ETV Bharat / sukhibhava

ಮಕ್ಕಳೊಂದಿಗಿನ ನಿಮ್ಮ ಮಾತು ಅವರ ಮಿದುಳಿನ ಅಭಿವೃದ್ಧಿ ಹೆಚ್ಚಿಸುತ್ತದೆ: ಅಧ್ಯಯನ ವರದಿ

ಮಕ್ಕಳು ಭಾಷೆಗಳನ್ನು ಕಲಿಯುವುದೇ ಕೇಳುವಿಕೆಯಿಂದ. ಶಿಶುಗಳೊಂದಿಗೆ ಮಾತನಾಡುವುದರಿಂದ ಅವರ ಮಿದುಳಿನ ಅಭಿವೃದ್ದಿ ಹೆಚ್ಚಾಗುತ್ತದೆ ಎನ್ನುತ್ತದೆ ಹೊಸ ಅಧ್ಯಯನ.

Talking to children increases brain development; study

author img

By

Published : Jun 6, 2023, 4:24 PM IST

Updated : Jun 6, 2023, 5:11 PM IST

ಟೆಕ್ಸಾಸ್​: ಪೋಷಕರು ಮಕ್ಕಳೊಂದಿಗೆ ನಡೆಸುವ ಸಂವಹನದಿಂದ ಅವರ ಮಗುವಿನ ಮಿದುಳಿನ ಅಭಿವೃದ್ಧಿ ಆಗುತ್ತದೆ ಎಂಬುದನ್ನು ಸಂಶೋಧನೆ ತಿಳಿಸಿದೆ. ಟೆಕ್ಸಾಸ್​ ಯುನಿವರ್ಸಿಟಿ ಅಧ್ಯಯನ ನಡೆಸಿದೆ. ಅಧ್ಯಯನಕ್ಕಾಗಿ ಸಂಶೋಧಕರು ಎಂಆರ್​ಐ ಮತ್ತು ಆಡಿಯೋ ರೆಕಾರ್ಡಿಂಗ್​ ಬಳಸಿಕೊಂಡಿದ್ದಾರೆ.

ಪೋಷಕರು ಮಾತನಾಡುವುದರಿಂದ ದೀರ್ಘ ಕಾಲದ ಭಾಷಾ ಪ್ರಕ್ರಿಯೆಯಲ್ಲಿ ಮಕ್ಕಳ ಮಿದುಳಿನ ಅಭಿವೃದ್ಧಿಯಾಗುತ್ತದೆ ಎಂದು ಅಧ್ಯಯನದ ಸಹ ಲೇಕಖಿ ಡಾ. ಮೇಘನ್​ ಸ್ವನ್ಸೊನ್​ ತಿಳಿಸಿದ್ದಾರೆ. ಈ ಅಧ್ಯಯನವನ್ನು ಏಪ್ರಿಲ್​ 11ರಂದು ಡೆವಲಪಮೆಂಟ್​ ಕಾಗ್ನಿಟಿವ್​ ನ್ಯೂರೋ ಸೈನ್ಸ್​ನಲ್ಲಿ ಪ್ರಕಟಿಸಲಾಗಿದೆ. ಶಿಶುಗಳು ಹೆಚ್ಚು ಪದಗಳನ್ನು ಕೇಳುವುದರಿಂದ ಅವರು ಉತ್ತಮ ಭಾಷಾ ಕೌಶಲ್ಯ ಹೊಂದುತ್ತಾರೆ. ಇದು ಹೇಗೆ ಅವರ ಪ್ರಕ್ರಿಯೆಗೆ ಹೇಗೆ ಸಹಾಯವಾಗುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳುವಲ್ಲಿ ಇದು ಮೊದಲ ಹಜ್ಜೆ ಎಂದು ಸ್ವನ್ಸೊನ್​ ಹೇಳುತ್ತಾರೆ.

ಅಧ್ಯಯನದ ಎರಡು ಪತ್ರಿಕೆಯಲ್ಲಿ ಮೊದಲ ಪತ್ರಿಕೆ ಪೋಷಕರ ಮಾತುಗಳು ಹೇಗೆ ಮಕ್ಕಳು ಮಿದುಳಿನ ನೆನಪಿನಾಳದಲ್ಲಿ ಉಳಿಯುತ್ತದೆ ಎಂಬುದನ್ನು ಗಮನಿಸಲಾಗಿದೆ. ಇದಕ್ಕಾಗಿ 52 ಚಿಕ್ಕ ಮಕ್ಕಳನ್ನು ಸಂಶೋಧನೆಯಲ್ಲಿ ಭಾಗಿದಾರರನ್ನಾಗಿ ಮಾಡಲಾಗಿದೆ. ಮಕ್ಕಳಿಗೆ 9 ತಿಂಗಳಿದ್ದಾಗ ಮೊದಲ ಬಾರಿ ಮನೆಯ ಭಾಷೆಗಳನ್ನು ದಾಖಲಿಸಲಾಗಿದೆ. ಇದಾದ ಆರು ತಿಂಗಳ ನಂತರದಲ್ಲಿ ಮತ್ತೆ ರೆಕಾರ್ಡ್​​ ಮಾಡಲಾಗಿದೆ. 3 ತಿಂಗಳ ಮತ್ತು ಆರು ತಿಂಗಳ ಮತ್ತು 1 ರಿಂದ 2 ವರ್ಷದಲ್ಲಿ ಎಂಆರ್​ಐ ನಡೆಸಲಾಗಿದೆ.

ಮಗುವಿನ ಆರಂಭಿಕ ಭಾಷಾ ಬೆಳವಣಿಗೆ: ಮಗುವಿನ ಆರಂಭಿಕ ಭಾಷೆ, ತೊದಲು ನುಡಿ ಸೆರೆ ಹಿಡಿಯಬೇಕಿದೆ. ಇದರಿಂದಲೇ ಮಕ್ಕಳು ಮಾತು ಆರಂಭಿಸುತ್ತಾರೆ. ಮಗುವಿನ ಮನೆಯ ವಾತಾವರಣದಲ್ಲಿ ಮಗುವನ್ನು ನೋಡಿಕೊಳ್ಳುವವರ ಮಾತುಗಳು ಅವರ ಭಾಷೆಯ ಮೇಲೆ ನೇರ ಪರಿಣಾಮ ಹೊಂದಿರುತ್ತದೆ ಎಂಬುದು ಗೊತ್ತಿರುವ ಹಳೆಯ ಸಂಗತಿ. ಅಧ್ಯಯನದಲ್ಲಿ ಮಗುವಿನ ನೆನಪಿನ ಶಕ್ತಿ ಮತ್ತು ನರಗಳ ಅಭಿವೃದ್ಧಿಗಳಿಗೆ ವಿಶೇಷವಾಗಿ ಗಮನ ಹರಿಸಲಾಗಿದೆ.

ಮಕ್ಕಳು ಕಡಿಮೆ ಎಫ್​ಎ ಮೌಲ್ಯದ ಮಾತುಗಳನ್ನು ಕೇಳಿದಾಗ ಅವರು ಮಿದುಳಿನ ವೈಟ್​ ಮ್ಯಾಟರ್​ ಕೂಡ ನಿಧಾನದ ಅಭಿವೃದ್ಧಿ ಕಂಡಿದೆ. ಮಕ್ಕಳು ಉತ್ತಮ ಭಾಷಾ ಪ್ರದರ್ಶನದಿಂದ ಮಾತಾನಾಡಲು ಪ್ರಾರಂಭಿಸುತ್ತಾರೆ. ಮಿದುಳು ಪಕ್ವವಾಗುತ್ತಿದ್ದಂತೆ ಇದು ಕಡಿಮೆ ಪ್ಲಾಸ್ಟಿಟಿ​ ಆಗುತ್ತದೆ. ನೆಟ್​ವರ್ಕ್​​ಗಳು ಸ್ಥಳದಲ್ಲಿ ಸೆಟ್​ ಆಗುತ್ತವೆ. ಎಫ್​ಎ ಮತ್ತು ಮಕ್ಕಳ ಧ್ವನಿಯ ನಡುವಿನ ವ್ಯತ್ಯಾಸವೂ ನಕಾರಾತ್ಮಕ ಸಂಬಂಧ ತೋರಿಸುತ್ತದೆ.

ಎರಡು ಭಾಷೆಗಳನ್ನು ಮಾತನಾಡುವ ಕುಟುಂಬದಲ್ಲಿ ಸಣ್ಣ ಮಕ್ಕಳಿನ ಪೋಷಕರು ಒಂದಕ್ಕಿಂತ ಹೆಚ್ಚು ಭಾಷೆಗಳೊಂದಿಗೆ ಮಕ್ಕಳೊಂದಿಗೆ ಮಾತನಾಡಿದಾಗ ಮಕ್ಕಳು ಕೂಡ ಭಾಷೆ ಕಲಿಕೆ, ಅರ್ಥೈಸಿಕೊಳ್ಳುವಿಕೆಯಲ್ಲಿ ಯಾವುದೇ ಗೊಂದಲಕ್ಕೆ ಒಳಗಾಗದೇ ಭಾಷೆ ಕಲಿಯುತ್ತಾರೆ. ಮಕ್ಕಳ ಜೀವನದಲ್ಲಿ ಪೋಷಕರು ಬದಲಾವಣೆಯ ಏಜೆಂಟ್​ಗಳಾಗಿರುತ್ತಾರೆ. ಅವರು ರಕ್ಷಣಾತ್ಮಕ ಪರಿಣಾಮದ ಸಾಮರ್ಥ್ಯ ಹೊಂದಿರುತ್ತಾರೆ. ನಮ್ಮ ಕೆಲಸವೂ ಪೋಷಕರನ್ನು ಸಬಲೀಕರಣಗೊಳಿಸುವ ಜೊತೆಗೆ ಜ್ಞಾನ ಮತ್ತು ಕೌಶಲ್ಯವನ್ನು ಮಕ್ಕಳಿಗೆ ಬೆಂಬಲಿಸುವುದಾಗಿದೆ ಎಂದು ಲೇಖಕರು ತಿಳಿಸಿದ್ದಾರೆ.

ಇದನ್ನೂ ಓದಿ: ಸಣ್ಣ ಮಕ್ಕಳಿಗೆ ಕೋವಿಡ್​ mRNA ಲಸಿಕೆ ಸುರಕ್ಷಿತ; ಅಡ್ಡ ಪರಿಣಾಮವಿಲ್ಲ

Last Updated : Jun 6, 2023, 5:11 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.