ಸಾಮಾಜಿಕ ಮಾಧ್ಯಮಗಳಲ್ಲಿ ಸೋಶಿಯಲ್ ಮೀಡಿಯಾ ಇನ್ಫ್ಲುಯೆಂಜರ್ಗಳು ಹಲವು ಕ್ರಾಂತಿಕಾರಿ ಬದಲಾವಣೆ ತಂದಿರುವುದು ಸುಳ್ಳಲ್ಲ. ಅದರಲ್ಲೂ ಪ್ರವಾಸದ ವಿಷಯದಲ್ಲಿ ಇವರು ನೀಡುವ ಮಾಹಿತಿಗಳು ಅನೇಕ ಚಾರಣಿಗರಿಗೆ ಸ್ಪೂರ್ತಿಯಾಗುತ್ತದೆ. ಈ ಹಿಂದೆ ಪ್ರವಾಸಿತಾಣಗಳ ಕುರಿತ ಮಾಹಿತಿ ಸಿಗದೇ ಪರದಾಡುತ್ತಿದ್ದ ಜನರು ಇದೀಗ ಇನ್ಫುಯೆಂಜರ್ಗಳಿಂದ ಕ್ಷಣ ಮಾತ್ರದಲ್ಲಿ ಇಂಚಿಂಚು ಮಾಹಿತಿ ಪಡೆಯುತ್ತಿದ್ದಾರೆ. ಇದರಿಂದ ಪ್ರವಾಸಕ್ಕೆ ಹೋಗುವ ಸ್ಥಳ, ಅಲ್ಲಿನ ಹೋಟೆಲ್ಗಳು ಸೇರಿದಂತೆ ಎಲ್ಲಾ ಚಿಕ್ಕಪುಟ್ಟ ವಿಷಯಗಳ ಕುರಿತು ಇವರಿಂದ ಮಾಹಿತಿ ಪಡೆಯಬಹುದಾಗಿದ್ದು, ಇದರಿಂದ ಇನ್ಫ್ಲುಯೆಂಜರ್ಗಳಿಗೆ ಬೇಡಿಕೆ ಕೂಡ ಹೆಚ್ಚಾಗಿದೆ.
ಹೊಸ ಸ್ಥಳಗಳು ಮತ್ತು ಜನರಿಗೆ ತಿಳಿಯದ ಅದ್ಬುತ ತಾಣಗಳು ಅದರಲ್ಲೂ ಭಾರತದ ಪ್ರವಾಸಕ್ಕೆ ಹೊಸ ಹುರುಪು ನೀಡುವಲ್ಲಿ ಈ ಇನ್ಫ್ಲುಯೆಂಜರ್ಗಳ ಪಾತ್ರ ಪ್ರಮುಖವಾಗಿದೆ. ಜನರಿಗೆ ವಿಭಿನ್ನವಾದ ಸ್ಥಳಗಳ ಪರಿಚಯ ಮಾಡುವ ಹಿನ್ನೆಲೆಯಲ್ಲಿ ಭಾರತದ ಹೊಸ ನಗರ, ಐತಿಹಾಸಿಕ ಸ್ಥಳಗಳು ಮತ್ತು ಪ್ರಾದೇಶಿಕವಾಗಿ ಖ್ಯಾತಗೊಂಡಿರುವ ಸಣ್ಣ ಹಳ್ಳಿಗಳನ್ನು ಪರಿಚಯ ಮಾಡುತ್ತಿದ್ದಾರೆ ಅವರು. ಈ ಮೂಲಕ ಪ್ರವಾಸದ ಹೊಸ ದೃಷ್ಟಿಕೋನವನ್ನೇ ಇವರು ಹುಟ್ಟು ಹಾಕಿದ್ದಾರೆ.
ಭಾರತದ ಆತಿಥ್ಯ ಮತ್ತು ಪ್ರವಾಸ ವಲಯದಲ್ಲಿ ಸೋಶಿಯಲ್ ಮೀಡಿಯಾ ಇನ್ಫ್ಲುಯೆಂಜರ್ಗಳು ಪ್ರಮುಖ ಪಾತ್ರವಹಿಸುತ್ತಿದ್ದಾರೆ. ಅದರ ಜೊತೆಗೆ ಭಾಗಿಯಾಗುವುದರಿಂದ ಅವರಿಗೆ ಸಾಕಷ್ಟು ಲಾಭಗಳು ಕೂಡ ಇದೆ. ಇನ್ಫ್ಲುಯೆಂಜರ್ಗಳ ಜೊತೆ ಕೆಲಸ ಮಾಡುವುದು ಬಹಳಷ್ಟು ಪ್ರಯೋಜಕಾರಿಯಾಗಿದೆ. ಇದರಿಂದ ಉದ್ಯಮ ಮತ್ತು ಪ್ರವಾಸಿತಾಣದ ಕುರಿತು ವಿಶಾಲ ವ್ಯಾಪ್ತಿಯನ್ನು ರಚಿಸಬಹುದು. ಜೊತೆಗೆ ಉದ್ಯಮಗಳ ಅಭಿವೃದ್ಧಿಗೆ ಕೆಲಸ ಮಾಡಬಹುದಾಗಿದೆ.
ಇನ್ಫ್ಲುಯೆಂಜರ್ ಜೊತೆ ಕೆಲಸ ಮಾಡುವ ಸವಾಲು: ಸರಿಯಾದ ಇನ್ಫ್ಲುಯೆಂಜರ್ಗಳ ಪತ್ತೆ ಮಾಡುವುದು, ಪತ್ತೆ ಮಾಡಿ ಅವರನ್ನು ರಾಯಭಾರಿಯಾಗಿ ಆಯ್ಕೆ ಮಾಡುವುದು ಕೂಡ ಸವಾಲಿನ ಕೆಲಸ ಕಾರಣ ಅನೇಕ ಜನರಿಗೆ ಫೀಲ್ಡ್ ಬ್ಯಾಕ್ಗ್ರೌಂಡ್ ಜೊತೆಗೆ ಅರ್ಥೈಸಿಕೊಳ್ಳುವಿಕೆಯಲ್ಲಿ ಸೋಲಬಹುದು. ನಿಮ್ಮ ವ್ಯಾಪಾರಕ್ಕೆ ಅನುಕೂಲವಾಗುವ ಇನ್ಫ್ಲುಯೆಂಜರ್ಗಳ ಆಯ್ಕೆ ಅವಕಾಶ ಹುಡುಕಬೇಕು.
ಅತಿಥ್ಯ ಮತ್ತು ಪ್ರಯಾಣದ ಪ್ರಚಾರದ ಪರಿಣಾಮ: ಭಾರತೀಯ ಪ್ರವಾಸೋದ್ಯಮ ಮತ್ತು ಅತಿಥ್ಯದಲ್ಲಿ ಇನ್ಫ್ಲುಯೆಂಜರ್ಗಳ ಪ್ರಚಾರ ಗಮನಾರ್ಹವಾಗಿ ಪರಿಣಾಮ ಬೀರುತ್ತದೆ. ಸಾಮಾಜಿಕ ಮಾಧ್ಯಮಗಳಿಗೆ ಇಂದು ಬಹುತೇಕ ಮಂದಿ ತೆರೆದು ಕೊಂಡಿದ್ದು, ಪ್ರವಾಸಿತಾಣಗಳ ಕುರಿತು ಮಾಹಿತಿ, ಅಲ್ಲಿನ ಹೊಟೇಲ್ ವ್ಯವಸ್ಥೆ ಸೇರಿದಂತೆ ಪ್ರತಿಯೊಂದು ವಿಷಯವನ್ನು ಅವರು ಗಮನಿಸುತ್ತಾರೆ.
ಅದರಲ್ಲೂ ಭಾರತದ ಸೋಶಿಯಲ್ ಮೀಡಿಯಾ ಇನ್ಫ್ಲುಯೆಂಜರ್ಗಳು ಇದೀಗ ಆಧುನಿಕ ಜಾಲತಾಣಗಳಾದ ಎಆರ್ ಮತ್ತು ವಿಆರ್ಗೆ ತೆರೆದುಕೊಂಡಿದ್ದು, ಇದರಿಂದ ಅವರು ಸ್ಥಳದ ಕುರಿತು ಆಸಕ್ತಿಕರ ವಿಷಯಗಳನ್ನು ಉತ್ತಮವಾಗಿ ತೋರಿಸಲು ಸಾಧ್ಯ. ತಂತ್ರಜ್ಞಾನಗಳು ಇಂದು ಅನೇಕ ಅವಕಾಶಗಳ ಜೊತೆಗೆ ಉತ್ತಮ ದೃಷ್ಟಿಕೋನವನ್ನು ನೀಡಲು ಸಾಧ್ಯವಾಗುವಂತೆ ಮಾಡಿದೆ.
ವ್ಯಾಪಾರ ವೃದ್ಧಿ: ಉದ್ಯಮಗಳಿಗೆ ಅಭಿವೃದ್ಧಿಗೆ ಮತ್ತು ಬ್ರಾಂಡ್ ಮಟ್ಟ ಹೆಚ್ಚಿಸಲು ಹೆಣಗಾಡುತ್ತಿದ್ದರೆ ಇದಕ್ಕೆ ಸೋಶಿಯಲ್ ಮೀಡಿಯಾ ಇನ್ಫ್ಲುಯೆಂಜರ್ಗಳು ಸಹಾಯ ಮಾಡುತ್ತಾರೆ. ವಿವಿಧ ಆಯಾಮ, ದೃಷ್ಟಿಕೋನ, ತಂತ್ರಜ್ಞಾನದ ಮೂಲಕ ಅವರು ಯಾವುದೇ ವ್ಯಾಪಾರ ಅಥವಾ ಪ್ರವಾಸದ ಕುರಿತು ಜನರಿಗೆ ಪರಿಚಯಿಸುವುದರಿಂದ ಜನರು ಬಲು ಬೇಗ ಆಕರ್ಷಿತರಾಗುತ್ತಾರೆ. ಅಲ್ಲದೇ ಇದಕ್ಕೆ ಡಿಜಿಟಲ್ ಸಾಮರ್ಥ್ಯ ಲಭ್ಯವಾಗುವುದರಿಂದ ಭಾರತದ ಪ್ರವಾಸ ಸೇರಿದಂತೆ ಆತಿಥ್ಯ ಕ್ಷೇತ್ರ ವೇಗವಾಗಿ ಬೆಳವಣಿಗೆ ಆಗುತ್ತಿದೆ.
ಇದನ್ನೂ ಓದಿ: ಸಾಮಾಜಿಕ ಮಾಧ್ಯಮ ಬಹಳ ಉಪಯುಕ್ತ; ಬಳಸುವ ಮಾರ್ಗ ಗೊತ್ತಿರಬೇಕು ಅಷ್ಟೇ