ETV Bharat / sukhibhava

H3N2 ಸೋಂಕು ಬಾರದಂತೆ ತಡೆಯಲು ಈ ಅಗತ್ಯ ಕ್ರಮ ವಹಿಸಿ! - ಹೊಸ ಸೋಂಕು ಕಾಣಿಸಿಕೊಂಡಿದ್ದು

ಕೋವಿಡ್​ ಬಳಿಕ ಇದೀಗ ಕಾಣಿಸಿಕೊಂಡಿರುವ H3N2 ಸೋಂಕು ಅನೇಕರಲ್ಲಿ ಆತಂಕ ಮೂಡಿಸಿದೆ. ಈ ಬಗ್ಗೆ ಅಗತ್ಯ ಮುನ್ನೆಚ್ಚರಿಕೆವಹಿಸುವುದು ಅವಶ್ಯವಾಗಿದೆ.

Take these essential steps to prevent H3N2 infection

author img

By

Published : Mar 6, 2023, 3:48 PM IST

ಮೂರು ವರ್ಷ ಕಳೆದರೂ ಕೋವಿಡ್​ ಸೋಂಕಿನಿಂದ ಜಗತ್ತು ಹೋರಾಡುತ್ತಲೇ ಇದೆ. ಕೋವಿಡ್​ನ ಉಪತಳಿಗಳ ದಾಳಿಗಳಿಂದಾಗಿ ಅಮೆರಿಕ, ಚೀನಾದಲ್ಲಿ ಸಾವಿನ ಸಂಖ್ಯೆ ಕಡಿಮೆಯಾಗುತ್ತಲೇ ಇದೆ. ಇದೇ ಹೊತ್ತಿಗೆ ಭಾರತದಲ್ಲಿ ಹೊಸ ಸೋಂಕು ಕಾಣಿಸಿಕೊಂಡಿದ್ದು, ಮತ್ತಷ್ಟು ಆತಂಕ ಮೂಡಿಸಿದೆ. ಅದೇ H3N2 ಸೋಂಕು.

ವೇಗವಾಗಿ ಹರಡುವ ಸೋಂಕು: ಕೋವಿಡ್​ ಸೋಂಕಿನಷ್ಟೇ ವೇಗವಾಗಿ ಹರುಡುವ ಈ ಸೋಂಕು ಎಚ್​3ಎನ್​2, ಇನ್​ಫ್ಲುಯೆಂಜಾ ಎ ವೈರಸ್​ನ ಉಪತಳಿ ಇದಾಗಿದೆ ಎಂದು ತಜ್ಞರು ತಿಳಿಸಿದ್ದಾರೆ. ಕಳೆದೆರಡು ತಿಂಗಳಿನಿಂದ ಕಾಣಿಸಿಕೊಳ್ಳುತ್ತಿರುವ ಈ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕೂಡ ಹೆಚ್ಚುತ್ತಿದೆ. ಕರ್ನಾಟಕದಲ್ಲಿ ಇದುವರೆಗೆ 26 ಮಂದಿಗೆ ಈ ಸೋಂಕು ಕಾಣಿಸಿಕೊಂಡಿದೆ. ಹೆಚ್ಚು ವೇಗವಾಗಿ ಈ ಸೋಂಕು ಹರಡುವ ಹಿನ್ನೆಲೆ ಈಗಾಗಲೇ ಭಾರತೀಯ ವೈದ್ಯಕೀಯ ಸಂಘಟನೆಯು ಈ ಸಂಬಂಧ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಅಲ್ಲದೇ, ರಾಜ್ಯದಲ್ಲೂ ಕೂಡ ಈ ಸಂಬಂಧ ಸಭೆ ನಡೆಸಲಾಗಿದ್ದು, ಈ ಸಂಬಂಧ ಮುನ್ನೆಚ್ಚರಿಕೆ ಕ್ರಮ ವಹಿಸುವಂತೆ ಸೂಚನೆ ನೀಡಲಾಗಿದೆ.

ಸೋಂಕಿನ ಲಕ್ಷಣ ಏನು: ಕೋವಿಡ್​ನಂತೆಯೇ ಸಾಮಾನ್ಯ ಜ್ವರ, ಕೆಮ್ಮು, ನೆಗಡಿ, ಸ್ನಾಯು ಸೆಳೆತ, ಅತಿಸಾರ ಮತ್ತು ಸುಸ್ತಿನ ಲಕ್ಷಣವನ್ನು ಇದು ಹೊಂದಿದ್ದು, ಕೆಲವರಲ್ಲಿ ಉಸಿರಾಟದ ಸಮಸ್ಯೆಗೆ ಕಾರಣವಾಗುತ್ತಿದೆ. ಈ ಸೋಂಕು ಹೊಂದಿದವರಲ್ಲಿ ಜ್ವರ ಕಡಿಮೆಯಾದರೂ ಕೆಮ್ಮು ದೀರ್ಘಕಾಲ ಕಾಡಲಿದೆ.

ಸೋಂಕಿನಿಂದ ರಕ್ಷಣೆ ಹೇಗೆ: ಕೋವಿಡ್​ನಷ್ಟು ಪ್ರಬಲವಾಗಿ ಹರಡುತ್ತಿರುವ ಈ ಸೋಂಕಿನ ತಡೆಗೆ ಮಾಸ್ಕ್​ ಧರಿಸುವುದು ಕಡ್ಡಾಯವಾಗಿದೆ. ಕೈಗಳನ್ನು ಆಗ್ಗಿಂದಾಗಲೇ ಸೋಪಿನಿಂದ ತೊಳೆಯುತ್ತಿರುವುದು ಅವಶ್ಯವಾಗಿದೆ. ಬೇಸಿಗೆಯಲ್ಲಿ ಕಾಡುವ ಈ ಸೋಂಕಿನಿಂದ ನಿರ್ಜಲೀಕರಣ ಕೂಡ ಆಗುವ ಹಿನ್ನೆಲೆ ಹೆಚ್ಚು ನೀರು ಸೇವಿಸಿ. ಸಾರ್ವಜನಿಕ ಅಂತರ ಪಾಲನೆ, ಜನಸಂದಣಿ ಪ್ರದೇಶಗಳಿಗೆ ಭೇಟಿ ನೀಡದೇ ಇರುವುದು ಉತ್ತಮ. ಈ ಸೋಂಕಿಗೆ ವೈದ್ಯರ ಸಮಾಲೋಚನೆ ಆಧಾರದ ಮೇಲೆ ಔಷಧ ಸೇವಿಸಿ.

ಅತಿಯಾದ ಆ್ಯಂಟಿ ಬಯೋಟಿಕ್​​​ ಬೇಡ: ಸೋಂಕಿನ ವಿರುದ್ಧ ಬೇಗ ಚೇತರಿಸಿಕೊಳ್ಳಲು ಅನೇಕ ಮಂದಿ ಆ್ಯಂಟಿ ಬಯೋಟಿಕ್ಸ್​​ ಮೊರೆ ಹೋಗುತ್ತಾರೆ. ಅಝಿತ್ರೊಮೈಸಿನ್​, ಅಮೋಕ್ಸಿಕ್ಲಾಫ್​ ಸೇರಿದಂತೆ ಇನ್ನಿತರ ಆ್ಯಂಟಿ ಬಯೋಟಿಕ್ಸ್​ ಔಷಧಗಳನ್ನು ಮನಸೋ ಇಚ್ಛೆ ಸೇವಿಸುವುದು ಬೇಡ ಎಂದು ಐಎಂಎ ಎಚ್ಚರಿಸಿದೆ. ರೋಗದ ಲಕ್ಷಣದ ಆಧಾರತ ಮೇಲೆ ಚಿಕಿತ್ಸೆ ನಡೆಸುವಂತೆ ಸಲಹೆ ನೀಡಿದೆ.

ಆತಂಕವಲ್ಲ ಈ ಸೋಂಕು: ಬೇಸಿಗೆಯಲ್ಲಿ ಹೆಚ್ಚುತ್ತಿರುವ ಈ ಸೋಂಕು ಹೆಚ್ಚಿನ ಮಟ್ಟದಲ್ಲಿ ಆತಂಕ ಹೊಂದಿಲ್ಲ. ಇದು ಯಾವುದೇ ರೀತಿಯ ಪ್ರಾಣಾಪಾಯವನ್ನೂ ಉಂಟು ಮಾಡುವುದಿಲ್ಲ. ಕೆಲವರಲ್ಲಿ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ. ದೀರ್ಘಕಾಲದ ಕೆಮ್ಮು, ಜ್ವರವನ್ನು ಹೊಂದಿರುವ ಹಿನ್ನೆಲೆ ಅದರ ನಿವಾರಣೆ ಕೊಂಚ ಸಮಯವಾಗುತ್ತಿದೆ ಆದರೆ, ಮುನ್ನೆಚ್ಚರಿಕೆ ವಹಿಸುವುದು ಅವಶ್ಯ ಎಂದು ವೈದ್ಯರು ತಿಳಿಸಿದ್ದಾರೆ.

ಯಾರಿಗೆ ಅಪಾಯ ಈ ಸೋಂಕು: 14 ವರ್ಷದೊಳಗಿನ ಮಕ್ಕಳು ಮತ್ತು 65 ವರ್ಷ ಮೇಲ್ಪಟ್ಟವರಿಗೆ ಹಾಗೂ ಗರ್ಭಿಣಿಯರಿಗೆ ಈ ಸೋಂಕು ಅಪಾಯವನ್ನು ಮಾಡುವ ಸಾಧ್ಯತೆ ಇದೆ. ಇವರು ಕೂಡ ಗಾಬರಿಗೆ ಒಳಗಾಗದೇ ಅಗತ್ಯ ಮುನ್ನೆಚ್ಚರಿಗೆವಹಿಸುವುದು ಅವಶ್ಯವಾಗಿದೆ.

ಇದನ್ನೂ ಓದಿ: H3 N2 ವೈರಸ್ ಭೀತಿ: ರಾಜ್ಯದಲ್ಲಿ 26 ಕೇಸ್ ಪತ್ತೆ, ಮುಂಜಾಗ್ರತೆ ಅಗತ್ಯ ಎಂದ ಸಚಿವ ಸುಧಾಕರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.