ಮಾನವ ಸಂಘ ಜೀವಿ. ಅನೇಕ ವೇಳೆ ಎಲ್ಲಾ ಸಂಘಗಳನ್ನೂ ತೊರೆದು ಆತ ಪ್ರತ್ಯೇಕವಾಗಿ ಜೀವಿಸಲು ಮುಂದಾಗುತ್ತಾನೆ. ಇದನ್ನೇ ಸಾಮಾಜಿಕ ಪ್ರತ್ಯೇಕೀಕರಣ ಎನ್ನುವರು. ಆದರೆ, ಹೀಗೆ ಬದುಕುವುದು ಸುಲಭವಲ್ಲ. ದಿನದಲ್ಲಿ 8 ಗಂಟೆಗಳ ಕಾಲ ಸಾಮಾಜಿಕ ಸಂಪರ್ಕಕ್ಕೆ ವ್ಯಕ್ತಿ ಬಾರದೇ ಹೋದರೆ ವ್ಯಕ್ತಿಯ ದೇಹದ ಶಕ್ತಿ ಕಡಿಮೆಯಾಗುತ್ತದೆ. ಹೇಗೆ ಎಂಟು ಗಂಟೆಗಳ ಕಾಲ ಆಹಾರ ಸೇವಿಸದೇ ಇದ್ದರೆ ನಿಶಕ್ತಿ ಹೊಂದುತ್ತೇವೋ ಅದೇ ರೀತಿಯ ಪರಿಣಾಮವನ್ನು ಸಾಮಾಜಿಕ ಸಂಪರ್ಕ ಕಡಿತದಲ್ಲಿ ಕಾಣಬಹುದು ಎಂದು ಸಂಶೋಧನೆ ಹೇಳುತ್ತದೆ.
ಕೋವಿಡ್ ಲಾಕ್ಡೌನ್ ಗುರಿಯಾಗಿಸಿಕೊಂಡು ಈ ಸಂಶೋಧನೆ ನಡೆಸಲಾಗಿದೆ. ಸೈಕಾಲಾಜಿಕಲ್ ಸೈನ್ಸ್ನಲ್ಲಿ ಅಧ್ಯಯನ ಪ್ರಕಟವಾಗಿದೆ. ಇದರನುಸಾರ, ವ್ಯಕ್ತಿಯಲ್ಲಿ ಕಾಡುವ ಶಕ್ತಿಗೆ ಸಾಮಾಜಿಕ ಸಂಪರ್ಕದ ಕೊರತೆ ಕಾರಣವಾಗುತ್ತದೆ. ಸಾಮಾಜಿಕ ವ್ಯಕ್ತಿತ್ವದ ಭಾಗಿದಾರಿಕೆಯ ಮೇಲೂ ಕೂಡ ಇದು ಪರಿಣಾಮ ಉಂಟು ಮಾಡುತ್ತದೆ.
ಕೆಲವು ಗಂಟೆಗಳ ಬಳಿಕ ನಾವು ಆಹಾರ ಸೇವಿಸದೇ ಹೋದರೆ, ಅನೇಕ ಜೈವಿಕ ಪ್ರಕ್ರಿಯೆಗಳು ಆರಂಭವಾಗಿ ಹಸಿವಿನ ಅನುಭವವಾಗುತ್ತದೆ. ಅದೇ ರೀತಿ, ಸಾಮಾಜಿಕ ಸಂಪರ್ಕದ ಕೊರತೆಯೂ ಕೂಡ ಮಿದುಳಿನಲ್ಲಿ ಹಸಿವಿನ ಭಾವನೆ ಮೂಡಿಸುತ್ತದೆ. ಇದು ಮರು ಸಂಪರ್ಕಕ್ಕೆ ಪ್ರೇರಣೆ ಮಾಡುತ್ತದೆ.
ಆಸ್ಟ್ರಿಯಾದ ವಿಯೆನ್ನಾ ವಿಶ್ವವಿದ್ಯಾಲಯ ಇಂಥದ್ದೊಂದು ಸಂಶೋಧನೆ ಮಾಡಿದ್ದು, ಸಾಮಾಜಿಕ ಹೊಮಿಯೊಸ್ಟಾಸಿಸ್ ಹೈಪೊಥಿಸಿಸ್ ಪ್ರಕಾರ, ಹೊಮಿಯೊಸ್ಟಾಸ್ಟಿಕ್ ವ್ಯವಸ್ಥೆ ತಕ್ಷಣ ಸಾಮಾಜಿಕ ಸಂಪರ್ಕದ ಅಗತ್ಯತೆಯನ್ನು ಒತ್ತಿ ಹೇಳಿಸುತ್ತದೆ. ಆದಾಗ್ಯೂ, ಸಾಮಾಜಿಕ ಪ್ರತ್ಯೇಕಿಕರಣಕ್ಕೆ ಮನೋವೈಜ್ಞಾನಿಕ ಪ್ರತಿಕ್ರಿಯೆಯ ಕುರಿತು ಅಲ್ಪ ಮಾಹಿತಿ ಇದೆ.
ದೀರ್ಘಕಾಲದ ಒಂಟಿತನ ಮತ್ತು ಆಯಾಸ ಒಂದಕ್ಕೊಂದು ಸಂಬಂಧ ಹೊಂದಿದೆ ಎಂಬುದು ಚೆನ್ನಾಗಿ ತಿಳಿದಿದೆ. ಆದರೆ ಇದರಲ್ಲಿ ತಕ್ಷಣದ ಮೆಕಾನಿಸಲ್ ಅಪಾಯ ಹೊಂದಿದ್ಯಾ ಎಂಬುದನ್ನು ತಿಳಿಯಬೇಕಿದೆ. ಕಡಿಮೆ ಕಾಲದ ಸಾಮಾಜಿಕ ಪ್ರತ್ಯೇಕಿಕರಣ ಕಡಿಮೆ ಶಕ್ತಿ ಹೊಂದಿದ್ದು ಇದು ಸೋಶಿಯಲ್ ಹೊಮಿಯೊಸ್ಟಿಕ್ಗೆ ಕಾರಣವಾಗುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಸಾಮಾಜಿಕ ಪ್ರತ್ಯೇಕಿಕರಣವನ್ನು ಎರಡು ವಿಧಾನದಲ್ಲಿ ಅಧ್ಯಯನ ನಡೆಸಲಾಗಿದೆ. ಅಧ್ಯಯನಕ್ಕಾಗಿ 30 ಮಹಿಳಾ ಸ್ವತಂತ್ರ ಕಾರ್ಯಕರ್ತರನ್ನು ಬಳಸಿಕೊಳ್ಳಲಾಗಿದೆ. ಮೂರು ಪ್ರತ್ಯೇಕ ದಿನದಲ್ಲಿ 8 ಗಂಟೆ ಯಾವುದೇ ಸಾಮಾಜಿಕ ಸಂಪರ್ಕ ಇಲ್ಲದೇ, ಅನೇಕ ಸಮಯವನ್ನು ಕಳೆಯಲಾಗಿದೆ. ಅದರಲ್ಲಿ ಒತ್ತಡ, ಮೂಡ್ ಮತ್ತು ಆಯಾಸ, ಮಾನಸಿಕ ಒತ್ತಡ ಜವಾಬ್ದಾರಿ ಹೃದಯ ಬಡಿತ ಒಳಗೊಂಡಿದೆ.
ಪ್ರಯೋಗಾಲಯ ಅಧ್ಯಯನ 2020ರ ವಸಂತ ಋತುವಿನಲ್ಲಿ ಆಸ್ಟ್ರಿಯ ಮತ್ತು ಇಟಲಿಯಲ್ಲಿ ಬಳಕೆ ಮಾಡಲಾಗಿದೆ. ಈ ಅಧ್ಯಯನದಲ್ಲಿ 87 ಮಂದಿಯ ದತ್ತಾಂಶವನ್ನು ಬಳಸಿದ್ದು, ಅವರೆಲ್ಲ 8 ಗಂಟೆಗಳ ಕಾಲ ಪ್ರತ್ಯೇಕಿಕರಣಕ್ಕೆ ಒಳಗಾಗಿದ್ದಾರೆ. ಏಳು ದಿನಗಳ ಕಾಲ ಇದೇ ಮಾಪನವನ್ನು ಅನೇಕ ಬಾರಿ ಅಧ್ಯಯನ ನಡೆಸಲಾಗಿದ್ದು, ಇದರಲ್ಲಿ ಒತ್ತಡ ಮತ್ತು ನಡುವಳಿಕೆ ಪರಿಣಾಮ ಮೌಲ್ಯಮಾಪನ ಮಾಡಲಾಗಿದೆ.
ಇದನ್ನೂ ಓದಿ: ಮಕ್ಕಳ ವಿಷಯದಲ್ಲಿ ತುಂಬಾ ಕಟ್ಟುನಿಟ್ಟಾಗಬೇಡಿ; ಮಗುವಿನ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರತ್ತೆ