ಹೈದರಾಬಾದ್: ಆತ್ಮಹತ್ಯೆ ಎಂಬುದು ಸ್ವಯಂ ಆಪತ್ತಾಗಿದ್ದು, ಅಕಾಲಿಕವಾಗಿ ಜೀವ ಕಳೆದುಕೊಳ್ಳುವ ಈ ನಿರ್ಧಾರವು ಕುಟುಂಬ ಸ್ನೇಹಿತರು ಮತ್ತು ಸಮುದಾಯದ ಮೇಲೆ ಪರಿಣಾಮ ಬೀರುತ್ತದೆ. ಇತ್ತೀಚಿನ ದಿನದಲ್ಲಿ ಆತ್ಮಹತ್ಯೆಗೆ ಮುಂದಾಗುತ್ತಿರುವವರಲ್ಲಿ ಹದಿ ಹರೆಯದ ಯುವತಿಯರು ಮತ್ತು ಯುವ ಮಹಿಳೆಯರ ಸಂಖ್ಯೆ ದುಪ್ಪಟ್ಟುಗೊಂಡಿದೆ. ಅಂದಾಜಿನ ಪ್ರಕಾರ, ಪ್ರಸ್ತುತ ಜಾಗತಿನಾದ್ಯಂತ 7 ಲಕ್ಷ ಮಂದಿ ಆತ್ಮಹತ್ಯೆಗೆ ಮುಂದಾಗುತ್ತಿದ್ದಾರೆ.
ಆತ್ಮಹತ್ಯೆ ತಡೆಗಟ್ಟುವ ನಿಟ್ಟಿನಲ್ಲಿ ಜಾಗತಿಕವಾಗಿ ಸೆಪ್ಟೆಂಬರ್ 10ರಂದು ವಿಶ್ವ ಆತ್ಮಹತ್ಯೆ ತಡೆಗಟ್ಟುವಿಕೆ ದಿನವನ್ನು ಆಚರಿಸಲಾಗುವುದು. ಈ ಮೂಲಕ ಅನೇಕ ಕಾರ್ಯಕ್ರಮಗಳನ್ನು ರೂಪಿಸಿ ಜನರಿಗೆ ಆತ್ಮಹತ್ಯೆ ತಡೆ ಸಂಬಂಧ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಿದೆ.
ಇತಿಹಾಸ: ವಿಶ್ವ ಆತ್ಮಹತ್ಯೆ ತಡೆಗಟ್ಟುವಿಕೆ ದಿನವನ್ನು ಮೊದಲ ಬಾರಿಗೆ 2003ರಲ್ಲಿ ಅಂತಾರಾಷ್ಟ್ರೀಯ ಆತ್ಮಹತ್ಯೆ ತಡೆಗಟ್ಟುವಿಕೆ ದಿನ ಮತ್ತು ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ ಸಹಯೋಗದಿಂದ ಸ್ಥಾಪಿಸಲಾಗಿದೆ. ಆತ್ಮಹತ್ಯೆ ಗಮನ ನೀಡುವ ಮತ್ತು ಇದರೊಂದಿಗೆ ಹೊಂದಿರುವ ಕಳಂಕವನ್ನು ತೊಡೆಯುವುದು. ಹಾಗೂ ಸಂಘಟನೆ, ಸರ್ಕಾರ ಮತ್ತು ಸಾರ್ವಜನಿಕರಲ್ಲಿ ಆತ್ಮಹತ್ಯೆಯನ್ನು ತಡೆಗಟ್ಟುವಿಕೆಯಂತಹ ಜಾಗೃತಿ ಮೂಡಿಸುವ ಗುರಿ ಹೊಂದಿದೆ.
ಜಾಗತಿಕ ಆತ್ಮಹತ್ಯೆ ಅಂಕಿ ಅಂಶ-2023: ಪ್ರತಿ ವರ್ಷ 7 ಲಕ್ಷ ಮಂದಿ ಆತ್ಮಹತ್ಯೆಗೆ ಮುಂದಾಗುತ್ತಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ತುರ್ತು ಪ್ರಯತ್ನ ನಡೆಯಬೇಕಿದೆ. ಪ್ರತಿ ಆತ್ಮಹತ್ಯೆ ಹಿಂದೆ ಅನೇಕ ಆತ್ಮಹತ್ಯಾ ಪ್ರಯತ್ನ ನಡೆದಿರುತ್ತದೆ. ಹಿಂದಿನ ಆತ್ಮಹತ್ಯೆ ಪ್ರಯತ್ನಗಳು ಗಮನಾರ್ಹವಾಗಿ ಅಪಾಯವನ್ನು ಹೆಚ್ಚಿಸುತ್ತದೆ. ಜಾಗತಿಕವಾಗಿ 15ರಿಂದ 29 ವರ್ಷದೊಳಗಿನ ಜನರ ಸಾವಿನಲ್ಲಿ ನಾಲ್ಕನೇ ಪ್ರಮುಖ ಕಾರಣ ಆತ್ಮಹತ್ಯೆಯಾಗಿದೆ. ಮತ್ತೊಂದು ಎಚ್ಚರಿಕೆ ಗಂಟೆ ಎಂದರೆ ಶೇ 77ರಷ್ಟು ಆತ್ಮಹತ್ಯೆ ಪ್ರಕರಣಗಳು ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿ ಸಂಭವಿಸುತ್ತಿದೆ. ರೋಗನಾಶಕ ಸೇವನೆ, ನೇಣು ಮತ್ತು ಗುಂಡು ಹೊಡೆದುಕೊಳ್ಳುವುದು ಸಾಮಾನ್ಯ ಆತ್ಮಹತ್ಯಾ ಮಾದರಿಗಳಾಗಿದೆ.
ಭಾರತದಲ್ಲಿ ಆತ್ಮಹತ್ಯೆ: ಭಾರತದಲ್ಲಿ ವಾರ್ಷಿಕವಾಗಿ 1 ಲಕ್ಷ ಮಂದಿ ಆತ್ಮಹತ್ಯೆಗೆ ಒಳಗಾಗುತ್ತಿದ್ದು, ದೇಶ ಕೂಡ ಈ ಸಮಸ್ಯೆಯಿಂದ ಬಳಲುತ್ತಿದೆ. ಇದಕ್ಕೆ ಪ್ರಮುಖ ಕಾರಣಗಳಲ್ಲಿ ವೃತ್ತಿ ಸಮಸ್ಯೆ, ಪ್ರತ್ಯೇಕೀಕರಣ, ದೌರ್ಜನ್ಯ, ಕುಟುಂಬ ಕಲಹ, ಮಾನಸಿಕ ಆರೋಗ್ಯ ಸಮಸ್ಯೆ, ಚಟ, ಆರ್ಥಿಕ ಒತ್ತಡ ಮತ್ತು ದೀರ್ಘ ನೋವು ಹೊಂದಿರುತ್ತದೆ.
2021ರಲ್ಲಿ ಭಾರತದಲ್ಲಿ ಒಟ್ಟಾರೆ 1,64,033 ಮಂದಿ ಆತ್ಮಹತ್ಯೆಗೆ ಒಳಗಾಗುತ್ತಿದ್ದಾರೆ 2020ಕ್ಕೆ ಹೋಲಿಕೆ ಮಾಡಿದಾಗ ಇದರ ಸಂಖ್ಯೆ 7.2ರಷ್ಟು ಹೆಚ್ಚಾಗಿದೆ. ಬಹುತೇಕ ಆತ್ಮಹತ್ಯೆ ಪ್ರಕರಣಗಳು ಮಹಾರಾಷ್ಟ್ರ, ತಮಿಳುನಾಡು, ಮಧ್ಯಪ್ರದೇಶ, ಪಶ್ಚಿಮ ಬಂಗಾಳ ಮತ್ತು ಕರ್ನಾಟಕದಲ್ಲಿ ಸಂಭವಿಸುತ್ತಿದ್ದು, ದೇಶದ ಅರ್ಧದಷ್ಟು ಸಂಖ್ಯೆ ಇಲ್ಲಿ ವರದಿಯಾಗಿದೆ. ಉತ್ತರ ಪ್ರದೇಶದಲ್ಲಿ ಅಧಿಕ ಜನಸಂಖ್ಯೆ ಹೊಂದಿದ್ದರೂ ಇಲ್ಲಿ ಆತ್ಮಹತ್ಯೆ ಪ್ರಕರಣದ ಸಂಖ್ಯೆ ಉಳಿದ ಕಡೆಗೆ ಗಮನಿಸಿದಾಗ ಗಮನಾರ್ಹವಾಗಿ ಕಡಿಮೆ ಇದೆ.
ಸಾಮಾಜಿಕ ಮಾಧ್ಯಮ, ಇಂಟರ್ನೆಟ್, ವಯಸ್ಕರ ಆತ್ಮಹತ್ಯೆ: ಯುವ ಜನತೆಯಲ್ಲಿ ಸಾಮಾಜಿಕ ಬಳಕೆಯ ಅತಿ ಹೆಚ್ಚು ಬಳಕೆ ಇದಕ್ಕೆ ಪ್ರಮುಖ ಕಾರಣವಾಗಿದೆ. ಅಧಿಕ ಸಮಯವನ್ನು ಸಾಮಾಜಿಕ ಮಾಧ್ಯಮದ ಫ್ಲಾಟ್ಫಾರ್ಮ್ನಲ್ಲಿ ಕಳೆಯುವುದು, ಏಕಾಗ್ರತೆಯ ಕೊರತೆ, ಅಧಿಕ ಒತ್ತಡ ಮತ್ತು ಆತಂಕ ಹೆಚ್ಚಳದಂತಹ ಲಕ್ಷಣ ಯುವಜನತೆಯಲ್ಲಿ ಕಂಡು ಬರುತ್ತಿದೆ.
ಆತ್ಮಹತ್ಯೆ ತಡೆಯುವಲ್ಲಿ ಪೋಷಕರ ಪಾತ್ರ: ಮಕ್ಕಳ ಮಾನಸಿಕ ಒತ್ತಡ ಲಕ್ಷಣವನ್ನು ಗುರುತಿಸಿ, ಆತ್ಮಹತ್ಯೆಯಂತಹ ನಿಯಮ ತಡೆಯವಲ್ಲಿ ಪೋಷಕರ ಪಾತ್ರ ನಿರ್ಣಾಯಕವಾಗಿದೆ. ಅವರ ಮಾತು ಕೇಳುವುದು, ಸಹಾನಾಭೂತಿ ತೋರುವುದು, ಮಕ್ಕಳು ಮತ್ತು ಪೋಷಕರ ನಡುವೆ ಮುಕ್ತ ಸಂವಹನಕ್ಕೆ ಪ್ರೋತ್ಸಾಹ ನೀಡುವುದು ಪ್ರಮುಖವಾಗಿದೆ ಪೋಷಕರು ಹದಿವಯಸ್ಸಿನ ಮಕ್ಕಳ ನಡುವಳಿಕೆ ಬಗ್ಗೆ ಗಮನವಹಿಸಿ, ಅವರು ತಪ್ಪು ನಿರ್ಧಾರ ತೆಗೆದುಕೊಳ್ಳುವುದು ತಡೆಯುವುದು ಮುಖ್ಯವಾಗಿದೆ.
ಭಾರತದ ರಾಷ್ಟ್ರೀಯ ಆತ್ಮಹತ್ಯೆ ತಡೆಗಟ್ಟುವಿಕೆ ತಂತ್ರ: 2022ರಲ್ಲಿ ನವೆಂಬರ್ನಲ್ಲಿ ಭಾರತ ಎನ್ಎಸ್ಪಿಎಸ್ ಅನ್ನು ಸ್ಥಾಪಿಸಿತು. ಈ ಮೂಲಕ ಆತ್ಮಹತ್ಯೆಯನ್ನು ತಡೆಯುವುದು ಸಾರ್ವಜನಿಕ ಆರೋಗ್ಯದ ಪ್ರಾಮುಖ್ಯತೆ ಎಂಬ ಗುರಿಯನ್ನು ರೂಪಿಸಿತು. ಎನ್ಎಸ್ಪಿಎಸ್ ನ ಪ್ರಮುಖ ಗುರಿ 2030ರ ಹೊತ್ತಿಗೆ ಶೇ 10ರಷ್ಟು ಆತ್ಮಹತ್ಯೆ ತಡೆಯುವುದಾಗಿದೆ. ಇದಕ್ಕಾಗಿ ಇದರ ಮೇಲ್ವಿಚಾರಣೆಗೆ ಒತ್ತು, ಜಿಲ್ಲಾ ಮಟ್ಟದಲ್ಲಿ ಆತ್ಮಹತ್ಯಾ ತಡೆಗಟ್ಟುವಿಕೆ ಸೇವೆ ಸ್ಥಾಪಿಸುವುದು ಮತ್ತು ಶಾಲೆಗಳಲ್ಲಿ ಮಾನಸಿಕ ಆರೋಗ್ಯ ಶಿಕ್ಷಣ ಅಳವಡಿಸುವುದು ಸೇರಿದೆ.
ಆತ್ಮಹತ್ಯೆ ದರ ಏರಿಕೆ ಎಚ್ಚರಿಕೆ ಗಂಟೆಯಾಗಿದ್ದು, ವಿಶೇವಾಗಿ ವಿದ್ಯಾರ್ಥಿಗಳು ತತ್ಕ್ಷಣ ಮತ್ತು ಸಮಗ್ರಹ ಕಾರ್ಯ ನಡೆಸಬೇಕಿದೆ. ಕುಟುಂಬ ಸಮುದಾಯಗಳ ಸಹಯೋಗದ ಪ್ರಯತ್ನಗಳು ಈ ಆತ್ಮಹತ್ಯೆಯಂತಹ ಆಘಾತವನ್ನು ತಡೆಯವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
ಇದನ್ನೂ ಓದಿ: World First Aid Day 2023: ವಿಶ್ವ ಪ್ರಥಮ ಚಿಕಿತ್ಸೆ ದಿನ ಆಚರಿಸುವುದೇಕೆ?.. ಇದರ ಮಹತ್ವ, ಉದ್ದೇಶ ತಿಳಿಯಿರಿ