ETV Bharat / sukhibhava

ಕೂದಲಿಗೆ ಬಣ್ಣ ಹಚ್ಚುತ್ತೀರಾ? ಹಾಗಾದ್ರೆ ಈ ಮುನ್ನೆಚ್ಚರಿಕೆ ವಹಿಸುವುದು ಅವಶ್ಯ!

ಇಂದು ಕೂದಲಿಗೆ ಬಣ್ಣ ಹಚ್ಚುವುದು ಸಾಮಾನ್ಯ ವಿಚಾರ. ಆದರೂ ಈ ಬಗ್ಗೆ ಮುನ್ನೆಚ್ಚರಿಕೆ ವಹಿಸದಿದ್ದರೆ, ಭಾರಿ ಬೆಲೆ ತೆರುವಂತೆ ಆಗುತ್ತದೆ.

remember-these-things-before-dyeing-your-hair

author img

By

Published : Aug 1, 2023, 11:32 AM IST

ಬೆಂಗಳೂರು: ಕೂದಲ ಸೌಂದರ್ಯವನ್ನು ಕಾಪಾಡುವುದು ಪ್ರತಿಯೊಬ್ಬರಿಗೆ ಸವಾಲಿನ ಕೆಲಸ. ಎಲ್ಲ ವಯೋಮಾನದವರು ಸೇರಿದಂತೆ ಪುರುಷರು ಮತ್ತು ಮಹಿಳೆಯರು ಈ ಕೂದಲಿನ ಸಮಸ್ಯೆಗೆ ಒಳಗೆ ಆಗುತ್ತಾರೆ. ಅದರಲ್ಲೂ ಬಿಳಿ ಕೂದಲಿನ ಸಮಸ್ಯೆ ಇತ್ತೀಚಿನ ದಿನದಲ್ಲಿ ಹೆಚ್ಚಾಗಿದೆ. ವಯಸ್ಸಿನವರಿಗೆ ಮಾತ್ರವಲ್ಲದೇ, ಹದಿ ಹರೆಯದವರಲ್ಲೂ ಕೂಡ ಕಾಡುತ್ತದೆ. ಇದರಿಂದ ಅನೇಕ ಮಂದಿ ಮುಜುಗರವನ್ನು ಅನುಭವಿಸುತ್ತಾರೆ. ಈ ಕಾರಣದಿಂದ ಅನೇಕ ಮಂದಿ ಕೂದಲಿನ ಬಣ್ಣದ (ಡೈ) ಮೊರೆ ಹೋಗುವ ಮೂಲಕ ಕೂದಲ ನೆರೆಯನ್ನು ಮುಚ್ಚುತ್ತಾರೆ.

ಇನ್ನು ಅನೇಕ ಮಂದಿ ಸ್ಟೈಲ್​ಗಾಗಿ ತಮ್ಮ ವ್ಯಕ್ತಿತ್ವದಲ್ಲಿ ವಿಭಿನ್ನತೆ ಕಾಯ್ದುಕೊಳ್ಳುವ ಉದ್ದೇಶದಿಂದ ಕೂದಲಿಗೆ ಬಣ್ಣ ಹಾಕುತ್ತಾರೆ. ಸ್ಟೈಲ್​ ಇರಲಿ ಮತ್ಯಾವುದೇ ಕಾರಣ ಇರಲಿ ಕೂದಲಿಗೆ ಬಣ್ಣ ಹಾಕುವ ಮುನ್ನ ಕೆಲವು ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಅವಶ್ಯ. ಇಲ್ಲದೇ ಹೋದಲ್ಲಿ ಕೂದಲಿನ ಮೇಲೆ ಭಾರಿ ಪರಿಣಾಮ ಬೀರುತ್ತದೆ. ಜೊತೆಗೆ ಇದು ಕೂದಲಿನ ಮೇಲೆ ಒತ್ತಡ ಹೆಚ್ಚಿಸಿ ಕೂದಲು ಮತ್ತಷ್ಟು ಹಾಳಾಗುವಂತೆ ಮಾಡುತ್ತದೆ.

ಕೂದಲು ಅಕಾಲಿಕವಾಗಿ ಬಿಳಿ ಆಗಲು ಒತ್ತಡವೂ ಒಂದು ಪ್ರಮುಖ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಒತ್ತಡವನ್ನು ಕಡಿಮೆ ಮಾಡುವುದು ಕೂಡ ಅತ್ಯವಶ್ಯಕವಾಗಿದೆ. ಇದರ ಜೊತೆಗೆ ಬಾಹ್ಯವಾಗಿ ಕೆಲವು ಆರೈಕೆಗಳನ್ನು ಅನುಸರಿಸುವುದು ಅತ್ಯಗತ್ಯವಾಗಿದೆ. ಅದರ ಕೆಲವು ಸಲಹೆ ಇಲ್ಲಿದೆ.

ಕೂದಲಿಗೆ ಬಣ್ಣ ಹಚ್ಚುವ ಮುನ್ನ ನಿಮ್ಮ ಕೂದಲಿನ ಗುಣಮಟ್ಟವನ್ನು ಪರಿಶೀಲಿಸುವುದು ಅಗತ್ಯ. ತಲೆ ಹೊಟ್ಟಿನ ಸಮಸ್ಯೆ ಸೇರಿದಂತೆ ಇನ್ನಿತರ ಸಮಸ್ಯೆ ಇದೆಯಾ ಎಂಬುದನ್ನು ಪರಿಶೀಲಿಸಿ. ಇದಾದ ಬಳಿಕ ಬಣ್ಣ ಹಚ್ಚುವ ಮುನ್ನ ಯಾವುದು ಸೂಕ್ತ ಎಂದು ಪ್ಯಾಚ್​ ಟೆಸ್ಟ್​ ಮಾಡಿ. ಡೈ ಮಾಡುವಾಗ ಅದರಲ್ಲಿ ರಾಸಾಯನಿಕ ಅಂಶ ಇರುತ್ತದೆ. ಈ ಹಿನ್ನೆಲೆ ಡೈ ಉತ್ಪನ್ನವನ್ನು ಆರಿಸಿಕೊಳ್ಳುವಾಗ ಅದು ಪಿಪಿಡಿ ಮತ್ತು ಅಮೋನಿಯಾ ಮುಕ್ತವಾಗಿದೆಯಾ ಎಂದು ಪರಿಶೀಲಿಸಿ. ಕಾರಣ ಈ ರಾಸಾಯನಿಕಗಳು ನಿಮ್ಮ ರಕ್ತವನ್ನು ಸೇರುವ ಮೂಲಕ ಅನೇಕ ರೋಗಗಳಿಗೆ ಕಾರಣವಾಗುತ್ತದೆ. ಜೊತೆಗೆ ಶ್ಯಾಂಪೂ ಅಲ್ಲೂ ಸಲ್ಫೆಟ್​​ ಮುಕ್ತ ಅಥವಾ ಸುರಕ್ಷಿತ ಬಣ್ಣದ ವಿಧವನ್ನು ಆಯ್ಕೆ ಮಾಡಿಕೊಳ್ಳಿ.

ನಿಮ್ಮ ಕೂದಲು ದುರ್ಬಲವಾಗಿದ್ದರೆ, ಬಣ್ಣ ಹಚ್ಚದೇ ಇರುವುದು ಉತ್ತಮ. ಒಂದು ವೇಳೆ ಬಣ್ಣ ಹಚ್ಚಲೇ ಬೇಕು ಎಂದರೆ ಕೂದಲಿಗೆ ಮೊದಲು ಅಗತ್ಯವಾದ ಪೋಷಕಾಂಶವನ್ನು ನೀಡಿ. ಜೊತೆಗೆ ರಾಸಾಯನಿಕ ಉತ್ಪನ್ನಗಳನ್ನು ಬಳಕೆ ಮಾಡಬೇಡಿ.

ಕೂದಲಿಗೆ ಬಣ್ಣ ಹಚ್ಚುವ ಮುನ್ನ ಪ್ರತಿ ಎರಡು ದಿನಕ್ಕೆ ಒಮ್ಮೆ ಸ್ನಾನ ಮಾಡಿ. ಹಾಗೇ ಕೂದಲಿಗೆ ಕಂಡಿಷನರ್​ ಬಳಕೆ ಕೂಡ ಹಚ್ಚಿ. ಇದರಿಂದ ಬಣ್ಣ ಹಚ್ಚುವುದರಿಂದ ಕೂದಲಿಗೆ ಹಾನಿ ಆಗುವುದಿಲ್ಲ. ಜೊತೆಗೆ ಬಣ್ಣವೂ ಕೂದಲಿಗೆ ಚೆನ್ನಾಗಿ ಹಿಡಿಯುತ್ತದೆ. ಕೂದಲಿನ ಆರೈಕೆಯಲ್ಲಿ ಮತ್ತೊಂದು ಮುಖ್ಯ ಅಂಶ ಎಂದರೆ, ಎಂದಿಗೂ ಅತಿಯಾದ ಬಿಸಿ ನೀರಿನಿಂದ ತಲೆ ಸ್ನಾನ ಮಾಡಬಾರದು. ಇದು ಕೂದಲಿನ ನೈಸರ್ಗಿಕತೆ ಜೊತೆಗೆ ಕೂದಲಿನ ಬಣ್ಣ ಮಾಸುವಂತೆ ಮಾಡುತ್ತದೆ.

ಇದನ್ನೂ ಓದಿ: ಬೇಸಿಗೆಗೆ ಮಾತ್ರ ಸನ್​ಸ್ಕ್ರೀನ್​ ಅವಶ್ಯಕತೆ ಎನ್ನಬೇಡಿ; ಮಳೆಗಾಲದಲ್ಲೂ ತ್ವಚೆ ಆರೈಕೆ ಮಾಡಿಕೊಳ್ಳಿ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.