ನ್ಯೂಯಾರ್ಕ್( ಅಮೆರಿಕ): ಧೂಮಪಾನವೂ ಕೇವಲ ನಿಮ್ಮ ಹೃದಯ ಮತ್ತು ಶ್ವಾಸಕೋಶಕ್ಕೆ ಮಾತ್ರ ಹಾನಿ ಮಾಡುವುದಿಲ್ಲ. ಇದು ನಿಮ್ಮ ಮಿದುಳನ್ನು ಶಾಶ್ವತ ಕುಗ್ಗುವಿಕೆಗೆ ಕಾರಣವಾಗುತ್ತದೆ. ಅಲ್ಲದೇ, ಧೂಮಪಾನ ತ್ಯಜಿಸಿದರೂ ಇದನ್ನು ಸರಿಪಡಿಸಲಾಗದ ರೀತಿಯಲ್ಲಿ ಹಾನಿ ಮಾಡುತ್ತದೆ ಎಂದು ಅಧ್ಯಯನ ತಿಳಿಸಿದೆ.
ಧೂಮಪಾನ ಬಿಡುವುದರಿಂದ ಮಿದುಳಿನ ಟಿಶ್ಯೂ ಮೇಲೆ ಆಗುವ ಹಾನಿಯನ್ನು ತಡೆಯಬಹುದಾಗಿದೆ. ಅಲ್ಲದೇ, ಧೂಮಪಾನ ನಿಲ್ಲಿಸುವುದರಿಂದ ಈಗಾಗಲೇ ಕುಗ್ಗಿರುವ ಮಿದುಳಿನ ಮೂಲ ಗಾತ್ರಕ್ಕೆ ಅದನ್ನು ತರಲು ಸಾಧ್ಯವಿಲ್ಲ ಎಂದು ಅಧ್ಯಯನ ತಿಳಿಸಿದೆ. ಈ ಅಧ್ಯಯನವನ್ನು ಜರ್ನಲ್ ಬಯೋಲಾಜಿಕಲ್ ಸೈಕಿಯಾಟ್ರಿ; ಗ್ಲೋಬಲ್ ಓಪನ್ ಸೈನ್ಸ್ನಲ್ಲಿ ಪ್ರಕಟಿಸಲಾಗಿದೆ.
ವಯೋ ಸಂಬಂಧಿ ಅರಿವಿನ ಕೊರತೆ ಮತ್ತು ಅಲ್ಝೈಮರ್ ರೋಗದ ಅಪಾಯವನ್ನು ಈ ಧೂಮಪಾನವೂ ಯಾಕೆ ಹೊಂದಿದೆ ಎಂಬುದನ್ನು ಈ ಅಧ್ಯಯನ ತಿಳಿಸಿದೆ. ಸಾಮಾನ್ಯವಾಗಿ ಜನರ ಮಿದುಳು ನೈಸರ್ಗಿಕವಾಗಿ ತಮ್ಮ ಮೌಲ್ಯವನ್ನು ವಯಸ್ಸಾದಂತೆ ಕಳೆದುಕೊಳ್ಳುತ್ತದೆ. ಧೂಮಪಾನದಿಂದ ವಯಸ್ಸಿಗೆ ಮುಂಚೆಯೇ ಮಿದುಳಿನ ಮೇಲೆ ಪರಿಣಾಮ ಹೊಂದುತ್ತದೆ ಎಂದು ಸೆಂಟ್ ಲೂಯಿಸ್ನಲ್ಲಿನ ವಾಷಿಂಗ್ಟನ್ ಯುನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್ ತಿಳಿಸಿದೆ.
ಇತ್ತೀಚಿನವರೆಗೆ ವಿಜ್ಫಾನಿಗಳು ಶ್ವಾಸಕೋಶ ಮತ್ತು ಹೃದಯದ ಮೇಲಿನ ಹಾನಿಯನ್ನು ಮಾತ್ರ ಗಮನಿಸಿದ್ದಾರೆ. ಇದೀಗ ಮಿದುಳಿನ ಮೇಲೆ ಧೂಮಪಾನದ ಪರಿಣಾಮ ಗಮನಿಸಿದ್ದಾರೆ ಎಂದು ವಿಶ್ವವಿದ್ಯಾಲಯದ ಸೈಕಿಯಾಟ್ರಿಕ್ ಪ್ರೊಫೆಸರ್ ಲೌರಾ ಜೆ ಬೈರುತ್ ತಿಳಿಸಿದ್ದಾರೆ.
ಇದೀಗ ಮಿದುಳನ್ನು ಹತ್ತಿರದಿಂದ ಗಮನಿಸಲು ಪ್ರಾರಂಭಿಸಲಾಗಿದ್ದು, ಧೂಮಪಾನವೂ ಮಿದುಳಿನ ಮೇಲೆ ಕೆಟ್ಟ ಪರಿಣಾಮ ಹೊಂದಿರುವುದು ಕಂಡು ಬಂದಿದೆ. ಈ ಅಧ್ಯಯನಕ್ಕೆ ಮಿದುಳಿನ ಮೌಲ್ಯ ಗುರುತಿಸಲಾಗದ, ಧೂಮಪಾನ ಇತಿಹಾಸ ಮತ್ತು ಅನುವಂಶಿಕತೆ ಅಪಾಯದ ಮೇಲೆ ವಿಶ್ಲೇಷಣೆ ನಡೆಸಿದ್ದಾರೆ. ಇದಕ್ಕಾಗಿ 32,094 ಮಂದಿಯನ್ನು ಅಧ್ಯಯನಕ್ಕೆ ಒಳಪಡಿಸಿ, ಉತ್ತರ ಕಂಡುಕೊಳ್ಳಲಾಗಿದೆ.
ಈ ಅಧ್ಯಯನದಲ್ಲಿ ಅವರು ಧೂಮಪಾನದ ಇತಿಹಾಸ ಮತ್ತು ಮಿದುಳಿನ ಮೌಲ್ಯ, ಅನುವಂಶಿಕ ಧೂಮಪಾನ ಅಪಾಯ ಮತ್ತು ಧೂಮಪಾನ ಇತಿಹಾಸ ಮತ್ತು ಧೂಮಪಾನದ ಅನುವಂಶಿಕ ಅಪಾಯಗಳು ಸಂಬಂಧ ಹೊಂದಿರುವುದು ಕಂಡು ಬಂದಿದೆ.
ಧೂಮಪಾನ ಮತ್ತು ಮಿದುಳಿನ ಮೌಲ್ಯವೂ ಡೋಸ್ ಮೇಲೆ ಅವಲಂಬಿತವಾಗಿದೆ. ದಿನಕ್ಕೆ ಹೆಚ್ಚಿನ ಪ್ಯಾಕ್ಸ್ ಸೇವನೆ ಅವರ ಮಿದುಳಿನ ಮೌಲ್ಯ ಕಡಿಮೆ ಮಾಡುತ್ತದೆ. ಈ ಅಧ್ಯಯನಕ್ಕೆ ಸಾಂಖ್ಯಾಶಾಸ್ತ್ರಿಯ ವಿಧಾನವನ್ನು ಬಳಕೆ ಮಾಡಿ ವಿಶ್ಲೇಷಣೆ ಮಾಡಲಾಗಿದೆ.
ಈಗಾಗಲೇ ಧೂಮಪಾನ ಮಾಡಿ ಧೂಮಪಾನ ತ್ಯಜಿಸಿದ್ದರೂ ಮಿದುಳು ಕುಗ್ಗಿರುತ್ತದೆ. ಇದನ್ನು ಬದಲಾಯಿಸಲು ಸಾಧ್ಯವಿಲ್ಲ. ಆದರೆ, ಭವಿಷ್ಯದಲ್ಲಿ ಆಗುವ ಇನ್ನೂ ಹೆಚ್ಚಿನ ಅಪಾಯವನ್ನು ತಡೆಯಬಹುದು. ಧೂಮಪಾನವೂ ಅಪಾಯದ ಅಂಶವನ್ನು ಹೊಂದಿದೆ ಎಂದು ಅಧ್ಯಯನ ತಿಳಿಸಿದೆ. (ಐಎಎನ್ಎಸ್)
ಇದನ್ನೂ ಓದಿ: ಭಾರತದಲ್ಲಿ ವಿನಾಶಕಾರಿ ಪರಿಣಾಮ ಬೀರುತ್ತಿದೆ ತಂಬಾಕು; ಜಾಗತಿಕ ಅಧ್ಯಯನದಿಂದ ಬಯಲು