ETV Bharat / sukhibhava

ವಿದ್ಯಾರ್ಥಿಗಳ ಶೈಕ್ಷಣಿಕ ಕ್ಷಮತೆ ಕುಂದುತ್ತಿದೆಯೇ? ಕಾರಣ ಇಲ್ಲಿದೆ, ಪರಿಹಾರ ಹೀಗಿದೆ..

ಪಾಶ್ಚಾತ್ಯ ಅಧ್ಯಯನವೊಂದು ವಿದ್ಯಾರ್ಥಿಗಳ ಶೈಕ್ಷಣಿಕ ಕಾರ್ಯಕ್ಷಮತೆ ಕುಂಠಿತಗೊಳ್ಳುವುಕ್ಕೆ ಕಾರಣವೇನು ಎಂಬುದನ್ನು ಕಂಡುಹಿಡಿದಿದೆ.

A study found the reason behind students low academic performance
ವಿದ್ಯಾರ್ಥಿಗಳ ಶೈಕ್ಷಣಿಕ ಯಶಸ್ಸಿನ ಗುಟ್ಟು ರಾತ್ರಿ ನಿದ್ದೆ
author img

By

Published : Feb 21, 2023, 7:30 PM IST

ಶೈಕ್ಷಣಿಕ ಕಾರ್ಯಕ್ಷಮತೆಯ ಮೇಲೆ ವಿದ್ಯಾರ್ಥಿಗಳು ಮಾಡುವ ರಾತ್ರಿಯ ನಿದ್ದೆ ಪರಿಣಾಮ ಬೀರುತ್ತದೆ ಎಂಬುದನ್ನು ಕಾರ್ನೆಗೀ ಮೆಲಾನ್ ವಿಶ್ವವಿದ್ಯಾಲಯದ ಹೊಸ ಅಧ್ಯಯನ ಪತ್ತೆ ಹಚ್ಚಿದೆ. ಯುವ ವಯಸ್ಕರಿಗೆ ಕಾಲೇಜು ಶಿಕ್ಷಣ ಬದುಕಿನ ಪರಿವರ್ತನೆಯ ಮಹತ್ವದ ಘಟ್ಟ. ತಮ್ಮ ಅಮೂಲ್ಯ ಸಮಯವನ್ನು ಹೇಗೆ ಕಳೆಯಬೇಕು ಎಂಬುದನ್ನು ನಿರ್ಧರಿಸುವ ಸ್ವಾತಂತ್ರ್ಯವನ್ನು ಮೊದಲ ಬಾರಿಗೆ ವಿದ್ಯಾರ್ಥಿಗಳು ಬಹುಶ: ಈ ಸಮಯದಲ್ಲೇ ಅನುಭವಿಸುತ್ತಾರೇನೋ. ಈ ಸ್ವಾತಂತ್ರ್ಯ ಸ್ಪರ್ಧಾತ್ಮಕ ಆಸಕ್ತಿಯಿಂದ ಹುಟ್ಟಿಕೊಳ್ಳುತ್ತದೆ. ಆದರೆ ಸ್ಪರ್ಧಾತ್ಮಕ ಆಸಕ್ತಿ ವಿದ್ಯಾರ್ಥಿಗಳ ಶೈಕ್ಷಣಿಕ, ಸಾಮಾಜಿಕ ಸನ್ನಿವೇಶಗಳು ಮಾತ್ರವಲ್ಲ, ನಿದ್ದೆಯಿಂದಲೂ ಜಾಗೃತಗೊಳ್ಳುತ್ತದೆ.

ಬಹು-ಸಾಂಸ್ಥಿಕ ಸಂಶೋಧಕರ ತಂಡವು ಸೆಮಿಸ್ಟರ್‌ನಲ್ಲಿ ರಾತ್ರಿಯ ನಿದ್ರೆಯ ಅವಧಿಯು ಮೊದಲ ವರ್ಷದ ಕಾಲೇಜು ವಿದ್ಯಾರ್ಥಿಗಳ ಅಂತ್ಯದ ಸೆಮಿಸ್ಟರ್ ಗ್ರೇಡ್ ಪಾಯಿಂಟ್ ಸರಾಸರಿ (GPA) ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಮೌಲ್ಯಮಾಪನ ಮಾಡಲು ಮೊದಲ ಅಧ್ಯಯನ ನಡೆಸಿತು. ಫಿಟ್‌ಬಿಟ್ ಸ್ಲೀಪ್ ಟ್ರ್ಯಾಕರ್‌ಗಳನ್ನು ಬಳಸಿಕೊಂಡು, ವಿದ್ಯಾರ್ಥಿಗಳು ಪ್ರತಿ ರಾತ್ರಿ ಸರಾಸರಿ 6.5 ಗಂಟೆಗಳ ಕಾಲ ನಿದ್ರಿಸುತ್ತಾರೆ ಎಂಬುದನ್ನು ಸಂಶೋಧಕರು ಕಂಡುಕೊಂಡರು. ಆದರೆ ವಿದ್ಯಾರ್ಥಿಗಳು ಆರು ಗಂಟೆಗಳಿಗಿಂತ ಕಡಿಮೆ ನಿದ್ರೆ ಮಾಡಿದಾಗ ಅದರಿಂದ ನಕಾರಾತ್ಮಕ ಫಲಿತಾಂಶಗಳು ಸಂಗ್ರಹಗೊಳ್ಳುತ್ತದೆ ಎಂಬುದನ್ನು ಸಂಶೋಧಕರು ಕಂಡುಕೊಂಡಿದ್ದಾರೆ. ಈ ಸಂಶೋಧನೆಯ ಫಲಿತಾಂಶಗಳು ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್‌ನ ಪ್ರೊಸೀಡಿಂಗ್ಸ್‌ನಲ್ಲಿ ಲಭ್ಯವಿದೆ.

ಈ ಹಿಂದಿನ ಅಧ್ಯಯನಗಳು ನಮ್ಮ ವ್ಯಾಪಕ ಶ್ರೇಣಿಯ ಆರೋಗ್ಯ ಮತ್ತು ಕಾರ್ಯಕ್ಷಮತೆ ಶ್ರೇಣಿಗೆ ನಮ್ಮ ಒಟ್ಟು ನಿದ್ದೆ ಪ್ರಮುಖ ಕಾರಣ ಎಂಬುದನ್ನು ಹೈಲೈಟ್​ ಮಾಡಿದ್ದವು. ನಿದ್ರೆಯ ಮಾರ್ಗಸೂಚಿಗಳು ಹದಿಹರೆಯದವರು ಪ್ರತಿ ರಾತ್ರಿ ಕನಿಷ್ಠ ಎಂಟರಿಂದ 10 ಗಂಟೆಗಳ ನಿದ್ದೆಯನ್ನು ಪಡೆಯಬೇಕೆಂದು ಶಿಫಾರಸು ಮಾಡುತ್ತವೆ. ಕಾಲೇಜು ವಿದ್ಯಾರ್ಥಿಗಳು ಅನಿಯಮಿತ ಮತ್ತು ನಿದ್ರೆ ಕೊರತೆಯನ್ನು ಅನುಭವಿಸುತ್ತಾರೆ.

ಡೇಟ್ರಿಚ್ ಕಾಲೇಜ್ ಆಫ್ ಹ್ಯುಮಾನಿಟೀಸ್ ಆ್ಯಂಡ್​ ಸೋಶಿಯಲ್ ಸೈನ್ಸಸ್‌ನಲ್ಲಿ ಸೈಕಾಲಜಿ ಮತ್ತು ನ್ಯೂರೋಸೈನ್ಸ್‌ನಲ್ಲಿ ಪ್ರೊಫೆಸರ್ ಆಗಿರುವ ಡೇವಿಡ್ ಕ್ರೆಸ್ವೆಲ್, ರಾತ್ರಿಯ ನಿದ್ರೆ ಮತ್ತು ಜಿಪಿಎ ನಡುವಿನ ಸಂಬಂಧವನ್ನು ಮೌಲ್ಯಮಾಪನ ಮಾಡಿದ ಸಂಶೋಧಕರ ತಂಡದ ಮುಂದಾಳತ್ವವನ್ನು ವಹಿಸಿದ್ದರು. "ಕಲಿಕೆ ಮತ್ತು ನೆನಪಿನ ಶಕ್ತಿಗೆ ನಿದ್ರೆ ಎಷ್ಟು ನಿರ್ಣಾಯಕವಾಗಿದೆ ಎಂಬುದನ್ನು ಪ್ರಾಣಿಗಳ ಅಧ್ಯಯನಗಳು ತೋರಿಸಿವೆ. ಇದು ಮನುಷ್ಯರಿಗೆ ಹೇಗೆ ಅನ್ವಯಿಸುತ್ತದೆ ಎಂಬುದನ್ನು ನಾವು ಇಲ್ಲಿ ತೋರಿಸುತ್ತೇವೆ. ಮೊದಲ ವರ್ಷದ ಕಾಲೇಜು ವಿದ್ಯಾರ್ಥಿಯು ಶಾಲಾ ಅವಧಿಯ ಆರಂಭದಲ್ಲಿ ಮಾಡುವ ಕಡಿಮೆ ಅವಧಿಯ ರಾತ್ರಿಯ ನಿದ್ರೆ ಸೆಮಿಸ್ಟರ್​ ಕೊನೆಯಲ್ಲಿ ಕಡಿಮೆ GPA ಬರಲು ಕಾರಣವಾಗುತ್ತದೆ. ನಿದ್ರೆಯ ಕೊರತೆಕಾಲೇಜು ತರಗತಿಗಳಲ್ಲಿ ಕಲಿಯುವ ವಿದ್ಯಾರ್ಥಿಗಳ ಸಾಮರ್ಥ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು" ಎಂದು ಕ್ರೆಸ್ವೆಲ್ ಹೇಳುತ್ತಾರೆ.

ಪ್ರಾಣಿಗಳೊಂದಿಗೆ ನಡೆಸಿದ ಈ ಹಿಂದಿ ಅಧ್ಯಯನಗಳು, ಹಗಲಿನಲ್ಲಿ ರೂಪುಗೊಂಡ ನೆನಪುಗಳು ನಿದ್ರೆಯ ಸಮಯದಲ್ಲಿ ಏಕೀಕರಿಸಲ್ಪಟ್ಟಿದೆ ಎಂಬುದನ್ನು ದೃಢಪಡಿಸಿವೆ. ಯಾವಾಗ ಸಾಮಾನ್ಯ ನಿದ್ರೆಯ ಪ್ಯಾಟರ್ನ್​ ತಪ್ಪಿಹೋಗುತ್ತದೋ, ಆಗ ನಾವು ದಿನದಲ್ಲಿ ಕಲಿತ ಎಲ್ಲಾ ವಿಷಯಗಳು ಮರೆತುಹೋಗುವ ಸಾಧ್ಯತೆಗಳು ಹೆಚ್ಚು. ಈ ತರ್ಕವನ್ನು ವಿದ್ಯಾರ್ಥಿಗಳಿಗೆ ವಿಸ್ತರಿಸಿದಾಗ, ನಿದ್ದೆಗೆ ಅಡ್ಡಿಪಡಿಸಿದರೆ ಅಥವಾ ಅಸಮರ್ಪಕ ನಿದ್ರೆಯು ಶೈಕ್ಷಣಿಕ ಕಲಿಕೆಯನ್ನು ಕುಂಠಿತಗೊಳಿಸಬಹುದೇ ಮತ್ತು ಇದು ಶೈಕ್ಷಣಿಕ ಸಾಧನೆ ಮೇಲೆ ಪರಿಣಾಮ ಬೀರುತ್ತದೆಯೇ ಎಂಬ ಬಗ್ಗೆ ಸಂಶೋಧಕರಿಗೆ ಕುತೂಹಲವಿತ್ತು. ಮೂರು ವಿವಿಧ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮಾಡುತ್ತಿರುವ 600 ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಅಧ್ಯಯನದಲ್ಲಿ ಮೌಲ್ಯಮಾಪನ ಮಾಡಲಾಗಿದೆ.

"ಆರು ಗಂಟೆಗಳಿಗಿಂತ ಕಡಿಮೆ ನಿದ್ರೆ ಮಾಡುವ ವಿದ್ಯಾರ್ಥಿಗಳು ಶೈಕ್ಷಣಿಕ ಕಾರ್ಯಕ್ಷಮತೆಯಲ್ಲಿ ಗಮನಾರ್ಹ ಕುಸಿತ ಅನುಭವಿಸುತ್ತಾರೆ. ಅದಲ್ಲದೆ ನಿದ್ರೆಯ ಪ್ರತಿ ಗಂಟೆಯ ನಷ್ಟವು ಅವಧಿಯ ಅಂತ್ಯದ GPA ನಲ್ಲಿ 0.07 ಇಳಿಕೆಗೆ ಅನುರೂಪವಾಗಿದೆ ಎಂಬುದನ್ನು ಸಂಶೋಧಕರು ಕಂಡುಕೊಂಡಿದ್ದಾರೆ. ಒಮ್ಮೆ ನೀವು ಆರು ಗಂಟೆಗಳಿಗಿಂತ ಕಡಿಮೆ ನಿದ್ದೆ ಮಾಡಲು ಪ್ರಾರಂಭಿಸಿದ ನಂತರ, ವಿದ್ಯಾರ್ಥಿಯ ಆರೋಗ್ಯ ಮತ್ತು ಅಧ್ಯಯನದ ಅಭ್ಯಾಸವನ್ನು ದುರ್ಬಲಗೊಳಿಸುವಂತಹ ಬೃಹತ್ ನಿದ್ರೆಯ ಸಾಲವನ್ನು ಸಂಗ್ರಹಿಸಲು ಪ್ರಾರಂಭಿಸುತ್ತಿದ್ದೀರಿ, ಇಡೀ ವ್ಯವಸ್ಥೆಯನ್ನು ರಾಜಿ ಮಾಡಿಕೊಂಡಂತೆ" ಎಂದು ಕ್ರೆಸ್ವೆಲ್ ಹೇಳುತ್ತಾರೆ.

ಹಿಂದಿನ ಶೈಕ್ಷಣಿಕ ಕಾರ್ಯಕ್ಷಮತೆ, ಹಗಲಿನ ನಿದ್ದೆ, ಜನಾಂಗ, ಲಿಂಗ ಮತ್ತು ಮೊದಲ ತಲೆಮಾರಿನ ಸ್ಥಿತಿಗಾಗಿ ಅಧ್ಯಯನವನ್ನು ನಿಯಂತ್ರಿಸಲಾಗಿದೆ. ಹಲವಾರು ಇತರ ಅಧ್ಯಯನಗಳು ಒಟ್ಟು ಶೈಕ್ಷಣಿಕ ಕೋರ್ಸ್ ಲೋಡ್ ಅನ್ನು ನಿಯಂತ್ರಿಸುತ್ತವೆ. ಈ ಅಂಶಗಳಲ್ಲಿ ಯಾವುದೂ GPA ಮೇಲೆ ರಾತ್ರಿ ನಿದ್ರೆಯ ಒಟ್ಟಾರೆ ಪ್ರಭಾವದ ಮೇಲೆ ಪರಿಣಾಮ ಬೀರಲಿಲ್ಲ. "ಕಾಲೇಜು ವಿದ್ಯಾರ್ಥಿಗಳಲ್ಲಿ ಜನಪ್ರಿಯ ನಂಬಿಕೆಯೆಂದರೆ ಹೆಚ್ಚು ಅಧ್ಯಯನ ಮಾಡುವುದು ಅಥವಾ ರಾತ್ರಿಯ ನಿದ್ರೆಯಲ್ಲಿ ಹೆಚ್ಚು ಪಾರ್ಟಿ ಮಾಡುವುದು. ಕಾಲೇಜಿನಲ್ಲಿ ಕಲಿಯುವ ಮತ್ತು ಸಾಧಿಸುವ ನಿಮ್ಮ ಸಾಮರ್ಥ್ಯದ ಮೇಲೆ ನಿಮ್ಮ ಕಡಿಮೆ ರಾತ್ರಿಯ ನಿದ್ರೆ ನಿಜವಾದ ಪರಿಣಾಮ ಬೀರುತ್ತದೆ. ರಾತ್ರಿಯ ನಿದ್ದೆಯನ್ನು ಸರಿದೂಗಿಸುವುದರಿಂದ ನಿಮ್ಮ ಶೈಕ್ಷಣಿಕ ಅಭಿವೃದ್ಧಿ ಸಾಧ್ಯ" ಎಂದು ಕ್ರೆಸ್ವೆಲ್ ಹೇಳುತ್ತಾರೆ.

ಇದನ್ನೂ ಓದಿ: ಕಷ್ಟಕರ ಸಮಸ್ಯೆ ನಿರ್ವಹಣೆಗೆ ವಯಸ್ಕರಷ್ಟೇ ಬುದ್ಧಿ ಸಾಮರ್ಥ್ಯವನ್ನು ಮಕ್ಕಳು ಉಪಯೋಗಿಸುತ್ತಾರೆ; ಅಧ್ಯಯನದಲ್ಲಿ ಬಹಿರಂಗ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.