ETV Bharat / sukhibhava

ದೆಹಲಿ ವಾಯುಗುಣಮಟ್ಟ ಕಳಪೆ: ಕೃಷಿ ತ್ಯಾಜ್ಯ ಸುಡುವಿಕೆ ಮಾತ್ರ ಕಾರಣವಲ್ಲ- ಸಿಎಸ್​ಇ ವರದಿ

author img

By ETV Bharat Karnataka Team

Published : Nov 8, 2023, 11:03 AM IST

ನವದೆಹಲಿಯ ವಾಯು ಗುಣಮಟ್ಟ ಕಳಪೆಯಾಗಲು ನೆರೆ ರಾಜ್ಯದಲ್ಲಿ ಕೃಷಿ ತ್ಯಾಜ್ಯ ಸುಡುವಿಕೆ ಮಾತ್ರ ಕಾರಣವಲ್ಲ ಎಂದು ಸಿಎಸ್​ಇ ವರದಿ ತಿಳಿಸಿದೆ.

Stubble burning not only reason for delhi air pollution

ನವದೆಹಲಿ: ಚಳಿಗಾಲದ ಆರಂಭದಲ್ಲೇ (ನವೆಂಬರ್​ 2ರಂದು) ದೆಹಲಿ ಮಾಲಿನ್ಯ ಮಟ್ಟವು ಪಿಎಂ2.5 ಸಾಂದ್ರತೆ ತಲುಪಿದ್ದು, ವಾಯುಗುಣಮಟ್ಟ ಏರಿಕೆಯಾಗುತ್ತಲೇ ಇದೆ. ವಾಯುಗುಣಮಟ್ಟ ಸೂಚ್ಯಂಕ (ಎಕ್ಯೂಐ) ಸಾಂದ್ರತೆಯ ಶ್ರೇಣಿಯ ಪ್ರಕಾರ ಇದು ಕಳಪೆಯಾಗಿದೆ ಎಂದು ಪರಿಸರ ವಿಜ್ಞಾನ ಕೇಂದ್ರ (ಸಿಎಸ್​ಇ) ಇತ್ತೀಚಿನ ವರದಿಯಲ್ಲಿ ತಿಳಿಸಿದೆ.

ಈ ಮೂಲಕ ದೆಹಲಿ ವಾಯು ಗುಣಮಟ್ಟ ಹದಗೆಡುವಿಕೆಗೆ ನೆರೆಯ ರಾಜ್ಯಗಳಲ್ಲಿ ಕೃಷಿ ತ್ಯಾಜ್ಯ ಸುಡುವಿಕೆ ಮಾತ್ರ ಕಾರಣವಾಗುತ್ತಿಲ್ಲ. ವಾಹನದ ಹೊಗೆಯೂ ಸೇರಿದಂತೆ ಇತರೆ ಅಂಶಗಳು ಗಾಳಿ ವಿಷಪೂರಿತವಾಗಲು ಕಾರಣ ಎಂದಿದೆ.

ದೆಹಲಿ-ಎನ್​ಸಿಆರ್​ನಲ್ಲಿ ಚಳಿಗಾಲ ಮಾಲಿನ್ಯದ ಕುರಿತು ಸಿಎಸ್‌ಇ ಹೊಸ ವಿಶ್ಲೇಷಣಾತ್ಮಕ ವರದಿ ಬಿಡುಗಡೆ ಮಾಡಿದೆ. ಈ ಕುರಿತು ಮಾತನಾಡಿರುವ ಸಿಎಸ್​ಇ ಕಾರ್ಯನಿರ್ವಾಹಕ ನಿರ್ದೇಶಕಿ, ಸಂಶೋಧನಾ ಮತ್ತು ಸಲಹೆಗಾರರಾಗಿರುವ ಅನುಮಿತಾ ರಾಯ್​ ಚೌಧರಿ, ಕಳೆದ ನವೆಂಬರ್​​ಗೆ ಹೋಲಿಕೆ ಮಾಡಿದಾಗ ಈ ಬಾರಿಯ ಚಳಿಗಾಲದ ಮಾಲಿನ್ಯ ಹೆಚ್ಚಿದೆ. ಹವಾಮಾನ, ಕೃಷಿ ತ್ಯಾಜ್ಯ ಸುಡುವಿಕೆ ಮತ್ತು ಸ್ಥಳೀಯ ಮಾಲಿನ್ಯಗಳು ಸಾರ್ವಜನಿಕ ಆರೋಗ್ಯದ ಅಪಾಯ ಹೆಚ್ಚಿಸಿ, ಅಪಾಯಕಾರಿ ಪರಿಸ್ಥಿತಿ ಸೃಷ್ಟಿಸುತ್ತದೆ.

ದೆಹಲಿಯ ಮಾಲಿನ್ಯವೂ ಸ್ಥಿರ ಮತ್ತು ಕೆಳಮುಖವಾಗಲು ರಾಷ್ಟ್ರ ರಾಜಧಾನಿಯಲ್ಲಿ ಕೆಲವು ಮಾನದಂಡಗಳನ್ನು ಜಾರಿಗೆ ತರುವುದು ಅಗತ್ಯ. ಇದು ವಾಹನ, ಉದ್ಯಮ, ತ್ಯಾಜ್ಯ ನಿರ್ವಹಣೆ ಸೇರಿದಂತೆ ಪ್ರಮುಖ ಅಂಶಗಳಲ್ಲಿ ಅತ್ಯಂತ ಕಠಿಣ ಕ್ರಮವನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ವರದಿ ಹೇಳಿದೆ.

ಈ ವರ್ಷ ಚಳಿಗಾಲದ ಆರಂಭದಲ್ಲಿಯೇ ದಿಢೀರ್​​ ಮಾಲಿನ್ಯಕಾರಿ ಹೊಗೆ ಆವರಿಸಿಕೊಂಡಿರುವುದು ಗಮನ ಸೆಳೆದಿದೆ. ನವೆಂಬರ್​ 2ರಂದು ದೆಹಲಿಯಲ್ಲಿ ಪಿಎಂ2.5 ಮಟ್ಟ ದಾಖಲಿಸಿದೆ. 300 ಮೈಕ್ರೋಗ್ರಾಂಗಳ ಮಟ್ಟವನ್ನೂ ದಾಟಿದ್ದು, ಇದು ಕಳಪೆ ವಾಯುಮಾಲಿನ್ಯವಾಗಿದೆ. ವಿಶೇಷ ಎಂದರೆ, ದಿಢೀರ್​ ಏರಿಕೆ 24 ಗಂಟೆಯೊಳಗೆ ಶೇ 68ರಷ್ಟು ಏರಿಕೆಯಾಗಿದೆ.

ಕಳೆದ ಐದು ವರ್ಷಗಳಲ್ಲಿ ಪಿಎಂ2.5 ಮಟ್ಟವು ಅಕ್ಟೋಬರ್​ ಆರಂಭದಿಂದ ಸ್ಥಿರವಾದ ಏರಿಕೆಯನ್ನು ಅಂಕಿ ಅಂಶಗಳು ತೋರಿಸುತ್ತವೆ. ಸೆಪ್ಟೆಂಬರ್​ ಮತ್ತು ಅಕ್ಟೋಬರ್​ನಲ್ಲಿ ಕಡಿಮೆ ಮಳೆಯಿಂದಾಗಿ ಈ ವರ್ಷ ಕೆಟ್ಟ ಗಾಳಿಯ ಗುಣಮಟ್ಟ ಅವಧಿ ಪೂರ್ವವಾಗಿ ನಡೆದಿದೆ ಎಂದು ತಿಳಿಸಿದೆ.

ದೆಹಲಿ-ಎನ್​ಸಿಆರ್​ನಲ್ಲಿ ಮಾಲಿನ್ಯದಲ್ಲಿ ವಾಹನದ ಹೊಗೆಯ ಪಾಲು ಪಿಎಂ10ನಲ್ಲಿ ಪಿಎಂ 2.5ನಷ್ಟಿದೆ. ಪಿಎಂ2.5ನಲ್ಲಿ ವಾಹನ, ಉದ್ಯಮ ಮತ್ತು ಸುಡುವಿಕೆಯಿಂದ ಹೆಚ್ಚಾಗಿ ಬರುತ್ತದೆ. ವಾಯುಗುಣಮಟ್ಟ ಪಿಎಂ 10ನಲ್ಲಿ ಪಿಎಂ2.5 ಪಾಲು ಶೇ 50ರಷ್ಟಿದೆ. ಇದರಲ್ಲಿ ವಾಹನದ ಹೊಗೆ ಹೆಚ್ಚಿನ ಪ್ರಮಾಣದಲ್ಲಿದೆ ಎಂದು ವರದಿ ಹೇಳಿದೆ.

ವಾಹನಗಳಿಂದ ಹೆಚ್ಚಾಗಿ ಬರುವ ಎನ್​ಒ2 ಮಟ್ಟ ಮಾಲಿನ್ಯದ ಏರಿಕೆಯಲ್ಲಿ ಪ್ರಮುಖವಾಗಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಎನ್​ಒ2 ಮಟ್ಟ ಶೇ 60ರಷ್ಟು ಹೆಚ್ಚು. ಟ್ರಾಫಿಕ್​ ಪ್ರದೇಶದಲ್ಲಿ ಇದರ ಪ್ರಮಾಣ ಮೂರು ನಾಲ್ಕು ಪಟ್ಟು ಜಾಸ್ತಿಯಾಗಿದೆ ಎಂದು ವರದಿ ವಿವರಿಸಿದೆ. (ಐಎಎನ್​ಎಸ್​)

ಇದನ್ನೂ ಓದಿ: ತಾಪಮಾನದ ಹೆಚ್ಚಳ ಎಸಿಯಲ್ಲಿ ಕುಳಿತು ಕೆಲಸ ಮಾಡುವವವರ ಮೇಲೂ ಪರಿಣಾಮ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.