ವಾಷಿಂಗ್ಟನ್ ಡಿಸಿ(ಯುಎಸ್): ಕೇಸ್ ವೆಸ್ಟರ್ನ್ ರಿಸರ್ವ್ ಯೂನಿವರ್ಸಿಟಿ ಸಂಶೋಧಕರು ನಡೆಸಿದ ಅಧ್ಯಯನದ ಪ್ರಕಾರ, ಟೈಪ್ 2 ಮಧುಮೇಹಕ್ಕೆ ಚಿಕಿತ್ಸೆ ನೀಡಲು ಬಳಸಲಾಗುವ ಔಷಧಿಯು 'ಕೊಲೊರೆಕ್ಟಲ್ ಕ್ಯಾನ್ಸರ್' (CRC) ಅಪಾಯ ಕಡಿಮೆ ಮಾಡುತ್ತದೆ ಎಂಬ ಅಂಶ ತಿಳಿದುಬಂದಿದೆ.
JAMA ಆಂಕೊಲಾಜಿ ಜರ್ನಲ್‌ನಲ್ಲಿ ಪ್ರಕಟವಾದ ಸಂಶೋಧನೆಗಳು, ಈ ಔಷಧಿಗಳು ಅತ್ಯಂತ ಮಾರಕ ರೀತಿಯ ಕ್ಯಾನ್ಸರ್ ತಡೆಯಲು ಸಹಾಯ ಮಾಡುತ್ತವೆಯೇ? ಎಂಬುದನ್ನು ಮೌಲ್ಯಮಾಪನ ಮಾಡಲು ಕ್ಲಿನಿಕಲ್ ಪ್ರಯೋಗಗಳ ಅಗತ್ಯವನ್ನು ಒತ್ತಿ ಹೇಳುತ್ತವೆ. ಅಂತಿಮವಾಗಿ, ಬೊಜ್ಜು ಮತ್ತು ಮಧುಮೇಹಕ್ಕೆ ಸಂಬಂಧಿಸಿದ ಹೆಚ್ಚುವರಿ ಕ್ಯಾನ್ಸರ್ ತಡೆಗಟ್ಟುವಲ್ಲಿ ಈ ಔಷಧಗಳು ಭರವಸೆಯಾಗಿವೆ ಎಂಬುದನ್ನು ಅಧ್ಯಯನ ತಿಳಿಸಿದೆ.
"CRCಯ ಬೆಳವಣಿಗೆಯನ್ನು ತಡೆಗಟ್ಟುವಲ್ಲಿ GLP-1 RAಗಳು ಜನಪ್ರಿಯ ಮಧುಮೇಹ-ವಿರೋಧಿ ಔಷಧಿಗಳಾದ ಮೆಟ್‌ಫಾರ್ಮಿನ್ ಅಥವಾ ಇನ್ಸುಲಿನ್‌ಗಿಂತ ಗಮನಾರ್ಹವಾಗಿ ಹೆಚ್ಚು ಪರಿಣಾಮಕಾರಿ ಎಂದು ನಮ್ಮ ಫಲಿತಾಂಶಗಳು ಸ್ಪಷ್ಟವಾಗಿ ತೋರಿಸುತ್ತವೆ" ಎಂದು ವೆಸ್ಟರ್ನ್ ರಿಸರ್ವ್ ಸ್ಕೂಲ್ ಆಫ್ ಮೆಡಿಸಿನ್ ಮತ್ತು ಅಧ್ಯಯನದ ಸಹ-ಮುಖ್ಯ ಸಂಶೋಧಕ, ಪ್ರಾಯೋಗಿಕ ಔಷಧದ ಹಾನ್ನಾ-ಪೇನ್ ಪ್ರಾಧ್ಯಾಪಕ ನಾಥನ್ ಬರ್ಗರ್ ಹೇಳಿದರು.
ಗ್ಲುಕಗನ್ ತರಹದ ಪೆಪ್ಟೈಡ್-1 ರಿಸೆಪ್ಟರ್ ಅಗೊನಿಸ್ಟ್‌ಗಳು ಅಥವಾ GLP-1 RAಗಳು ಟೈಪ್ 2 ಮಧುಮೇಹಕ್ಕೆ ಚಿಕಿತ್ಸೆ ನೀಡುವ ಔಷಧಿಗಳಾಗಿವೆ. ಸಾಮಾನ್ಯವಾಗಿ ಚುಚ್ಚುಮದ್ದಿನ ಮೂಲಕ ಚಿಕಿತ್ಸೆ ನೀಡಲಾಗುತ್ತದೆ. ಅವು ರಕ್ತದ-ಸಕ್ಕರೆ ಮಟ್ಟವನ್ನು ಕಡಿಮೆ ಮಾಡಬಹುದು. ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸಬಹುದು ಮತ್ತು ತೂಕವನ್ನು ನಿರ್ವಹಿಸಲು ಸಹಾಯ ಮಾಡಬಹುದು. ಅವು ಪ್ರಮುಖ ಹೃದಯರಕ್ತನಾಳದ ಕಾಯಿಲೆಗಳ ದರ ಕಡಿಮೆ ಮಾಡಲು ಸಹ ಸಹಾಯಕವಾಗಿವೆ ಎಂದು ತಿಳಿಸಿದ್ದಾರೆ.
ಮುಖ್ಯವಾಗಿ, GLP-1 RAಗಳ ರಕ್ಷಣಾತ್ಮಕ ಪರಿಣಾಮವನ್ನು ಅಧಿಕ ತೂಕ/ಬೊಜ್ಜು ಹೊಂದಿರುವ ಅಥವಾ ಇಲ್ಲದ ರೋಗಿಗಳಲ್ಲಿ ಗುರುತಿಸಲಾಗಿದೆ. "ಈ ಜನಪ್ರಿಯ ತೂಕನಷ್ಟ ಮತ್ತು ಮಧುಮೇಹ-ವಿರೋಧಿ ವರ್ಗದ ಔಷಧಗಳು ಇತರ ಔಷಧಿಗಳಿಗೆ ಹೋಲಿಸಿದರೆ CRCಯ ಸಂಭವವನ್ನು ಕಡಿಮೆ ಮಾಡುತ್ತದೆ ಎಂದು ಸ್ಕೂಲ್ ಆಫ್ ಮೆಡಿಸಿನ್‌ನ ಪ್ರಾಧ್ಯಾಪಕರಾದ ಸಹ-ಮುಖ್ಯ ಸಂಶೋಧಕ ರೊಂಗ್ ಕ್ಸು ಹೇಳಿದ್ದಾರೆ.
CRC ಹೆಚ್ಚಳಕ್ಕೆ ಕಾರಣವಾಗುವ ಅಂಶಗಳು: ಬರ್ಗರ್ ಮತ್ತು ಕ್ಸು ಕೇಸ್ ಕಾಂಪ್ರೆಹೆನ್ಸಿವ್ ಕ್ಯಾನ್ಸರ್ ಸೆಂಟರ್‌ನ ಸದಸ್ಯರಾಗಿದ್ದಾರೆ. ಅಧಿಕ ತೂಕ ಅಥವಾ ಬೊಜ್ಜು ಅಥವಾ ಮಧುಮೇಹವನ್ನು ಹೊಂದಿರುವುದು CRC ಯ ಹೆಚ್ಚಳಕ್ಕೆ ಮತ್ತು ಕಾಯಿಲೆಯನ್ನು ಇನ್ನಷ್ಟು ಹದಗೆಡಿಸುವ ಅಪಾಯಕಾರಿ ಅಂಶಗಳಾಗಿವೆ. ರಾಷ್ಟ್ರೀಯ ಆರೋಗ್ಯ ಸಂಸ್ಥೆ (NIH) ದೇಹದಲ್ಲಿನ ಕೊಬ್ಬಿನ ಕೋಶಗಳ ಗಾತ್ರ ಮತ್ತು ಪ್ರಮಾಣದಲ್ಲಿ ನಿರ್ದಿಷ್ಟ ಮಟ್ಟಕ್ಕಿಂತ ಹೆಚ್ಚಳವಾಗುವುದನ್ನು ಅಧಿಕ ತೂಕ ಮತ್ತು ಬೊಜ್ಜು ಹೆಚ್ಚಳ ಎಂದು ವ್ಯಾಖ್ಯಾನಿಸುತ್ತದೆ. ಆಹಾರ, ನಿದ್ರೆ ಅಥವಾ ದೈಹಿಕ ಚಟುವಟಿಕೆಯ ಕೊರತೆ, ಅನುವಂಶೀಯತೆಯು ಈ ಸ್ಥಿತಿಗೆ ಕಾರಣವಾದ ಪ್ರಮುಖ ಅಂಶಗಳು ಎಂಬುದನ್ನು ತಿಳಿಸಿದೆ.
ಹೆಲ್ತ್‌ಕೇರ್ ಪೂರೈಕೆದಾರರು ಎತ್ತರ ಮತ್ತು ತೂಕದ ಆಧಾರದ ಮೇಲೆ ದೇಹದ ಕೊಬ್ಬನ್ನು ಅಳೆಯಲು ಬಾಡಿ ಮಾಸ್ ಇಂಡೆಕ್ಸ್ ಅನ್ನು ಬಳಸುತ್ತಾರೆ. NIH ಪ್ರಕಾರ, ಯುನೈಟೆಡ್ ಸ್ಟೇಟ್ಸ್‌ನಲ್ಲಿ 20 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ವಯಸ್ಕರಲ್ಲಿ ಸುಮಾರು 75% ಜನರು ಅಧಿಕ ತೂಕ ಅಥವಾ ಬೊಜ್ಜು ಹೊಂದಿದ್ದಾರೆ ಮತ್ತು 2 ರಿಂದ 19 ವರ್ಷ ವಯಸ್ಸಿನ ಸುಮಾರು 20% ಮಕ್ಕಳು ಮತ್ತು ಹದಿಹರೆಯದವರು ಸ್ಥೂಲಕಾಯತೆಯನ್ನು ಹೊಂದಿದ್ದಾರೆ.
ಸ್ಥೂಲಕಾಯತೆಯು ದೀರ್ಘಕಾಲದ ಆರೋಗ್ಯ ಸ್ಥಿತಿಯಾಗಿದ್ದು, ಅದು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ. ಇದು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಸಾವಿಗೆ ಪ್ರಮುಖ ಕಾರಣವಾಗಿದೆ ಮತ್ತು ಟೈಪ್ 2 ಮಧುಮೇಹ ಮತ್ತು ಕ್ಯಾನ್ಸರ್ ಸೇರಿದಂತೆ ಅನೇಕ ಇತರ ಆರೋಗ್ಯ ಸಮಸ್ಯೆಗಳಿಗೆ ಇದು ನೇರವಾಗಿ ಸಂಬಂಧಿಸಿದೆ ಎಂಬುದು ತಿಳಿದುಬಂದಿದೆ. ಅಮೆರಿಕನ್ ಕ್ಯಾನ್ಸರ್ ಸೊಸೈಟಿಯ ಪ್ರಕಾರ, ವರ್ಷಕ್ಕೆ 153,000 ಹೊಸ ಪ್ರಕರಣಗಳು ದಾಖಲಾಗುತ್ತಿವೆ. ವರ್ಷಕ್ಕೆ 52,550 ಸಾವುಗಳೊಂದಿಗೆ ಕ್ಯಾನ್ಸರ್ ಮರಣಕ್ಕೆ ಎರಡನೇ ಪ್ರಮುಖ ಕಾರಣವಾಗಿದೆ ಎಂಬುದು ತಿಳಿದುಬಂದಿದೆ.
ಮಧುಮೇಹ ಔಷಧ ಪಡೆದವರಲ್ಲಿ CRC 44% ಕಡಿತ: ಮಧುಮೇಹ ಹೊಂದಿರುವ 22,572 ರೋಗಿಗಳಲ್ಲಿ ಇನ್ಸುಲಿನ್‌ನೊಂದಿಗೆ ಚಿಕಿತ್ಸೆ ಪಡೆದವರಲ್ಲಿ 167 ಸಿಆರ್‌ಸಿ ಪ್ರಕರಣಗಳಿವೆ. GLP-1 RA ಗಳೊಂದಿಗೆ ಚಿಕಿತ್ಸೆ ಪಡೆದ 22,572 ಹೊಂದಾಣಿಕೆಯ ರೋಗಿಗಳಲ್ಲಿ CRC ಯ 94 ಪ್ರಕರಣ ಕಂಡುಬಂದಿದೆ. GLP-1 RA ಗಳೊಂದಿಗೆ ಚಿಕಿತ್ಸೆ ಪಡೆದವರು CRCಯಲ್ಲಿ 44% ಕಡಿತವನ್ನು ಹೊಂದಿದ್ದರು ಎಂಬುದು ತಿಳಿದುಬಂದಿದೆ.
ಇದನ್ನೂ ಓದಿ: ಆತ್ಮಹತ್ಯೆ ಆಲೋಚನೆಯನ್ನು ರಕ್ತದ ಬಯೋಮಾರ್ಕರ್ ಗುರುತಿಸುತ್ತದೆ: ಅಧ್ಯಯನ