ವಾಷಿಂಗ್ಟನ್: ಕೋವಿಡ್-19 ಸಾಂಕ್ರಾಮಿಕತೆ ಸಮಯದಲ್ಲಿ ಆಸ್ತಮ ಹೊಂದಿದ್ದ ವಯಸ್ಕರಲ್ಲಿ ಖಿನ್ನತೆಯ ಅಪಾಯ ಹೆಚ್ಚಿನ ಮಟ್ಟದಲ್ಲಿತ್ತು ಎಂದು ರೆಸ್ಪಿರ್ಟೊರಿ ಮೆಡಿಸಿನ್ ಡಿಸ್ಕವರಿ ಜರ್ನಲ್ನಲ್ಲಿ ಪ್ರಕಟಿಸಲಾಗಿದೆ. ಈ ಸಂಬಂಧ 2000 ಕೆನಡಿಯನ್ನರನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ. ಆಸ್ತಮ ಹೊಂದಿರುವ ವಯಸ್ಕರಲ್ಲಿ ಈ ಹಿಂದೆ ಕೂಡ ಖಿನ್ನತೆ ಅನುಭವಿಸಿದ್ದರು. 2020ರ ಚಳಿಗಾಲದ ಸಮಯದಲ್ಲಿ ಹೆಚ್ಚಿನ ಮಂದಿ ಖಿನ್ನತೆಯನ್ನು ಹೆಚ್ಚಾಗಿ ಅನುಭವಿಸಿದ್ದು, ಇದು ಚಿಂತೆಗೆ ಕಾರಣವಾಗಿದೆ. ಆಸ್ತಮಾ ಹೊಂದಿರದ ಅವರ ಗೆಳೆಯರಲ್ಲಿ ಮರುಕಳಿಸುವಿಕೆಯ ಪ್ರಮಾಣಕ್ಕಿಂತ ಗಮನಾರ್ಹವಾಗಿ ಹೆಚ್ಚಾಗಿದೆ. ಒಂಟಿಯಾಗಿರುವವರಲ್ಲಿ ಈ ಖಿನ್ನತೆ ಪ್ರಮಾಣ ಹೆಚ್ಚಿದೆ.
ಸಾಂಕ್ರಾಮಿಕ ರೋಗಕ್ಕೆ ಮುಂಚಿತವಾಗಿ ಆಸ್ತಮಾ ಮತ್ತು ಖಿನ್ನತೆಯ ನಡುವಿನ ಹೆಚ್ಚಿನ ಕೊಮೊರ್ಬಿಡಿಟಿಯನ್ನು (ಒಂದಕ್ಕಿಂತ ಹೆಚ್ಚಿನ ರೋಗ) ಪರಿಗಣಿಸುವಾಗ, ಲಾಕ್ಡೌನ್ನ ದೀರ್ಘ ಅವಧಿಗಗಳು ಒಂಟಿತನದೊಂದಿಗೆ ಒತ್ತಡದ ಅಪಾಯ ಹೊಂದಿದೆ. ಈ ಸಾಂಕ್ರಾಮಿಕ ಸಮಯದಲ್ಲಿ ಮಾನಸಿಕ ಆರೋಗ್ಯದಲ್ಲಿ ತೀವ್ರ ಕುಸಿತ ಅನುಭವಿಸಿದೆ ಎಂಬುದರಲ್ಲಿ ಯಾವುದೇ ಆಶ್ಚರ್ಯವಿಲ್ಲ ಎಂದು ಅಧ್ಯಯನ ಮೊದಲ ಲೇಖಕರಾದ ಅ್ಯಂಡಿ ಮ್ಯಾಕ್ನೈಲ್ ತಿಳಿಸಿದ್ದಾರೆ.
ಅಸ್ತಮಾ ಹೊಂದಿರುವವರಿಂದ ಮಾಹಿತಿ ಸಂಗ್ರಹ: ವಯಸ್ಸಾಗುವಿಕೆ ಮೇಲೆ ಕೆನಾಡಿಯನ್ ಜೀವತಾವಧಿ ಅಧ್ಯಯನ ಮಾದರಿ ಬಂದಿದ್ದು, ಈ ಜೀವತಾವಧಿ ಡಾಟಾ ಅನುಸಾರ, 2,017 ಆಸ್ತಮಾ ಹೊಂದಿರುವವರ ವಿಭಿನ್ನ ಪ್ರತಿಕ್ರಿಯೆಗಳನ್ನು ಪಡೆಯಲಾಗಿದೆ. ಇದರಲ್ಲಿ ಕೋವಿಡ್ ಪೂರ್ವ ಖಿನ್ನತೆ ಇತಿಹಾಸ ಹೊಂದಿರುವ ಮತ್ತು ಕೋವಿಡ್ ಪೂರ್ವದಲ್ಲಿ ಯಾವುದೇ ಖಿನ್ನತೆ ಲಕ್ಷಣ ಹೊಂದಿಲ್ಲದವರ ಮಾಹಿತಿ ಪಡೆಯಲಾಗಿದೆ. ಈ ವೇಳೆ ಪ್ರತಿಕ್ರಿಯಿಸಿದವರಲ್ಲಿ ಖಿನ್ನತೆ ಇತಿಹಾಸ ಹೊಂದಿರುವವರು ಹೆಚ್ಚಿನ ಅಪಾಯ ಹೊಂದಿದ್ದಾರೆ. ಈ ಖಿನ್ನತೆ ಇತಿಹಾಸವನ್ನು ಹೊಂದಿಲ್ಲದ ಏಳರಲ್ಲಿ ಒಂದು ಮಂದಿ 2020ರ ಚಳಿಗಾಲದಲ್ಲಿ ಖಿನ್ನತೆಗೆ ಒಳಗಾಗಿದ್ದಾರೆ. ಆಸ್ತಮದ ಜೊತೆ ಅನೇಕ ಮಾನಸಿಕ ಆರೋಗ್ಯದ ಮೇಲೆ ಈ ಸಾಂಕ್ರಾಮಿಕತೆ ಪರಿಣಾಮ ಬೀರಿದೆ.
ಸಾಂಕ್ರಾಮಿಕತೆ ವಯಸ್ಕರಲ್ಲಿ ಅನೇಕ ಮಾನಸಿಕ ಆರೋಗ್ಯ ಸಮಸ್ಯೆಗೆ ಕಾರಣವಾಗಿದೆ. ಅದರಲ್ಲೂ ವಿಶೇಷವಾಗಿ ಧೀರ್ಘಕಾಲದ ಆರೋಗ್ಯ ಸಮಸ್ಯೆ ಹೊಂದಿರುವವರಲ್ಲಿ ಇದು ಹೆಚ್ಚು ಎಂದು ಲೇಖಕರು ತಿಳಿಸಿದ್ದಾರೆ.ಈ ಹಿಂದೆ ಖಿನ್ನತೆ ಲಕ್ಷಣ ಇಲ್ಲದಿರುವ ಅಸ್ತಮ ಹೊಂದಿರುವ ರೋಗಿಗಳಲ್ಲಿ ಸಾಂಕ್ರಾಮಿಕತೆ ವೇಳೆ ಈ ಖಿನ್ನತೆ ಲಕ್ಷಣ ಕಂಡು ಬಂದಿರುವುದಾಗಿ ವೈದ್ಯಕೀಯ ತಜ್ಞರು ಕೂಡ ತಿಳಿಸಿದ್ದಾರೆ.
ಸಾಂಕ್ರಮಿಕದ ವೇಳೆ ಖಿನ್ನತೆ ಹೆಚ್ಚು: ಸಾಂಕ್ರಾಮಿಕತೆ ವೇಳೆ ಅತಿ ಹೆಚ್ಚಿನ ಖಿನ್ನತೆ ಪ್ರಮಾಣ ಹೆಚ್ಚಿತ್ತಾದ ಎಂಬುದರ ಬಗ್ಗೆ ಸಂಶೋಧನೆ ತೋರಿಸಿದ್ದರು. ಇದಕ್ಕೆ ಮುಂಚಿನ ಕೆಲವು ಅಧ್ಯಯನಗಳು ಅಸ್ತಮಾ ಇರುವವರಲ್ಲಿನ ದುರ್ಬಲತೆಗಳ ಮೇಲೆ ನಿರ್ದಿಷ್ಟವಾಗಿ ಗಮನಹರಿಸಿವೆ. ಈ ಜನರಲ್ಲಿ ಖಿನ್ನತೆಯ ಹೆಚ್ಚಿನ ಅಪಾಯದೊಂದಿಗೆ ಸಂಬಂಧಿಸಿದ ಹಲವಾರು ಅಂಶಗಳನ್ನು ಸಂಶೋಧಕರು ಗುರುತಿಸಿದ್ದಾರೆ.
ಆರೋಗ್ಯ ಸೇವೆ ಮೇಲೂ ಈ ಸಾಂಕ್ರಾಮಿಕತೆ ಭಾರೀ ಪರಿಣಾಮ ಬೀರಿದೆ. ಅದರಲ್ಲೂ ವಿಶೇಷವಾಗಿ ಆಸ್ತಮದಂತಹ ದೀರ್ಘಕಾಲದ ಅನಾರೋಗ್ಯ ಹೊಂದಿರುವವರಲ್ಲಿ ಹೆಚ್ಚು ಸಂಕಷ್ಟಕ್ಕೆ ಒಳಗಾಗುವಂಎ ಮಾಡಿದೆ. ವೈಯಕ್ತಿಕ ಸೇವೆ ನೀಡಲು ಸಾಧ್ಯವಾಗದಂತ ಪರಿಸ್ಥಿತಿಯಲ್ಲಿ ಆರೋಗ್ಯ ಸೇವೆ ಸಿಗಬೇಕು ಎಂಬುದರ ಕುರಿತು ಇದು ಒತ್ತಿ ಹೇಳುತ್ತದೆ ಎಂದು ಹಿರಿಯ ಲೇಖಕ ಪ್ರೋ ಎಸ್ಮೆ ಫುಲರ್ ಥಾಮ್ಸನ್ ತಿಳಿಸಿದ್ದಾರೆ.
ಅತಿ ಹೆಚ್ಚಿನ ಕುಟುಂದ ಸಮಸ್ಯೆಗಳು ನಂತರ ಜೀವನದಲ್ಲಿ ಖಿನ್ನತೆ ಅಪಾಯವನ್ನು ತಂದೊಡ್ಡುತ್ತದೆ ಎಂಬುದು ಈಗಾಗಲೇ ತಿಳಿದಿರುವುದಾಗಿದೆ. ಸಾಂಕ್ರಾಮಿಕತೆ ಸಾಮಾಜಿಕ ಬೆಂಬಲ ಮತ್ತು ಮನೆಯಿಂದ ಹೊರಗುಳಿಯುವ ಅವಧಿಯನ್ನು ಕಸಿದಿದ್ದು, ಇದು ಮತ್ತಷ್ಟು ಖಿನ್ನತೆಗೆ ಕಾರಣವಾಗಿದೆ. ಆಸ್ತಮ ಹೊಂದಿರುವ ಪ್ರತಿಕ್ರಿಯೆದಾರರು 2020ರ ಚಳಿಗಾಲದಲ್ಲಿ ಹೆಚ್ಚಿನ ಅಪಾಯ ಹೊಂದುವುದರ ಜೊತೆಗೆ ಅತಿ ಹೆಚ್ಚು ಮಟ್ಟದ ಕೌಟುಂಬಿಕ ಬಿಕ್ಕಟ್ಟನ್ನು ಹೊಂದಿರುವುದಾಗಿ ತಿಳಿಸಿದ್ದಾರೆ.
ಆದಾಯದ ಕಡಿತ, ಅಗತ್ಯ ವಸ್ತುಗಳ ಸರಬರಾಜಿಲ್ಲದಿರುವುದು ಅಥವಾ ಆಹಾರ ಕೂಡ ಸಾಂಕ್ರಾಮಿಕತೆ ವೇಳೆಯಲ್ಲಿ ಆಸ್ತಮ ಹೊಂದಿರುವರಲ್ಲಿ ಖಿನ್ನತೆಯೊಂದಿಗೆ ಸಂಬಂಧ ಹೊಂದಿದೆ. ಆರ್ಥಿಕ ಅನಿಶ್ಚಿತತೆ ಮತ್ತು ಆದಾಯದ ನಷ್ಟವು ವಿಶೇಷವಾಗಿ ಸಾಂಕ್ರಾಮಿಕ ರೋಗದ ಆರಂಭದಲ್ಲಿ ಮಾನಸಿಕ ಯೋಗಕ್ಷೇಮಕ್ಕಾಗಿ ಅನೇಕ ಕೆನಡಾದ ಕುಟುಂಬಗಳ ಮೇಲೆ ವಿನಾಶಕಾರಿ ಪರಿಣಾಮಗಳನ್ನು ಬೀರಿತು ಎಂದು ಲೇಖನ ತಿಳಿಸಿದೆ.
ಇದನ್ನೂ ಓದಿ: 18 ವರ್ಷ ಮೇಲ್ಪಟ್ಟ ವಿದ್ಯಾರ್ಥಿನಿಯರಿಗೆ 60 ದಿನ ಹೆರಿಗೆ ರಜೆ ಘೋಷಿಸಿದ ಕೇರಳ ಸರ್ಕಾರ