ಅನಿಮಿಯತ ಕೆಲಸದ ಅವಧಿ/ ಶಿಫ್ಟ್ಗಳ ಕೆಲಸವು ಮಹಿಳೆಯರ ಫಲವತ್ತತೆಯ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ಹೊಸ ಅಧ್ಯಯನ ಕಂಡುಕೊಂಡಿದೆ. 25ನೇ ಯುರೋಪಿಯನ್ ಕಾಂಗ್ರೆಸ್ ಆಫ್ ಎಂಡೋಕ್ರಿನೊಲಾಜಿಯಲ್ಲಿ ಈ ಕುರಿತು ಸಂಶೋಧನಾತ್ಮಕ ವರದಿ ಪ್ರಕಟಿಸಲಾಗಿದೆ. ಅಧ್ಯಯನಕ್ಕಾಗಿ ನಾಲ್ಕು ಹೆಣ್ಣು ಇಲಿಗಳನ್ನು ಒಳಪಡಿಸಲಾಗಿತ್ತು.
ಈ ಇಲಿಗಳ ಕಾರ್ಯನಿರ್ವಹಣೆ ಪಾತ್ರವನ್ನು ನಾಲ್ಕು ವಾರಗಳ ಕಾಲ ಗಮನಿಸಲಾಗಿದೆ. ಇದರೊಂದಿಗೆ ಅನಿಯಮಿತ ಸಮಯಗಳಲ್ಲಿ ಕೆಲಸ ಮಾಡುವುದು ಹೇಗೆ?, ಮಹಿಳೆಯರ ಫಲವತ್ತತೆಯ ಮೇಲೆ ಇದು ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಪರಿಶೀಲಿಸಲಾಗಿದೆ. ಸಂಶೋಧನೆಯ ಫಲಿತಾಂಶದಲ್ಲಿ ಅನಿಮಿಯತ ಸಮಯದಲ್ಲಿ ಮಹಿಳೆಯರು ಕೆಲಸ ಮಾಡುವುದನ್ನು ತಡೆಗಟ್ಟಲು ತೆಗೆದುಕೊಳ್ಳುವ ಕ್ರಮಗಳು ಅಭಿವೃದ್ಧಿಗೆ ಸಹಾಯ ಮಾಡುತ್ತವೆ ಎಂದು ಹೇಳಲಾಗಿದೆ.
ದೇಹದ ಜೈವಿಕ ಗಡಿಯಾರ ದಿನದ 24 ಗಂಟೆಗಳಿಗೆ ಅದ್ರಲ್ಲೂ ಹಗಲು ಹೊತ್ತಿನ ಆಧಾರದ ಮೇಲೆ ಹೊಂದಿಕೊಂಡಿರುತ್ತದೆ. ಅದರನುಸಾರವಾಗಿ ಸರ್ಕಾಡಿಯನ್ ರಿದಮ್ ಉತ್ಪತ್ತಿ ಮಾಡುತ್ತದೆ. ನಿದ್ರೆಯ ಚಕ್ರ, ಹಾರ್ಮೋನ್ ಸ್ರವಿಸುವಿಕೆ, ಜೀರ್ಣಕ್ರಿಯೆ ಮತ್ತು ಮರು ಉತ್ಪಾದನೆಗಳು ಈ ಜೈವಿಕ ಪ್ರಕ್ರಿಯೆ ಮತ್ತು ಕಾರ್ಯಗಳನ್ನು ಈ ಗಡಿಯಾರಗಳು ನಿಯಂತ್ರಿಸುತ್ತದೆ. ಅಸಬಂದ್ಧ ಬೆಳಕಿಗೆ ವಿಶೇಷವಾಗಿ ರಾತ್ರಿ ಬೆಳಕಿಗೆ ಒಡ್ಡಿಗೊಂಡಾಗ ಜೈವಿಕ ಗಡಿಯಾರ ಹೊರತಳ್ಳಲ್ಪಡುತ್ತದೆ.
ಇಲಿಗಳ ಮೇಲೆ ಅಧ್ಯಯನ: ಮಾಸ್ಟರ್ ಜೈವಿಕ ಗಡಿಯಾರ ಮೆದುಳಿನ ಮಧ್ಯಭಾಗದಲ್ಲಿರುವ ಹೈಪೋಥಾಲಮಸ್ ಎಂಬ ಸಣ್ಣ ಪ್ರದೇಶ ಸುಪ್ರಾಚಿಯಾಸ್ಮಾಟಿಕ್ ನ್ಯೂಕ್ಲಿಯಸ್‌ನಲ್ಲಿದೆ. ಹೈಪೋಥಾಲಮಸ್ ಪಿಟ್ಯುಟರಿ ಗ್ರಂಥಿಯ ಮೇಲೆ ಕಾರ್ಯನಿರ್ವಹಿಸುವ ಮೂಲಕ ಸಂತಾನೋತ್ಪತ್ತಿ ಕ್ರಿಯೆಯ ನಿಯಂತ್ರಕ ಕೇಂದ್ರವಾಗಿದೆ. ಹೈಪೋಥಾಲಮಸ್‌ನ ಕೆಳಭಾಗದಲ್ಲಿ ಇರಿಸಲಾಗಿದೆ. ಇದು ಅಂಡೋತ್ಪತ್ತಿಯನ್ನು ಉತ್ತೇಜಿಸಲು ಅಂಡಾಶಯದ ಚಟುವಟಿಕೆಯನ್ನು ನಿಯಂತ್ರಿಸುತ್ತದೆ. ಇಲಿಗಳು ಮತ್ತು ಮಾನವರಲ್ಲಿ ಹಲವಾರು ಅಧ್ಯಯನಗಳು ಸಿರ್ಕಾಡಿಯನ್ ರಿದಮ್ ಅಡ್ಡಿಪಡಿಸಿದಾಗ ಸ್ತ್ರೀ ಸಂತಾನೋತ್ಪತ್ತಿ ಮೇಲೆ ನಕಾರಾತ್ಮಕ ಪ್ರಭಾವವನ್ನು ಸೂಚಿಸುತ್ತವೆ. ಆದಾಗ್ಯೂ, ಇದರ ಕಾರ್ಯವಿಧಾನಗಳನ್ನು ಇನ್ನೂ ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲಾಗಿಲ್ಲ.
ಇನ್‌ಸ್ಟಿಟ್ಯೂಟ್ ಆಫ್ ಸೆಲ್ಯುಲಾರ್ ಮತ್ತು ಇಂಟಿಗ್ರೇಟಿವ್ ನ್ಯೂರೋಸೈನ್ಸ್ (INCI) ಮತ್ತು ಸ್ಟ್ರಾಸ್‌ಬರ್ಗ್ ವಿಶ್ವವಿದ್ಯಾಲಯದ ಸಂಶೋಧಕರು ಈ ಹಿಂದೆ ಶಿಫ್ಟ್ ಮಾದರಿ ಕೆಲಸಗಳು ಗರ್ಭ ಧರಿಸುವ ಸಾಧ್ಯತೆ ಕಡಿಮೆ ಮಾಡುತ್ತದೆ ಎಂಬುದರ ಬಗ್ಗೆ ಹಲವು ಕಾಲ ಅಧ್ಯಯನ ನಡೆಸಿದ್ದಾರೆ. ಇದೀಗ ಈ ಅಧ್ಯಯನ ದೀರ್ಘಾವಧಿ ಕೆಲಸದ ಪರಿಸ್ಥಿತಿಯಲ್ಲಿ ಬೆಳಕಿನ ಡಾರ್ಕ್ ಚಕ್ರಮಕ್ಕೆ ಒಡ್ಡಿಕೊಂಡಾಗ ಹೇಗೆ ಪರಿಣಾಮ ಬೀರುತ್ತದೆ ಎಂದು ಅಧ್ಯಯನ ಮಾಡಿದ್ದಾರೆ. ಅಂಡೋತ್ಪತ್ತಿಯನ್ನು ಪ್ರಚೋದಿಸುವ ಲ್ಯುಟೈನೈಸಿಂಗ್ ಹಾರ್ಮೋನ್ ಕಡಿಮೆ ಆಗಿದೆ.
ನಾಲ್ಕು ವಾರಗಳ ದೀರ್ಘಕಾಲ ಶಿಫ್ಟ್ ಕಾರ್ಯ ನಿರ್ವಹಣೆ ಮಾಸ್ಟರ್ ಜೈವಿಕ ಗಡಿಯಾರದಿಂದ ಕಿಸ್ಸೆಫಪ್ಟಿನ್ ನ್ಯೂರನ್ಗಳನ್ನು ದುರ್ಬಲಗೊಳಿಸುತ್ತದೆ. ಸಿರ್ಕಾಡಿಯನ್ ಅಡ್ಡಿಯು ಸಂತಾನೋತ್ಪತ್ತಿ ಕಾರ್ಯವನ್ನು ಬದಲಾಯಿಸುವ ನಿಖರವಾದ ಕಾರ್ಯವಿಧಾನಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಅಧ್ಯಯನ ಮುಖ್ಯವಾಗುತ್ತದೆ.
ಇದನ್ನೂ ಓದಿ: ಅವಧಿಪೂರ್ವ ಮಕ್ಕಳು ಜನಿಸುವ 5 ದೇಶಗಳಲ್ಲಿ ಭಾರತವೂ ಒಂದು: ವಿಶ್ವಸಂಸ್ಥೆ