ETV Bharat / sukhibhava

ಪುಟ್ಟ ಕಂದನ ನಿರೀಕ್ಷೆಯಲ್ಲಿರುವಿರಾ? ಲಾಲನೆ - ಪಾಲನೆಗೆ ನಿಮ್ಮನ್ನು ಸಜ್ಜುಗೊಳಿಸಿ..

author img

By

Published : Jul 7, 2022, 4:38 PM IST

ಮಧ್ಯರಾತ್ರಿ ಎದ್ದು ಕೂಡುವ ತಾಯಿ, 45 ನಿಮಿಷಕ್ಕಿಂತ ಜಾಸ್ತಿ ಮಲಗದ ಮಗು ಪದೇ ಪದೆ ಎದ್ದು ಅತ್ತಾಗ ಮಧ್ಯರಾತ್ರಿಗಳಲ್ಲಿ ಎದ್ದು ಮಗುವನ್ನು ಎದೆಗವಚಿಕೊಂಡು ಕೂರುವುದು.. ಇದನ್ನೆಲ್ಲ ಸಂಭಾಳಿಸುವುದಾದರೂ ಹೇಗೆ ಎಂಬ ಪ್ರಶ್ನೆ ಕೆಲವೊಮ್ಮೆ ಈಗತಾನೇ ತಾಯಿಯಾದ ಹೆಣ್ಣುಮಗಳಿಗೆ ಮೂಡಬಹುದು.

Symptoms of Mommy Burnout and tips to deal with it

ಮಗುವಿಗೆ ಹಾಲುಣಿಸುವುದು, ಡೈಪರ್ ಬದಲಾಯಿಸುವುದು, ಮಧ್ಯರಾತ್ರಿ ಅಳುವ ಮಗುವನ್ನು ಸಮಾಧಾನಿಸುವುದು, ಪದೇ ಪದೆ ಸ್ವಚ್ಛಗೊಳಿಸುವುದು, ಹಾಲಿನ ಬಾಟಲ್ ತೊಳೆಯುವುದು ಹೀಗೆ .. ಶಿಶುವಿನ ಲಾಲನೆ ಪಾಲನೆ ಮಾಡುವುದೆಂದರೆ ಎಂದೂ ಮುಗಿಯದ ಕತೆ. ಇನ್ನು ಇದನ್ನೆಲ್ಲ ಮಾಡುತ್ತ ದಿನದಲ್ಲಿ ಬೇರೇನಕ್ಕೂ ಸಮಯ ಸಾಲುವುದೇ ಇಲ್ಲ. ಪ್ರತಿಯೊಬ್ಬ ನವತಾಯಂದಿರು ಇಂಥದೊಂದು ಹಂತವನ್ನು ಪಾಸು ಮಾಡಲೇಬೇಕಾಗುತ್ತದೆ.

ಮಧ್ಯರಾತ್ರಿ ಎದ್ದು ಕೂಡುವ ತಾಯಿ, 45 ನಿಮಿಷಕ್ಕಿಂತ ಜಾಸ್ತಿ ಮಲಗದ ಮಗು ಪದೇ ಪದೆ ಎದ್ದು ಅತ್ತಾಗ ಮಧ್ಯರಾತ್ರಿಗಳಲ್ಲಿ ಎದ್ದು ಮಗುವನ್ನು ಎದೆಗವಚಿಕೊಂಡು ಕೂರುವುದು.. ಇದನ್ನೆಲ್ಲ ಸಂಭಾಳಿಸುವುದಾದರೂ ಹೇಗೆ ಎಂಬ ಪ್ರಶ್ನೆ ಕೆಲವೊಮ್ಮೆ ಈಗತಾನೇ ತಾಯಿಯಾದ ಹೆಣ್ಣುಮಗಳಿಗೆ ಮೂಡಬಹುದು.

ತಾಯಿಯಾಗುವ ಕಷ್ಟ ಇದೆಯಲ್ಲ ಅದು ಆ ತಾಯಿಗೇ ಗೊತ್ತು. ದಿನಗಳೆದಂತೆ ಶಿಶು ದೊಡ್ಡದಾದಂತೆ ತಾಯಿಯ ಕಷ್ಟಗಳು ಮತ್ತೂ ಹೆಚ್ಚಾಗುತ್ತ ಹೋಗುತ್ತವೆ. ಇದೆಲ್ಲದರಿಂದ ಪಾರಾಗಲು ಸಾಧ್ಯವಿಲ್ಲವಾದರೂ ಇದನ್ನೆಲ್ಲ ಒಂದಿಷ್ಟು ಜಾಣತನದಿಂದ ನಿರ್ವಹಣೆ ಮಾಡಿದರೆ ಕೊಂಚ ಕಷ್ಟ ಕಡಿಮೆಯಾಗಬಹುದು. ಇರಲಿ.. ಮಗುವಿನ ನಿರೀಕ್ಷೆಯಲ್ಲಿರುವ ತಾಯಿ ನೀವಾಗಿದ್ದಲ್ಲಿ, ತಾಯಿಯಾಗುವ ಕಷ್ಟದ ಲಕ್ಷಣಗಳು ಹಾಗೂ ಅದನ್ನು ನಿಭಾಯಿಸುವ ಕೆಲ ಸೂತ್ರಗಳನ್ನು ತಿಳಿದುಕೊಳ್ಳಿ.

ನವತಾಯಂದಿರು ಸುಸ್ತಾಗುವ ಲಕ್ಷಣಗಳು

  • ಹಸಿವು ಹೆಚ್ಚಾಗುವುದು ಅಥವಾ ಕಡಿಮೆಯಾಗುವುದು
  • ಅಸಹಾಯಕತೆ ಮತ್ತು ಒಂಟಿತನದ ಭಾವನೆ
  • ಅತಿಯಾದ ಕೋಪ ಅಥವಾ ಮುಂಗೋಪ
  • ನಿರಂತರ ಕಿರುಚಾಟ ಅಥವಾ ಅಳುವುದು
  • ವಿವರಿಸಲಾಗದ ಕಿರಿಕಿರಿ ಅಥವಾ ಆತಂಕ, ಆಲೋಚನೆಗಳನ್ನು ನಿಯಂತ್ರಿಸುವಲ್ಲಿ ತೊಂದರೆ
  • ಆಯಾಸ, ಕಡಿಮೆ ಶಕ್ತಿ ಮತ್ತು ಆಸಕ್ತಿಯ ಕೊರತೆ
  • ನಿದ್ರೆ ಮಾಡಲು ಅಸಮರ್ಥತೆ
  • ಜೀವನದ ಬಗ್ಗೆ ಅಸಮಾಧಾನದ ಭಾವನೆ (ಮಗು ಸೇರಿದಂತೆ)

ನವತಾಯಂದಿರು ಸುಸ್ತಾಗುವುದನ್ನು ತಡೆಗಟ್ಟಲು ಹೀಗೆ ಮಾಡಿ

  • ಮಗುವಿಗೆ ಹಾಲುಣಿಸುವಲ್ಲಿ ಸಹಾಯ ಪಡೆಯಿರಿ.
  • ಮನೆಯ ಇತರ ಕುಟುಂಬ ಸದಸ್ಯರಿಗೆ ಮನೆಯ ಕೆಲಸಗಳನ್ನು ಮಾಡಲು ಹೇಳಿ. ಸಾಧ್ಯವಾದರೆ ಸಹಾಯಕರನ್ನು ನೇಮಿಸಿಕೊಳ್ಳಿ.
  • ಸ್ವಯಂ ಕಾಳಜಿ ಎಂಬುದು ಖಾಲಿಯಾದ ಶಕ್ತಿಯ ಮಟ್ಟವನ್ನು ಮತ್ತೆ ಮೇಲೆ ಏರಿಸುವ ವಿಧಾನವಾಗಿದೆ. ಒಂದು ವಾಕ್ ಮಾಡಿ, ಮ್ಯಾನಿಕ್ಯೂರ್ ಮಾಡಿಸಿಕೊಳ್ಳಲು ಹೋಗಿ, ಕಾಫಿಗಾಗಿ ಸ್ನೇಹಿತನನ್ನು ಭೇಟಿ ಮಾಡಿ, ಯಾರಿಗೋ ಫೋನ್ ಮಾಡಿ.
  • ಮಗುವಿನ ಪಾಲನೆಯ ವಿಷಯದಲ್ಲಿ ವಾಸ್ತವಿಕ ಮತ್ತು ಸ್ವಯಂ ನಿರೀಕ್ಷೆಗಳನ್ನು ಬ್ಯಾಲೆನ್ಸ್​ ಮಾಡಿ. ನಿಮಗಾಗಿ ಮತ್ತು ನಿಮ್ಮ ಮಗುವಿಗೆ ಏನು ಒಳ್ಳೆಯದೋ ಅದನ್ನು ಮಾಡಿ. ನಿಮ್ಮ ಪೋಷಕರು ಅಥವಾ ಸಹೋದರಿ ಅಥವಾ ನೆರೆಹೊರೆಯವರು ತಮ್ಮ ಮಕ್ಕಳನ್ನು ಸಾಕುವಾಗ ಏನು ಮಾಡಿದ್ದರು ಎಂಬುದು ನಿಮಗೆ ಮುಖ್ಯವಲ್ಲ.
  • ಮನೆಗೆ ಬರುವ ಅತಿಥಿಗಳ ಸಂಖ್ಯೆಯನ್ನು ಮಿತಿಗೊಳಿಸಿ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.