ಸೈಕೆಡೆಲಿಕ್ ಅಣಬೆಗಳ ಪ್ರಾಥಮಿಕ ಅಂಶ ಸೈಲೋಸಿಬಿನ್ ಅನ್ನು ವಿವಿಧ ವೈದ್ಯಕೀಯ ಚಿಕಿತ್ಸೆಯ ಸಣ್ಣ ಡೋಸ್ಗಳಲ್ಲಿ ಬಳಕೆ ಮಾಡಬಹುದು ಎಂದು ಸದರ್ನ್ ಡೆನ್ಮಾರ್ಕ್ ಯುನಿವರ್ಸಿಟಿಯ ಇತ್ತೀಚಿನ ಅಧ್ಯಯನಗಳು ತಿಳಿಸಿವೆ.
ಸಾಂಪ್ರದಾಯಿಕ ಸೈಲೋಸಿಬಿನ್ ರಾಸಾಯನಿಕವನ್ನು ದೀರ್ಘಕಾಲದಲ್ಲಿ ಗುರುತಿಸಲಾಗಿದ್ದು, ಇದೀಗ ಸಂಶೋಧಕರು ಇದು ಮನೋವೈಜ್ಞಾನಿಕ ಸ್ಥಿತಿಗಳನ್ನು ಉಪಶಮನ ಮಾಡುವ ಸಾಮರ್ಥ್ಯ ಹೊಂದಿದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಅದರಲ್ಲೂ ನಿರ್ಧಿಷ್ಟವಾಗಿ ವ್ಯಸನ ಮತ್ತು ಖಿನ್ನತೆಯಂತಹ ಸಮಸ್ಯೆಗಳ ಚಿಕಿತ್ಸೆ ಅಧಿಕ ಡೋಸ್ನ ಸೈಲೋಸಿಬಿನ್ ಸಂಯೋಜಿಸಬಹುದು ಎಂದಿದ್ದಾರೆ.
ಥೆರಪ್ಯೂಟಿಕ್ ಚಿಕಿತ್ಸೆಗಳಲ್ಲಿ ರೋಗಿಯು ಸಂಪೂರ್ಣ ಚಿಕಿತ್ಸಕ ತಯಾರಿಕೆಯ ನಂತರ ಸೈಲೋಸಿಬಿನ್ ಅನ್ನು ತೆಗೆದುಕೊಳ್ಳುತ್ತಾರೆ. ತರಬೇತಿ ಪಡೆದ ಚಿಕಿತ್ಸಕರೊಂದಿಗೆ ಬೆಂಬಲ ವಾತಾವರಣದಲ್ಲಿ ಸೈಕೆಡೆಲಿಕ್ ಅನುಭವವನ್ನು ಪಡೆಯುತ್ತಾರೆ. ಇದನ್ನು ಚಿಕಿತ್ಸಾ ಅವಧಿಗಳಲ್ಲಿ ಸಂಯೋಜಿಸಲಾಗಿದೆ. ಆಸ್ಪತ್ರೆಗಳಲ್ಲಿ ರೋಗಿಗಳ ಜೊತೆಯಲ್ಲಿ ಇಲಿಗಳ ಮೇಲೆ ಈ ಪ್ರಯೋಗವನ್ನು ಆಯೋಜಿಸಲಾಗಿದೆ.
ಇಲಿಗಳ ಮೇಲೆ ಅಧ್ಯಯನ: ಈ ಅಧ್ಯಯನವನ್ನು ನೇಚರ್ - ಮೊಲೆಕ್ಯೂಲರ್ ಸೈಕಿಯಾಟ್ರಿಕ್ನಲ್ಲಿ ಪ್ರಕಟಿಸಲಾಗಿದೆ. ದಕ್ಷಿಣ ಡೆನ್ಮಾರ್ಕ್ ವಿಶ್ವವಿದ್ಯಾನಿಲಯದಲ್ಲಿ ಕ್ಲಿನಿಕಲ್ ಫಿಸಿಯಾಲಜಿ ಮತ್ತು ನ್ಯೂಕ್ಲಿಯರ್ ಮೆಡಿಸಿನ್ ಸಂಶೋಧನಾ ಘಟಕದ ಸಹಾಯಕ ಪ್ರೊಫೆಸರ್ ಮೈಕೆಲ್ ಪಾಲ್ನರ್ ಮತ್ತು ಪಿಎಚ್‌ಡಿ ವಿದ್ಯಾರ್ಥಿ ಕ್ಯಾಟ್ ಕಿಲೆರಿಚ್ ಇಲಿಗಳ ಮೇಲೆ ಇದರ ಪರಿಣಾಮ ಕುರಿತು ಅಧ್ಯಯನ ನಡೆಸಿದ್ದಾರೆ.
ಅವರ ಗಮನವೂ ಸಾಮಾನ್ಯ ಡೋಸ್ಗಳಲ್ಲಿ ಬಳಕೆ ಮಾಡುವುದಕ್ಕಿಂತ ಪುನರಾವರ್ತಿತ ಕಡಿಮೆ ಪ್ರಮಾಣದ ಸೈಲೋಸಿಬಿಸ್ ಅನ್ನು ನೀಡುವುದರ ಮೇಲಿದೆ. ಇದನ್ನು ಸಾಮಾನ್ಯವಾಗಿ ಮೈಕ್ರೋಡೋಸಿಂಗ್ ಎಂದು ಕರೆಯಲಾಗುವುದು.
ಮೈಕ್ರೋಡೋಸಿಂಗ್ ಎಂಬ ಪದವು ಸಂಸ್ಕೃತಿಕ ಪ್ರದರ್ಶನದ ಜೊತೆಯಲ್ಲಿ ಪ್ರಖ್ಯಾತಗೊಂಡಿದೆ. ಸಿಲಿಕಾನ್ ವ್ಯಾಲಿ, ಕ್ಯಾಲಿಫೋರ್ನಿಯಾ ಮತ್ತು ಅದರ ಸುತ್ತಮುತ್ತದ ಕಥೆಗಳಲ್ಲಿ ವಿವಿಧ ಸವಾಲುಗಳಿಗೆ ಸ್ವಯಂ - ಔಷಧಗಳ ಒಂದು ರೂಪವಾಗಿ ಇಂಟರ್ನೆಟ್ ಮೂಲವಾಗಿದೆ ಎಂದು ಅಧ್ಯಯನದ ಕಡೆಯ ಲೇಖಕ ಮೈಕೆಲ್ ಪಾಲ್ನರ್ ತಿಳಿಸಿದ್ದಾರೆ.
ಆತಂಕ ಕಡಿಮೆ ಅಂಶ ಪತ್ತೆ: ಈ ಅಧ್ಯಯನವನ್ನು ಇಲಿಗಳ ಮೇಲೆ ನಡೆಸಲಾಗಿದ್ದು, ಪ್ರಾಣಿಗಳ ಸಹನೀಯತೆ ಕಡಿಮೆ ಡೋಸ್ ಸೈಲೋಸಿಬಿಸ್ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದು, ಇದು ಒತ್ತಡ, ಆತಂಕ ಮತ್ತು ಪರ್ಯಾಯ ಲೊಕೊಮೋಟರ್ ಚಟುವಟಿಕೆಯ ಚಿಹ್ನೆಯನ್ನು ಕಡಿಮೆ ಮಾಡಿದೆ.
ಪುನರಾವರ್ತಿತ ಕಡಿಮೆ ಡೋಸ್ನ ಸೈಲೋಸಿಬಿಸ್ ಇಲಿಗಳ ಒತ್ತಡ ವರ್ಧಿತ ಸ್ಥಿತಿಸ್ಥಾಪಕತ್ವ ಹೆಚ್ಚಿಸಿದೆ. ಅವರಲ್ಲಿ ಕಡಿಮೆ ಸಂಕೀರ್ಣ ನಡುವಳಿಕೆಯನ್ನು ತೋರಿಸಿದೆ ಎಂಬುದು ಗಮನಾರ್ಹವಾಗಿದೆ. ಹೆಚ್ಚುವರಿಯಾಗಿ, ಮಿದುಳಿನ ತಲಮಸ್ ಪ್ರದೇಶದಲ್ಲಿ ಸಂಪರ್ಕದ ಸಂಖ್ಯೆಯನ್ನು ಹೆಚ್ಚಿಸಿದೆ. ಈ ಮಿದುಳಿನ ಪ್ರದೇಶವೂ ನಿರ್ಧಾರ ಮತ್ತು ಕಾಳಜಿಯನ್ನು ಶೋಧಿಸುವ ಕೆಲಸ ಮಾಡುತ್ತದೆ.
ತಲಮಸ್ನಲ್ಲಿನ ಸಂಪರ್ಕದಲ್ಲಿನ ಈ ಬದಲಾವಣೆಯು ಒತ್ತಡದ ವರ್ಧಿತ ಸ್ಥಿತಿಸ್ಥಾಪಕತ್ವ ತಡೆಯಲು ಒತ್ತು ನೀಡಿದ್ದು, ಅನೇಕ ಮಂದಿ ಸಕಾರಾತ್ಮಕವಾಗಿರಲು ಯಾಕೆ ಸಾಧ್ಯ ಹಾಗೂ ಸೈಕೆಡೆಮಿಕ್ ಅಣಬೆಗಳ ಸಣ್ಣ ಡೋಸ್ಗಳ ಯೋಗಕ್ಷೆಮ ಪರಿಣಾಮವನ್ನು ವಿವರಿಸಿದೆ. (ಎಎನ್ಐ)
ಇದನ್ನೂ ಓದಿ: ತಾಯಿಗೆ ಮಾತ್ರವಲ್ಲ.. ತಂದೆಗೂ ಕಾಡುತ್ತಾ ಪ್ರಸವಪೂರ್ವ ಖಿನ್ನತೆ?