ETV Bharat / sukhibhava

Organ donation: ದೇಶದಲ್ಲಿ ಅಂಗಾಂಗ ಕಸಿ ಪ್ರಕ್ರಿಯೆಲ್ಲಿ ಗಮನಾರ್ಹ ಬೆಳವಣಿಗೆ.. ಇನ್ನೂ ಮೂಡಿಸಬೇಕಿದೆ ಅರಿವು - ಅಂಗಾಂಗ ಕಸಿಗಾಗಿ ಕಾಯುತ್ತಿರುವವರ ಸಂಖ್ಯೆ

World Organ donation day-2023 ಅಂಗಾಂಗ ದಾನದ ಕುರಿತು ಸರ್ಕಾರ ಸೇರಿದಂತೆ ವಿವಿಧ ಸಂಘಟನೆ, ಆಸ್ಪತ್ರೆಗಳು ಪ್ರಚಾರ ಪಡೆಸುತ್ತಿದೆ. ಆದರೂ ಕೂಡ ಅಂಗಾಂಗ ಕಸಿಗಾಗಿ ಕಾಯುತ್ತಿರುವವರ ಸಂಖ್ಯೆಯನ್ನು ಮುಟ್ಟಲು ಸಾಧ್ಯವಾಗಿಲ್ಲ.

Significant growth in organ donation in India

author img

By

Published : Aug 13, 2023, 5:00 AM IST

Updated : Aug 13, 2023, 6:20 AM IST

ನವದೆಹಲಿ: ಭಾರತದಲ್ಲಿ ಅಂಗಾಂಗ ಕಸಿ ಪ್ರಕ್ರಿಯೆ ಶೇ 27ರಷ್ಟು ಗಮನಾರ್ಹ ಬೆಳವಣಿಗೆ ಕಂಡಿದೆ. ಆದರೂ ಅನೇಕ ಮಂದಿ ಅಂಗಾಂಗ ಕಸಿಗೆ ಕಾಯುತ್ತಿದ್ದು, ಇನ್ನೂ ಹೆಚ್ಚಿನ ಮಟ್ಟದ ಬೆಳವಣಿಗೆ ಕಾಣಬೇಕಿದೆ. ದೇಶದಲ್ಲಿ ಸುಮಾರು 50 ಸಾವಿರ ಜನರು ಅಂಗಾಂಗ ಕಸಿಗಾಗಿ ಕಾಯುತ್ತಿದ್ದಾರೆ ಎಂದು ತಜ್ಞರು ತಿಳಿಸಿದ್ದಾರೆ.

ಭಾರತದಲ್ಲಿ 2022ರಲ್ಲಿ 15 ಸಾವಿರ ಅಂಗಾಂಗ ಕಸಿ ಚಿಕಿತ್ಸೆಯನ್ನು ನಡೆಸುವ ಮೂಲಕ ದಾಖಲೆ ಮಾಡಲಾಗಿದೆ. ಈ ಮೂಲಕ ಅಂಗಾಂಗ ದಾನವನ್ನು ಪ್ರೋತ್ಸಾಹಿಸುವ ಜೊತೆಗೆ ಜನರ ಜೀವ ಉಳಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ದೇಶದಲ್ಲಿ ಈ ಪ್ರಗತಿಯ ನಡುವೆಯೂ ಅಂಗಾಂಗ ದಾನ ಮಾಡುವ ದರ ಸರಾಸರಿ ಮಿಲಿಯನ್​ ಜನಸಂಖ್ಯೆಗೆ ಶೇ 0.52ರಷ್ಟಿದೆ. ಬೇಡಿಕೆ ಮತ್ತು ಪೂರೈಕೆ ನಡುವಿನ ಈ ಅಂತರವನ್ನು ಹೋಗಲಾಡಿಸುವ ಮತ್ತಷ್ಟು ಕ್ರಮಕ್ಕೆ ಉತ್ತೇಜನ ನೀಡಬೇಕಿದೆ.

ಬೇಡಿಕೆಯನ್ನು ಪೂರೈಸಲು ಮತ್ತು ರೋಗಿಗಳ ಜೀವನದ ಗುಣಮಟ್ಟವನ್ನು ಹೆಚ್ಚಿಸಲು ಅಂಗಾಂಗ ದಾನ ದರಗಳನ್ನು ಹೆಚ್ಚಿಸುವುದು ಅತ್ಯಗತ್ಯವಾಗಿದೆ. ಈ ಹಿನ್ನೆಲೆ ಜನರಲ್ಲಿ ಅರಿವು ಮೂಡಿಸಬೇಕಿದೆ. ಜನರ ಜೀವ ಉಳಿಸುವಲ್ಲಿ ಅಂಗಾಂಗ ದಾನದ ಮಹತ್ವವನ್ನು ತಿಳಿಸುವ ಉದ್ದೇಶದಿಂದ ಆಗಸ್ಟ್​ 13 ಅನ್ನು ವಿಶ್ವ ಅಂಗಾಂಗ ದಾನ ದಿನವನ್ನಾಗಿ ಆಚರಿಸಲಾಗುವುದು. ಈ ಮೂಲಕ ಜನರಲ್ಲಿ ಅಂಗಾಂಗ ದಾನಕ್ಕೆ ಪ್ರೋತ್ಸಾಹ ನೀಡುವ ಜೊತೆಗೆ ಅಂಗಾಂಗ ದಾನದ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಬೇಕಿದೆ.

ಭಾರತದಲ್ಲಿ ವಾರ್ಷಿಕವಾಗಿ 2 ಲಕ್ಷ ಜನರು ಪ್ರಮುಖ ಅಂಗಾಂಗಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಅಂಗಾಂಗ ದಾನ ಹೆಚ್ಚಿಸುವ ಸಂಬಂಧ ಸಾಮೂಹಿಕ ಪ್ರಯತ್ನವನ್ನು ನಡೆಸಬೇಕಿದೆ. ಇನ್ನು, ಮೆದುಳು ಸಾವು ಪ್ರಕರಣದಲ್ಲಿ ಶೇ 5-10ರಷ್ಟನ್ನು ಸರಿಯಾಗಿ ನಿರ್ವಹಿಸಿದರೆ ಜೀವಂತ ವ್ಯಕ್ತಿಗಳ ದಾನಿಗಳ ಬಳಕೆಯ ಅವಶ್ಯಕತೆ ಬರುವುದಿಲ್ಲ ಎಂದು ನವದೆಹಲಿಯ ಧರ್ಮಶೀಲ ನಾರಾಯಣ ಸೂಪರ್​ಸ್ಪೇಷಾಲಿಟಿ ಆಸ್ಪತ್ರೆಯ ವೈದ್ಯರಾದ ಡಾ ಎಲ್​ಕೆ ಜಾ ತಿಳಿಸಿದ್ದಾರೆ.

2022ರಲ್ಲಿ 15 ಸಾವಿರ ಅಂಗಾಂಗ ಕಸಿ ಚಿಕಿತ್ಸೆ ನಡೆಸಲಾಗಿದೆ. ಇದರಲ್ಲಿ ಕಿಡ್ನಿ ಕಸಿ ಚಿಕಿತ್ಸೆಯದ್ದೇ ಸಿಂಹಪಾಲಿದೆ. ಕಳೆದ ವರ್ಷ 11,423 ಕಿಡಿ ಚಿಕಿತ್ಸೆ ನಡೆಸಲಾಗಿದೆ. ಪ್ರತಿ ವರ್ಷ 2,00,000 ಕಿಡ್ನಿ ವೈಫಲ್ಯ ಪ್ರಕರಣಗಳು ವರದಿಯಾಗುತ್ತಿದ್ದು, ಇದಕ್ಕೆ ಹೋಲಿಸಿದಾಗ ಈ ಸಂಖ್ಯೆ ಕಡಿಮೆಯಾಗಿದೆ.

ಕಿಡ್ನಿ ಕಸಿ ಚಿಕಿತ್ಸೆಗೆ ಮೂತ್ರಪಿಂಡವನ್ನು ಜೀವಂತ ದಾನಿ ಅಥವಾ ಸಾವನ್ನಪ್ಪಿದ ದಾನಿಗಳಿಂದ ಪಡೆಯಬಹುದಾಗಿದೆ. ಜೀವಂತ ದಾನಿಗಳಲ್ಲಿ ಕೇವಲ ರೋಗಿಗಳ ಕುಟುಂಬ ಸದಸ್ಯರು, ಸ್ವಯಂ ದಾನಿಗಳು ಅಂಗಾಂಗ ದಾನ ಮಾಡಬಹುದಾಗಿದೆ. ಇನ್ನು, ಬಹುತೇಕ ಸಾವಿನ ಹಂತ ತಲುಪಿದವರು ಅಂದ್ರೆ ಮೆದುಳು ನಿಷ್ಕ್ರಿಯಗೊಂಡವರು ಮಾಡಬಹುದು. ಈ ಎರಡು ದಾನ ಪ್ರಕ್ರಿಯೆಗಳು ಕೂಡ ರೋಗಿಗಳಿಗೆ ಆಶಾದಾಯಕವಾಗಿವೆ. ಇವು ಅವರಿಗೆ ಜೀವನದ ಮತ್ತೊಂದು ಅವಕಾಶವನ್ನು ನೀಡುತ್ತದೆ.

ಇದನ್ನೂ ಓದಿ: ದೇಶದಲ್ಲಿ 10 ವರ್ಷಗಳಲ್ಲಿ ಮೂರು ಪಟ್ಟು ಹೆಚ್ಚಾದ ಅಂಗಾಂಗ ದಾನ

Last Updated : Aug 13, 2023, 6:20 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.