ETV Bharat / sukhibhava

ಹೃದಯ ಸಮಸ್ಯೆಗೆ ಪರಿಹಾರವಾಗಬಲ್ಲದು ಮಾತಿನ ಚಿಕಿತ್ಸೆ

ಖಿನ್ನತೆ ಸಮಯದಲ್ಲಿ ನೀಡುವ ಮಾತಿನ ಚಿಕಿತ್ಸೆ ಭವಿಷ್ಯದಲ್ಲಿನ ಹೃದಯ ಸಮಸ್ಯೆ ಕಡಿಮೆ ಮಾಡುತ್ತದೆ ಎಂದು ಅಧ್ಯಯನ ತಿಳಿಸಿದೆ

Speech therapy can cure heart problems
Speech therapy can cure heart problems
author img

By

Published : Apr 21, 2023, 11:55 AM IST

ವಾಷಿಂಗ್ಟನ್​: ಆತ್ಮೀಯ ಮಾತುಕತೆ ಮೂಲಕ ವ್ಯಕ್ತಿ ಮನಸ್ಸನ್ನು ಮಾತ್ರವಲ್ಲ, ಅವರ ದುಗುಡಗಳನ್ನು ಹೊಡೆದೊಡಿಸಬಹುದು. ಇಂತಹ ಮಾತು ಹೃದಯ ಸಮಸ್ಯೆ ಅಪಾಯವನ್ನು ಕಡಿಮೆ ಮಾಡುವ ಸಾಧ್ಯತೆ ಇದೆ ಎಂದು ಅಧ್ಯಯನ ತಿಳಿಸಿದೆ. ಖಿನ್ನತೆ ಸಮಯದಲ್ಲಿ ನೀಡುವ ಮಾತಿನ ಚಿಕಿತ್ಸೆ ಭವಿಷ್ಯದಲ್ಲಿನ ಹೃದಯ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ ಎಂದು ಅಧ್ಯಯನ ತಿಳಿಸಿದೆ.

ಈ ಕುರಿತು ಯುಸಿಎಲ್​ ಸಂಶೋಧಕರ ತಂಡ ಅಧ್ಯಯನ ನಡೆಸಿದ್ದು, 45 ವರ್ಷ ಮೇಲ್ಪಟ್ಟವರ ಖಿನ್ನತೆ ಮೇಲೆ ಮಾತಿನ ಚಿಕಿತ್ಸೆಯ ಪರಿಣಾಮದ ಕುರಿತು ಆರೋಗ್ಯ ದತ್ತಾಂಶ ವಿಶ್ಲೇಷಣೆ ನಡೆಸಿದ್ದಾರೆ. ಈ ಕುರಿತು ಯುರೋಪಿಯನ್​ ಹೆಲ್ತ್​ ಜರ್ನಲ್​ನಲ್ಲಿ ಕೂಡ ಪ್ರಕಟವಾಗಿದೆ. ಅರಿವಿನ ನಡುವಳಿಕೆ ಥೆರಪಿಯಂತಹ ಮಾನಸಿಕ ಥೆರಪಿಗಳು ಖಿನ್ನತೆ ಹೊಂದಿರುವರಲ್ಲಿ ಹೇಗೆ ಹೃದಯ ಸಮಸ್ಯೆ ಕಡಿಮೆ ಮಾಡುತ್ತದೆ ಎಂದು ವಿಶ್ಲೇಷಣೆ ನಡೆಸಲಾಗಿದೆ.

ಹೃದಯ ಸಮಸ್ಯೆ ಅಪಾಯ: ಹೃದಯ ಸಮಸ್ಯೆ, ಪಾರ್ಶ್ವವಾಯು ಮತ್ತು ಹೃದಯ ರಕ್ತನಾಳ ಸಮಸ್ಯೆಯು ಜಗತ್ತಿನಲ್ಲಿನ ಅನೇಕ ಮಂದಿ ಸಾವಿಗೆ ಕಾರಣವಾಗುತ್ತಿದೆ. ಶೇ 32ರಷ್ಟು ಮಂದಿ ಈ ಸಮಸ್ಯೆಯಿಂದ ಸಾವನ್ನಪ್ಪುತ್ತಿದ್ದಾರೆ. 2019ರಲ್ಲಿ ಮೇಲೆ ಉಲ್ಲೇಖಿಸಿದ ಸಮಸ್ಯೆಗಳಿಂದಾಗಿ 18.6 ಮಿಲಿಯನ್​ ಜನರು ಜಾಗತಿಕವಾಗಿ ಸಾವನ್ನಪ್ಪಿದ್ದಾರೆ.

ಈ ಹಿಂದಿನ ಅಧ್ಯಯನ ಕೂಡ ಬೇರೆಯವರಿಗೆ ಹೋಲಿಕೆ ಮಾಡಿದಾಗ, ಖಿನ್ನತೆ ಹೊಂದಿರುವ ಶೇ 72ರಷ್ಟು ಮಂದಿಯಲ್ಲಿ ಹೃದಯ ರಕ್ತನಾಳ ಸಮಸ್ಯೆ ಅನುಭವಿಸುತ್ತಾರೆ ಎಂದು ತಿಳಿದು ಬಂದಿದೆ. ಈ ಅಧ್ಯಯನಕ್ಕಾಗಿ 45ವರ್ಷ ಮೇಲ್ಪಟ್ಟ 6,39,955 ಮಂದಿಯನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ. ಇಂಗ್ಲೆಂಡ್​ನ ನೇಷನ್​ ಇಂಪ್ರೊವಿಂಗ್​ ಆಕ್ಸೆಸ್​ ಟು ಸೈಕಲಾಜಿಕಲ್​ ಥೆರಪಿ ಮೂಲಕ ಇವರ ದತ್ತಾಂಶ ವಿಶ್ಲೇಷಣೆ ಮಾಡಲಾಗಿದೆ. ಪ್ರಶ್ನಾವಳಿ ಮಾದರಿ ಮೂಲಕ ರೋಗಿ ಖಿನ್ನತೆ ಅಳೆಯಲಾಗಿದೆ. ಇದರಲ್ಲಿ ಅವರಲ್ಲಿ ಕೆಲಸದಲ್ಲಿ ಆಸಕ್ತಿ ಕೊರತೆ, ನಿದ್ರೆಯ ಸಮಸ್ಯೆ ಮತ್ತು ಕಡಿಮೆ ಮನಸ್ಥಿತಿ ಭಾವನೆಗಳ ಅಂಶವನ್ನು ಪರಿಗಣಿಸಲಾಗಿದೆ.

ಖಿನ್ನತೆ ಸಂಬಂಧ: ಖಿನ್ನತೆ ಹೊಂದಿರುವ ಮಂದಿ ಮಾನಸಿಕ ಚಿಕಿತ್ಸೆ ಸುಧಾರಿಸಿದ ಮಂದಿ ಮೂರು ವರ್ಷಗಳಲ್ಲಿ ಹೃದಯ ಸಂಬಂಧಿ ಸಮಸ್ಯೆಗೆ ಒಳಗಾಗುವ ಸಾಧ್ಯತೆ ಕಡಿಮೆ ಎಂದು ಅಧ್ಯಯನ ತಿಳಿಸಿದೆ. ಖಿನ್ನತೆಯಿಂದ ವಿಶ್ವಾಸಾರ್ಹ ಸುಧಾರಣೆ ಯಾವುದೇ ಸಮಯದಲ್ಲಿ ಭವಿಷ್ಯದ ಹೃದಯ ರಕ್ತನಾಳದ ಕಾಯಿಲೆಯಲ್ಲಿ ಶೇ 12ರಷ್ಟು ಇಳಿಕೆಗೆ ಸಂಬಂಧಿಸಿದೆ.

ಮಾನಸಿಕ ಚಿಕಿತ್ಸೆಯ ಪ್ರಯೋಜನಗಳು ಮಾನಸಿಕ ಆರೋಗ್ಯದ ಫಲಿತಾಂಶಗಳನ್ನು ಮೀರಿ ವಿಸ್ತರಿಸಬಹುದು. ಇದು ದೀರ್ಘಾವದಿಯ ಆರೋಗ್ಯವನ್ನು ಹೊಂದಿರಬಹುದು. ಇದು ದೀರ್ಘವಾಧಿ ದೈಹಿಕ ಆರೋಗ್ಯ ಹೊಂದಿರಬಹುದು ಎಂದು ಸಂಶೋಧನೆ ಮುಖ್ಯವಾಗಿದೆ.

ಈ ಫಲಿತಾಂಶಗಳು ರೋಗಿಗಳ ಆರೋಗ್ಯ ದಾಖಲೆಗಳೊಂದಿಗೆ ಹೃದಯ ರಕ್ತನಾಳದ ಘಟನೆಗಳ ಹೊಸ ಘಟನೆಗಳನ್ನು ನೋಡಲು ಸಂಬಂಧ ಕಲ್ಪಿಸಬಹುದು. ಈ ಅಧ್ಯಯನವು ಮಾನಸಿಕ ಚಿಕಿತ್ಸೆಯ ಫಲಿತಾಂಶಗಳು ಮತ್ತು ಹೃದಯರಕ್ತನಾಳದ ಕಾಯಿಲೆಯ ಭವಿಷ್ಯದ ಅಪಾಯದ ನಡುವಿನ ಸಂಪರ್ಕವನ್ನು ಸ್ಥಾಪಿಸುವಲ್ಲಿ ಮುಖ್ಯವಾಗಿದೆ.

ಇದನ್ನೂ ಓದಿ: ಗರ್ಭಾವಸ್ಥೆಯಲ್ಲಿ ಕಾಡುವ ಖಿನ್ನತೆಯಿಂದ ಹೆರಿಗೆ ಬಳಿಕ ಹೃದಯ ಸಮಸ್ಯೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.