ನವದೆಹಲಿ: ತಾಯಿಯ ಮಧುಮೇಹ, ಇನ್ಸುಲಿನ್ ಮತ್ತು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಿದರೂ ಸಹ ಭ್ರೂಣಕ್ಕೆ ಶಾಶ್ವತ ಹಾನಿ ಉಂಟುಮಾಡಬಹುದು ಎಂದು ಅಧ್ಯಯನವೊಂದು ತಿಳಿಸಿದೆ.
ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾದಾಗ ಮಧುಮೇಹ ರೋಗ ಬರುತ್ತದೆ. ಈ ಮಧುಮೇಹವು ತಾಯಂದಿರಿಗೆ ಗರ್ಭಪಾತ ಅಥವಾ ಜನಿಸಿದ ಶಿಶುಗಳಲ್ಲಿ ಜನ್ಮ ದೋಷಗಳಿಗೆ ಕಾರಣವಾಗುತ್ತದೆ. ಮಧುಮೇಹ ಹೊಂದಿರುವ ತಾಯಂದಿರಿಂದ ವರ್ಷಕ್ಕೆ ಸುಮಾರು 3 ಲಕ್ಷದಿಂದ ದಿಂದ 4 ಲಕ್ಷ ಭ್ರೂಣಗಳು ನ್ಯೂರಲ್ ಟ್ಯೂಬ್ ಡಿಫೆಕ್ಟ್ಗಳನ್ನು ಅನುಭವಿಸುತ್ತವೆ.
ಅಂತಿಮವಾಗಿ ಮೆದುಳು ಮತ್ತು ಬೆನ್ನುಹುರಿಯನ್ನು ರೂಪಿಸುವ ಅಂಗಾಂಶವು ಸರಿಯಾಗಿ ರೂಪುಗೊಳ್ಳಲು ವಿಫಲವಾದಾಗ - ಇದು ಗರ್ಭಪಾತ ಅಥವಾ ಗಂಭೀರವಾದ ಅಂಗವೈಕಲ್ಯಕ್ಕೆ ಕಾರಣವಾಗಬಹುದು ಎಂದು ಅಧ್ಯಯನ ಹೇಳಿದೆ.
ಮಧುಮೇಹವು ಸಾಮಾನ್ಯವಾಗಿ ಹಿಂದಿನ ತಲೆಮಾರಿನ ಜನರಿಗೆ ಸಂಬಂಧಿಸಿದ ಕಾಯಿಲೆಯಾಗಿದ್ದರೂ, ಆಧುನಿಕ ಯುಗದ ಜನರಲ್ಲಿ ಮಧುಮೇಹ ಸಾಂಕ್ರಾಮಿಕವು ಹೆಚ್ಚಾಗಿ ಸ್ಥೂಲಕಾಯದವರಲ್ಲಿ ಕಂಡು ಬರುತ್ತಿದೆ. ಶುಗರ್ ಇರುವ ತಾಯಂದಿರು ಸಾಮಾನ್ಯ ಜನಸಂಖ್ಯೆಗೆ ಹೋಲಿಸಿದರೆ ಜನನ ದೋಷದ ಪ್ರಮಾಣಕ್ಕಿಂತ ಐದು ಪಟ್ಟು ಹೆಚ್ಚು ಮಕ್ಕಳನ್ನು ಹೊಂದಿರುತ್ತಾರೆ ಮತ್ತು ಮಧುಮೇಹವು ನಿರಂತರವಾಗಿ ಹೆಚ್ಚುತ್ತಿದೆ.
ಇದನ್ನೂ ಓದಿ:ಅಸ್ತಮಾ ರಾತ್ರಿಯಲ್ಲಿಯೇ ಉಲ್ಬಣವಾಗುವುದು ಏಕೆ? ಹೀಗಂತಾರೇ ತಜ್ಞರು..