ನಡಿಗೆಯು ನಿಮ್ಮ ಆರೋಗ್ಯವನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಇದು ಒಟ್ಟಾರೆ ಆರೋಗ್ಯದ ಮೇಲೆ ಪ್ರಯೋಜನ ನೀಡುತ್ತದೆ. ಇಂತಹ ನಡಿಗೆಯು ಇದು ನಿಮ್ಮ ಉತ್ಸಾಹವನ್ನು ಹೆಚ್ಚುಸುವುದರ ಜೊತೆಗೆ ಯಾವುದೇ ಬೇಸರಕ್ಕೆ ಕಾರಣವಾಗುವುದಿಲ್ಲ. ನಡಿಗೆಗೆ ಬೇಕಾದ ಶಕ್ತಿಯನ್ನು ದೇಹ ನೀಡುತ್ತದೆ. ಅನೇಕ ಮಂದಿ ನಡೆಯುವಾಗ ಸಂಗೀತ ಕೇಳುತ್ತಾ ಅಥವಾ ಯಾರೊಂದಿಗೊ ಮಾತನಾಡುತ್ತಾ ಸಾಗುತ್ತಾರೆ. ಆದರೆ, ಎಂದದರೂ ನೀವು ಯಾವುದೇ ಚಟುವಟಿಕೆಯಲ್ಲಿ ಭಾಗಿಯಾಗಿದೇ ಕೇವಲ ನಡಿಗೆಯಲ್ಲಿ ಮಾತ್ರ ಗಮನ ಹರಿಸಿದ್ದೀರಾ. ಇಲ್ಲವಾದಲ್ಲಿ ಇದರ ಅಭ್ಯಾಸ ಮಾಡಿ. ಫೋನ್ನಲ್ಲಿ ಮಾತನಾಡದೇ, ಸಂಗೀತ ಕೇಳದೇ, ಯಾರೊಟ್ಟಿಗೆ ಮಾತನಾಡದೇ ನಡೆಯುವುದರಿಂದ ಹಲವು ಪ್ರಯೋಜನ ಸಿಗುತ್ತದೆ ಎನ್ನುತ್ತಾರೆ ತಜ್ಞರು.
ಅನೇಕ ಮಂದಿಗೆ ಮಾತುಕತೆ ಇಲ್ಲದೇ, ತಮ್ಮ ನೆಚ್ಚಿನ ಸಂಗೀತ ಕೇಳದೇ ನಡಿಯುವುದು ಕೊಂಚ ಕಷ್ಟ ಎನ್ನಿಸುತ್ತದೆ. ಆದರೆ, ನಿಮ್ಮೊಳಗಿನ ಹೊಸ ಆಲೋಚನೆಗಳಿಗೆ ದಾರಿ ಮಾಡಿಕೊಡಲು ನಿಶ್ಯಬ್ಧದ ನಡಿಗೆ ಅತ್ಯವಶ್ಯಕ. ಈ ನಡಿಗೆ ಮತ್ತೊಂದು ಆಸಕ್ತಿಯಕರ ಅಂಶ ಎಂದರೆ, ಪ್ರತಿ ಭಾಗಿ ನೀವು ನಡಿಯುವಾಗ ಒಂದೇ ಮಾರ್ಗದ ವಾಕಿಂಗ್ ದಾರಿ ಬಿಟ್ಟು ಹೊಸ ಹೊಸ ದಾರಿಯಲ್ಲಿ ನಿಮ್ಮ ನಡಿಗೆಯ ಮಾರ್ಗವನ್ನು ಹುಡುಕಿಕೊಳ್ಳಬೇಕು. ಈ ರೀತಿ ಮಾಡಿದಾಗ ನಿಮ್ಮ ಮಿದುಳು ಸಕ್ರಿಯವಾಗುತ್ತದೆ. ಮತ್ತೆ ನಡೆಯುವ ಆಸಕ್ತಿ ಹೆಚ್ಚುತ್ತದೆ ಎಂದಿದ್ದಾರೆ.
ಏಕಾಂಗಿಯಾಗಿ ವಾಕಿಂಗ್ ಮಾಡುವ ಅಭ್ಯಾಸದಿಂದಾಗಿ ಸಕಾರಾತ್ಮಕತೆ ಹೆಚ್ಚುತ್ತದೆ. ನಕಾರಾತ್ಮಕ ಅಂಶಗಳಿಗೆ ಈ ವೇಳೆ ನಿಮ್ಮ ಮಿದುಳಿನಲ್ಲಿ ಪ್ರವೇಶ ಇರುವುದಿಲ್ಲ. ಯಾವುದೆ ಅಭ್ಯಾಸಕ್ಕೆ ಸಕಾರಾತ್ಮಕತೆ ವರ್ತನೆ ಉತ್ತಮವಾದದ್ದು. ಇದು ನಾವು ಪರಿಸರದೊಂದಿಗೆ ಸಾಮರಸ್ಯ ಕಾಪಾಡಿಕೊಂಡಾಗ ಮಾತ್ರ ಸಾಧ್ಯ
ಇತ್ತೀಚಿನ ದಿನದಲ್ಲಿ ಈ ಅಂಶವನ್ನು ಮರೆತು ಅಥವಾ ತಿಳಿಯದೇ ನಾವು ಒತ್ತಡದಿಂದ ಬಳಲುತ್ತಿದ್ದೇವೆ. ಕೆಲವು ರೀತಿಯ ಚಿಂತನೆಗಳು ನಮಗೆ ಮತ್ತಷ್ಟು ಹೊರೆಯನ್ನು ನೀಡುತ್ತದೆ. ನಿಶ್ಯಬ್ಧದ ನಡಿಗೆ ನಿಮ್ಮ ಒತ್ತಡವನ್ನು ಕಡಿಮೆ ಮಾಡುವ ಜೊತೆಗೆ ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ. ಇದು ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ನಿಮ್ಮ ಭಾವನೆಗಳನ್ನು ನಿಯಂತ್ರಿಸುತ್ತದೆ.
ನಡಿಯುವಾಗ ನೀವು ಎಷ್ಟು ನಿಶ್ಯಬ್ಧವಾಗಿರುತ್ತೀರಾ ಅಷ್ಟು ನಿಮ್ಮ ಮನಸ್ಸು ನೆಮ್ಮದಿಯಿಂದ ಇರುತ್ತದೆ. ನಾವು ಯಾವಾಗಲೂ ಇಡೀ ದಿನ ಏನಾದರೂ ಯೋಚನೆಯಲ್ಲಿ ನಿರತರಾಗಿರುತ್ತೇವೆ. ನೀವು ಇದನ್ನೆಲ್ಲಾ ತೊರೆದು ನಿಸರ್ಗದಲ್ಲಿ ಕೊಂಚ ಸಮಯವನ್ನು ಕಳೆಯುವುದರಿಂದ ನಿಮ್ಮ ಮಿದುಳು ಮತ್ತಷ್ಟು ಶಕ್ತಿಯನ್ನು ಪಡೆಯುತ್ತದೆ. ಇದು ಏಕಾಗ್ರತೆಯನ್ನು ಹೆಚ್ಚಿಸಿ, ಹೊಸ ಚಿಂತನೆಗಳಿಗೆ ಮಾರ್ಗ ತೋರುತ್ತದೆ.
ಇದನ್ನೂ ಓದಿ: ಸಾವಿನ ಅಪಾಯ ತಪ್ಪಿಸಲು ನಡಿಗೆ ಪರಿಣಾಮಕಾರಿ: ನಿತ್ಯ 3,967 ಹೆಜ್ಜೆಗಳನ್ನು ಹಾಕಿ, ಆರೋಗ್ಯವಾಗಿರಿ!