ವಾಷಿಂಗ್ಟನ್: ಬಿಯರ್ನ ರುಚಿ ಹೆಚ್ಚಿಸಲು ಬಳಸುವ ಹಾಪ್ಸ್ (ಹ್ಯೂಮುಲಸ್ ಲುಪುಲಸ್ ಹೂವುಗಳು) ಆಲ್ಝೈಮರ್ ಕಾಯಿಲೆಯಿಂದ ರಕ್ಷಿಸುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಸಾಮಾನ್ಯವಾಗಿ ಜನರಿಗೆ ವಯಸ್ಸಾದಂತೆ ಅಮಿಲಾಯ್ಡ್ ಬೀಟಾ ಪ್ರೋಟೀನ್‌ಗಳು ಮೆದುಳಿನ ನರಗಳಲ್ಲಿ ಸಂಗ್ರಹಗೊಳ್ಳುತ್ತವೆ. ಈ ನರಗಳಲ್ಲಿ ಬೀಟಾ ಪ್ರೋಟೀನ್‌ಗಳು ಶೇಖರಣೆ ಹೆಚ್ಚಾಗುವುದರಿಂದ ಆಲ್ಝೈಮರ್ ಉಂಟಾಗಿ ಬುದ್ಧಿಮಾಂದ್ಯತೆಗೆ ಕಾರಣವಾಗುತ್ತದೆ. ಇದಕ್ಕೆ ವಿರುದ್ಧವಾಗಿ ಹಾಪ್ಸ್‌ನಲ್ಲಿರುವ ವಿಶೇಷ ಸಂಯುಕ್ತಗಳು ಕಾರ್ಯನಿರ್ವಹಿಸುತ್ತವೆ ಎಂದು ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ.
ಅಲ್ಲದೆ ಟೆಟ್ನಾಂಗ್ ಎಂಬ ಹಾಪ್ ಸಂಯುಕ್ತಗಳು ನರಗಳಲ್ಲಿನ ಅಮಿಲಾಯ್ಡ್ ಬೀಟಾ ಪ್ರೋಟೀನ್‌ಗಳ ಶೇಖರಣೆಯನ್ನು ತಡೆಯುವಲ್ಲಿ ಪರಿಣಾಮಕಾರಿ ಎಂದು ಅಧ್ಯಯನದಲ್ಲಿ ತಿಳಿದು ಬಂದಿದೆ. ಈ ಸಂಯುಕ್ತಗಳಲ್ಲಿ ರೋಗ ನಿರೋಧಕ ಗುಣಲಕ್ಷಣಗಳಲ್ಲಿ ಸಮೃದ್ಧವಾಗಿವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಆದರೆ ಬಿಯರ್ ಕುಡಿಯುವುದರಿಂದ ಆಲ್ಝೈಮರ್ ಕಾಯಿಲೆಯನ್ನು ತಡೆಯಬಹುದು ಎಂದು ಇಲ್ಲಿ ಹೇಳಲಾಗಿಲ್ಲ.
ಇದನ್ನೂ ಓದಿ : ಕಣ್ಣಿನ ಕಾಯಿಲೆಗೆ ಬಳಸುವ ಔಷಧವು ಕೋವಿಡ್ ವಿರುದ್ಧ ಹೋರಾಡಲು ಸಹಕಾರಿ: ಅಧ್ಯಯನ