ETV Bharat / sukhibhava

ವಾಯುಮಾಲಿನ್ಯ ತಗ್ಗಿಸಿ, ಡೆಮೆನ್ಶಿಯಾ ರೋಗದಿಂದ ಪಾರಾಗಿ: ವೈದ್ಯರ ಸಲಹೆ - ವಾಯುಮಾಲಿನ್ಯವನ್ನು ತಗ್ಗಿಸಲು ಕಟ್ಟುನಿಟ್ಟಿನ ಕ್ರಮ

ವಾಯು ಮಾಲಿನ್ಯದಿಂದಾಗಿ ಸೂಕ್ಷ್ಮ ಕಣಗಳು ಮೂಗಿನ ಮೂಲಕ ಮನುಷ್ಯನ ಮಿದುಳು ಸೇರಿ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತವೆ.

Reduce air pollution to tackle dementia risk

author img

By ETV Bharat Karnataka Team

Published : Aug 24, 2023, 4:07 PM IST

ನವದೆಹಲಿ: ಇತ್ತೀಚಿನ ಅಧ್ಯಯನವೊಂದು ವಾಯು ಮಾಲಿನ್ಯವು ಡೆಮನ್ಶಿಯಾ ಅಪಾಯ ಹೆಚ್ಚಿಸುವ ಸಾಧ್ಯತೆ ಇದೆ ಎಂದು ಸಾಕ್ಷ್ಯಸಮೇತ ತೋರಿಸಿತು. ವಾಯುಮಾಲಿನ್ಯವನ್ನು ತಗ್ಗಿಸಲು ಕಟ್ಟುನಿಟ್ಟಿನ ಕ್ರಮಗಳ ಅವಶ್ಯಕತೆ ಇದೆ ಎಂದು ವೈದ್ಯರು ಕರೆ ನೀಡಿದ್ದಾರೆ. ಡೆಮೆನ್ಶಿಯಾವು ನೆನಪಿನ ಸಾಮರ್ಥ್ಯ, ಆಲೋಚನೆ ಅಥವಾ ನಿರ್ಧಾರ ತೆಗೆದುಕೊಳ್ಳುವಿಕೆ ಸೇರಿದಂತೆ ದೈನಂದಿನ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತದೆ.

ಜಾಮಾ ಇಂಟರ್​ನ್ಯಾಷನಲ್​ ಮೆಡಿಸಿನ್​ನಲ್ಲಿ ಪ್ರಕಟವಾದ ಅಧ್ಯಯನ ವರದಿಯಲ್ಲಿ, ಅಧಿಕ ಮಾಲಿನ್ಯ ಪ್ರದೇಶದಲ್ಲಿ ವಾಸಿಸುವ ಜನರಲ್ಲಿ ಡೆಮನ್ಶಿಯಾ ಅಭಿವೃದ್ಧಿಯಾಗುತ್ತದೆ ಎಂದು ತಿಳಿಸಲಾಗಿದೆ. ಅಧ್ಯಯನವು 23,857 ಮಂದಿಯ ಸಮೀಕ್ಷೆ ನಡೆಸಿ ದತ್ತಾಂಶ ನೀಡಿದೆ. ಈ ವೇಳೆ ಅಧಿಕ ಮಾಲಿನ್ಯ ಕಣಗಳಲ್ಲಿ ವಾಸಿಸುವ ಜನರಲ್ಲಿ ಶೇ 15ರಷ್ಟು ಡೆಮನ್ಶಿಯಾ ಅಭಿವೃದ್ಧಿಯಾಗುವ ಸಾಧ್ಯತೆ ಇದೆ ಎಂದು ಹೇಳಿದೆ.

ಈ ಹಿಂದಿನ ಅಧ್ಯಯನವು ಕೆಟ್ಟ ವಾಯುಗುಣಮಟ್ಟಗಳು ಡೆಮನ್ಶಿಯಾ ಸೇರಿದಂತೆ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ ಎಂದು ತೋರಿಸಿದೆ. ಹೊಸ ಅಧ್ಯಯನವು ವಾಯು ಮಾಲಿನ್ಯದ ನಿರ್ದಿಷ್ಟ ಕಾರಣಗಳು ಹೇಗೆ ಡೆಮನ್ಶಿಯಾ ಅಭಿವೃದ್ಧಿಯಲ್ಲಿ ಬಲವಾದ ಸಂಬಂಧ ಹೊಂದಿದೆ ಎಂದು ವಿವರಿಸಿದೆೆ. ಈ ಅಧ್ಯಯನ ವರದಿಯು ಭಾರತ ವಾಯುಗುಣಮಟ್ಟದಲ್ಲಿ ನಿರಂತರವಾಗಿ ಸ್ಥಾನ ಪಡೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಹೊರಬಂದಿದೆ. ಐದನೇ ವಾರ್ಷಿಕ ವಿಶ್ವ ವಾಯು ಗುಣಮಟ್ಟ ವರದಿ 2022ರ ಪ್ರಕಾರ, ಭಾರತ ವಿಶ್ವದ 8ನೇ ಅತ್ಯಂತ ವಾಯು ಮಾಲಿನ್ಯ ದೇಶ. ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸು ಮಾಡಿರುವ ವಾಯುಗುಣಮಟ್ಟಕ್ಕಿಂತ 10 ಬಾರಿ ಹೆಚ್ಚು ಮಾಲಿನ್ಯಕ್ಕೆ ದೇಶ ಒಳಗಾಗಿದೆ.

ದೆಹಲಿಯಲ್ಲಿ ಕಳಪೆ ವಾಯು ಗುಣಮಟ್ಟ: ದೆಹಲಿ ಅತಿ ಹೆಚ್ಚು ಮಾಲಿನ್ಯಕ್ಕೊಳಗಾದ ನಾಲ್ಕನೇ ನಗರ. ಜಾಗತಿಕವಾಗಿ ಹೆಚ್ಚು ಮಾಲಿನ್ಯಗೊಂಡಿರುವ ಎರಡನೇ ರಾಜಧಾನಿಯೂ ಹೌದು. ಭಾರತದಲ್ಲಿ ಗಾಳಿಯಲ್ಲಿನ ಕಣಗಳ ಹೆಚ್ಚಿನ ಸಾಂದ್ರತೆಯು ಸಾಕಷ್ಟು ಸಮಸ್ಯಾತ್ಮಕವಾಗಿದೆ. ಸಣ್ಣ ಮಾಲಿನ್ಯದ ಕಣಗಳು ಮೂಗಿನ ಮೂಲಕ ಮಿದುಳು ತಲುಪಿ, ನರದ ಕೋಶಗಳ ಸಾಯುವಿಕೆಗೆ ಕಾರಣವಾಗುತ್ತದೆ. ಇದರೊಂದಿಗೆ ಡೆಮೆನ್ಶಿಯಾ ಸಂಬಂಧ ಹೊಂದಿದೆ, ಮಾಲಿನ್ಯದಲ್ಲಿನ ಕೆಲವು ಸುಧಾರಿತ ಊರಿಯುತದ ಪ್ರೊಟೀನ್​ಗಳು ಮಿದುಳಿನ ಮೇಲೆ ಪರಿಣಾಮ ಬೀರಬಹುದು ಎಂದು ಗುರುಗಾಂವ್​ ವೈದ್ಯ ಡಾ.ಪ್ರವೀಣ್​ ಗುಪ್ತಾ ತಿಳಿಸಿದರು.

ಈ ಅಧ್ಯಯನವು ಡೆಮನ್ಶಿಯಾದ ಮೇಲೆ ವಾಯು ಮಾಲಿನ್ಯದ ಪರಿಣಾಮದ ಕುರಿತು ಬೆಳಕು ಚೆಲ್ಲುತ್ತದೆ. ಗಾಳಿಯಲ್ಲಿನ ಹೆಚ್ಚಿನ ಕಣಗಳ ಅಪಾಯಗಳನ್ನು ನಾವು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ ಎಂದಿದ್ದಾರೆ.

ಅಗತ್ಯ ಕ್ರಮ: ದೆಹಲಿ/ಎನ್​ಸಿಆರ್​ನಲ್ಲಿ ಗಾಳಿಯ ಗುಣಮಟ್ಟದ ಬಗ್ಗೆ ತಜ್ಞರು ಕಳವಳ ವ್ಯಕ್ತಪಡಿಸಿದ್ದು, ಇಲ್ಲಿನ ಪರಿಸರ ಬದಲಾವಣೆಯು ಗಾಳಿಯನ್ನು ವಿಷಯುಕ್ತವಾಗಿಸಿದೆ. ಇಷ್ಟು ಮಟ್ಟದ ಮಾಲಿನ್ಯದ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗದಿದ್ದರೆ ಡೆಮನ್ಶಿಯಾ ಅಪಾಯದ ದರ ಹೆಚ್ಚುತ್ತದೆ. ವಾಯುಮಾಲಿನ್ಯವನ್ನು ಇಳಿಕೆ ಮಾಡುವುದು ಜಾಗತಿಕ ಆರೋಗ್ಯ ಪ್ರಕರಣಗಳಿಂದ ಅಗತ್ಯ. ಇದು ಡೆಮನ್ಶಿಯಾ ಮತ್ತು ಇತರೆ ಹವಾಮಾನ ಬದಲಾವಣೆ ವಿಷಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಸರ್ಕಾರ, ಹೆಲ್ತ್​​ಕೇರ್​ ಸಮುದಾಯಗಳು ಸೇರಿದಂತೆ ಇತರೆ ಸಂಘಟನೆಗಳು ಡೆಮನ್ಶಿಯಾ ಅಪಾಯದ ಕುರಿತು ಸಲಹೆಗಳನ್ನು ನೀಡಿ ನಿಯಂತ್ರಣ ಮಾಡುವ ಕಾರ್ಯ ನಿರ್ವಹಿಸಬೇಕಿದೆ ಎಂದು ಡಾ.ಗುಪ್ತಾ ಸಲಹೆ ನೀಡಿದ್ದಾರೆ.

ಇಂದು ವಾಯುಮಾಲಿನ್ಯ ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯ ಅಂದಾಜಿನಂತೆ ವಾರ್ಷಿಕವಾಗಿ 7 ಮಿಲಿಯನ್​ ಮಂದಿ ವಾಯು ಮಾಲಿನ್ಯ ಕಣಗಳಿಗೆ ತೆರೆದುಕೊಳ್ಳುತ್ತಿರುವುದರಿಂದ ಪಾರ್ಶ್ವವಾಯು, ಹೃದಯ ರೋಗ, ಶ್ವಾಸಕೋಶದ ಕ್ಯಾನ್ಸರ್​, ಉಸಿರಾಟ ಸಮಸ್ಯೆ, ನ್ಯೂಮೋನಿಯಾದಂತಹ ಅಪಾಯ ಎದುರಿಸುತ್ತಿದ್ದಾರೆ. (ಐಎಎನ್​ಎಸ್​)

ಇದನ್ನೂ ಓದಿ: ಭಾರತದಲ್ಲಿನ ಕಳಪೆ ವಾಯು ಗುಣಮಟ್ಟದಿಂದ ಶಿಶುಗಳಲ್ಲಿ ಅರಿವಿನ ಸಮಸ್ಯೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.