ETV Bharat / sukhibhava

ಮಾನಸಿಕವಾಗಿ ಕುಗ್ಗಿರುವ ಕ್ಯಾನ್ಸರ್​ ರೋಗಿಗಳಿಗೆ ಬೇಕಿದೆ ಸಮಾಲೋಚನೆ, ಬೆಂಬಲ - ಮಾನಸಿಕವಾಗಿ ಕುಗ್ಗಿರುವ ಕ್ಯಾನ್ಸರ್​ ರೋಗಿ

ರೋಗ ಶಮನಕ್ಕೆ ಔಷಧದ ಜೊತೆಗೆ ರೋಗಿಗೆ ಬದುಕಿನ ಬಗ್ಗೆ ಭರವಸೆ ತುಂಬುವ ಕೆಲಸವೂ ಆಗಬೇಕು.

Role of counselling and support for an end-stage cancer patient
ಅಂತಿಮ ಹಂತದ ಕ್ಯಾನ್ಸರ್ ರೋಗಿಗೆ ಸಮಾಲೋಚನೆ ಮತ್ತು ಬೆಂಬಲದ ಪಾತ್ರ
author img

By

Published : Mar 16, 2023, 6:46 PM IST

ಕಾಯಿಲೆಯಿಂದ ಬಳಲುತ್ತಿರುವಂತಹ ಯಾವುದೇ ಒಬ್ಬ ವ್ಯಕ್ತಿಯ ಆರೋಗ್ಯ ಸುಧಾರಣೆಗೆ ಚಿಕಿತ್ಸೆ, ಔಷಧಗಳು ಮಾತ್ರ ಇದ್ದರೆ ಸಾಲೋದಿಲ್ಲ. ಯಾವುದೇ ಹಂತದಲ್ಲಾಗಬಹುದು ಆ ರೋಗಿಯನ್ನು ಗುಣಪಡಿಸಲು ಸಮಾಲೋಚನೆ ಮತ್ತು ಬೆಂಬಲ ಮುಖ್ಯ ಸ್ತಂಭಗಳಾಗಿ ನಿಲ್ಲುತ್ತವೆ. ಒಬ್ಬ ಕ್ಯಾನ್ಸರ್​ ಕಾಯಿಲೆ ಬಾಧಿತ ಹಿರಿಯ ವ್ಯಕ್ತಿಗೆ ತನ್ನ ಅಂತಿಮ ದಿನಗಳ ಬಗ್ಗೆ ಗೊತ್ತಿದೆ ಎಂದರೆ ಅದು ಆತನನ್ನು ಎಷ್ಟು ಕುಗ್ಗಿಸುತ್ತದೆ. ಜೀವನದ ಬಗ್ಗೆ ಎಷ್ಟು ನಿರಾಶಗೊಳಿಸುತ್ತದೆ ಎನ್ನವುದನ್ನು ಒಬ್ಬ ಸಾಮಾನ್ಯ ವ್ಯಕ್ತಿಯೂ ಅರ್ಥ ಮಾಡಿಕೊಳ್ಳಬಹುದು.

ಹಾಗಾಗಿ ಅಂತಹ ರೋಗಿಗಳಿಗೆ ಹೆಚ್ಚು ಭಾವನಾತ್ಮಕ, ಮಾನಸಿಕ ಮತ್ತು ಸಾಮಾಜಿಕ ಬೆಂಬಲ ಬೇಕಾಗುತ್ತದೆ. ನಮ್ಮ ಆರೋಗ್ಯ ಸ್ಥಿತಿ ಮುಂದೆ ಸುಧಾರಿಸಿ, ನಾವು ಎಲ್ಲರಂತೆ ಜೀವಿಸಲು ಸಾಧ್ಯವಿಲ್ಲ ಎಂಬುದು ಗೊತ್ತಾದಾಗ ಆ ರೋಗಿಯು ಬದುಕುವುದರಲ್ಲಿ ಭರವಸೆಯನ್ನೇ ಕಳೆದುಕೊಳ್ಳುತ್ತಾನೆ. ಆಗ ಒತ್ತಡ ಹಾಗೂ ಆತಂಕಕ್ಕೆ ಒಳಗಾಗುತ್ತಾನೆ. ಅಂತಹ ಸಮಯದಲ್ಲಿ ಆರೈಕೆದಾರರು ಅಥವಾ ಕುಟುಂಬದ ಸದಸ್ಯರು ಅವರ ಎಲ್ಲಾ ಅಗತ್ಯತೆಗಳು ಮತ್ತು ಆಸೆಗಳನ್ನು ಪೂರೈಸುವಲ್ಲಿ ಮನಸು ಮಾಡಬೇಕಾಗುತ್ತದೆ.

ಮುಂದುವರಿದ ವೈದ್ಯಕೀಯ ಜಗತ್ತಿನಲ್ಲಿ ಉತ್ತಮ ಕ್ಯಾನ್ಸರ್​ ಚಿಕಿತ್ಸಾ ಸೌಲಭ್ಯಗಳಿದ್ದರೂ, ಸುಧಾರಣೆಗಳಾಗಿದ್ದರೂ 60 ಪ್ರತಿಶತದಷ್ಟು ಕ್ಯಾನ್ಸರ್​ ರೋಗಿಗಳು ಗುಣಪಡಿಸಲಾಗದ ಹಂತಗಳಲ್ಲಿ ಆಸ್ಪತ್ರೆಗೆ ಬಂದು ದಾಖಲಾಗುತ್ತಾರೆ. ಆದರೆ ಕ್ಯಾನ್ಸರ್​ನ ಆರಂಭಿಕ ಹಂತದಲ್ಲೇ ಗರಿಷ್ಠ ಸಂಖ್ಯೆಯ ರೋಗಿಗಳಿಗೆ ಉಪಶಾಮಕ ಆರೈಕೆ ಲಭ್ಯವಾಗುವಂತೆ ಮಾಡುವುದು ಅವರ ಜಿವನದ ಗುಣಮಟ್ಟ ಮತ್ತು ಬದುಕುಳಿಯುವ ಪ್ರಮಾಣವನ್ನು ಸುಧಾರಿಸುವ ಏಕೈಕ ಮಾರ್ಗವಾಗಿದೆ.

ಪ್ರಸ್ತುತ ಸುಮಾರು 60 ಲಕ್ಷ ಕ್ಯಾನ್ಸರ್​ ರೋಗಿಗಳಿಗೆ ಉಪಶಾಮಕ ಆರೈಕೆಯ ಅಗತ್ಯವಿರುತ್ತದೆ. ಆದರೆ ಇದು ಕೇವಲ 2 ಪ್ರತಿಶತ ರೋಗಿಗಳಿಗೆ ಮಾತ್ರವೇ ಲಭ್ಯವಾಗುತ್ತಿದೆ. ಕಾರಣವೆಂದರೆ ಅಪೇಕ್ಷಿತ ಸಂಖ್ಯೆಯ ಉಪಶಾಮಕ ಆರೈಕೆ ಹಾಸಿಗೆಗಳು/ಕೇಂದ್ರಗಳು, ತರಬೇತಿ ಪಡೆದ ಉಪಶಾಮಕ ಆರೈಕೆ ತಜ್ಞರು, ದಾದಿಯರು ಲಭ್ಯವಿಲ್ಲದೇ ಇರುವುದು. ಮತ್ತು ಕೇವಲ 3 ಪ್ರತಿಶತದಷ್ಟು ಕ್ಯಾನ್ಸರ್ ರೋಗಿಗಳಿಗೆ ಲಭ್ಯವಿರುವ ಒಪಿಯಾಡ್‌ಗಳು (ನೋವು ನಿವಾರಕಗಳು) ಮಾತ್ರ ಲಭ್ಯವಿದೆ. ಆದ್ದರಿಂದ, ಉಪಶಮನ ಆರೈಕೆಯ ಅಗತ್ಯ ಮತ್ತು ಲಭ್ಯತೆಯ ನಡುವೆ ಸಾಕಷ್ಟು ಅಂತರಗಳಿವೆ. ಹೆಚ್ಚಿನ ವೈದ್ಯಕೀಯ ವೃತ್ತಿಪರರು, ವೈದ್ಯಕೀಯ ನಿರ್ವಾಹಕರು ಮತ್ತು ಸಾರ್ವಜನಿಕರಿಗೆ ಉಪಶಾಮಕ ಆರೈಕೆ ಎಂದರೇನು ಎಂಬುದೇ ತಿಳಿದಿಲ್ಲ.

ಕೌನ್ಸೆಲಿಂಗ್​ನ ಪಾತ್ರ: ಮನೋವಿಜ್ಞಾನಿಗಳು ಮತ್ತು ಉಪಶಾಮಕ ಆರೈಕೆ ತಜ್ಞರು ಜೊತೆಯಾಗಿ ರೋಗಿಗಳು ಮಾತ್ರವಲ್ಲದೆ ಅವರ ಕುಟುಂಬದ ಸದಸ್ಯರು/ಆರೈಕೆದಾರರು ಎದುರಿಸುತ್ತಿರುವ ಭಾವನಾತ್ಮಕ, ಮಾನಸಿಕ, ಆಧ್ಯಾತ್ಮಿಕ, ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆಗಳನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರವನ್ನು ಹೊಂದಿದ್ದಾರೆ. ನಿರ್ವಹಣೆಯನ್ನು ಪ್ರಾರಂಭಿಸುವ ಮೊದಲು, ರೋಗಿಗಳಿಗೆ ಯಾವುದು ಹೆಚ್ಚು ತೊಂದರೆ ನೀಡುತ್ತಿದೆ, ಅವರ ಅಗತ್ಯತೆಗಳು ಮತ್ತು ಆಶಯಗಳ ಬಗ್ಗೆ ಮೌಲ್ಯಮಾಪನ ಮಾಡಬೇಕು. ಅವರ ನಡವಳಿಕೆ, ಪರಸ್ಪರ ಸಂಬಂಧ ಮತ್ತು ಸಾಂಸ್ಕೃತಿಕ ಮತ್ತು ಧಾರ್ಮಿಕ ನಂಬಿಕೆಗಳ ಬಗ್ಗೆ ಕುಟುಂಬದ ಸದಸ್ಯರೊಂದಿಗೆ ಚರ್ಚೆಯನ್ನು ಸಹ ದಾಖಲಿಸಬೇಕು.

ರೋಗಿಗಳ ನಿರ್ವಹಣೆಗೆ ಕೆಲವು ಸಲಹಾ ವಿಧಾನಗಳು ಈ ಕೆಳಗಿವೆ:

  • ಅತ್ಯುತ್ತಮ ಸಿಬ್ಬಂದಿ ಮತ್ತು ರೋಗಿಗಳ ಸಂವಹನ ಮತ್ತು ಸಂಬಂಧವನ್ನು ಅಭಿವೃದ್ಧಿಪಡಿಸುವುದು.
  • ಅವರ ನಂಬಿಕೆಯನ್ನು ಗೆಲ್ಲಲು ರೋಗಲಕ್ಷಣಗಳನ್ನು ನಿವಾರಿಸಬಹುದು ಎಂಬ ವಿವರಣೆ ಮತ್ತು ಭರವಸೆ ನೀಡುವುದು.
  • ಸಲಹೆಗಾರ/ಮನಶಾಸ್ತ್ರಜ್ಞರೊಂದಿಗೆ ಕಾಳಜಿ, ಭಯ ಮತ್ತು ಆತಂಕಗಳನ್ನು ಹಂಚಿಕೊಳ್ಳಲು ಅನುಕೂಲ ಮಾಡಿಕೊಡುವುದು.
  • ತಪ್ಪು ಕಲ್ಪನೆಗಳನ್ನು ಸರಿಪಡಿಸುವುದು.
  • ಮಾನಸಿಕ ಸಮತೋಲನವನ್ನು ಕಾಯ್ದುಕೊಳ್ಳಲು ಮತ್ತು ಗೆಲವು ಮತ್ತು ಹಿನ್ನಡೆಗಳು ಜೀವನದ ಭಾಗವಾಗಿದೆ ಎಂದು ಒಪ್ಪಿಕೊಳ್ಳುವ ಮೂಲಕ ಭರವಸೆಯನ್ನು ಜೀವಂತವಾಗಿರಿಸುವ ಮೂಲಕ ಅನಿಶ್ಚಿತತೆಯನ್ನು ನಿಭಾಯಿಸುವ ತಂತ್ರವನ್ನು ಅಭಿವೃದ್ಧಿಪಡಿಸುವುದು.
  • ತಮ್ಮ ಪ್ರೀತಿಪಾತ್ರರನ್ನು ಭೇಟಿಯಾಗುವ ಅವರ ಆಸೆಗಳನ್ನು ಮತ್ತು ಅದಕ್ಕೆ ಬೇಕಾಗುವ ಎಲ್ಲಾ ಅಗತ್ಯತೆಗಳು ಖಚಿತಪಡಿಸಿಕೊಳ್ಳುವುದು, ಜನರನ್ನು ಕ್ಷಮಿಸುವುದು ಮತ್ತು ಉತ್ತಮ ಪರಸ್ಪರ ಸಂಬಂಧಗಳು ಮತ್ತು ಬದುಕುಳಿಯುವಿಕೆಯ ಪ್ರಮಾಣವನ್ನು ಖಚಿತಪಡಿಸಿಕೊಳ್ಳಲು ಅವರ ಇತರ ಆಸೆಗಳನ್ನು ಪೂರೈಸುವುದು.
  • ವಿಶ್ರಾಂತಿ ಚಿಕಿತ್ಸೆ, ವ್ಯಾಕುಲತೆ ಚಿಕಿತ್ಸೆ, ಕಲಾ ಚಿಕಿತ್ಸೆ, ಅರಿವಿನ ನಡವಳಿಕೆ ಚಿಕಿತ್ಸೆ ಮತ್ತು ಆಧ್ಯಾತ್ಮಿಕ ಗುರುಗಳಿಂದ ಆಧ್ಯಾತ್ಮಿಕ ಚಿಕಿತ್ಸೆ, ಮುಂತಾದ ಇತರ ಚಿಕಿತ್ಸೆಗಳೊಂದಿಗೆ ಆರೋಗ್ಯ ವರ್ಧನೆ ಮಾಡುವುದು.
  • ಕೆಲವು ರೋಗಿಗಳಲ್ಲಿ ಸಮಾಲೋಚನೆ ಅವಧಿಗಳು ಮತ್ತು ಮಾನಸಿಕ ಬೆಂಬಲದೊಂದಿಗೆ, ಔಷಧಿಗಳನ್ನು ಸಹ ಬಳಸಬಹುದು.

ಉಪಶಾಮಕ ಆರೈಕೆಗಾಗಿ ಸರಿಯಾದ ಸಮಯ: ಉಪಶಾಮಕ ಆರೈಕೆಯನ್ನು ಪ್ರಾರಂಭಿಸಲು ಸರಿಯಾದ ಸಮಯವೆಂದರೆ ಕ್ಯಾನ್ಸರ್​ನ ಕೊನೆಯ ಹಂತದ ನಿರ್ಣಯವಾದ ಘಳಿಗೆ. ರೋಗವನ್ನು ಗುಣಪಡಿಸಲಾಗುವುದಿಲ್ಲ ಎಂಬುದು ರೋಗಿ ಹಾಗೂ ರೋಗಿಯ ಕುಟುಂಬಕ್ಕೆ ಗೊತ್ತಾದ ಕೂಡಲೇ ಬಹುಶಿಸ್ತೀಯ ಉಪಶಾಮಕ ಆರೈಕೆ ತಂಡವು ನೋವು ಮತ್ತು ಭಾವನಾತ್ಮಕ, ಮಾನಸಿಕ, ಆಧ್ಯಾತ್ಮಿಕ ಮತ್ತು ಸಾಮಾಜಿಕ ತೊಂದರೆಯ ಲಕ್ಷಣಗಳನ್ನು ನಿರ್ವಹಿಸುವಲ್ಲಿ ತೊಡಗಿಸಿಕೊಳ್ಳಬೇಕು.

ಉಪಶಾಮಕ ಆರೈಕೆ ಔಷಧ: ಎಸೆನ್ಷಿಯಲ್ ಉಪಶಾಮಕ ಆರೈಕೆ ಔಷಧಿಗಳಲ್ಲಿ ನೋವು ನಿವಾರಕಗಳು, ಒಪಿಯಾಡ್​ಗಳು, ಖಿನ್ನತೆ-ಶಮನಕಾರಿಗಳು, ಅತಿಸಾರಗಳು, ಆ್ಯಂಟಿಮೆಟಿಕ್ (ವಾಂತಿ ನಿಲ್ಲಿಸಲು), ವಿರೇಚಕಗಳು, ಅಸ್ಥಿಪಂಜರದ ಸ್ನಾಯುಗಳ ಸಡಿಲಗೊಳಿಸುವಿಕೆಗಳು, ಆಂಟಿಪಿಲೆಪ್ಟಿಕ್, ಆ್ಯಂಟಿ ಸೈಕೋಟಿಕ್ಸ್, ಕಾರ್ಟಿಕೊಸ್ಟೆರಾಯ್ಡ್​ಗಳು, ಇತ್ಯಾದಿ.

ಇದನ್ನೂ ಓದಿ: ಕಡಿಮೆ ನಿದ್ದೆ ಅವಧಿಯಿಂದ ಹೃದಯದ ನಾಳಗಳಿಗೆ ಅಪಾಯ: ಸಂಶೋಧನೆಗಳಿಂದ ಬಹಿರಂಗ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.