ಹೈದರಾಬಾದ್: ಬೆಳಗ್ಗೆ ಎದ್ದಾಕ್ಷಣ ಆಲಸ್ಯ ಮತ್ತು ಶಕ್ತಿ ಕಡಿಮೆ ಅನುಭವ ಆಗುತ್ತಿದೆ ಎಂದರೆ ನಾವು ಯೋಚಿಸುವುದು ಹೆಚ್ಚು ಕೆಲಸ ಮಾಡಿ, ಕಡಿಮೆ ನಿದ್ದೆ ಮಾಡಿದೆವು ಎಂದು. ಆದರೆ, ಕೆಲವೊಮ್ಮೆ ಇದಕ್ಕೆ ಪ್ರಮುಖ ಕಾರಣ ವಿಟಮಿನ್ ಡಿ ಮತ್ತು ಬಿ 12 ಕೊರತೆ ಕಾರಣ ಎಂಬುದು ಮರೆತು ಹೋಗುತ್ತೇವೆ. ದೇಹಕ್ಕೆ ಸರಿಯಾದ ಪ್ರಮಾಣದ ವಿಟಮಿನ್ ಡಿ ಮತ್ತು ಬಿ 12 ಸಿಗದೇ ಹೋದಲ್ಲಿ ಈ ರೀತಿ ಅನುಭವ ಬೆಳ್ಳಂಬೆಳಗ್ಗೆ ಕಾಡುತ್ತದೆ. ಇದರ ಉಪಶಮನಕ್ಕೆ ದಿನಕ್ಕೆ ಒಂದು ಮೊಟ್ಟೆ ತಿನ್ನುವುದು ಉತ್ತಮ ಪರಿಹಾರವಾಗಿದೆ. ಇದು ದೇಹಕ್ಕೆ ಬೇಕಾದ ಈ ವಿಟಮಿನ್ಗಳ ಆಗರವಾಗಿದೆ.
ಇಂದು ವಿಶ್ವ ಮೊಟ್ಟೆ ದಿನವಾಗಿದೆ. ಸಮೃದ್ಧ ಪೌಷ್ಟಿಕಾಂಶ ಹೊಂದಿರುವ ಈ ಮೊಟ್ಟೆಗಳ ಸೇವನೆಯಿಂದ ಆರೋಗ್ಯಕ್ಕೆ ಆಗುವ ಪ್ರಯೋಜನದ ಮಾಹಿತಿ ಇಲ್ಲಿದೆ. ಅಷ್ಟೇ ಅಲ್ಲದೇ, ಮೊಟ್ಟೆಯಲ್ಲಿ ಬಿ2, ಬಿ5, ಬಿ12 ಮತ್ತು ಅಮಿನೋ ಆಮ್ಲ ಕೂಡ ಇದೆ. ಇದು ನಮ್ಮ ಚರ್ಮ ಮತ್ತು ಉಗುರಿನ ಆರೋಗ್ಯವನ್ನು ರಕ್ಷಿಸುತ್ತದೆ. ಇದರಲ್ಲಿನ ಆ್ಯಂಟಿ ಆಕ್ಸಿಡೆಂಟ್ ಮತ್ತು ಪ್ರೋಟಿನ್ ಚರ್ಮಕ್ಕೆ ಮಾಶ್ಚರೈಸರ್ ಒದಗಿಸುತ್ತದೆ.
ಬಿಡುವಿಲ್ಲದ ಕೆಲಸದಲ್ಲಿ, ಅನೇಕ ಬಾರಿ ನಾವು ಕೆಲವು ಪ್ರಮುಖ ವಿಷಯಗಳನ್ನು ಮರೆಯುತ್ತೇವೆ. ಈ ರೀತಿಯ ಮರೆವು ಆಗದಂತೆ ಕಾಪಾಡಲು ಮೊಟ್ಟೆಯನ್ನು ಸೇವಿಸಬೇಕಿದೆ. ಇದರಲ್ಲಿರುವ ಕೊಲಿನ್ ಎಂಬ ಮೈಕ್ರೋನ್ಯೂಟ್ರಿಯಂಟ್ ನಿಮ್ಮ ಸ್ಮರಣೆಯನ್ನು ಮಾತ್ರ ಹೆಚ್ಚಿಸುವುದಿಲ್ಲ. ಇದು ನಿಮ್ಮ ಭಾವನೆಯನ್ನು ನಿಯಂತ್ರಿಸುತ್ತದೆ.
ತಾಯಿಯಾದ ಬಳಿಕ ಮಹಿಳೆಯರಲ್ಲಿ ಮೂಳೆಗಳ ಬಲ ನೈಸರ್ಗಿಕವಾಗಿ ಕುಗ್ಗುತ್ತದೆ. ವಿಟಮಿನ್ ಡಿ ನಿಮ್ಮ ಮೂಳೆಗಳ ಆರೋಗ್ಯವನ್ನು ಕಾಪಾಡುತ್ತದೆ. ಹಾಗೇ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಇದರಲ್ಲಿನ ಕಬ್ಬಿಣ ಮತ್ತು ಫೊಲೆಟ್ ರಕ್ತ ಹೀನತೆ ತಡೆಯುತ್ತದೆ
ಮಕ್ಕಳು ಏನನ್ನು ಸರಿಯಾಗಿ ತಿನ್ನುವುದಿಲ್ಲ ಎಂಬ ತಾಯಂದಿರ ದೂರಿಗೆ ಮೊಟ್ಟೆಗಳು ಪರಿಹಾರ ನೀಡಲಿದೆ. ಮೊಟ್ಟೆಯಲ್ಲಿ ಒಮೆಗಾ-3 ಫ್ಯಾಟಿ ಆಮ್ಲ, 13 ವಿಟಮಿನ್, ಮಿನರ್ಸ್, ಆ್ಯಂಟಿ - ಆಕ್ಸಿಡೆಂಟ್ಸ್, ಪ್ರೋಟಿನ್ಸ್ ಮತ್ತು ಆರೋಗ್ಯಯುತ ಕೊಬ್ಬು ಹೊಂದಿರುತ್ತದೆ. ಇದನ್ನು ನಿತ್ಯ ಸೇವಿಸುವುದರಿಂದ ನಿಮ್ಮ ದೇಹಕ್ಕೆ ಬೇಕಾದ ಪೋಷಕಾಂಶ ಲಭ್ಯವಾಗುತ್ತದೆ. ಇಂದು ಬಹುತೇಕ ಮಕ್ಕಳು ಮೊಬೈಲ್ ವೀಕ್ಷಣೆಗೆ ಒಳಗಾಗಿದ್ದು, ಅವರ ಕಣ್ಣಿನ ಮೇಲೆ ಹಾನಿಯಾಗುತ್ತಿದೆ. ಈ ಕಣ್ಣಿನ ಆರೋಗ್ಯವನ್ನು ಕಾಪಾಡುವಲ್ಲಿ ಮೊಟ್ಟೆಯ ಹಳದಿ ಭಾಗದಲ್ಲಿರುವ ಲುಟೈನ್ ಸಹಾಯ ಮಾಡುತ್ತದೆ.
ಇದನ್ನೂ ಓದಿ: ನೈಟ್ ಶಿಫ್ಟ್‌ನಲ್ಲಿ ಕೆಲಸ ಮಾಡ್ತೀರಾ? ನಿಮಗೆ ಈ 5 ರೀತಿಯ ಆಹಾರ ಸೇವನೆ ಅತ್ಯುತ್ತಮ