ETV Bharat / sukhibhava

ಕೋವಿಡ್ ಕಾಲದಲ್ಲಿ ಕ್ಯಾನ್ಸರ್ ಆರೈಕೆಗೆ ಹೊಸ ಆಯಾಮವಾದ ಟೆಲಿ ಕೌನ್ಸೆಲಿಂಗ್ - ಕೊರೊನಾ ವೈರಸ್ ಪರಿಣಾಮ

ಕ್ಯಾನ್ಸರ್ ರೋಗಿಗಳು ಮತ್ತು ಕುಟುಂಬಗಳಿಗೆ ಫೋನ್‌ನಲ್ಲಿ ಚಿಕಿತ್ಸೆ ಪಡೆಯಲು ಸಹಾಯ ಮಾಡಲು ಸಹಾಯವಾಣಿ ಕೇಂದ್ರಗಳನ್ನು ಸ್ಥಾಪಿಸಲಾಯಿತು. ಮತ್ತು ಚಿಕಿತ್ಸೆಯನ್ನು ಮುಂದುವರಿಸಲು, ನೈರ್ಮಲ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲು ಮತ್ತು ಕೀಮೋಥೆರಪಿ ಪರಿಣಾಮಗಳಿಗೆ ಸಂಬಂಧಿಸಿದ ಭಾವನಾತ್ಮಕ ನಿರ್ವಹಣೆಗೆ ಸಲಹೆ ನೀಡಲಾಯಿತು.

doctor
doctor
author img

By

Published : Mar 9, 2021, 4:34 PM IST

ಹೈದರಾಬಾದ್: ಕೊರೊನಾ ವೈರಸ್ ಜನರ ಮೇಲೆ ಬಹಳ ಮಟ್ಟಿಗೆ ಪರಿಣಾಮ ಬೀರಿದೆ. ವೈರಸ್​ನ ಅಪಾಯ ಮತ್ತು ಅದರ ಹರಡುವಿಕೆಯು ಎಲ್ಲರಲ್ಲೂ ಭಯ ಉಂಟುಮಾಡಿದೆ. ಆದರೆ ಕ್ಯಾನ್ಸರ್ ರೋಗಿಗಳಿಗೆ ವಿವಿಧ ಸ್ಥಳಗಳಲ್ಲಿ, ವಿವಿಧ ರೀತಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ಟಿವಿ ಭಾರತ್ ಸುಖೀಭವ ತಂಡವು ಕನ್ಸಲ್ಟಿಂಗ್ ಸೈಕಾಲಜಿಸ್ಟ್ ಹಾಗೂ ಮಾಜಿ ಕ್ಯಾನ್ಸರ್ ಸಲಹೆಗಾರರಾಗಿರುವ ಶ್ರೀಮತಿ ಕಾಜಲ್ ದೇವ್ ಅವರೊಂದಿಗೆ ಸಂವಾದದ ನಡೆಸಿದೆ.

ಕೋವಿಡ್ ಕಾರಣದಿಂದ ಅನೇಕ ಕ್ಯಾನ್ಸರ್ ರೋಗಿಗಳು ಆತಂಕಕ್ಕೆ ಒಳಗಾಗಿದ್ದರು. ಭಯ ಮತ್ತು ಅನಿಶ್ಚಿತತೆಯ ಹಿನ್ನೆಲೆಯಲ್ಲಿ ಅನೇಕರು ಸಾಮಾನ್ಯ ಚಿಕಿತ್ಸೆಗ ಹೋಗಲು ಹೆದರುತ್ತಿದ್ದರು. ವೈರಸ್ ಭಯ ಮತ್ತು ಅಪೂರ್ಣ ಚಿಕಿತ್ಸೆಯು ಕ್ಯಾನ್ಸರ್ ರೋಗಿಗಳು ಮತ್ತು ಅವರ ಕುಟುಂಬದವರ ಮನಸ್ಸಿನ ಮೇಲೆ ಗಾಢ ಪ್ರಭಾವ ಸೃಷ್ಟಿಸಿತು.

ಆತಂಕ, ಖಿನ್ನತೆ ಮತ್ತು ಕೌಟುಂಬಿಕ ಹಿಂಸಾಚಾರದಂತಹ ಮಾನಸಿಕ ಆರೋಗ್ಯ ಸಂಬಂಧಿತ ಸಮಸ್ಯೆಗಳಿಗಾಗಿ ಅನೇಕ ಸಹಾಯವಾಣಿ ಕೇಂದ್ರಗಳನ್ನು ಪ್ರಾರಂಭಿಸಲಾಯಿತು. ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ಕಳೆದುಕೊಳ್ಳುವ ಭಯ, ನಿಯಮಿತ ತಪಾಸಣೆಗೆ ಸಂಬಂಧಿಸಿದ ಆತಂಕ ಮತ್ತು ಆರೈಕೆ ನೀಡುವವರ ಸಮಸ್ಯೆಗೆ ಸಂಬಂಧಿತ ಸಮಾಲೋಚನೆಗೆ ಕೇಂದ್ರಗಳನ್ನು ತೆರೆಯಲಾಯಿತು.

ಕ್ಯಾನ್ಸರ್ ರೋಗಿಗಳು ಮತ್ತು ಕುಟುಂಬಗಳಿಗೆ ಫೋನ್‌ನಲ್ಲಿ ಚಿಕಿತ್ಸೆ ಪಡೆಯಲು ಸಹಾಯ ಮಾಡಲು ಸಹಾಯವಾಣಿ ಕೇಂದ್ರಗಳನ್ನು ಸ್ಥಾಪಿಸಲಾಯಿತು ಮತ್ತು ಚಿಕಿತ್ಸೆಯನ್ನು ಮುಂದುವರಿಸಲು, ನೈರ್ಮಲ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲು ಮತ್ತು ಕೀಮೋಥೆರಪಿ ಪರಿಣಾಮಗಳಿಗೆ ಸಂಬಂಧಿಸಿದ ಭಾವನಾತ್ಮಕ ನಿರ್ವಹಣೆಗೆ ಸಲಹೆ ನೀಡಲಾಯಿತು.

ಕೋವಿಡ್ ಕಾಲದಲ್ಲಿ ಟೆಲಿ-ಕೌನ್ಸೆಲಿಂಗ್ ಮೂಲಕ ಕ್ಯಾನ್ಸರ್ ರೋಗಿಗಳಿಗೆ ವಾಸ್ತವಿಕ ಮತ್ತು ಅವಾಸ್ತವಿಕ ಭಯಗಳ ನಡುವೆ ವ್ಯತ್ಯಾಸವನ್ನು ತಿಳಿಯಲು ಸಹಾಯ ಮಾಡಲಾಯಿತು. ಪ್ರತಿ ಆಸ್ಪತ್ರೆ ಮತ್ತು ಎನ್‌ಜಿಒಎಸ್‌ನಲ್ಲಿ ಸಹಾಯವಾಣಿ ಕೇಂದ್ರಗಳನ್ನು ಸ್ಥಾಪಿಸಲಾಯಿತು.

ಟೆಲಿ ಸಮಾಲೋಚನೆ ಕುರಿತು ತಿಳಿಯದ ಜನರಿಗೆ ಸ್ಥಳೀಯ ಮುದ್ರಣ ಮಾಧ್ಯಮಗಳ ಮೂಲಕ ಸಹಾಯ ಮಾಡಲಾಯಿತು ಮತ್ತು ನೋಂದಾಯಿತ ರೋಗಿಗಳನ್ನು ಕರೆಸಿಕೊಳ್ಳುವಲ್ಲಿ ಮತ್ತು ಚಿಕಿತ್ಸೆಗೆ ಸಂಬಂಧಿಸಿದ ಕಾಳಜಿಗಳಿಗಾಗಿ ಮಾರ್ಗದರ್ಶನ ನೀಡುವಲ್ಲಿ ಎನ್‌ಜಿಒಎಸ್ ಸಕ್ರಿಯವಾಗಿ ಭಾಗವಹಿಸಿತು. ಚಿಕಿತ್ಸೆಯ ಪರಿಣಾಮಗಳಿಗೆ ಸಂಬಂಧಿಸಿದ ಟೆಲಿ ಕೌನ್ಸೆಲಿಂಗ್ ಶಿಕ್ಷಣವನ್ನು ಬಲಪಡಿಸಲಾಯಿತು.

ಲಾಕ್‌ಡೌನ್ ಸಮಯದಲ್ಲಿ ದೂರವಾಣಿ ಸಮಾಲೋಚನೆಯೊಂದಿಗೆ ಎಲ್ಲಾ ಸವಾಲುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಪರಿಹರಿಸಲಾಯಿತು. ಪ್ರಸ್ತುತ ಟೆಲಿಫೋನಿಕ್ ಕೌನ್ಸೆಲಿಂಗ್ ಕಲ್ಪನೆಯು ಹೆಚ್ಚಿನ ಜನರನ್ನು ತಲುಪುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.