ನವದೆಹಲಿ : ಮಹಿಳೆಯರ ಫ್ಯಾಷನ್ ನಿರಂತರವಾಗಿ ಬದಲಾಗುತ್ತಿದೆ. ಪ್ರತಿದಿನ ಹೊಸ ಶೈಲಿಗಳು ಮತ್ತು ಟ್ರೆಂಡ್‌ಗಳು ಹೊರಹೊಮ್ಮುತ್ತಿವೆ. ಮಹಿಳೆಯರು ವಿಭಿನ್ನ ಶೈಲಿಯ ಬಟ್ಟೆಗಳನ್ನು ಧರಿಸಲು ಮತ್ತು ವಿನ್ಯಾಸಗೊಳಿಸಲು ಇಷ್ಟಪಡುತ್ತಾರೆ ಎಂದು ಬಾಲಿವುಡ್ ನಟಿ ಸಾರಾ ಅಲಿಖಾನ್ ಹೇಳಿದರು.
ಸಾಂದರ್ಭಿಕ ಉಡುಗೆ ಮತ್ತು ಪಾಪ್-ಸಂಸ್ಕೃತಿಯ ಉಡುಪುಗಳ ಬ್ರ್ಯಾಂಡ್ 'ದಿ ಸೋಲ್ಡ್ ಸ್ಟೋರ್'ನಲ್ಲಿ ಸಾರಾ ಅಲಿಖಾನ್ ಹೂಡಿಕೆ ಮಾಡಿದ್ದಾರೆ ಎಂಬ ವಿಚಾರ ಬಹಿರಂಗಗೊಂಡಿದೆ. ಕಳೆದ ವರ್ಷ ಆಗಸ್ಟ್‌ನಲ್ಲಿ, ಎಲಿವೇಶನ್ ಕ್ಯಾಪಿಟಲ್ ನೇತೃತ್ವದ ಸೀರಿಸ್-ಬಿ ಫಂಡಿಂಗ್ ಸುತ್ತಿನಲ್ಲಿ ಸ್ಟಾರ್ಟ್ ಅಪ್ 75 ಕೋಟಿ ರೂ. ಸಂಗ್ರಹಿಸಿತ್ತು.
ಹೂಡಿಕೆಯ ಬಗ್ಗೆ ಪ್ರತಿಕ್ರಿಯಿಸಿರುವ ಸೋಲ್ಡ್ ಸ್ಟೋರ್ ಸಹ-ಸಂಸ್ಥಾಪಕ ರೋಹಿನ್ ಸಂಟಾನಿ ಅವರು, "ಅವರ ಪ್ರಯೋಗಾತ್ಮಕ ಸ್ಟೈಲಿಂಗ್ ನಮ್ಮ ಬ್ರ್ಯಾಂಡ್ ಇಮೇಜ್ ಅನ್ನು ಇನ್ನಷ್ಟು ಉತ್ತಮವಾಗಿ ಪ್ರತಿಬಿಂಬಿಸುತ್ತದೆ.
ನಮಗೆ ಇವರಿಗಿಂತಲೂ ಉತ್ತಮವಾದ ಹೂಡಿಕೆದಾರರು ಮತ್ತು ಪಾಲುದಾರರು ಸಿಗುವುದು ಸಾಧ್ಯವಿಲ್ಲ. ಈ ಸಹಯೋಗವು ಇನ್ನೂ ಮುಂದೆ ದೊಡ್ಡ ಮಟ್ಟದ ವ್ಯವಹಾರಕ್ಕೆ ದಾರಿ ಮಾಡಿಕೊಡಲಿ ಎಂದು ನಾವು ನಿರೀಕ್ಷಿಸುತ್ತೇವೆ" ಎಂದು ಹೇಳಿದರು.
ಈ ಸೋಲ್ಡ್ ಸ್ಟೋರ್ ಬ್ರ್ಯಾಂಡ್‌ನೊಂದಿಗಿನ ತನ್ನ ಒಡನಾಟದ ಬಗ್ಗೆ ಮಾತಾಡುತ್ತಾ ನಟಿ ಸಾರಾ ಅವರು, 'ಅಲ್ಪಾವಧಿಯಲ್ಲಿಯೇ ದಿ ಸೋಲ್ಡ್ ಸ್ಟೋರ್ (ಟಿಎಸ್ಎಸ್) ಕ್ಯಾಶುಯಲ್ ವೇರ್ ವ್ಯವಹಾರದಲ್ಲಿ ತನ್ನದೇ ಆದ ಸ್ಥಾನವನ್ನು ಪಡೆದುಕೊಂಡಿದೆ' ಎಂದು ಹೇಳಿದರು.
'ಒಬ್ಬ ಉತ್ಕಟ ಪಾಪ್-ಸಂಸ್ಕೃತಿ ಪ್ರೇಮಿಯಾಗಿರುವುದರಿಂದ ಮತ್ತು ಸ್ವಂತಿಕೆ ಹಾಗೂ ಕಂಫರ್ಟ್‌ನಲ್ಲಿ ದೃಢವಾದ ನಂಬಿಕೆಯುಳ್ಳ ಮತ್ತು ನನಗೆ ಫ್ಯಾಷನ್‌ನಷ್ಟೇ ಮುಖ್ಯವಾಗಿರುವುದರಿಂದ, ನಾನು ಈ ಬ್ರ್ಯಾಂಡ್‌ನಲ್ಲಿ ಹೂಡಿಕೆ ಮಾಡುವುದು ತುಂಬಾನೇ ಸೂಕ್ತ ಎಂದು ನನಗೆ ಅನ್ನಿಸಿತು. ನಾನು ಟಿಎಸ್ಎಸ್ ಕುಟುಂಬದ ಭಾಗವಾಗಿರಲು ಎದುರು ನೋಡುತ್ತಿದ್ದೇನೆ' ಎಂದು ಅವರು ಹೇಳಿದರು.
ಪ್ರಾಥಮಿಕವಾಗಿ ಆನ್‌ಲೈನ್ ಬ್ರ್ಯಾಂಡ್ ಆಗಿರುವ ಟಿಎಸ್ಎಸ್‌ನ ಪ್ರಸ್ತುತ ಉತ್ಪನ್ನ ಪೋರ್ಟ್‌ಫೋಲಿಯೋ ಪುರುಷರು ಮತ್ತು ಮಹಿಳೆಯರಿಗೆ ಎಲ್ಲಾ ರೀತಿಯ ಉಡುಪುಗಳು, ಒಳ ಉಡುಪುಗಳು ಮತ್ತು ಆ್ಯಕ್ಟೀವ್ ವೇರ್ ಅನ್ನು ಒಳಗೊಂಡಿದೆ. ಇದು ಡಿಸ್ನಿ, ವಾರ್ನರ್ ಬ್ರದರ್ಸ್, ಡಬ್ಲ್ಯೂಡಬ್ಲ್ಯೂಇ, ಐಪಿಎಲ್ ಮತ್ತು ವಯಾಕಾಮ್ 18 ಸೇರಿದಂತೆ 180ಕ್ಕೂ ಹೆಚ್ಚು ಪರವಾನಿಗೆಗಳನ್ನು ಹೊಂದಿದೆ.
ಇದನ್ನೂ ಓದಿ: 'ಗ್ಯಾಸ್ಲೈಟ್' ಚಿತ್ರೀಕರಣಕ್ಕಾಗಿ ರಾಜ್ಕೋಟ್ಗೆ ತೆರಳಿದ ನಟಿ ಸಾರಾ