ಬೆಂಗಳೂರು: ಬೇಸಿಗೆಯೆಂದರೆ ಯಾವುದೇ ಹಿಂಜರಿತವಿಲ್ಲದೇ ಐಸ್ ಕ್ರೀಂ, ತಪ್ಪು ಪಾನೀಯ ಸೇವಿಸಬಹುದು. ಅಲ್ಲದೇ, ಹಣ್ಣಿನ ರಾಜ ಮಾವಿನ ರುಚಿಯನ್ನು ಆಸ್ವಾದಿಸಬಹುದು. ಇಂತಹ ಸಂಭ್ರದ ಜೊತೆಗೆ ಬಿಸಿಲಿನ ಬೇಗೆ ಅನೇಕ ತೊಂದರೆಗಳನ್ನು ತಂದೊಡ್ಡುವುದು ಸುಳ್ಳಲ್ಲ. ಎಷ್ಟೇ ತಂಪು ಪಾನೀಯಗಳ ಸೇವನೆ ಹೊರತಾಗಿ ಬಿಸಿಲಿನ ಬೇಗೆ ನಮ್ಮನ್ನು ಅನಾರೋಗ್ಯಗೊಳಿಸುತ್ತದೆ. ಇದರಿಂದ ಸನ್ಸ್ಟ್ರೋಕ್ನಂತಹ ಸಮಸ್ಯೆಗಳು ಕಾಡುತ್ತದೆ. ಇವುಗಳ ಹೊರತಾಗಿ ಬೇಸಿಗೆಯ ರಜೆಯ ಮಜೆಯನ್ನು ಆಹ್ಲಾದಿಸಲು ಕೆಲವು ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು. ಇದರಿಂದ ಅನಾರೋಗ್ಯದಿಂದ ಆಗುವ ದೊಡ್ಡ ಪರಿಣಾಮವನ್ನು ತಪ್ಪಿಸಬಹುದು.
ಸನ್ ಸ್ನ್ರೀನ್: ಬೇಸಿಗೆಯ ಬೆಗೆಯ ದಿನಗಳಲ್ಲಿ ನಿಮ್ಮ ಜೊತೆಗಾರ ಈ ಸನ್ಸ್ಕ್ರೀನ್. ಮಕ್ಕಳಿಂದ ದೊಡ್ಡವರೆಗೆ ಈ ಸಮಯದಲ್ಲಿ ಸನ್ ಸ್ಕ್ರೀನ್ ಬಳಕೆ ಮಾಡುವುದನ್ನು ಮೆರಯಬಾರದು. ಬಿಸಿಲಿನಲ್ಲಿ ನೀವು ಹೊರಹೋಗುವಾಗ ಇದು ನಿಮಗೆ ಖಂಡಿತವಾಗಿಯೂ ಸಹಾಯ ಮಾಡುತ್ತದೆ. ಬಹುಕಾಲ ನೀವು ಬಿಸಿಲಿನಲ್ಲಿರುವಾಗ ತಪ್ಪದೇ ಸನ್ಸ್ಕ್ರೀನ್ ಬಳಕೆ ಮಾಡಬೇಕು. ಉತ್ತಮ ಮಟ್ಟದ ಎಸ್ಪಿಎಫ್ಗಳು ಹೆಚ್ಚು ಪ್ರಯೋಜನ ನೀಡುತ್ತದೆ.
ತಾಪಮಾನದ ಮೇಲೆ ಇರಲಿ ಒಂದು ಕಣ್ಣು: ಬೇಸಿಗೆಯಲ್ಲಿ ದಿನದಿಂದ ದಿನಕ್ಕೆ ತಾಪಮಾನ ಹೆಚ್ಚುತ್ತದೆ. ಈ ಹಿನ್ನೆಲೆಯಲ್ಲಿ ಹೊರಗೆ ನೀವು ಹೋಗುವ ಯೋಚನೆ ಮಾಡುವಾಗ ಒಮ್ಮೆ ಹವಾಮಾನ ವೀಕ್ಷಣೆ ನಡೆಸುವುದು ಉತ್ತಮ. ಇದರಿಂದ ಶಾಖದ ಅಲೆಯಿಂದ ನಿಮ್ಮನ್ನು ರಕ್ಷಿಸಿಕೊಳ್ಳಬಹುದು. ಶಾಖದ ಅಲೆ ತೀವ್ರವಾಗಿದ್ದಾಗ ನಡೆಸುವ ಹೊರಗಿನ ಯೋಜನೆಗಳು ಭಾರಿ ಬೆಲೆ ತರುವ ಪರಿಸ್ಥಿತಿ ತಂದೊಗಿಸುತ್ತವೆ.
ಹೆಚ್ಚು ಹೆಚ್ಚು ನೀರು ಕುಡಿಯಿರಿ. ಬಿಸಿಲಿನ ಬೇಗೆಯಿಂದ ದೇಹ ಬಳಲದಂತೆ ನೋಡಿಕೊಳ್ಳಲು ಇರುವ ಪ್ರಮುಖ ಮಾರ್ಗ ನೀರು. ನೀವು ಉತ್ತಮವಾಗಿ ನೀರು ಕುಡಿದರೂ, ಬೇಸಿಗೆಯಲ್ಲಿ ಪದೇ ಪದೆ ನೀರನ್ನು ಕುಟುಕಿಸುವುದು ಅವಶ್ಯವಾಗುತ್ತದೆ. ಬಿಸಿಲಿನ ವೇಳೆ ತಾಪಮಾನ ಹೆಚ್ಚಳದಿಂದ ಬಲು ಬೇಗ ದೇಹ ತನ್ನ ನೀರಿನಾಂಶವನ್ನು ಕಡಿಮೆ ಮಾಡುತ್ತದೆ. ಇದರಿಂದ ದೇಹ ನಿರ್ಜಲೀಕರಣಕ್ಕೆ ತುತ್ತಾಗುತ್ತದೆ. ಈ ಹಿನ್ನೆಲೆ ನೀರು ಸೇವಿಸುವುದು ಅತ್ಯವಶ್ಯಕವಾಗಿದೆ.
ತಣ್ಣೀರಿನ ಸ್ನಾನ: ಈ ಋತುಮಾನದಲ್ಲಿ ಬೆವರಿನಿಂದ ಬಲು ಬೇಗ ದೇಹದಲ್ಲಿ ದುರ್ಗಂಧ ಉಂಟಾಗುತ್ತದೆ. ಇದರಿಂದ ದೇಹದ ಸ್ವಚ್ಛತೆ ಕಾಪಾಡಿಕೊಳ್ಳುವುದು ಅಗತ್ಯ. ಜೊತೆಗೆ ತಣ್ಣೀರಿನ ಸ್ನಾನ ದೇಹಕ್ಕೆ ಇನ್ನಷ್ಟು ಮುದ ನೀಡಲಿದೆ. ತಣ್ಣೀರಿನ ಸ್ನಾನ ಹಲವು ಆರೋಗ್ಯಕರ ಪ್ರಯೋಜನ ಹೊಂದಿದೆ. ಅಲ್ಲದೇ, ದೇಹದ ಉಷ್ಣಾಂಶತೆಯನ್ನು ಕಾಯ್ದುಕೊಳ್ಳಲು ಇದು ಸಹಾಯ ಮಾಡುತ್ತದೆ.
ಸಾಧ್ಯವಾದಷ್ಟು ಮನೆಯೊಳಗೆ ಇರಿ: ಶಾಖದ ಅಲೆಯಿಂದ ನಿಮ್ಮನ್ನು ತಪ್ಪಿಸಿಕೊಳ್ಳಬೇಕು ಎಂದರೆ ಮೊದಲ ನಿಯಮ ನಿಮ್ಮನ್ನು ನೀವು ರಕ್ಷಿಸಿಕೊಳ್ಳಬೇಕು. ಅದಕ್ಕೆ ಮನೆಯೊಳಗೆ ಇರುವುದು ಅವಶ್ಯಕವಾಗಿದ್ದು, ಉತ್ತಮ ಸಲಹೆ ಕೂಡ. ಈ ದಿನಗಳಲ್ಲಿ ಅನವಶ್ಯಕವಾಗಿ ಮನೆಯಿಂದ ಹೊರಗೆ ಓಡಾಡುವುದನ್ನು ತಪ್ಪಿಸಬೇಕು. ಮನೆಯೊಳಗೆ ಆಡುವ ಆಟಗಳನ್ನು ಹೆಚ್ಚಾಗಿ ಆಡುವುದು ಉತ್ತಮ. ಸುಡು ಬಿಸಿಲಿನಲ್ಲಿ ಹೊರಗೆ ಹೋಗುವ ಬದಲು ಈ ತಾಂತ್ರಿಕ ಯುಗದಲ್ಲಿ ಮನೆಯಿಂದಲೇ ಸ್ನೇಹಿತರ ಸಂಪರ್ಕ ಸಾಧಿಸಬಹುದು.
ಇದನ್ನೂ ಓದಿ: ಬೇಸಿಗೆಯಲ್ಲಿ ಪುರುಷರ ಅಂದ ಕಾಪಾಡಲು ಇಲ್ಲಿದೆ ಸಲಹೆ