ಲಂಡನ್: ಹಕ್ಕಿ ಜ್ವರ ಮನುಷ್ಯರನ್ನು ಕಾಡುವ ಸೋಂಕಿನಲ್ಲಿ ಒಂದಾಗಿದೆ. ಇಂತಹ ಹಕ್ಕಿ ಜ್ವರದ ಸೋಂಕನ್ನು ತಡೆಗಟ್ಟುವ ಜೀನ್ ವೊಂದನ್ನು ಅಂತಾರಾಷ್ಟ್ರೀಯ ವಿಜ್ಞಾನಿಗಳ ತಂಡ ಪತ್ತೆ ಮಾಡಿದೆ. ನೇಚರ್ ಜರ್ನಲ್ನಲ್ಲಿ ಪ್ರಕಟವಾದ ಈ ಅಧ್ಯಯನದಲ್ಲಿ ಸಂಶೋಧಕರು ಮಾನವನ ಪ್ರೋಟಿನ್, ಬಿಟಿಎನ್3ಎ3 (BTN3A3) ಹಕ್ಕಿಜ್ವರವಾದ ಇನ್ಫುಯೆಂಜಾ ಎ ವೈರಸ್ ತಡೆಯಬಹುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂದು ತಿಳಿಸಿದ್ದಾರೆ.
ಗ್ಲಾಸ್ಕೊವ್ನ ಯುನಿವರ್ಸಿಟಿಯ ಎಂಆರ್ಸಿಯ ಸೋಂಕು ಸಂಶೋಧನಾ ಕೇಂದ್ರ ಈ ಬಿಟಿಎನ್3ಎ3 ಏವಿಯನ್ (ಗಾಳಿಯ) ಜ್ವರ ವಿರುದ್ಧ ಪ್ರಮುಖ ಮಾನವ ರಕ್ಷಣೆಯಾಗಿದೆ ಬಿಟಿಎನ್3ಎ3 ಇನ್ಫ್ಲುಯೆಂಜಾ ಎ ವೈರಸ್ನ ಆರ್ಎನ್ ರೆಪ್ಲಿಕೇಷನ್ ಆರಂಭಿಕದಲ್ಲಿ ತಡೆಯುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.
ಏವಿಯನ್ ಇನ್ಸ್ಫ್ಲುಯೆಂಜಾ ಎ ವೈರಸ್ ಸಾಮಾನ್ಯವಾಗಿ ಹಕ್ಕಿ ಜ್ವರವಾಗಿದೆ. ಇದು ಬಾತುಕೋಳಿಯಂತಹ ಹಕ್ಕಿಗಳಿಂದ ಸಾಮಾನ್ಯವಾಗಿ ಹರಡುತ್ತದೆ. 2022 ಜಾಗತಿಕವಾಗಿ ಇಂತಹ ಹಕ್ಕಿಜ್ವರದ ಪ್ರಕರಣಗಳು ಹೆಚ್ಚಾದವು. ಇತ್ತೀಚೆಗೆ ಈ ಏವಿಯನ್ ಇನ್ಫ್ಲುಯೆಂಜಾ ವೈರಸ್ ಸೋಂಕು ದಾಖಲೆ ಮಟ್ಟದ ಒಟ್ಟೊರೊ, ಸಮುದ್ರ ಮೀನು, ನರಿ, ಡಾಲ್ಭಿನ್ ಮತ್ತು ಸೀಲ್, ಬೆಕ್ಕು ಸೇರಿದಂತೆ ಹಲವು ಪ್ರಾಣಿಗಳ ಸಾವಿಗೆ ಕಾರಣವಾಗಿತ್ತು.
ಹಕ್ಕಿ ಜ್ವರವು ಹಲವು ಸಸ್ತನಿಗಳಲ್ಲಿ ಮುಂದಿನ ಸಾಂಕ್ರಾಮಿಕತೆ ಕಾರಣವಾಗುವ ನಿರೀಕ್ಷೆ ಇದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಆದಾಗ್ಯೂ, ಅಪರೂಪದ ಇನ್ಫ್ಲುಯೆಂಜಾ ಎ ಸೋಂಕು ಮಾನವನಲ್ಲಿ ಸೋಂಕಿಗೆ ಕಾರಣವಾಗಬಹುದು. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, 2003-2023ರವರೆಗೆ ಒಟ್ಟಾರೆ 873 ಮನುಷ್ಯರಲ್ಲಿ ಈ ಇನ್ಫ್ಲುಯೆಂಜಾ (ಎಚ್5ಎನ್1) ಸೋಂಕು ಕಾಣಿಸಿಕೊಂಡಿದ್ದು, ಜಾಗತಿಕವಾಗಿ 21 ದೇಶದಲ್ಲಿ 458 ಸಾವಿಗೆ ಕಾರಣವಾಗಿದೆ.
ಈ ಅಧ್ಯಯನದಲ್ಲಿ ಸಂಶೋಧಕರು, ಋತುಮಾನದ ಮಾನವ ಜ್ವರದ ಸೋಂಕಿನ ಹೋಲಿಕೆ ಪತ್ತೆ ಮಾಡಿದ್ದಾರೆ. ಇದು ಮಾನವನ ಸಮುದಾಯಕ್ಕೆ ಆಗ್ಗಿದ್ದಾಂಗೆ ಸೋಂಕಿಗೆ ಕಾರಣವಾಗುತ್ತಿದೆ. ಬಿಟಿಎನ್3ಎ3 ಜೀನ್ ಈ ಮಾನವ ಜೀವಕೋಶಗಳಲ್ಲಿ ಏವಿಯನ್ ಜ್ವರದ ಪ್ರತಿರೂಪವನ್ನು ತಡೆಯುತ್ತದೆ. ಎಚ್7ಎನ್9 ಸೋಂಕು 2013ರಲ್ಲಿ 1500ರು ಜನರಲ್ಲಿ ಶೇ 40ರಷ್ಟು ಫಲವತ್ತತೆ ದರದ ಮೇಲೆ ಪರಿಣಾಮ ಬೀರಿತು. ಇನ್ನು ಇದರ ಪರಿಣಾಮವನ್ನು ತಪ್ಪಿಸುವಲ್ಲಿ ಈ ತಳಿಗಳು ಬಿಟಿಎನ್3ಎ3 ಜೀನ್‌ನ ತಡೆಯುವ ಪರಿಣಾಮಗಳನ್ನು ತಪ್ಪಿಸಿಕೊಳ್ಳಲು ಅನುಮತಿಸುವ ಆನುವಂಶಿಕ ರೂಪಾಂತರವನ್ನು ಹೊಂದಿವೆ ಎಂದು ತಂಡವು ಕಂಡು ಹಿಡಿದಿದೆ.
ರೂಪಾಂತರಗಳನ್ನು ಮೊದಲು ಪಕ್ಷಿಗಳಲ್ಲಿ ಪತ್ತೆಯಾದಾಗ ಈ ಸೋಂಕು ಮಾನವರಿಗೆ ಹರಡದಂತೆ ತಡೆಯಲು ಬಿಟಿಎನ್3ಎ3 ನಿರೋಧಕ ಸಹಾಯ ಮಾಡುತ್ತದೆ ಎಂದು ಅಧ್ಯಯನ ಮೊದಲ ಲೇಖಕ ರುಟೆ ಮಾರಿಯಾ ಪಿಂಟೊ ತಿಳಿಸಿದ್ದಾರೆ. ವಿನಾಶಕಾರಿ 1918-19 ಜಾಗತಿಕ ಜ್ವರ ಸಾಂಕ್ರಾಮಿಕ ಮತ್ತು 2009 ರಲ್ಲಿ ಹಂದಿ ಜ್ವರ ಸಾಂಕ್ರಾಮಿಕ ಸೇರಿದಂತೆ ಎಲ್ಲ ಇನ್ಫ್ಲುಯೆನ್ಸ ಸಾಂಕ್ರಾಮಿಕ ರೋಗಗಳು ಬಿಟಿಎನ್3ಎ3ಗೆ ನಿರೋಧಕಗಳಿಂದ ತಡೆಗಟ್ಟಲಾಗಿದೆ ಎಂದು ತಂಡವು ಕಂಡುಹಿಡಿದಿದೆ. ಮಾನವನ ಯಾವ ಆನುವಂಶಿಕ ಅಡೆತಡೆಗಳು ಪ್ರಾಣಿಗಳ ವೈರಸ್ ಅನ್ನು ಮಾನವ ಜೀವಕೋಶಗಳಲ್ಲಿ ಪುನರಾವರ್ತಿಸುವುದನ್ನು ತಡೆಯಬಹುದು ಎಂಬುದನ್ನು ಅರ್ಥಮಾಡಿಕೊಳ್ಳುವುದು ನಿರ್ಣಾಯಕವಾಗಿದೆ ಎಂದು ಅಧ್ಯಯನಕಾರರು ತಿಳಿಸಿದ್ದಾರೆ.
ಇದನ್ನೂ ಓದಿ: Covid-19: ಮನುಷ್ಯರಿಗೆ ಹರಡುವ ಕೊರೊನಾವೈರಸ್ ಯುಕೆಯ ಬಾವಲಿಗಳಲ್ಲಿ ಪತ್ತೆ