ಹೈದರಾಬಾದ್: ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (ಪಿಸಿಒಎಸ್) ಮತ್ತು ಬಾಯಿಯ ಶುಚಿತ್ವದ ನಡುವೆ ಸಂಬಂಧ ಇದೆ ಎಂದಾಗ ಒಮ್ಮೆ ಅಚ್ಚರಿಯಾಗುವುದು ನಿಜ. ಆದರೆ, ಇವೆರಡರ ನಡುವೆ ಪರಸ್ಪರ ಸಂಬಂದ ಇದೆ ಎಂದು ಹೊಸ ಸಂಶೋಧನೆ ತಿಳಿಸಿದೆ. ಪಿಸಿಒಎಸ್ ಬಾಯಿಯ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ ಎಂದಿದೆ.
ಏನಿದು ಸಂಬಂಧ? ಪಿಸಿಒಎಸ್ ಎಂಬ ಸಮಸ್ಯೆಯನ್ನು ಇಂದು ಬಹುತೇಕ ಮಹಿಳೆಯರು ಅನುಭವಿಸುತ್ತಿದ್ದಾರೆ. ತಾಯ್ತನದ ಕನಸಿಗೆ ಇದು ಅನೇಕ ಬಾರಿ ಅಡ್ಡಿಯಾಗುತ್ತದೆ. ಹಾರ್ಮೋನ್ ಅಸಮತೋಲನದಿಂದ ಉಂಟಾಗುವ ಈ ಸಮಸ್ಯೆಯಿಂದ ಶೇ 54ರಷ್ಟು ಮಹಿಳೆಯರು ಸಮಸ್ಯೆಗೆ ಗುರಿಯಾಗುತ್ತಾರೆ. ಈ ಪಿಸಿಒಎಸ್ನ ಲಕ್ಷಣ ಎಂದರೆ, ಅನಿಯಮಿತ ಋತುಚಕ್ರ, ಅಧಿಕ ಕೂದಲು ಉದುರುವಿಕೆ ಮತ್ತು ತೂಕ ನಿರ್ವಹಣೆ ಸಂಕಷ್ಟ.
ಇತ್ತೀಚಿನ ಅಧ್ಯಯನ ಪ್ರಕಾರ ಒಸಡಿನ ಸಮಸ್ಯೆ ಅನುಭವಿಸುವ ಶೇ 46ರಷ್ಟು ಮಹಿಳೆಯರಲ್ಲಿ ಈ ಪಿಸಿಒಎಸ್ ಅಭಿವೃದ್ಧಿಯಾಗುತ್ತದೆ. ಜೊತೆಗೆ ಕೆಲವು ಅಧ್ಯಯನ ಪ್ರಕಾರ ಹೊಸದಾಗಿ ಪಿಸಿಒಎಸ್ ಪತ್ತೆಯಾದ ಮಹಿಳೆಯರಲ್ಲೂ ಒಸಡಿನ ಸಮಸ್ಯೆ ಕಂಡು ಬಂದಿದೆ. ಈ ಎರಡು ಸಮಸ್ಯೆ ಉರಿಯೂತವೂ ನಿರ್ಣಾಯಕ ಅಂಶವಾಗಿದೆ.
ಬಾಯಿಯ ಆರೋಗ್ಯದ ಮೇಲೆ ಪಿಸಿಒಎಸ್ ಪ್ರಭಾವ: ಪಿಸಿಒಎಸ್ ಒಸಡು ಸೇರಿದಂತೆ ದೇಹದೆಲ್ಲೆಡೆ ದೀರ್ಘಕಾಲದ ಕಡಿಮೆ ಮಟ್ಟದ ಉರಿಯೂತವನ್ನು ಉತ್ತೇಜಿಸುತ್ತದೆ. ಇದು ಒಸಡಿನ ಅಪಾಯವನ್ನು ಹೆಚ್ಚಿಸುತ್ತದೆ. ಪಿಸಿಒಎಸ್ನಿಂದ ಬಳಲುತ್ತಿರುವ ಮಹಿಳೆಯರಲ್ಲಿ ಉರಿಯೂತ ಪ್ರೇರಿತ ಸಿಟಿಕೈನ್ ಮಟ್ಟ ಹೆಚ್ಚಿರುತ್ತದೆ. ಈ ಉರಿಯೂತವು ಬಾಯಿಯ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಪಿಸಿಒಎಸ್ ಲಾಲಾರಸ ಗ್ರಂಥಿ ಕಾರ್ಯಾಚರಣೆಗೆ ಅಡ್ಡಿಪಡಿಸುತ್ತದೆ. ಇದು ಬಾಯಿಯನ್ನು ಒಣಗಿಸುತ್ತದೆ. ಬ್ಯಾಕ್ಟೀರಿಯಾ ಬೆಳವಣಿಗೆ ತಡೆಗಟ್ಟುವಲ್ಲಿ ಲಾಲಾರಸ ನಿರ್ಣಾಯಕ ಪಾತ್ರ ವಹಿಸುತ್ತದೆ. ಲಾಲಾರಸದ ರಕ್ಷಣೆ ಇಲ್ಲದೆ ಬಾಯಿಯು ದುರ್ಬಲವಾಗುತ್ತದೆ. ಇದು ಅನೇಕ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ.
ಇದು ಒಸಡಿನ ಆರೋಗ್ಯದ ಜೊತೆ ಇನ್ಸುಲಿನ್ ಪ್ರತಿರೋಧಕವನ್ನು ಹೆಚ್ಚಿಸುತ್ತದೆ. ಈ ಕೋಶಗಳು ಇನ್ಸುಲಿನ್ಗೆ ಸರಿಯಾಗಿ ಕಾರ್ಯ ನಿರ್ವಹಿಸುವುದಿಲ್ಲ. ಬಾಯಿಯಲ್ಲಿನ ಉರಿಯೂತವೂ ದೀರ್ಘಕಾಲ ಮುಂದುವರೆದರೆ ಇದು ದೇಹದ ಇತರೆ ಭಾಗಕ್ಕೆ ಹರಡುತ್ತದೆ. ಪರಿಣಾಮ ಪಿಸಿಒಎಸ್ ನಿಯಂತ್ರಣ ತಪ್ಪುತ್ತದೆ. ಔಷಧಗಳು ಸರಿಯಾಗಿ ಕೆಲಸ ಮಾಡುವುದಿಲ್ಲ. ಇದರಿಂದ ಗರ್ಭಾಶಯದ ಸಿಸ್ಟ್ಗಳು ಆರೋಗ್ಯ ಗಮನದಲ್ಲಿರಿಸಿಕೊಂಡು ಬಾಯಿಯ ಆರೋಗ್ಯವನ್ನು ಕಾಪಾಡುವುದು ಅವಶ್ಯವಾಗಿದೆ. ಈ ಸಂಬಂಧ ದಂತ ವೈದ್ಯಕೀಯ ಚಿಕಿತ್ಸೆಗೆ ಒಳಗಾಗುವುದು ಅವಶ್ಯ ಎಂದು ತಜ್ಞರು ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ಮಗು ಹೊಂದಲು ತೊಡಕಾಗುತ್ತಿದೆಯಾ ಪಿಸಿಒಎಸ್: ತಜ್ಞರು ಹೇಳುವುದೇನು?