ಇಂದಿನ ಡಿಜಿಟಲ್ ತಂತ್ರಜ್ಞಾನ ಯುಗದಲ್ಲಿ ಸಾಮಾನ್ಯವಾಗಿ ಬಹುತೇಕರ ಮೂಗಿನ ಮೇಲೆ ಕನ್ನಡಕ ಕುಳಿತಿರುವುದು ಸಹಜ. ಈ ಕನ್ನಡಕಗಳು ಹುಡುಗಿಯರ ಮುಖದ ಅಂದಕ್ಕೆ ಕೆಲವೊಮ್ಮೆ ತೊಡಕಾಗುತ್ತವೆ. ಇದೇ ಕಾರಣಕ್ಕೆ ಕೆಲವು ವಿಶೇಷ ಸಂದರ್ಭದಲ್ಲಿ ಕಾಂಟಾಕ್ಟ್ ಲೆನ್ಸ್ ಮೊರೆ ಹೋಗುತ್ತಾರೆ. ಆದರೆ, ಈ ಲೆನ್ಸ್ ಬಳಕೆಯಿಂದ ಕೆಲವು ಬಾರಿ ಹಿಂದೆ ಮುಂದೆ ಯೋಚನೆ ಮಾಡುವುದು ಸುಳ್ಳಲ್ಲ. ಇದು ಮುಖದ ಅಂದ ಹೆಚ್ಚಿಸಿದರೂ ಅನೇಕ ಬಾರಿ ಮಾಡುವ ಸಣ್ಣ ತಪ್ಪುಗಳು ಕಣ್ಣಿಗೆ ಭಾರಿ ಬೆಲೆ ತರುವಂತೆ ಮಾಡುತ್ತವೆ. ಅದರಲ್ಲೂ ವಿಶೇಷವಾಗಿ ಮೇಕಪ್ ಬಳಕೆ ಸಂದರ್ಭದಲ್ಲಿ ಹೆಚ್ಚಿನ ಜಾಗ್ರತೆ ಅಗತ್ಯ.
ಕಾಂಟಾಕ್ಟ್ ಲೆನ್ಸ್ ಬಳಕೆ ಮಾಡುವಾಗ ಬಳಕೆ ಮಾಡುವ ಮೇಕಪ್ ಸಾಮಗ್ರಿಗಳನ್ನು ಎಚ್ಚರಿಕೆಯಿಂದ ಆರಿಸಬೇಕು. ವಿಶೇಷವಾಗಿ ಕಣ್ಣಿನ ಮೇಕಪ್ ಉತ್ಪನ್ನಗಳನ್ನು ಆಯ್ಕೆ ಮಾಡುವಾಗ ನೇತ್ರ ತಜ್ಞರಿಂದ ಅನುಮೋದನೆ ಮಾಡಿದ ವಸ್ತುಗಳ ಬಳಕೆಗೆ ಆದ್ಯತೆ ನೀಡಿ. ಅಂತಹ ಹಲವು ಉತ್ಪನ್ನಗಳು ಮಾರುಕಟ್ಟೆಯಲ್ಲಿ ಲಭ್ಯ. ಈ ವಸ್ತುಗಳಿಂದ ಕಣ್ಣಿಗಾಗುವ ಅಲರ್ಜಿಗಳ ಪ್ರಮಾಣ ಕಡಿಮೆ ಇರುತ್ತದೆ.
ಕೈ ಶುದ್ಧತೆ: ಕಾಂಟಾಕ್ಟ್ ಲೆನ್ಸ್ಗಳ ಬಳಕೆ ಮಾಡುವ ಮುನ್ನ ನಿಮ್ಮ ಕೈಯನ್ನು ಚೆನ್ನಾಗಿ ಸ್ವಚ್ಛಗೊಳಿಸಿ, ಒಣಗಿಸಿಕೊಳ್ಳಿ. ಕಾಂಟಾಕ್ಟ್ ಲೆನ್ಸ್ ಹಾಕಿದ ಬಳಿಕವೇ ಮೇಕಪ್ ತಯಾರಿ ಶುರು ಮಾಡಿ. ಇಲ್ಲದೇ ಹೋದಲ್ಲಿ ಮೇಕಪ್ ಉತ್ಪನ್ನಗಳು ನಿಮ್ಮ ಕೈಯಲ್ಲಿ ಕುಳಿತು ಲೆನ್ಸ್ ಮತ್ತು ಕಣ್ಣಿನ ಕಾರ್ನಿಯಾಗೆ ಸಮಸ್ಯೆಗೆ ಕಾರಣ ಆಗಬಹುದು. ಕಾಂಟಾಕ್ಟ್ ಲೆನ್ಸ್ ಬಳಕೆ ಮಾಡಿದಾಗ ಹೇರ್ ಡ್ರೈಯರ್, ಸ್ಪ್ರೈಯರ್, ಡಿಯೋಡರೆಂಟ್ಗಳನ್ನು ಬಳಕೆ ಮಾಡದಿರುವುದು ಉತ್ತಮ. ಬಳಕೆ ಮಾಡಲೇ ಬೇಕು ಎಂದರೆ ಲೆನ್ಸ್ ಧರಿಸಿದ ಬಳಿಕ ಮಾಡಿರಿ.
ಈ ವಿಷಯದ ಬಗ್ಗೆ ಇರಲಿ ಎಚ್ಚರಿಕೆ:
- ನಿಮ್ಮ ಮೇಕಪ್ ಉತ್ಪನ್ನಗಳನ್ನು ಬೇರೆಯವರೊಂದಿಗೆ ಹಂಚಿಕೊಳ್ಳಬೇಕು. ಅಲ್ಲದೆ ಈ ಉತ್ಪನ್ನಗಳನ್ನು ಆರು ತಿಂಗಳ ಬಳಿಕ ಸಾಧ್ಯವಾದಷ್ಟು ಬದಲಾವಣೆ ಮಾಡಿ.
- ನೀವು ಮೇಕಪ್ಗೆ ಬಳಕೆ ಮಾಡುವ ಬ್ರಶ್, ಸ್ಪಾಂಜ್ನಂತ ಸಾಧನಗಳು ಶುದ್ದವಾಗಿದೆಯೇ ಎಂಬುದನ್ನು ಪರಿಶೀಲಿಸಿ. ಇಲ್ಲದೇ ಹೋದಲ್ಲಿ ಇದು ಸೋಂಕಿಗೆ ಕಾರಣವಾಗಬಹಹುದು.
- ಕಣ್ಣಿನ ಮೇಕಪ್ ಬಳಕೆ ಮಾಡುವಾಗ ಹೆಚ್ಚಿನ ಜಾಗ್ರತೆ ಇರಲಿ, ಐ ಶಾಡೋ ಅಂತ ಮೇಕಪ್ನಲ್ಲಿ ವಾಟರ್ ಬೇಸ್ಡ್ ಕಲರ್ ಬಳಕೆ ಬಳಸಿ.
- ಮಸ್ಕರಾವನ್ನು ಕೂಡ ಸಾಧ್ಯವಾದಷ್ಟು ಮಟ್ಟಿಗೆ ಪೌಡರ್ ಬೇಸ್ಡ್ ಆಯ್ಕೆ ಮಾಡಬೇಡಿ. ಇದು ಕಣ್ಣಿನಲ್ಲಿ ಅಲರ್ಜಿ ಮತ್ತು ರೆಡ್ನೆಸ್ಗೆ ಕಾರಣವಾಗುತ್ತದೆ.
- ಕಾಂಟಾಕ್ಟ್ ಲೆನ್ಸ್ ಬಳಕೆ ಮಾಡಿದಾಗ ಸಾಧ್ಯವಾದಷ್ಟು ಕೃತಕ ಕಣ್ಣಿನ ರೆಪ್ಪೆ ಬಳಕೆ ಮಾಡಬೇಡಿ.
- ಮಖಕ್ಕೆ ಪೌಡರ್ ಮೇಕಪ್ ಬಳಕೆ ಮಾಡುವಾಗ ನಿಮ್ಮ ಕಣ್ಣು ಮುಚ್ಚಿ, ಅದರ ಆರೋಗ್ಯ ಕಾಪಾಡಿ.
ಈ ರೀತಿ ಮಾಡಬೇಡಿ: ನಿಮ್ಮ ಕಣ್ಣು ಕೆಂಪಾಗುವಿಕೆ ಅಥವಾ ನೀರು ಸೋರುತ್ತಿದೆ ಎಂದರೆ ಅಂತಹ ಮೇಕಪ್‌ನಿಂದ ದೂರ ಇರುವುದು ಒಳ್ಳೆಯದು. ಜೊತೆಗೆ ಮೇಕಪ್ ಆಯ್ಕೆ ವೇಳೆ ಸಾಧ್ಯವಾದಷ್ಟು ಆಯಿಲ್ ಬೇಸ್ಡ್ ಆಗಿರುವುದನ್ನು ತಪ್ಪಿಸಿ. ಮೇಕಪ್ ಹಚ್ಚುವ ಜೊತೆಗೆ ಅದನ್ನು ತೆಗೆಯುವ ವಿಚಾರದಲ್ಲೂ ಹೆಚ್ಚಿನ ಗಮನ ಇರಲಿದೆ. ವೈದ್ಯರ ಸೂಚನೆ ನೀಡಿದಂತೆ ನಿಯಮಿತವಾಗಿ ಲೆನ್ಸ್ಗಳನ್ನು ಬದಲಾವಣೆ ಮಾಡುವುದು ಒಳಿತು. ದೀರ್ಘ ಬಳಕೆಯ ಲೆನ್ಸ್ಗಳನ್ನು ಸುರಕ್ಷಿತವಾಗಿ ಮತ್ತು ಶುದ್ದವಾಗಿ ಕಾಪಾಡುವುದು ಅಗತ್ಯ.
ಇದನ್ನೂ ಓದಿ: ವಿಶ್ವದಲ್ಲೇ ಮೊದಲ ಬಾರಿ ಅಮೆರಿಕದ ವ್ಯಕ್ತಿಗೆ ಯಶಸ್ವಿ ಕಣ್ಣು ಕಸಿ!