕೆ ಅಥವಾ ಚಿಕಿತ್ಸೆಯನ್ನು ಮಾಡುವ ಮೊದಲು ವೈದ್ಯರ ಸಂಪರ್ಕಕ್ಕೆ ಒಳಗಾಗುವುದು ಸೂಕ್ತ.

ಇದನ್ನೂ ಓದಿ: ವಿಶೇಷ ಅಂಕಣ: ಪ್ರಸ್ತುತ ಪರಿಸ್ಥಿತಿಗೆ ಕಾಳು ಮೆಣಸು ಸರಿಯಾದ ಔಷಧ..!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.