ETV Bharat / sukhibhava

ಜಾಗತಿಕ ತಾಪಮಾನ 2 ಡಿಗ್ರಿ ಸೆಲ್ಸಿಯಸ್ ಹೆಚ್ಚಾದರೂ 1 ಕೋಟಿ ಜನರ ಸಾವಿಗೆ ಕಾರಣವಾಗಬಹುದು; ಅಧ್ಯಯನ

ಈಗಾಗಲೇ ಹಲವು ಜಾಗತಿಕ ತಾಪಮಾನದ ಏರಿಕೆ ಪರಿಣಾಮ ಕಾಣುತ್ತಿದ್ದು, ಇದೇ ರೀತಿ ಇದು ಮುಂದುವರಿದರೆ ಹೆಚ್ಚಿನ ಅನಾಹುತ ಆಗಲಿದೆ ಎಂದು ಅಧ್ಯಯನ ಎಚ್ಚರಿಕೆ ರವಾನಿಸಿದೆ.

rise in global temperature of 2 degrees Celsius could result in 1 crore deaths

author img

By ETV Bharat Karnataka Team

Published : Aug 30, 2023, 10:40 AM IST

ಟೊರೊಂಟೊ( ಕೆನಡಾ): 2100ರ ವೇಳೆಗೆ ಜಾಗತಿಕ ತಾಪಮಾನ ಎರಡು ಡಿಗ್ರಿ ಹೆಚ್ಚಾದರೆ, ಮುಂದಿನ ಶತಮಾನದಲ್ಲಿ ಇದರಿಂದ ಒಂದು ಬಿಲಿಯನ್​ ಜನರು ಅಂದರೆ ಒಂದು ಕೋಟಿ ಜನರು ತಾಪಮಾನದಿಂದ ಮೃತಪಡುವ ಸಾಧ್ಯತೆ ಇದೆ ಎಂದು ಅಧ್ಯಯನ ಎಚ್ಚರಿಸಿದೆ.

ಕೆನಾಡದ ವೆಸ್ಟರ್ನ್​ ಒಂಟಾರಿಯೊ ಯುನಿವರ್ಸಿಟಿ ಅಧ್ಯಯನ ನಡೆಸಿದೆ. ಇದೇ ವೇಳೆ, ಅಧ್ಯಯನವೂ ಆಕ್ರಮಣಕಾರಿ ಇಂಧನ ನಿಯಮಗಳನ್ನು ಕಡಿಮೆ ಮಾಡಬೇಕಿದೆ. ಇಂಗಾಲದ ಹೊರ ಸೂಸುವಿಕೆ ತಗ್ಗಿಸುವ ಮೂಲಕ ಜೀವ ಹಾನಿ ಕಡಿಮೆ ಮಾಡಬಹುದಾಗಿದೆ ಎಂದು ಕರೆ ನೀಡಿದ್ದಾರೆ. ಸಂಶೋಧಕರು ಇದೇ ವೇಳೆ ಅನಿಲ ಮತ್ತು ಇಂಧನ ಉದ್ಯಮ ಜಗತ್ತಿನಲ್ಲಿ ಬಹು ಲಾಭಾದಾಯಕ ಮತ್ತು ಶಕ್ತಿಯುತ ಉದ್ಯಮವಾಗಿದೆ. ಇದು ನೇರವಾಗಿ ಮತ್ತು ಪರೋಕ್ಷವಾಗಿ ಶೇ 40ರಷ್ಟು ಇಂಗಾಲ ಹೊರಸೂಸುವಿಕೆಗೆ ಕಾರಣವಾಗಿದೆ ಎಂದಿದ್ದಾರೆ.

ಈ ಹೊರಸೂಸುವಿಕೆ ಕೋಟ್ಯಂತರ ಜನರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಅದರಲ್ಲೂ ಹಿಂದುಳಿದ ಮತ್ತು ಕಡಿಮೆ ಸಮುದಾಯದ ಜನರು ಇದರ ಪರಿಣಾಮಕ್ಕೆ ಒಳಗಾಗುತ್ತಾರೆ. ಈ ರೀತಿಯ ಸಾಮೂಹಿಕ ಸಾವುಗಳು ಸ್ವೀಕರಾರ್ಹವಲ್ಲ. ಅದರಲ್ಲೂ ಮಕ್ಕಳ ಸಾವು ನಿಜಕ್ಕೂ ಭಯಗೊಳಿಸುತ್ತದೆ ಎಂದು ಅಧ್ಯಯನ ಪ್ರಮುಖ ಲೇಖಕ ಜೋಶುವಾ ಪಿಯರ್ಸ್ ತಿಳಿಸಿದ್ದಾರೆ.

ಈ ಅಧ್ಯಯನ ಜರ್ನಲ್​ ಎನರ್ಜಿಯಲ್ಲಿ ಪ್ರಕಟಿಸಲಾಗಿದೆ. ಇದು ವೈಜ್ಞಾನಿಕ ಸಾಹಿತ್ಯದ 180ಕ್ಕೂ ಹೆಚ್ಚು ಲೇಖನದ ವಿಶ್ಲೇಷಣೆ ಆಧಾರವಾಗಿದೆ. ಪೀರ್-ರಿವ್ಯೂಡ್ ಸಾಹಿತ್ಯದಲ್ಲಿ ಇಂಗಾಲದ ಹೊರಸೂಸುವಿಕೆ ಮಾನವ ಮರಣದ ವೆಚ್ಚಗಳ ಕುರಿತು 1000 ಟನ್ ನಿಯಮದ ಮೇಲೆ ಒಮ್ಮುಖವಾಗಿದೆ ಎಂದು ತಂಡವು ಕಂಡು ಹಿಡಿದಿದೆ. ಇದು ಅಂದಾಜು 1,000 ಟನ್ ಪಳೆಯುಳಿಕೆ ಇಂಗಾಲವನ್ನು ಸುಟ್ಟಾಗ ಪ್ರತಿ ಬಾರಿ ಭವಿಷ್ಯದ ಒಂದು ಅಕಾಲಿಕ ಮರಣವು ಉಂಟಾಗುತ್ತದೆ ಎಂದು ಅಂದಾಜಿಸಲಾಗಿದೆ.

ಜಾಗತಿಕ ತಾಪಮಾನವು ಮುಂದಿನ ಶತಮಾನದಲ್ಲಿ ಶತಕೋಟಿ ಅಕಾಲಿಕ ಸಾವುಗಳಿಗೆ ಕಾರಣವಾಗಲಿದೆ. ಈ ಹಿನ್ನಲೆ ನಾವು ಪ್ರತಿಕ್ರಿಯಿಸಬೇಕಿದೆ. ಅದರಲ್ಲೂ ತ್ವರಿತ ಪ್ರತಿಕ್ರಿಯೆ ಅಗತ್ಯವಾಗಿದೆ ಎಂದು ಪಿಯರ್ಸ್​ ತಿಳಿಸಿದ್ದಾರೆ.

ಹಸಿರುವ ಮನೆ ಅನಿಲ ಹೊರ ಸೂಸುವಿಕೆ ಪರಿಣಾಮವನ್ನು ಸಿಮೀತಗೊಳಿಸುವುದರಿಂದ ನಾವು ಅನೇಕ ಜನರ ಜೀವನ ಉಳಿಸಬಹುದಾಗಿದೆ. ಪಳೆಯುಳಿಕೆ ವಸ್ತುಗಳನ್ನು ಸುಡುವುದನ್ನು ನಿಲ್ಲಿಸಬೇಕಿದೆ. ಶಕ್ತಿಯ ದಕ್ಷತೆ ಮತ್ತು ನವೀಕರಿಸಬಹುದಾದ ಶಕ್ತಿಗೆ ಹೆಚ್ಚು ಆಕ್ರಮಣಕಾರಿ ವಿಧಾನವನ್ನು ಸಾಧ್ಯವಾದಷ್ಟು ಬೇಗ ಪಾಲಿಸಬೇಕಿದೆ.

ಜಾಗತಿಕ ತಾಪಮಾನ ಎಂಬುದು ಕೋಟ್ಯಂತರ ಜನರ ಜೀವನ ಮತ್ತು ಸಾವಿನ ಪ್ರಮುಖ ವಿಷಯವಾಗಿದೆ. ಸಂಸ್ಕೃತಿ, ಜನಾಂಗೀಯ ಹಿನ್ನಲೆ, ಲಿಂಗತ್ವ ಅಥವಾ ಆರ್ಥಿಕ ಸಂಪನ್ಮೂದ ಹೊರತಾಗಿ ಪ್ರತಿಯೊಬ್ಬರ ಜೀವನವೂ ಮೌಲ್ಯಯುತವಾಗಿದೆ ಎಂಬುದನ್ನು ಪ್ರತಿಯೊಬ್ಬರು ಒಪ್ಪುತ್ತಾರೆ. ಈ ಹಿನ್ನಲೆ ಶಕ್ತಿ ರೂಪಾಂತರವೂ ಬೇಗ ಬದಲಾವಣೆ ಆಗಬೇಕಿದೆ. ಈಗಿನಿಂದಲೇ ಶುರುವಾಗಬೇಕಿದೆ ಎನ್ನುತ್ತಾರೆ ಪಿಯರ್ಸ್​​. (ಐಎಎನ್​ಎಸ್​)

ಇದನ್ನೂ ಓದಿ: ಮಾರಣಾಂತಿಕ 2023 ಶಾಖದ ಅಲೆಗಳು ಭವಿಷ್ಯದಲ್ಲಿ ಸಾಮಾನ್ಯವಾಗಲಿದೆ; ಅಧ್ಯಯನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.