ETV Bharat / sukhibhava

ಹೃದಯ ಬಡಿತ ನಿಂತರೂ ಪ್ರಜ್ಞೆ ಜಾಗೃತಿ ಕುರಿತು ಹೀಗೊಂದು ಅಧ್ಯಯನ - ಗಾಮಾ ಕಿರಣಗಳನ್ನು ಸಕ್ರಿಯ

ಮಿದುಳು ಸಾಯುತ್ತಿರುವಾಗ ಅವರಲ್ಲಿ ಗಾಮಾ ಕಿರಣಗಳನ್ನು ಸಕ್ರಿಯಗೊಳಿಸುವ ಮೂಲಕ ಈ ಅಧ್ಯಯನ ನಡೆಸಲಾಗಿದೆ

Study reveals surge of activity linked to consciousness in dying brain

author img

By

Published : May 3, 2023, 5:30 PM IST

ಮಿಚಿಗನ್​: ಸಾವನ್ನು ಗೆದ್ದು ಬಂದ ಕತೆಗಳನ್ನು ನಾವು ಅನೇಕ ಬಾರಿ ಕೇಳುತ್ತೇವೆ. ಉಸಿರಾಟ ನಿಂತ ಬಳಿಕವೂ ವ್ಯಕ್ತಿಗಳು ಎದ್ದು ಕುಳಿತಿರುವ ಘಟನೆಗಳಿವೆ. ಇಂತಹ ಪ್ರಕರಣಗಳಲ್ಲಿ ಬದುಕುಳಿದವರನ್ನು ಮಾತನಾಡಿಸಿದಾಗ ಅವರು ಹೇಳುವುದು, ಬೆಳಕು ಒಂದು ಮೂಡಿತು. ತಮ್ಮ ಪ್ರೀತಿ ಪಾತ್ರರ ಮಾತು ಕೇಳಿದೆವು, ಅವರನ್ನು ಭೇಟಿಯಾದೆವು ಎಂಬುದು. ಅನೇಕ ಬಾರಿ ಅಚ್ಚರಿಗೆ ಕಾರಣವಾಗುವ ಇಂತಹ ಘಟನೆಗಳು ಕುರಿತು ಅಧ್ಯಯನ ನಡೆಸಲಾಗಿದೆ. ಹೃದಯದ ಬಡಿತ ನಿಂತ ಬಳಿಕವೂ ಉಳಿಯುವ ಪ್ರಜ್ಞೆ ಕುರಿತು ತಿಳಿಸಲಾಗಿದೆ. ಈ ಸಂಬಂಧ ನ್ಯಾಷನಲ್​ ಅಕಾಡೆಮಿ ಆಫ್​ ಸೈನ್ಸ್​ನ ಪ್ರೊಸೀಡಿಂಗ್ಸ್​ನಲ್ಲಿ ಪ್ರಕಟವಾಗಿದೆ. ಈ ಅಧ್ಯಯನದಲ್ಲಿ ಸಾಯುತ್ತಿರುವ ಮಿದುಳಿನ ಪ್ರಜ್ಞೆಯನ್ನು ಅಧ್ಯಯನ ನಡೆಸಲಾಗಿದೆ. ಜಿಮೊ ಬೊರಿಜಿಗಿನ್​ ಈ ಅಧ್ಯಯನ ನಡೆಸಿದ್ದಾರೆ.

ಹೇಗೆ ನಡೆಯಿತು ಅಧ್ಯಯನ: ಸಾಯುತ್ತಿರುವ ಪ್ರಾಣಿಗಳು ಮತ್ತು ಮನುಷ್ಯನ ಮಿದುಳಿನಲ್ಲಿ ಆಮ್ಲಜನಕ ಕಳೆದುಕೊಳ್ಳುತ್ತಾನೆ. ಈ ವೇಳೆ, ಅವರಿಗೆ ಗಾಮಾ ಕಿರಣವನ್ನು ಸಕ್ರಿಯಗೊಳಿಸುವ ಮೂಲಕ ಇದನ್ನು ದಾಖಲಿಸಲಾಗಿದೆ. ಮಿದುಳಿನ ನಿಷ್ಕ್ರಿಯೆತೆಗೆ ಒಳಗಾದ ವಿವಿಧ ಅನುಭವಗಳು ಒಳಗಾಗುತ್ತದೆ ಎಂದು ಪರಿಶೀಲನೆ ನಡೆಸಲಾಗಿದೆ. ಈ ಸಂಬಂಧ ಹೃದಯ ಸ್ತಂಭನಕ್ಕೆ ಒಳಗಾಗಿ ಇಸಿಜಿ ಮೇಲ್ವಿಚಾರಣೆಯಲ್ಲಿದ್ದ ಸಾವನ್ನಪ್ಪಿದ ನಾಲ್ವರು ರೋಗಿಗಳನ್ನು ಪತ್ತೆ ಮಾಡಿದರು.

ಇವರು ನಾಲ್ಕು ರೋಗಿಗಳು ಕೋಮಾದಲ್ಲಿದ್ದು, ಯಾವುದೇ ಪ್ರತಿಕ್ರಿಯೆ ನೀಡುತ್ತಿರಲಿಲ್ಲ. ವೈದ್ಯಕೀಯ ಸಹಾಯಕ್ಕೂ ಮೀರಿದ ಸ್ಥಿತಿಯಲ್ಲಿದ್ದ ಇವರನ್ನು ಕುಟುಂಬದ ಸಹಮತದ ಮೇರೆ ಅವರ ಉಸಿರಾಟಕ್ಕೆ ಹಾಕಿದ್ದ ವೆಂಟಿಲೇಟರ್​ ಬೆಂಬಲವನ್ನು ತೆಗೆಯಲಾಯಿತು. ಈ ವೇಳೆ, ಇಬ್ಬರು ರೋಗಿಗಳ ಹೃದಯ ಬಡಿತ ಗಾಮಾ ಕಿರಣಗಳ ಸಕ್ರಿಯತೆಯಿಂದ ಹೆಚ್ಚಿತು. ಅಲ್ಲದೇ ಈ ವೇಳೆ ಮಿದುಳು ಹೆಚ್ಚು ಕ್ರಿಯಾಶೀಲತೆ ಮತ್ತು ಪ್ರಜ್ಞೆಯ ಸಂಬಂಧ ಕುರಿತು ಅಧ್ಯಯನ ನಡೆಸಲಾಗಿದೆ.

ಈ ಕ್ರಿಯೆಯೂ ಮಿದುಳಿನ ಪ್ರಜ್ಞೆಯ ನರ ವಲಯ ಎಂದು ಕರೆಯಲಾಗುವ ಹಾಟ್​ ಜೋನ್​ನಲ್ಲಿ ಪತ್ತೆಯಾಯಿತು. ಇದು ಮಿದುಳಿನ ಹಿಂಬದಿಯ ತಾತ್ಕಲಿಕ, ಭಾಗಶಃ, ಒಸಿಪಿಟಲ್​ ಹಾಳೆಯಾಗಿದೆ. ಇಲ್ಲಿ ಕನಸು ಕಾಣುವುದು, ಪ್ರಜ್ಞೆಯ ಸ್ಥಿತಿಯಲ್ಲಿ ಬದಲಾವಣೆಗಳನ್ನು ಕಾಣಬಹುದಾಗಿದೆ.

ಇಬ್ಬರು ರೋಗಿಗಳಲ್ಲಿ ಹಿಂದಿನ ವರದಿ ರೋಗಗ್ರಸ್ತವಾಗಿದೆ. ಆದರೆ, ಅವರ ಸಾಯುವಿಕೆ ಮುನ್ನ ಒಂದು ಗಂಟೆಯಲ್ಲಿ ಯಾವುದೇ ರೋಗಗ್ರಸ್ತತೆ ಕಂಡು ಬಂದಿಲ್ಲ ಎಂದು ನರ ವಿಜ್ಞಾನ ವಿಭಾಗದ ಅಸೋಸಿಯೇಟ್​ ಪ್ರೊಫೆಸರ್​ ನುಶಾ ಮಿಹಯಲೊವ್​ ತಿಳಿಸಿದ್ದಾರೆ. ಇನ್ನು ಉಳಿದ ಇಬ್ಬರು ರೋಗಿಗಳು ತಮ್ಮ ಜೀವದ ಬೆಂಬಲವನ್ನು ತೆಗೆದು ಹಾಕಿದಾಗ ಯಾವುದೇ ಲಕ್ಷಣಗಳನ್ನು ತೋರಿಸಲಿಲ್ಲ. ಅವರ ಹೃದಯ ಬಡಿತ ಮತ್ತು ಮಿದುಳಿನ ಚಟುವಟಿಕೆ ಹೆಚ್ಚಳವಾಗಲಿಲ್ಲ ಎಂದಿದ್ದಾರೆ.

ಸಣ್ಣ ಮಾದರಿ ಗಾತ್ರದ ಪರೀಕ್ಷೆ ಹಿನ್ನೆಲೆ ಈ ಫಲಿತಾಂಶ ಸಂಬಂಧ ಯಾವುದೇ ಜಾಗತಿಕ ಹೇಳಿಕೆ ನೀಡದಂತೆ ಲೇಖಕರು ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ, ಈ ಅಧ್ಯಯನ ರೋಗಿಗಳು ಉಳಿಯಲು ಸಾಧ್ಯವಾಗದೇ ಇರುವುದಕ್ಕೆ ಕಾರಣ ಮತ್ತು ರೋಗಿಗಳ ಅನುಭವ ತಿಳಿಯುವುದು ಅಸಾಧ್ಯವಾಗಿದೆ. ಅಲ್ಲದೇ ನರ ಚಿಹ್ನೆಗಳ ಪರಸ್ಪರ ಸಂಬಂಧಗಳನ್ನು ತಿಳಿಯಲು ಸಾಧ್ಯವಾಗಿಲ್ಲ. ಆದರೆ, ಸಾಯುವ ವ್ಯಕ್ತಿಯ ರಹಸ್ಯಪ್ರಜ್ಞೆಯ ಬಗ್ಗೆ ತಿಳಿಯಲು ಇದು ಹೊಸ ಚೌಕಟ್ಟನ್ನು ನೀಡುತ್ತದೆ ಎಂದು ಅಧ್ಯಯನ ತಿಳಿಸಿದೆ ಎಂದಿದ್ದಾರೆ.

ಇದನ್ನೂ ಓದಿ: 150 ದಿನ ವೆಂಟಿಲೇಟರ್​ನಲ್ಲಿದ್ದು, ಅಪರೂಪದ ನ್ಯುಮೋನಿಯ ವಿರುದ್ಧ ಹೋರಾಡಿ ಗೆದ್ದ ಪುಟ್ಟ ಪೋರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.