ETV Bharat / sukhibhava

ಪ್ರೀತಿ ಯಾಕೆ ಕುರುಡು ಅನ್ನೋದಕ್ಕೆ ಉತ್ತರ ಹುಡುಕಿದ ವಿಜ್ಞಾನಿಗಳು!

ಪ್ರೀತಿಯಲ್ಲಿದ್ದ ವ್ಯಕ್ತಿಗೆ ತನ್ನ ಪ್ರೀತಿಯೇ ಕೇಂದ್ರಬಿಂದುವಾಗುತ್ತದೆ. ಜಗತ್ತಿನಲ್ಲಿ ಬೇರೆ ಏನು ಬೇಡದಂತೆ ಆಗುತ್ತದೆ. ಇದಕ್ಕೆ ಕಾರಣ ಏನು ಎಂಬುದನ್ನು ವಿಜ್ಞಾನಿಗಳು ಪತ್ತೆಗೆ ಮುಂದಾಗಿದ್ದಾರೆ.

Scientists studies on romantic love and human brain activation

author img

By ETV Bharat Karnataka Team

Published : Jan 10, 2024, 11:11 AM IST

ಸಿಡ್ನಿ: ಪ್ರೀತಿ ಕುರುಡು ಎಂಬ ಮಾತು ಕೇಳಿದ್ದೇವೆ. ಲವ್​ನಲ್ಲಿ ಬಿದ್ದವರಿಗೆ ತಮ್ಮ ಪ್ರೀತಿ ಹೊರತಾಗಿ ಯಾವುದೂ ಕಾಣುವುದಿಲ್ಲ. ತಮಗೆ ಪ್ರೀತಿಯೇ ಎಲ್ಲವೂ, ಅದುವೇ ಪ್ರಮುಖ ಎಂದು ಭಾವಿಸುತ್ತಾರೆ. ಇಂತಹ ಭಾವನೆ ಪ್ರೇಮಿಗಳಲ್ಲಿ ಮೂಡಲು ಕಾರಣವೇನು? ಈ ಪ್ರೀತಿ ಕುರುಡು ಎಂಬ ಕುರಿತು ಆಸ್ಟ್ರೇಲಿಯಾದ ವಿಜ್ಞಾನಿಗಳ ತಂಡ ಅಧ್ಯಯನ ನಡೆಸಿದ್ದಾರೆ. ಇದಕ್ಕಾಗಿ ಮಾನವನ ಮೆದುಳಿನ ವರ್ತನೆ ಸಕ್ರಿಯಗೊಳಿಸುವ ವ್ಯವಸ್ಥೆ (ಬಿಎಎಸ್​) ಮತ್ತು ಪ್ರೀತಿಯ ನಡುವಿನ ಸಂಬಂಧವನ್ನು ಪರಿಶೀಲಿಸಿದ್ದಾರೆ.

ರೋಮ್ಯಾಂಟಿಕ್​ ಲವ್​ ಎಂಬುದು ನಮ್ಮ ಮೆದುಳನ್ನು ಬದಲಾಯಿಸುತ್ತದೆ. ವ್ಯಕ್ತಿಯೊಬ್ಬ ಪ್ರೀತಿಯಲ್ಲಿ ಬಿದ್ದಾಗ ಆತನಲ್ಲಿ ಲವ್​ ಹಾರ್ಮೋನ್​ ಎಂದು ಗುರುತಿಸಲಾದ ಆಕ್ಸಿಟೋಸಿನ್​ ಬಿಡುಗಡೆಯಾಗುತ್ತೆ. ಇದು ಪ್ರೀತಿಯ ಭಾವನೆ ಅನುಭವಿಸುವಂತೆ ಮಾಡುತ್ತದೆ.

ಆಸ್ಟ್ರೇಲಿಯನ್ ನ್ಯಾಷನಲ್ ಯುನಿವರ್ಸಿಟಿ, ಕ್ಯಾನ್​ಬೆರಾ ಯುನಿವರ್ಸಿಟಿ ಮತ್ತು ದಕ್ಷಿಣ ಆಸ್ಟ್ರೇಲಿಯಾ ಯುನಿವರ್ಸಿಟಿ ಸಂಶೋಧಕರು, ಹೇಗೆ ನಮ್ಮ ಪ್ರೀತಿಪಾತ್ರರು ಮೆದುಳಿನ ಒಂದು ಭಾಗವಾಗಲು ಕಾರಣ ಅನ್ನೋದರ ಕುರಿತು ಮಾಪನ ಮಾಡಿದ್ದಾರೆ.

ಈ ಅಧ್ಯಯನವನ್ನು ಜರ್ನಲ್​ ಬಿಹೇವಿಯರಲ್​ ಸೈನ್ಸ್​ನಲ್ಲಿ ಪ್ರಕಟಿಸಲಾಗಿದ್ದು, ಇದಕ್ಕಾಗಿ 1,556 ಪ್ರೀತಿಯಲ್ಲಿದ್ದ ಯುವಜನರ ಕುರಿತು ಅಧ್ಯಯನ ನಡೆಸಿದ್ದಾರೆ. ಈ ಸಮೀಕ್ಷೆಯಲ್ಲಿ ಭಾಗಿದಾರರು ತಮ್ಮ ಸಂಗಾತಿ ಬಗ್ಗೆ ಇದ್ದ ಭಾವನಾತ್ಮಕ ಪ್ರತಿಕ್ರಿಯೆಯನ್ನು ಮತ್ತು ಅದರ ಸುತ್ತಲಿನ ವರ್ತನೆ ಹಾಗೂ ಎಲ್ಲಕ್ಕಿಂತ ಹೆಚ್ಚಿನ ಮಟ್ಟದಲ್ಲಿ ತಮ್ಮ ಪ್ರೀತಿಯನ್ನು ಇರಿಸಿರುವ ಕುರಿತು ಗಮನ ಹರಿಸಿ ಪ್ರಶ್ನೆಗಳನ್ನು ಕೇಳಿದ್ದಾರೆ.

ಪ್ರೀತಿಯಲ್ಲಿದ್ದಾಗ ನಮ್ಮ ಮೆದುಳು ವಿಭಿನ್ನವಾಗಿ ಪ್ರತಿಕ್ರಿಯಿಸುತ್ತದೆ. ಅಲ್ಲದೆ, ನಮ್ಮ ಪ್ರೀತಿಯನ್ನು ಜೀವನದ ಕೇಂದ್ರವಾಗಿಸುತ್ತದೆ. ರೋಮ್ಯಾಂಟಿಕ್​ ಲವ್​ನ ವಿಕಸನದ ಬಗ್ಗೆ ನಮಗೆ ಸ್ವಲ್ಪವೇ ತಿಳಿದಿದೆ ಎಂದು ಎಎನ್​ಯುನ ಪಿಎಚ್​ಡಿ ವಿದ್ಯಾರ್ಥಿ ಮತ್ತು ಪ್ರಮುಖ ಸಂಶೋಧಕರಾಗಿರುವ ಆ್ಯಡಂ ಬೊಡೆ ತಿಳಿಸಿದ್ದಾರೆ.

ಪ್ರತಿ ಫಲಿತಾಂಶವೂ ತಿಳಿಸುವಂತೆ ರೋಮ್ಯಾಂಟಿಕ್​ ಲವ್​​ ವಿಕಸನವೂ ಒಗಟುಗಳ ಪ್ರಮುಖ ಭಾಗವಾಗಿದೆ. ರೋಮ್ಯಾಂಟಿಕ್​ ಲವ್​​ ಐದು ಮಿಲಿಯನ್​ ವರ್ಷದ ಹಿಂದೆ ಅಂದರೆ ಮಂಗಗಳಿಂದ ಮಾನವ ಆದ ಬಳಿಕ ಅದು ವಿಕಸನವಾಗಿದೆ ಎಂದು ವಿಶ್ಲೇಷಿಸಿದ್ದಾರೆ ಬೊಡೆ.

ಈ ಕುರಿತು ಪುರಾತನ ಗ್ರೀಕ್​ ತತ್ವಜ್ಞಾನಿಗಳು ಹೆಚ್ಚು ತಿಳಿಸಿದ್ದಾರೆ. ಅಲ್ಲದೇ ಅದು ಹೇಗೆ ಅದ್ಬುತ ಮತ್ತು ಆಘಾತಾಕಾರಿ ಅನುಭವ ಎಂದು ತಿಳಿಸಿದ್ದಾರೆ. ಇದನ್ನು ಅವರು ತಮ್ಮ ಹಳೆಯ ಕವಿತೆಗಳಲ್ಲಿ ದಾಖಲಿಸಿದ್ದು, ಈ ಕವಿತೆಗಳು ಕ್ರಿ.ಪೂ. 2000ದಷ್ಟು ಹಳೆಯ ಇತಿಹಾಸ ಹೊಂದಿವೆ.

ರೋಮ್ಯಾಂಟಿಕ್​ ಪ್ರೀತಿ ಎಂಬುದು ನಮ್ಮ ಭಾವನೆ ಜೊತೆಗೆ ವರ್ತನೆಗಳಲ್ಲಿನ ಬದಲಾವಣೆ ಎಂದು ಕ್ಯಾನ್‌ಬೆರಾ ವಿಶ್ವವಿದ್ಯಾನಿಲಯದ ಡಾ ಫಿಲ್ ಕವನಾಗ್ ತಿಳಿಸಿದ್ದಾರೆ. ರೋಮ್ಯಾಂಟಿಕ್​ ಪ್ರೀತಿಯಲ್ಲಿ ಆಕ್ಸಿಟೀಸಿಸ್​ ಪಾತ್ರ ಪ್ರಮುಖವಾಗಿದೆ. ನಮ್ಮ ಪ್ರೀತಿಪಾತ್ರರೊಂದಿಗೆ ನಾವು ಮಾತುಕತೆಯಾಡುವ ಸಂದರ್ಭದಲ್ಲಿ ನಮ್ಮ ನರ ವ್ಯವಸ್ಥೆಯಲ್ಲಿ ಅಲೆಗಳನ್ನು ಕಾಣುತ್ತೇವೆ ಮತ್ತು ರಕ್ತ ಪರಿಚಲನೆಗೊಳ್ಳುತ್ತದೆ ಎಂದಿದ್ದಾರೆ.

ಆಕ್ಸಿಟೋಸಿಸ್​​ ಡೋಪಮೈನ್​ನೊಂದಿಗೆ ಸಂಯೋಜಿಸಿದಾಗ ನಮ್ಮ ಮೆದುಳು ರಾಸಾಯನಿಕ ಬಿಡುಗಡೆ ಮಾಡುವುದರಿಂದ ನಮ್ಮ ಪ್ರೀತಿಪಾತ್ರರು ನಮ್ಮ ಪ್ರಮುಖ ಕೇಂದ್ರವಾಗುತ್ತಾರೆ. ಈ ಪ್ರೀತಿ ಚಟುವಟಿಕೆಯು ಮೆದುಳಿನೊಂದಿಗೆ ಪಾಸಿಟಿವ್​ ಫೀಲಿಂಗ್​ ಹೊಂದಿದೆ.

ಮುಂದಿನ ಹಂತದ ಅಧ್ಯಯನದಲ್ಲಿ ತನಿಖೆಯು ಪುರುಷ ಮತ್ತು ಮಹಿಳೆಯರ ಪ್ರೀತಿ ನಡುವಿನ ವ್ಯತ್ಯಾಸವನ್ನು ವಿಶ್ವದಾದ್ಯಂತ ಸಮೀಕ್ಷೆ ನಡೆಸಲಿದೆ. (ಐಎಎನ್​ಎಸ್​)

ಇದನ್ನೂ ಓದಿ: ಹಸುಳೆಗಳು, ಟಿವಿ, ಫೋನ್​ಗಳ ಸ್ಕ್ರೀನ್​ ಅತಿ ಹೆಚ್ಚು ವೀಕ್ಷಣೆ ಮಾಡುವುದು ಒಳ್ಳೆಯದಲ್ಲ.. ಏಕೆಂದರೆ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.