ETV Bharat / sukhibhava

Skipping Health Benefits: ಹೊಟ್ಟೆಯ ಸುತ್ತಲಿನ ಕೊಬ್ಬು ಕರಿಗಿಸಿಕೊಳ್ಳಬೇಕೆ?.. ಪ್ರತಿದಿನ 'ಸ್ಕಿಪ್ಪಿಂಗ್' ಮಾಡುವುದು ಸೂಕ್ತ - Body Balance rise from Skipping

Skipping Health Benefits : ಅಧಿಕ ತೂಕ ಹೊಂದಿದ್ದವರು ತೂಕ ಇಳಿಸಿಕೊಳ್ಳಲು ಇಷ್ಟ ಪಡುತ್ತಿದ್ದಾರೆ. ಇಂತವರಿಗೆ ಸ್ಕಿಪ್ಪಿಂಗ್ ಉತ್ತಮ ಮಾರ್ಗವಾಗಿದೆ. ನಿತ್ಯ ಸ್ಕಿಪ್ಪಿಂಗ್​ ವ್ಯಾಯಾಮ ಮಾಡುವುದರಿಂದ ಎಷ್ಟು ಪ್ರಯೋಜನಗಳಿವೆ ಎಂಬುದನ್ನು ತಿಳಿಯೋಣಾ ಬನ್ನಿ..

Skipping Health Benefits  Skipping Health Benefits In Kannada  Skipping Muscle Benefits  ಅಧಿಕ ತೂಕ ಹೊಂದಿದ್ದವರು ತೂಕ ಇಳಿಸಿಕೊಳ್ಳಲು ಇಷ್ಟ  ಸ್ಕಿಪ್ಪಿಂಗ್ ಉತ್ತಮ ಮಾರ್ಗ  Skipping Muscle Benefits  ಬಾಡಿ ಬ್ಯಾಲೆನ್ಸ್​ ಹೆಚ್ಚು ಮಾಡಲು ಸಹಾಯ  ಮೂಳೆ ಗಟ್ಟಿಯಾಗುವುದು  Body Balance rise from Skipping
ಹೊಟ್ಟೆಯ ಸುತ್ತಲಿನ ಕೊಬ್ಬನ್ನು ಕರಿಸಿಕೊಳ್ಳಬೇಕೆ
author img

By

Published : Aug 17, 2023, 12:37 PM IST

Skipping Health Benefits : ಅನೇಕರು ಅಧಿಕ ತೂಕ ಮತ್ತು ಬೊಜ್ಜಿನ ಸಮಸ್ಯೆದಿಂದ ಬಳಲುತ್ತಿದ್ದಾರೆ. ತೂಕ ಇಳಿಸಿಕೊಳ್ಳಲು ಹಲವು ರೀತಿಯ ವ್ಯಾಯಾಮಗಳನ್ನು ಮಾಡುತ್ತಾರೆ. ಆದರೆ, ತೂಕವನ್ನು ವೇಗವಾಗಿ ಇಳಿಸಲು ಉತ್ತಮ ವ್ಯಾಯಾಮ ಯಾವುದು ಎಂಬುದು ಅನೇಕರಿಗೆ ತಿಳಿದಿಲ್ಲ. ಪ್ರತಿಯೊಂದು ರೀತಿಯ ವ್ಯಾಯಾಮವು ಪ್ರತಿ ವ್ಯಕ್ತಿಗೆ ವಿಭಿನ್ನವಾಗಿ ಕಾರ್ಯನಿರ್ವಹಿಸುತ್ತದೆ. ಆದರೆ 'ಸ್ಕಿಪ್ಪಿಂಗ್' ಎಂಬುದು ದೇಹದ ಎಲ್ಲ ಪ್ರಕಾರಗಳಿಗೆ ಉತ್ತಮವಾಗಿ ಕಾರ್ಯನಿರ್ವಹಿಸುವ ವ್ಯಾಯಾಮವಾಗಿದೆ.

ಕೆಲವರು ತೂಕವನ್ನು ಕಳೆದುಕೊಳ್ಳುವ ಸಂಬಂಧ ವ್ಯಾಯಾಮದ ಜೊತೆಗೆ ಡಯಟ್​ ಪದ್ಧತಿಯನ್ನು ಅನುಸರಿಸುತ್ತಾರೆ. ಸ್ಕಿಪ್ಪಿಂಗ್ ಎಲ್ಲರೂ ಅನುಸರಿಸುವ ವ್ಯಾಯಾಮದ ಅತ್ಯುತ್ತಮ ರೂಪವಾಗಿದೆ. ಸ್ಕಿಪ್ಪಿಂಗ್​ಗಾಗಿ ಹೆಚ್ಚು ಖರ್ಚು ಮಾಡುವ ಅಗತ್ಯವಿಲ್ಲ. ಜಿಮ್‌ಗೆ ಹೋಗುವವರಿಗೆ ಇದು ಬಹಳ ಉಪಯುಕ್ತ. ಈ ವ್ಯಾಯಾಮಕ್ಕೆ ಕೇವಲ ಒಂದು ಹಗ್ಗ ಮತ್ತು ಒಂದು ಜೋಡಿ ಶೂ ಇದ್ರೆ ಸಾಕು. ಆದರೆ ನಿತ್ಯ ಸ್ಕಿಪ್ಪಿಂಗ್ ಮಾಡುವುದರಿಂದ ನಮ್ಮ ದೇಹದ ಅಂಗಾಂಗಗಳ ಕಾರ್ಯನಿರ್ವಹಣೆ ಸುಧಾರಿಸುತ್ತದೆ ಎನ್ನುತ್ತಾರೆ ತಜ್ಞರು.

ಖಂಡಗಳ ಶಕ್ತಿ ಹೆಚ್ಚಳ.. (Skipping Muscle Benefits): ನಿಯಮಿತವಾಗಿ ಸ್ಕಿಪ್ಪಿಂಗ್ ಮಾಡುವುದರಿಂದ ದೇಹಕ್ಕೆ ಒಳ್ಳೆಯದು. ಇದರಿಂದಾಗಿ ದೇಹದಲ್ಲಿ ಕ್ಯಾಲೊರಿಗಳನ್ನು ಬರ್ನ್​ ಆಗುತ್ತವೆ. ಅಷ್ಟೇ ಅಲ್ಲ ಖಂಡಗಳು ಅಥವಾ ಸ್ನಾಯುಗಳು ಬಲಗೊಳ್ಳುತ್ತವೆ. ಕೈಗಳು ಮತ್ತು ಕಾಲುಗಳು ಜೊತೆಗೆ ವರ್ಕೌಟ್​ ಆಗುವುದರಿಂದ ದೇಹ ಸಹ ಫಿಟ್ ಆಗಿರುತ್ತದೆ.

ಹಾರ್ಟ್​ ಫಿಟ್​ (Skipping Health Benefits..) : ಸ್ಕಿಪ್ಪಿಂಗ್​ನಿಂದ ದೇಹದ ತೂಕ ಕಡಿಮೆ ಆಗುವುದರ ಜೊತೆ ಹೃದಯ ಸ್ನಾಯುಗಳನ್ನು ಬಲಗೊಳ್ಳುತ್ತವೆ. ಸ್ಕಿಪ್ಪಿಂಗ್ ವೇಳೆ ನಾವು ಜಂಪ್​ ಮಾಡುವುದರಿಂದ ಹೃದಯ ಬಡಿತ ಮತ್ತು ಉಸಿರಾಟದ ಪ್ರಮಾಣ ಹೆಚ್ಚಾಗುತ್ತದೆ. ಇದರಿಂದ ಹೃದಯ ಮತ್ತು ಶ್ವಾಸಕೋಶದ ಕಾರ್ಯ ಸುಧಾರಣೆಗೊಳ್ಳುತ್ತದೆ. ಅಷ್ಟೇ ಅಲ್ಲ ದೇಹದ ಎಲ್ಲ ಭಾಗಗಳಿಗೂ ರಕ್ತ ಮತ್ತು ಆಮ್ಲಜನಕ ಪೂರೈಕೆ ಸರಳವಾಗಿ ಮತ್ತು ಅಡತಡೆವಿಲ್ಲದೆ ಸರಾಗವಾಗಿ ನಡೆಯುತ್ತದೆ.

ಬಾಡಿ ಬ್ಯಾಲೆನ್ಸ್​ ಹೆಚ್ಚು ಮಾಡಲು ಸಹಾಯ (Body Balance rise from Skipping) : ಸ್ಕಿಪ್ಪಿಂಗ್ ದೇಹದ ಎಲ್ಲ ಭಾಗಗಳು ಚಲಿಸುವಂತಾಗುತ್ತದೆ. ಇದು ಕಾಲುಗಳು, ತೋಳುಗಳು ಮತ್ತು ಇತರ ಅಂಗಗಳ ನಡುವಿನ ಸಮನ್ವಯವನ್ನು ಸುಧಾರಿಸುತ್ತದೆ. ಇದು ದೇಹದ ಬ್ಯಾಲೆನ್ಸ್​ ಅನ್ನು ಹೆಚ್ಚಿಸುತ್ತದೆ.

ತೂಕ ಇಳಿಕೆ.. (Skipping Weight Loss): ಸ್ಕಿಪ್ಪಿಂಗ್ಮಾಡುವುದರಿಂದ ದೇಹದ ಭಾಗಗಳ ಚಲನವಲನಗಳು ವೇಗ ಪಡೆಯುತ್ತವೆ. ಪರಿಣಾಮ ನಮ್ಮ ದೇಹದಲ್ಲಿರುವ ಹೆಚ್ಚು ಕ್ಯಾಲೊರಿಗಳನ್ನು ಸುಟ್ಟು ಹಾಕುತ್ತದೆ. ಇದರಿಂದಾಗಿ ದೇಹದ ತೂಕ ಕಡಿಮೆ ಆಗುತ್ತದೆ. ಸ್ಕಿಪ್ಪಿಂಗ್ ಮಾಡುವುದರಿಂದ ಭುಜಗಳ ಮೇಲೆ ಮತ್ತು ಮುಂಡದ ಸುತ್ತ ಸಂಗ್ರಹವಾಗಿರುವ ಕೊಬ್ಬನ್ನು ಕರಗಿಸುತ್ತದೆ. ದೇಹದ ಭಾಗಗಳಲ್ಲಿ ಹೆಚ್ಚುವರಿ ಕೊಬ್ಬನ್ನು ಕರಿಗಿಸಿ ಆರೋಗ್ಯವಂತನಾಗಿ ಮಾಡುತ್ತದೆ.

ಒತ್ತಡದಿಂದ ರಿಲೀಫ್.. (Stress Free From Skipping) : ಯಾವುದೇ ರೀತಿಯ ವ್ಯಾಯಾಮ ಮಾಡುವುದರಿಂದ ದೇಹದಲ್ಲಿ ಡೋಪಮೈನ್ ಹಾರ್ಮೋನ್ ಬಿಡುಗಡೆಯಾಗುತ್ತದೆ. ಇದು ಸ್ಕಿಪ್ಪಿಂಗ್​ ಮಾಡುವ ಮೂಲಕ ಹೆಚ್ಚು ಬಿಡುಗಡೆ ಮಾಡುತ್ತದೆ. ಇವುಗಳ ಬಿಡುಗಡೆಯಿಂದ ನಮ್ಮ Stress ಅಥವಾ ಒತ್ತಡ ಕಡಿಮೆಯಾಗುತ್ತದೆ.

ಮೂಳೆ ಗಟ್ಟಿಯಾಗುವುದು.. (Skipping For Bone Health): ಸ್ಕಿಪ್ಪಿಂಗ್‌ ಮಾಡವಾಗ ನಾವು ಮೇಲಕ್ಕೆ ಮತ್ತು ಕೆಳಕ್ಕೆ ಜಿಗಿಯುತ್ತೇವೆ. ಇದರಿಂದಾಗಿ ನಮ್ಮ ಮೂಳೆಗಳ ಮೇಲೆ ಒತ್ತಡ ಬೀಳುತ್ತದೆ. ಆದರೆ ಇದು ದೀರ್ಘಾವಧಿಯಲ್ಲಿ ಮೂಳೆಗಳನ್ನು ಗಟ್ಟಿಗೊಳಿಸುತ್ತವೆ. ಒಟ್ನಲ್ಲಿ ಸ್ಕಿಪ್ಪಿಂಗ್ ಮಾಡುವುದರಿಂದ ದೇಹಕ್ಕೆ ಹೆಚ್ಚು ಅನುಕೂಲವಾಗಿದೆ. ಆದ್ರೆ ಸ್ಕಿಪ್ಪಿಂಗ್​ ಮಾಡುವಾಗ ಎಚ್ಚರ ವಹಿಸುವುದು ಸೂಕ್ತ.. ಸ್ವಲ್ಪ ಎಡವಿದರೂ ಕಾಲು ಮುರಿತಗೊಳ್ಳುವುದು. ಹೀಗಾಗಿ ಸ್ಕಿಪ್ಪಿಂಗ್​ ಮಾಡುವಾಗ ಎಚ್ಚರ ವಹಿಸುವುದು ಒಳ್ಳೆಯದು.

ಓದಿ: Pitta Dosha: ಪಿತ್ತ ದೋಷ ನಿವಾರಣೆಗೆ ಈ 3 ಸಲಹೆ ಪಾಲಿಸಿ, ಸಾಕು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.