ನವದೆಹಲಿ: ಸನ್‌ಸ್ಕ್ರೀನ್ ಬಿಸಿಲಿನಿಂದ ನಿಮ್ಮ ತ್ವಚೆಗೆ ರಕ್ಷಣೆಯನ್ನು ಒದಗಿಸುತ್ತದೆ ಎಂಬ ಕಲ್ಪನೆ ಅನೇಕ ಬಾರಿ ತಪ್ಪಾಗುತ್ತದೆ. ಇದು ಸೂರ್ಯನಿಂದ ರಕ್ಷಣೆ ನೀಡುವ ಬಟ್ಟೆ ಮತ್ತು ಇತರ ಕ್ರಮಕ್ಕೆ ಹೋಲಿಕೆ ಮಾಡಿದಾಗ ಇದು ಕಡಿಮೆ ಪರಿಣಾಮವನ್ನು ಬೀರುತ್ತದೆ ಎಂದು ಅಧ್ಯಯನ ತಿಳಿಸಿದೆ.
ಜರ್ನಲ್ ಕ್ಯಾನ್ಸರ್ನಲ್ಲಿ ಪ್ರಕಟವಾದ ಅಧ್ಯಯನ ಅನುಸಾರ ಸನ್‌ಸ್ಕ್ರೀನ್ ಹೆಚ್ಚಳ ಮಾಡಿದಂತೆ ನಿಮ್ಮ ತ್ವಚೆಯ ಮೆಲನೋಮ ಮತ್ತು ಚರ್ಮ ಕ್ಯಾನ್ಸರ್ ದರ ಹೆಚ್ಚುತ್ತದೆ. ಇದನ್ನು ಸಂಶೋಧಕರು ಸನ್‌ಸ್ಕ್ರೀನ್ ವಿರೋಧಭಾಸ ಎಂದಿದ್ದಾರೆ.
ಸನ್‌ಸ್ಕ್ರೀನ್ ಬಳಕೆ ಮಾಡಿದರೂ ಟ್ಯಾನ್ ಆಗುವುದನ್ನು ತಳ್ಳಿಹಾಕುವಂತಿಲ್ಲ. ಜನರು ಇವು ತಮ್ಮನ್ನು ಸ್ಕಿನ್ ಕ್ಯಾನ್ಸರ್ನಿಂದ ರಕ್ಷಣೆ ಮಾಡುತ್ತವೆ ಎಂದು ಭಾವಿಸುತ್ತಾರೆ. ಈ ರೀತಿಯ ಉತ್ಪನ್ನವನ್ನು ಬಳಸುತ್ತಿದ್ದೇವೆ ಎಂಬ ಮನೋಭಾವ ಗ್ರಾಹಕರಲ್ಲಿ ಇರುತ್ತದೆ ಎಂದು ಕೆನಡಾದ ಮೆಕ್‌ಗಿಲ್ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ ಇವಾನ್ ಲಿಟ್ವಿನೋವ್ ತಿಳಿಸಿದ್ದಾರೆ.
ಅನೇಕ ಮಂದಿ ಸಾಕಷ್ಟು ಪ್ರಮಾಣದಲ್ಲಿ ಸನ್‌ಸ್ಕ್ರೀನ್ ಅನ್ನು ಬಳಕೆ ಮಾಡುವುದಿಲ್ಲ. ಅಲ್ಲದೇ, ಸಾಕಷ್ಟು ಸಮಯ ಬಿಸಿಲಿನಲ್ಲಿ ಕಳೆಯುತ್ತಾರೆ. ಈ ವೇಳೆ ಸನ್‌ಸ್ಕ್ರೀನ್ ರಕ್ಷಣೆ ನೀಡುತ್ತದೆ ಎಂಬುದು ತಪ್ಪು ಅಭಿಪ್ರಾಯವಾಗಿದೆ ಎಂದು ಹೇಳಿದ್ದಾರೆ.
ಸಂಶೋಧಕರು ಮೆಲನೋಮದ ವಿವಿಧ ಘಟನೆಗಳ ನಡುವಿನ ಅಂಶಗಳನ್ನು ಅರ್ಥ ಮಾಡಿಕೊಳ್ಳಲು ಎರಡು ವಿಧದಲ್ಲಿ ಬಳಕೆ ಮಾಡಿದರು.
ಮೊದಲ ಅಧ್ಯಯನದಲ್ಲಿ ನೋವಸ್ಕೋಟಿಯಾ ಮತ್ತು ಪ್ರಿನ್ಸ್ ಎಡ್ವರ್ಡ್ ದ್ವೀಪದಲ್ಲಿ ವಾಸಿಸುವ ಕೆನಡಿಯನ್ನರಲ್ಲಿ ಹೆಚ್ಚಿನ ಮೆಲನೋಮ ಹೊಂದಿರುವುದು ಪತ್ತೆಯಾಗಿದೆ. ಅವರು ಸೂರ್ಯನಿಂದ ರಕ್ಷಣೆಗೆ ಯುವಿ ಸೂಚ್ಯಂಕದ ಅನುಸಾರ ಸನ್‌ಸ್ಕ್ರೀನ್ ಬಳಕೆ ಮಾಡುತ್ತಾರೆ. ಅದಕ್ಕಿಂತ ಹೆಚ್ಚಾಗಿ ಅವರಿಗೆ ಸೂರ್ಯನಿಗೆ ಹೆಚ್ಚು ಒಡ್ಡುಕೊಳ್ಳುವುದರಿಂದ ಆರೋಗ್ಯದ ಮೇಲೆ ಅಪಾಯದ ಬಗ್ಗೆ ಅರಿವಿದೆ.
ಇದರ ಹೊರತಾಗಿಯೂ, ಬೆಚ್ಚಗಿನ ತಾಪಮಾನ ಮತ್ತು ಹೊರಾಂಗಣ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಸೂರ್ಯನಿಗೆ ಹೆಚ್ಚು ಮೈಯೊಡ್ಡುತ್ತಾರೆ. ಎರಡನೇ ಅಧ್ಯಯನದಲ್ಲಿ ಯುಕೆ ಬಯೋಬ್ಯಾಂಕ್‌ನ ಎರಡನೇ ಅಧ್ಯಯನದಲ್ಲಿ, ಸನ್‌ಸ್ಕ್ರೀನ್ ಬಳಕೆಯು ಚರ್ಮದ ಕ್ಯಾನ್ಸರ್ ಅನ್ನು ಅಭಿವೃದ್ಧಿಪಡಿಸುವ ಎರಡು ಪಟ್ಟು ಹೆಚ್ಚು ಅಪಾಯ ಹೊಂದಿರುವುದು ತಿಳಿದು ಬಂದಿದೆ.
ಈ ಅಧ್ಯಯನಗಳು ಸನ್‌ಸ್ಕ್ರೀನ್ ವಿರೋಧಾಭಾಸವನ್ನು ಸೂಚಿಸುತ್ತವೆ. ಹೆಚ್ಚಿನ ಮಟ್ಟದಲ್ಲಿ ಸೂರ್ಯನಿಗೆ ಒಡ್ಡಿಕೊಳ್ಳುವವರು ಹೆಚ್ಚಿನ ಸನ್‌ಸ್ಕ್ರೀನ್ ಬಳಕೆ ಮಾಡಿದರೂ ಅಗತ್ಯ ಪ್ರಮಾಣ ಬಳಕೆ ಅಥವಾ ರಕ್ಷಣಾ ಮಾದರಿಯನ್ನು ಹೊಂದಿರುವುದಿಲ್ಲ ಎಂದು ಲಿಟ್ವಿನೊವ್ ವಿವರಿಸಿದ್ದಾರೆ. (ಐಎಎನ್ಎಸ್)
ಇದನ್ನೂ ಓದಿ: ಪಿರಿಯಡ್ಸ್ ಮಿಸ್ಸಾಯ್ತಾ! ಋತುಚಕ್ರದ ಸಮಸ್ಯೆಗೆ ಬಳಸಿ ಮನೆ ಮದ್ದು!