ETV Bharat / sukhibhava

ಬೆಳಗಿನ ಉಪಹಾರ ತಪ್ಪಿಸುವುದರಿಂದ ರೋಗ ನಿರೋಧಕ ಶಕ್ತಿ ಮೇಲೆ ಪರಿಣಾಮ; ಅಧ್ಯಯನ - ಅಭಿವೃದ್ಧಿ ಪಡಿಸುವ ಸಾಧ್ಯತೆ ಇದೆ

ಉಪವಾಸ ಮಾಡುವುದು ಅದರಲ್ಲೂ ಬೆಳಗಿನ ತಿಂಡಿಯನ್ನು ಬಿಡುವುದರಿಂದ ರೋಗ ನಿರೋಧಕ ಶಕ್ತಿ ಕಡಿಮೆಯಾಗಲಿದ್ದು, ಸೋಂಕಿನ ವಿರುದ್ಧ ಹೋರಾಡುವ ಸಾಮರ್ಥ್ಯ ಕುಗ್ಗಲಿದೆ

Skipping breakfast affects immunity
Skipping breakfast affects immunity
author img

By

Published : Feb 24, 2023, 3:43 PM IST

ಬೆಂಗಳೂರು: ಉಪವಾಸವನ್ನು ಮಾಡುವುದರಿಂದ ದೇಹ ಸೋಂಕಿನ ವಿರುದ್ಧ ಹೋರಾಡಲು ಕಷ್ಟವಾಗುತ್ತದೆ. ಜೊತೆಗೆ ಹೃದಯ ಸಂಬಂಧಿ ರೋಗವನ್ನು ಅಭಿವೃದ್ಧಿ ಪಡಿಸುವ ಸಾಧ್ಯತೆ ಇದೆ ಎಂದು ಅಧ್ಯಯನ ತಿಳಿಸಿದೆ. ಇಕಾನ್ ಸ್ಕೂಲ್ ಆಫ್ ಮೆಡಿಸಿನ್‌ನ ಈ ಸಂಬಂಧ ಇಲಿಗಳ ಮಾದರಿ ಪರೀಕ್ಷೆ ನಡೆಸಿದೆ. ಊಟವನ್ನು ಬಿಡುವುದರಿಂದ ಮಿದುಳಿನ ಪ್ರತಿರಕ್ಷಣಾ ಕೋಶಗಳಿಗೆ ಹಾನಿಯಾಗುವುದರ ಜೊತೆಗೆ ದೇಹದ ಮೇಲೆ ಹೇಗೆ ಪ್ರಭಾವ ಬೀರಬಹುದು ಎಂಬುದನ್ನು ಈ ಅಧ್ಯಯನದ ಮೂಲಕ ಅರ್ಥೈಸಿಕೊಳ್ಳಬಹುದಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಉಪವಾಸ ಮಾಡುವುದು ಆರೋಗ್ಯಕರ. ಇದರಿಂದ ಸಾಕಷ್ಟ ಪ್ರಯೋಜನೆ ಇದೆ ಎಂಬುದರ ಸಂಬಂಧ ಸಾಕಷ್ಟು ಸಾಕ್ಷಿಗಳಿವೆ. ಆದರೆ, ಈ ಉಪವಾಸವೂ ನಮ್ಮ ಆರೋಗ್ಯದ ಮೇಲೆ ದುಬಾರಿ ಪರಿಣಾಮ ಬೀರಲಿದ್ದು, ಸೋಂಕಿನ ವಿರುದ್ಧ ಹೋರಾಡುವ ಸಾಮರ್ಥ್ಯದ ಕಡಿಮೆ ಮಾಡುತ್ತದೆ ಎಂದು ಲೇಖಕ ಫಿಲಿಪ್ ಸ್ವಿರ್ಸ್ಕಿ ತಿಳಿಸಿದ್ದಾರೆ.

ಇಲಿಗಳ ಮೇಲೆ ಅಧ್ಯಯನ: ಉಪವಾಸವೂ ನರ ಮತ್ತು ಪ್ರತಿರಕ್ಷಣಾ ವ್ಯವಸ್ಥೆಗಳ ನಡುವೆ ಹೇಗೆ ಪರಿಣಾಮ ಬೀರಲಿದೆ ಎಂಬುದರ ಸಂಬಂಧ ಇಲಿಗಳ ಮೇಲೆ ಅಧ್ಯಯನ ನಡೆಸಲಾಗಿದೆ. ಈ ಕುರಿತು ಅರ್ಥೈಸಿಕೊಳ್ಳಲು ಅಲ್ಪಾವಧಿ ಮತ್ತು 24 ಗಂಟೆಗಳಿಗಿಂತಲೂ ಹೆಚ್ಚಿನ ದೀರ್ಘಾವಧಿಯ ಉಪವಾಸಗಳನ್ನು ನಡೆಸಲಾಗಿದೆ. ಈ ವೇಳೆ ಪ್ರತಿ ರಕ್ಷಣಾ ವ್ಯವಸ್ಥೆ ಮೇಲೆ ಹೇಗೆ ಹಾನಿ ಮಾಡುತ್ತವೆ ಎಂಬುದನ್ನು ತಿಳಿಯಲಾಗಿದೆ. ಇಲಿಗಳ ಒಂದು ಗುಂಪಿಗೆ ಬೆಳಗ್ಗೆ ಎದ್ದಾಕ್ಷಣ ಉಪಹಾರ ನೀಲಾಗಿದ್ದು, ಮತ್ತೊಂದು ಗುಂಪಿಗೆ ಉಪವಾಸಕ್ಕೆ ದೂಡಲಾಗಿದೆ. ಈ ಎರಡು ಗುಂಪಿನ ಇಲಿಗಳ ರಕ್ತದ ಮಾದರಿಗಳನ್ನು ಪರಿಶೀಲಿಸಲಾಗಿದೆ. ಈ ವೇಳೆ ಇದರಲ್ಲಿ ಭಾರೀ ವ್ಯತ್ಯಾಯ ಕಂಡು ಬಂದಿದೆ.

ಪ್ರತಿರಕ್ಷಣಾ ವ್ಯವಸ್ಥೆ ಮೇಲೆ ಪರಿಣಾಮ: ವಿಶೇಷವಾಗಿ ಮೊನೊಸೈಟ್​​ಗಳ ಸಂಖ್ಯೆಯಲ್ಲಿ ವ್ಯತ್ಯಾಸವನ್ನು ಕಂಡು ಬಂದಿದೆ. ಈ ಮೊನೊಸೈಟ್​ಗಳು ಮೂಳೆ ಮಜ್ಜೆಯಲ್ಲಿ ಮಾಡಲ್ಪಟ್ಟ ಬಿಳಿ ರಕ್ತ ಕಣಗಳಾಗಿವೆ. ಹೃದಯ ಸಂಬಂಧಿ ಕಾಯಿಲೆಯಿಂದ ಕ್ಯಾನ್ಸರ್​ ವಿರುದ್ದ ಸೋಂಕಿನ ವಿರುದ್ಧ ಹೋರಾಡಲು ಪ್ರಮುಖ ಪಾತ್ರವಹಿಸುತ್ತದೆ.

ಅಧ್ಯಯನಕ್ಕೆ ಮೊದಲು ಎಲ್ಲಾ ಇಲಿಗಳಲ್ಲಿ ಈ ಮೊನೊಸೈಟ್​ಗಳು ಒಂದೇ ರೀತಿ ಇದ್ದವು. ಉಪವಾಸದ ಬಳಿಕ ಈ ಮೊನೊ ಸೈಟ್​ಗಳ ಮೇಲೆ ಪರಿಣಾಮ ಕಾಣಬಹುದಾಗಿದೆ. ಶೇ 90ರಷ್ಟು ಕೋಶಗಳು ಕಣ್ಮರೆಯಾಗಿದೆ. ಉಪವಾಸದ ಏಂಟು ಗಂಟೆಗಳ ಬಳಿಕ ಇದರ ಸಂಖ್ಯೆ ಮತ್ತಷ್ಟು ಕುಗ್ಗುತ್ತದೆ. ಈ ಮಧ್ಯೆ ಉಪವಾಸರಹಿತರ ಗುಂಪಿನಲ್ಲಿ ಈ ರೀತಿಯ ಯಾವುದೇ ಸಮಸ್ಯೆ ಕಂಡು ಬಂದಿಲ್ಲ.ಸೋಂಕಿನ ವಿರುದ್ಧ ಹೋರಾಡಲು ಈ ಮೊಲೊಸೈಟ್​ಗಳು ಕಡಿಮೆ ನಿರೋಧಕವಾಗಿದೆ. ಅಷ್ಟೇ ಅಲ್ಲದೇ, ಈ ಉಪವಾಸ ಮೆದುಳು ಮತ್ತು ಈ ರೋಗನಿರೋಧಕ ಕೋಶಗಳ ನಡುವಿನ ಸಂಪರ್ಕ ಸಾಧಿಸಲು ಸಮರ್ಥವಾಗದೆ ಹೋಗಬಹುದು.

ಮೆದುಳಿನ ನಿರ್ದಿಷ್ಟ ಪ್ರದೇಶಗಳು ಉಪವಾಸದ ಸಮಯದಲ್ಲಿ ಮೊನೊಸೈಟ್ ಪ್ರತಿಕ್ರಿಯೆಯನ್ನು ನಿಯಂತ್ರಿಸುತ್ತವೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಉಪವಾಸವು ಮೆದುಳಿನಲ್ಲಿ ಒತ್ತಡದ ಪ್ರತಿಕ್ರಿಯೆಯನ್ನು ಉಂಟುಮಾಡುತ್ತದೆ. ಜೊತೆಗೆ ಹಸಿವೆ ಮತ್ತು ಕೋಪದ ಭಾವನೆಗೆ ಗುರಿ ಮಾಡುತ್ತವೆ. ಉಪವಾಸವೂ ಸೋಂಕಿನ ವಿರುದ್ಧ ಹೋರಾಡಲು ಯಾವುದೇ ಪ್ರಯೋಜವನ್ನು ನೀಡುವುದಿಲ್ಲ. ಇದು ದೇಹದ ಸಾಮರ್ಥ್ಯಕ್ಕೆ ಪ್ರಯೋಜನಕಾರಿ ಆಗಿರುವುದಿಲ್ಲ ಎಂದು ಅಧ್ಯಯನ ತಿಳಿಸಿದೆ.

ಇದನ್ನೂ ಓದಿ: ತಡರಾತ್ರಿ ಯಾವ ಆಹಾರ ಸೇವಿಸಬಾರದು ಗೊತ್ತಾ..?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.