ETV Bharat / sukhibhava

ದೃಷ್ಟಿ ದೋಷ.. ಏನಿದು ಅಂಧಕಾರಕ್ಕೆ ಕಾರಣವಾಗುವ ಗ್ಲುಕೋಮಾ? - ಗ್ಲುಕೋಮಾವನ್ನು ” ನಿಶಬ್ದ ದೃಷ್ಟಿ ಚೋರ” ಎಂದು ಕರೆಯಲಾಗುತ್ತದೆ

ಗ್ಲುಕೋಮಾದ ಹಾನಿಯ ಬಗ್ಗೆ ಯೂನಿವರ್ಸಿಟಿ ಡಿ ಮಾಂಟ್ರಿಯಲ್‌ನಲ್ಲಿನ ನರವಿಜ್ಞಾನ ಮತ್ತು ನೇತ್ರವಿಜ್ಞಾನದ ಪ್ರಾಧ್ಯಾಪಕ ಅಡ್ರಿಯಾನಾ ಡಿ ಪೊಲೊ ನೇತೃತ್ವದ ತಂಡವು ಹೊಸ ಸಂಶೋಧನೆ ಕೈಗೊಂಡಿದ್ದು, ಈ ರೋಗದಿಂದ ಬಚಾವಾಗುವ ಸಾಧ್ಯತೆಗಳನ್ನ ಕಂಡುಕೊಂಡಿದ್ದಾರೆ.

ದೃಷ್ಟಿ ದೋಷ.. ಏನಿದು ಅಂಧಕಾರಕ್ಕೆ ಕಾರಣವಾಗುವ ಗ್ಲುಕೋಮಾ?
Research identifies mechanisms underlying glaucoma
author img

By

Published : Feb 12, 2022, 7:52 AM IST

ಮಾಂಟ್ರಿಯಲ್(ಕೆನಡಾ): ಗ್ಲುಕೋಮಾ ಎಂಬುದು ಕಣ್ಣಿನೊಳಗೆ ಹೆಚ್ಚಾದ ದ್ರವ ಒತ್ತಡದಿಂದ ಉಂಟಾಗುವ ಗಂಭೀರ ಕಣ್ಣಿನ ಕಾಯಿಲೆಯಾಗಿದ್ದು, ಇದು ಮೆದುಳಿಗೆ ಚಿತ್ರಗಳನ್ನು ರವಾನಿಸುವ ಆಪ್ಟಿಕ್ ನರಗಳನ್ನು ಹಾನಿಗೊಳಿಸುತ್ತದೆ. 2020 ರಲ್ಲಿ ಪ್ರಪಂಚದಾದ್ಯಂತ 80 ಮಿಲಿಯನ್ ಜನ ಗ್ಲುಕೋಮಾದಿಂದಾಗಿ ಗುಣಪಡಿಸಲಾಗದ ಕುರುಡುತನಕ್ಕೆ ದೂಡಲ್ಪಟ್ಟಿದ್ದಾರೆ.

ಗ್ಲುಕೋಮಾವನ್ನು ” ನಿಶಬ್ದ ದೃಷ್ಟಿ ಚೋರ” ಎಂದು ಕರೆಯಲಾಗುತ್ತದೆ. ಏಕೆಂದರೆ ಇದು ನೋವು ರಹಿತ ಮತ್ತು ಕ್ರಮೇಣ ದೃಷ್ಟಿ ಕಳೆದುಕೊಳ್ಳುವಂತೆ ಮಾಡುತ್ತದೆ, ಆಧಾರ ಆರಂಭಿಕ ಹಂತಗಳಲ್ಲಿ ಯಾವುದೇ ರೋಗ ಲಕ್ಷಣಗಳಲ್ಲಿ ಮತ್ತು ಕಣ್ಣಿನ ಪರೀಕ್ಷೆಯ ಸಮಯದಲ್ಲಿ ಮಾತ್ರ ಇದನ್ನು ಕಂಡು ಹಿಡಿಯಬಹುದು.

ರೋಗ ನಿರ್ಣಯ ಮಾಡದಿದ್ದರೆ ಮತ್ತು ಚಿಕಿತ್ಸೆ ನೀಡದಿದ್ದರೆ, ಗ್ಲುಕೋಮಾ ದೃಷ್ಟಿಗೆ ಬದಲಾಯಿಸಲಾಗದ ನಷ್ಟವನ್ನು ತರುವುದಕ್ಕೆ ಕಾರಣವಾಗಬಹುದು. ಗ್ಲುಕೋಮಾ ಸಾಮಾನ್ಯವಾಗಿ ಬಾಹ್ಯದೃಷ್ಟಿಗೆ ಪರಿಣಾಮ ಬೀರುತ್ತದೆ ಮತ್ತು ಹಾನಿ ಸಂಭವಿಸಿದಾಗ ಮುಂದುವರಿದ ಹಂತದಲ್ಲಿ ಮಾತ್ರ ನೀವು ಈ ಕಾಯಿಲೆಯಿಂದ ಬಳಲುತ್ತಿದ್ದೇವೆ ಎಂದು ತಿಳಿದುಕೊಳ್ಳಲು ಸಾಧ್ಯ.

ಗ್ಲುಕೋಮಾದ ಹಾನಿಯ ಬಗ್ಗೆ ಯೂನಿವರ್ಸಿಟಿ ಡಿ ಮಾಂಟ್ರಿಯಲ್‌ನಲ್ಲಿನ ನರವಿಜ್ಞಾನ ಮತ್ತು ನೇತ್ರವಿಜ್ಞಾನದ ಪ್ರಾಧ್ಯಾಪಕ ಅಡ್ರಿಯಾನಾ ಡಿ ಪೊಲೊ ನೇತೃತ್ವದ ತಂಡವು ಹೊಸ ಸಂಶೋಧನೆ ಕೈಗೊಂಡಿದ್ದು, ಈ ರೋಗದಿಂದ ಬಚಾವಾಗುವ ಸಾಧ್ಯತೆಗಳನ್ನ ಕಂಡುಕೊಂಡಿದ್ದಾರೆ.

ಅವರು ಈ ಬಗ್ಗೆ ಕೈಗೊಂಡಿರುವ ಅಧ್ಯಯನವನ್ನು 'ಪ್ರೊಸೀಡಿಂಗ್ಸ್ ಆಫ್ ದಿ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್'ನಲ್ಲಿ ಪ್ರಕಟಿಸಲಾಗಿದೆ. ಡಿ ಪೊಲೊ ಅವರ ಪ್ರಯೋಗಾಲಯದಲ್ಲಿ ಪೋಸ್ಟ್‌ಡಾಕ್ಟರಲ್ ಫೆಲೋಗಳು ಮತ್ತು ಅಧ್ಯಯನದ ಸಹ - ಲೇಖಕರಾದ ಲೂಯಿಸ್ ಅಲಾರ್ಕಾನ್ - ಮಾರ್ಟಿನೆಜ್ ಮತ್ತು ಯುಕಿಹಿರೊ ಶಿಗಾ ಈ ಬಗ್ಗೆ ಸಂಶೋಧನೆ ಕೈಗೊಂಡಿದ್ದಾರೆ.

ಇವರ ಸಂಶೋಧನೆಯಲ್ಲಿ ಪೆರಿಸೈಟ್‌ಗಳನ್ನು ಸಂಪರ್ಕಿಸುವ ನ್ಯಾನೊಟ್ಯೂಬ್‌ಗಳು ಗ್ಲುಕೋಮಾದಲ್ಲಿ ಹಾನಿಗೊಳಗಾಗುತ್ತವೆ ಎಂಬ ಅಂಶವನ್ನು ಕಂಡುಕೊಂಡಿದ್ದಾರೆ. ಅಷ್ಟೇ ಅಲ್ಲ ಇದು ನ್ಯೂರೋವಾಸ್ಕುಲರ್ ಕೊರತೆಗಳಿಗೂ ಕಾರಣವಾಗುತ್ತದೆ. ಪೆರಿಸೈಟ್​ಗಳು ಕೋಶಗಳಾಗಿದ್ದು, ಅವುಗಳು ಒಂದೇ ಕ್ಯಾಪಿಲ್ಲರಿ ಮೂಲಕ ಹಾದುಹೋಗುವ ರಕ್ತದ ಪ್ರಮಾಣವನ್ನು ಹಿಸುಕಿ ಮತ್ತು ಬಿಡುಗಡೆ ಮಾಡುವ ಮೂಲಕ ನಿಯಂತ್ರಿಸುವ ಸಾಮರ್ಥ್ಯ ಹೊಂದಿವೆ.

ಅಷ್ಟೇ ಏಕೆ ಅವು ದೇಹದ ಎಲ್ಲಾ ಅಂಗಗಳಲ್ಲಿನ ತೆಳುವಾದ ರಕ್ತನಾಳಗಳಾದ ಕ್ಯಾಪಿಲ್ಲರಿಗಳ ಸುತ್ತಲೂ ಸುತ್ತುತ್ತವೆ. ಜೀವಂತ ಪ್ರಾಣಿಗಳಲ್ಲಿ, ಮಾನವರಲ್ಲಿ, ರೆಟಿನಾ ಸರಿಯಾಗಿ ಕಾರ್ಯನಿರ್ವಹಿಸಲು ರಕ್ತದಲ್ಲಿರುವ ಆಮ್ಲಜನಕ ಮತ್ತು ಪೋಷಕಾಂಶಗಳನ್ನು ಇವು ಬಳಕೆ ಮಾಡಿಕೊಳ್ಳುತ್ತವೆ. ಕ್ಯಾಪಿಲ್ಲರಿಗಳ ಮೂಲಕವೇ ಈ ವಿನಿಮತ ನಡೆಯುತ್ತದೆ ಎಂಬುದನ್ನು ಸಂಶೋಧಕರು ಪತ್ತೆ ಹಚ್ಚಿದ್ದಾರೆ.

ಕಣ್ಣುಗಳ ರಕ್ಷಣೆ ನಿಮ್ಮೆಲ್ಲರ ಮೊದಲ ಆದ್ಯತೆಯಾಗಲಿ: ನಿಮ್ಮ ಜೀವನದುದ್ದಕ್ಕೂ ಆರೋಗ್ಯಕರ ದೃಷ್ಟಿಯನ್ನು ಆನಂದಿಸಲು ನೀವು ಬಯಸಿದರೇ ನಿಮ್ಮ ಕಣ್ಣುಗಳನ್ನು ನೋಡಿಕೊಳ್ಳುವುದು ಬಹಳ ಮುಖ್ಯ. ಬದಲಾಯಿಸಲಾಗದ ಕುರುಡುತನಕ್ಕೆ ಪ್ರಮುಖ ಕಾರಣಗಳಲ್ಲಿ ಒಂದಾದ ಗ್ಲುಕೋಮಾದ ಪ್ರಕರಣಗಳಲ್ಲಿ, ಭಾರತವು 12 ಮಿಲಿಯನ್ ಅಂದಾಜು ಸಂಖ್ಯೆಯನ್ನು ಹೊಂದಿದೆ. ಇದು ಗ್ಲುಕೋಮಾದ ಜಾಗತೀಕ ಹೊರೆಯ ಐದನೆಯ ಒಂದು ಭಾಗವಾಗಿದೆ. ರೋಗವನ್ನು ಗುಣಪಡಿಸಲಾಗದಿದ್ದರೂ, ಗ್ಲುಕೋಮಾದ ಪ್ರಗತಿಯನ್ನು ನಿಲ್ಲಿಸಬಹುದು. ಮತ್ತು ಮೊದಲೇ ಪತ್ತೆಯಾದರೆ ಕುರುಡುತಮನವನ್ನು ತಡೆಯಬಹುದು.
ಈ ಲಕ್ಷಣಗಳನ್ನು ಕಡೆಗಣಿಸಬೇಡಿ: ದೃಷ್ಟಿ ಕಳೆದುಕೊಳ್ಳುವುದು, ಆಗಾಗ್ಗೆ ತಲೆನೋವು, ಕಣ್ಣುಗಳ ಸುತ್ತಲೂ ಬಣ್ಣದ ಹಾಲೋಸ್ ಕಾಣಿಸುವುದು, ಅಥವಾ ವಾಕರಿಕೆ ಮತ್ತು ವಾಂತಿಯೊಂದಿಗೆ ಕಣ್ಣುಗುಡ್ಡೆಯ ಸುತ್ತ ನೋವು ಮತ್ತು ಒತ್ತಡದಂತಹ ಯಾವುದೇ ಅಸಾಮಾನ್ಯ ಲಕ್ಷಣಗಳನ್ನು ತಳಿ ಹಾಕಬೇಡಿ.

ಸಂಪೂರ್ಣ ಕಣ್ಣಿನ ಪರೀಕ್ಷೆಯಿಂದ ಮಾತ್ರ ಗ್ಲುಕೋಮಾ ರೋಗ ನಿರ್ಣಯ ಮಾಡಬಹುದಾಗಿರುವುದರಿಂದ, ನೇತ್ರ ತಜ್ಞರು ಪ್ರತಿ 2 ವರ್ಷಗಳಿಗೊಮ್ಮೆ, ಎಲ್ಲರಿಗೂ ಸಮಗ್ರಕಣ್ಣಿನ ಪರೀಕ್ಷೆಯನ್ನು ಶಿಫಾರಸು ಮಾಡುತ್ತಾರೆ.

ಇದನ್ನು ಓದಿ:ಲೈಂಗಿಕ ಸುಖ ಅನುಭವಿಸಲು ಸಾಧ್ಯವಾಗುತ್ತಿಲ್ಲವೇ?.. ಅದಕ್ಕೆ ಇದೇ ಕಾರಣ..

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.