ETV Bharat / sukhibhava

ಮಾನಸಿಕ ಆರೋಗ್ಯದ ಮೇಲೂ ಬೀರುತ್ತದೆ ಬಿಸಿಲಿನ ತಾಪಮಾನ; ಕೆಜಿಎಂಯು ತಜ್ಞರ ಅಭಿಮತ - ಹವಾಮಾನ ಇಲಾಖೆ ಎಚ್ಚರಿಸಿದೆ

ಬಿಸಿಲು ಎಲ್ಲಾ ವಯೋಮಿತಿ ಜನರಿಗೂ ಹಾನಿಕಾರಕವಾಗಿದೆ. ಅದರಲ್ಲೂ ಹಿರಿಯ ವಯಸ್ಕರಲ್ಲಿ ದೀರ್ಘಾಕಾಲಿಕ ಸಮಸ್ಯೆಗೆ ಕಾರಣವಾಗಬಹುದು. ನಿರ್ಜಲೀಕರಣ ಮತ್ತು ದೇಹದ ಉಷ್ಣಾಂಶ ಹೆಚ್ಚಳದಂತಹ ತೊಂದರೆಗೆ ಸಾಕ್ಷಿಯಾಗಲಿದೆ

The heat of the sun can also affect mental health

author img

By

Published : May 24, 2023, 3:26 PM IST

ಬೆಂಗಳೂರು: ಉತ್ತರ ಭಾರತ ಸೇರಿದಂತೆ ಹಲವು ಕಡೆ ಸುಡು ಬಿಸಿಲಿನ ತಾಪ ಹೆಚ್ಚುತ್ತಿದ್ದು, ಜನರು ರಕ್ಷಣಾ ಕ್ರಮ ಕೈಗೊಳ್ಳುವಂತೆ ಈಗಾಗಲೇ ಹವಾಮಾನ ಇಲಾಖೆ ಎಚ್ಚರಿಸಿದೆ. ಬಿಸಿಲು ಹೆಚ್ಚಿದಂತೆ ಶಾಖದ ಅಲೆಯೂ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರತ್ತದೆ. ಅಧಿಕವಾಗಿ ಬಿಸಿಲಿನ ತಾಪಕ್ಕೆ ಒಡ್ಡಿಕೊಳ್ಳುವುದರಿಂದ ಸ್ಟ್ರೋಕ್​ ಸಂಬಂಧಿಸಿದಂತೆ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತದೆ. ಜೊತೆಗೆ ಈ ಶಾಖದ ಅಲೆಗಳು ಉಸಿರಾಟ ಮತ್ತು ಹೃದಯ ಸಮಸ್ಯೆ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಇದು ಸಾವಿನ ದರಕ್ಕೂ ಕಾರಣವಾಗಬಹುದು.

ಬಿಸಿಲು ಎಲ್ಲಾ ವಯೋಮಿತಿ ಜನರಿಗೂ ಹಾನಿಕಾರಕವಾಗಿದೆ. ಅದರಲ್ಲೂ ಹಿರಿಯ ವಯಸ್ಕರಲ್ಲಿ ದೀರ್ಘಕಾಲಿಕ ಸಮಸ್ಯೆಗೆ ಕಾರಣವಾಗಬಹುದು. ನಿರ್ಜಲೀಕರಣ ಮತ್ತು ದೇಹದ ಉಷ್ಣಾಂಶ ಹೆಚ್ಚಳದಂತಹ ತೊಂದರೆಗೆ ಸಾಕ್ಷಿಯಾಗಲಿದೆ ಎಂಬ ಕುರಿತು ಈಗಾಗಲೇ ವೈದ್ಯರು ತಿಳಿಸಿದ್ದಾರೆ.

ಇದೀಗ ಅತಿಯಾದ ಬಿಸಿಲು ಮಾನಸಿಕ ಸಮಸ್ಯೆಗೂ ಕಾರಣವಾಗುತ್ತದೆ ಎಂದು ಕಿಂಗ್​ ಜಾರ್ಜ್​ ಮೆಡಿಕಲ್​ ಯುನಿವರ್ಸಿಟಿ ವೈದ್ಯರು ಎಚ್ಚರಿಸಿದ್ದಾರೆ. ವೈದ್ಯಕೀಯ ತಜ್ಞರ ಪ್ರಕಾರ, ಕಳೆದ ಎರಡು ವಾರಗಳಿಂದ ಬಿಸಿಲಿನ ತಾಯ ಹೆಚ್ಚುತ್ತಿದ್ದು, ಇದರಿಂದಾಗಿ ಪ್ರಮುಖ ಆಸ್ಪತ್ರೆ ಮತ್ತು ಸಂಸ್ಥೆಗಳಲ್ಲಿ ಮಾನಸಿಕ ಮತ್ತು ಬೈಪೋಲಾರ್​​ ಪ್ರಕರಣಗಳು ಶೇ 50ರಷ್ಟು ಹೆಚ್ಚಿದೆ ಎಂದಿದ್ದಾರೆ.

ಮಾನಸಿಕ ಆರೋಗ್ಯ ಮೇಲೆ ಪರಿಣಾಮ: ಈಗಾಗಲೇ ಮಾನಸಿಕ ಸಮಸ್ಯೆಯನ್ನು ಹೊಂದಿರುವವರಲ್ಲಿ ಅಧಿಕ ತಾಪಮಾನ ಅಥವಾ ಶೀತವೂ ಅವರನ್ನು ಮತ್ತಷ್ಟು ದುರ್ಬಲಗೊಳಿಸುತ್ತದೆ. ಈ ಬಗ್ಗೆ ಜನರು ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ. ಕಾರಣ ಇಂತಹ ಪ್ರಕರಣಗಳು 10 ಲಕ್ಷದಲ್ಲಿ 50 ಮಂದಿಯಲ್ಲಿ ಕಾಣುತ್ತಿದ್ದು, ಮುನ್ನೆಚ್ಚರಿಕೆ ಮೂಲಕ ಇದನ್ನು ತಡೆಗಟ್ಟಬಹುದಾಗಿದೆ.

ಕೆಜಿಎಂಯು ವೈದ್ಯರು ಈ ಕುರಿತು ಮಾತನಾಡಿದ್ದು, ತಾಪಮಾನದ ಹೆಚ್ಚಳದಿಂದ ಒಪಿಡಿ ರೋಗಿಗಳ ಸಂಖ್ಯೆ ಕೂಡ 20-25ರಿಂದ 30-35ಕ್ಕೆ ಏರಿಕೆಯಾಗಿದೆ. ಇನ್ನು ಬಲ್ರಾಮ್​ಪುರ್​ ಆಸ್ಪತ್ರೆಯಲ್ಲಿ ಈ ಪ್ರಕರಣಗಳ ದೈನಂದಿನ ಸಂಖ್ಯೆ 45ರಿಂದ 75ಕ್ಕೆ ಹೆಚ್ಚಿದೆ.

ಕೆಜಿಎಂಯುನ ಮಾನಸಿಕ ವಿಭಾಗದ ಪ್ರೊ. ಬಂಧನ್​ ಗುಪ್ತಾ ಹೇಳುವಂತೆ, ಮಾನಸಿಕ ಸಮಸ್ಯೆ ಹೊಂದಿರುವ ರೋಗಿಗಳು, ಭ್ರಮೆ, ಗೊಂದಲ ನಿರ್ಧಾರವನ್ನು ಹೊಂದಿದ್ದು, ಇದು ಖಿನ್ನತೆಗೆ ಕಾರಣವಾಗುತ್ತಿದೆ. ಇದೇ ರೀತಿ ಬೈಪೋಲಾರ್​ ಅಸ್ವಸ್ಥತೆ ಖಿನ್ನತೆ ಮತ್ತು ಉನ್ಮಾದ ಅನುಭವಿಸುತ್ತಿದ್ದಾರೆ.

ಹಾರ್ಮೋನ್​ ಸೈಕಲ್​ನಲ್ಲಿ ವ್ಯತ್ಯಯ: ಇನ್ನು ತಾಪಮಾನ ಮತ್ತು ಮಾನಸಿಕ ರೋಗದ ನಡುವಿನ ಸಂಪರ್ಕವನ್ನು ನೋಡಿದಾಗ, ಮಾನವ ತನ್ನ ಮೆದುಳಿನ ಪಿಟ್ಯುಟರಿ ಗ್ರಂಥಿಯಲ್ಲಿಯ ಒಂದು ಜೈವಿಕ ಗಡಿಯಾರವನ್ನು ಹೊಂದಿರುತ್ತಾನೆ. ತಾಪಕ್ಕೆ ಒಳಗಾದಾಗ ಈ ಜೈವಿಕ ಗಂಟೆಗೆ ಅಡ್ಡಿಯಾಗುತ್ತದೆ. ಇದು ಹಾರ್ಮೋನ್​ಗ ಮೇಲೆ ಪರಿಣಾಮ ಬೀರಿ ಮಾನಸಿಕ ಮತ್ತು ಬೈಪೋಲಾರ್​ ಅಸ್ವಸ್ಥತೆಗೆ ಕಾರಣವಾಗುತ್ತದೆ.

ಒತ್ತಡ, ಆತಂಕ ಮತ್ತು ಖಿನ್ನತೆಯಂತಹ ಕೌಟುಂಬಿಕ ಇತಿಹಾಸ ಹೊಂದಿರುವ ರೋಗಿಗಳು ಬೇಸಿಗೆಯಲ್ಲಿ ಎಚ್ಚರಿಕೆಯಿಂದ ಇರಬೇಕು. ಅಧಿಕ ತಾಪಮಾನಕ್ಕೆ ಒಡ್ಡಿಕೊಳ್ಳುವುದನ್ನು ತಪ್ಪಿಸಬೇಕು. ಹೆಚ್ಚಾಗಿ ನೀರು ಸೇವನೆ ಮಾಡಬೇಕು.

ಇಷ್ಟೇ ಅಲ್ಲದೇ, ತಾಪಮಾನವೂ ತಕ್ಷಣದ ಮೂಡ್​ ಬದಲಾವಣೆಗೆ ಕಾರಣವಾಗುತ್ತದೆ. ಖುಷಿ, ಆಶಾಭಾವನೆ ಮತ್ತು ಹುಮ್ಮಸ್ಸಿನಲ್ಲಿದ್ದವರು ತಕ್ಷಣಕ್ಕೆ ತಮ್ಮ ಭಾವನೆ ಬದಲಾಯಿಸುವ ಸಾಧ್ಯತೆ ಇದೆ. ಇನ್ನು ಮಾನಸಿಕ ರೋಗಿಗಳಲ್ಲಿ ಭ್ರಮ, ಗೊಂದಲ ನಿರ್ಧಾರಗಳ ಕುರಿತು ಅವರ ಕುಟುಂಬಕ್ಕೆ ಕೂಡ ಎಚ್ಚರಿಕೆ ನೀಡಬೇಕು. ಆಗ ಅವರು ತಕ್ಷಣಕ್ಕೆ ವೈದ್ಯಕೀಯ ಸಹಾಯಕ್ಕೆ ಮುಂದಾಗಬಹುದು.

ಇನ್ನು ಈ ಸಮಸ್ಯೆಗಳು ಸಾಮಾನ್ಯವಾಗಿ 30 ವರ್ಷ ಮೇಲ್ಪಟ್ಟವರಲ್ಲಿ ಕಾಣುತ್ತದೆ. ಆದಾಗ್ಯೂ, ಇದರ ಬಗ್ಗೆ ಜನರು ಹೆಚ್ಚಾಗಿ ಆತಂಕಗೊಳ್ಳುವುದು ಬೇಡ. ಇದು ಉಪಶಮನ ಕಾಣಲಿದ್ದು, ಇದಕ್ಕೆ ಸಂಪೂರ್ಣ ಚಿಕಿತ್ಸೆ ಬೇಕಾಗುತ್ತದೆ ಎಂದು ಬಲ್ರಾಮ್​ಪುರ್​​ ಆಸ್ಪತ್ರೆಯ ಮಾನಸಿಕ ವೈದ್ಯ ಡಾ ದೆವಶಿಶ್​ ಶುಕ್ಲಾ ತಿಳಿಸಿದ್ದಾರೆ.

ಇದನ್ನೂ ಓದಿ: ರಣ ಬಿಸಿಲಿನಿಂದ ತ್ವಚೆ ಆರೈಕೆ ಮಾಡುವ ಮುನ್ನ ಈ ಅಂಶ ನೆನಪಿರಲಿ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.