ETV Bharat / sukhibhava

ಚಳಿಗಾಲದಲ್ಲಿ ಹೆಚ್ಚಾಗಿ ಕಾಡುವ ಮಾಲಿನ್ಯದ ಸಮಸ್ಯೆ!: ಈ ಪ್ರಾಬ್ಲಂನಿಂದ ತಪ್ಪಿಸಿಕೊಳ್ಳುವುದು ಹೇಗೆ? - ಆರೋಗ್ಯದ ಸಲಹೆ ಸುದ್ದಿ

ವಾಯು ಮಾಲಿನ್ಯದ ನಿರ್ಮೂಲನೆ ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಅದಕ್ಕೆ ಪರ್ಯಾಯ ಮಾರ್ಗವನ್ನು ಕಂಡು ಕೊಂಡು ಆರೋಗ್ಯದಿಂದ ಇರಬೇಕು.

precaution-for-winter-health-problem
precaution-for-winter-health-problem
author img

By ETV Bharat Karnataka Team

Published : Nov 24, 2023, 3:48 PM IST

ಚಳಿಗಾಲ ಬಂದಾಕ್ಷಣ ನೆನಪಾಗುವುದು ದೆಹಲಿ ವಾಯು ಮಾಲಿನ್ಯ. ಕಾರಣ ಇಲ್ಲಿ ಚಳಿಗಾಲದಲ್ಲಿನ ವಾಯು ಮಾಲಿನ್ಯ ಪ್ರಮಾಣ ಹೆಚ್ಚಾಗುತ್ತದೆ. ಕೇವಲ ರಾಷ್ಟ್ರ ರಾಜಧಾನಿಯಲ್ಲಿ ಮಾತ್ರವಲ್ಲದೇ, ಎಲ್ಲ ಕಡೆಯಲ್ಲೂ ಚಳಿಗಾಲದ ಮಾಲಿನ್ಯ ಕಾಡುವುದು ಸಹಜ,. ಇದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಕೂಡ ಹೆಚ್ಚಾಗುತ್ತದೆ. ಚಳಿಗಾದಲ್ಲಿ ಜ್ವರ, ಕೆಮ್ಮು, ನೆಗಡಿಯಂತಹ ಸಮಸ್ಯೆಗಳು ಹೆಚ್ಚಾಗಿ ಬಾಧಿಸುತ್ತದೆ. ಈ ವೇಳೆ, ಕೆಲವು ಮುನ್ನೆಚ್ಚರಿಕೆಯನ್ನು ಅನುಸರಿಸುವ ಮೂಲಕ ಇದರ ಸಮಸ್ಯೆಯ ತೀವ್ರತೆಯನ್ನು ಕಡಿಮೆ ಮಾಡಬಹುದಾಗಿದೆ.

ಗಿಡಗಳು: ವಾಯು ಮಾಲಿನ್ಯವೂ ಗ್ರಾಮೀಣ ಪ್ರದೇಶಕ್ಕಿಂತ ನಗರ ಪ್ರದೇಶದಲ್ಲಿ ಹೆಚ್ಚಾಗಿ ಕಾಡುತ್ತದೆ. ಇದಕ್ಕೆ ಕಾರಣ ಗಿಡ ಮರಗಳ ಕೊರತೆ. ಈ ಕಾರಣದಿಂದ ಮನೆಯೊಳಗೆ ಗಿಡಗಳನ್ನು ಬೆಳೆಸುವುದು ಉತ್ತಮ ಎನ್ನುತ್ತಾರೆ ತಜ್ಞರು. ಮನೆಯೊಳಗೆ ಹೆಚ್ಚು ಗಾಳಿ ನೀಡುವಂತಹ ಗಿಡಗಳನ್ನು ಬೆಳೆಸಿದಾಗ ಆಮ್ಲಜನಕದ ಮಟ್ಟ ಹೆಚ್ಚುತ್ತದೆ. ಇದು ಹೊರಗಿನ ಮಾಲಿನ್ಯವನ್ನೂ ಕೂಡ ತಡೆಯುತ್ತದೆ. ಆಲೋವೆರಾ, ಮನಿ ಪ್ಲಾಂಟ್​​, ಸ್ಪೈಡರ್​ ಪ್ಲಾಂಟ್​ನಂತಹ ಗಿಡಗಳು ಒಳಾಂಗಣ ಸಸ್ಯಗಳಾಗಿದ್ದು, ಇವು ಹೆಚ್ಚು ಪ್ರಯೋಜನಕಾರಿಯಾಗಿದೆ.

ಹಸಿರು.. ಸಿಟ್ರಸ್ ಹಣ್ಣು: ವಾಯು ಮಾಲಿನ್ಯವೂ ಅನೇಕ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ. ನಮ್ಮ ದೇಹದ ಪ್ರತಿರೋಧಕ ಶಕ್ತಿ ಹೆಚ್ಚಿದಾಗ ಮಾತ್ರ ಅದನ್ನು ತಡೆಯಲು ಸಾಧ್ಯ. ನಮ್ಮ ದೇಹದಲ್ಲಿ ಸೋಂಕಿನ ವಿರುದ್ಧ ಹೋರಾಡುವ ಶಕ್ತಿ ಬೆಳೆದರೆ ಇದು ಸಾಧ್ಯ. ಈ ಹಿನ್ನಲೆ ಹೆಚ್ಚಾಗಿ ಹಸಿರು ತರಕಾರಿ, ಸಿಟ್ರೆಸ್​ ಭರಿತ ಹಣ್ಣು, ಬೆರ್ರಿಸ್​​, ನಟ್ಸ್​​ ಮುಂತಾದವುಗಳ ಸೇವನೆ ಅಗತ್ಯ. ಇವು ನಿಮ್ಮ ಡಯಟ್​ನ ಭಾಗವಾಗಿರುವಂತೆ ನೋಡಿಕೊಳ್ಳುವುದು ಅಗತ್ಯ. ಇವುಗಳಲ್ಲಿ ವಿಟಮಿನ್​ ಮತ್ತು ಮಿನರಲ್​ ಸಮೃದ್ಧ ಗುಣಗಳಿರುತ್ತದೆ. ಇವು ರೋಗ ನಿರೋಧಕತೆ ಹೆಚ್ಚಿಸುತ್ತದೆ. ಇದರ ಜೊತೆಗೆ ನೀರನ್ನು ಹೆಚ್ಚಾಗಿ ಸೇವನೆ ಮಾಡುವುದರಿಂದ ದೇಹದ ವಿಷಕಾರಿ ಅಂಶವನ್ನು ತೆಗೆದು ಹಾಕಿ ಚಯಾಪಚಯ ಕ್ರಿಯೆಯನ್ನು ಸುಧಾರಿಸಬಹುದು. ​​

ತುಳಸಿ.. ಬೆಲ್ಲ: ತುಳಸಿ ಮತ್ತು ಬೆಲ್ಲದಿಂದ ಮಾಡಿದ ಹರ್ಬಲ್​ ಚಹಾಗಳು ಕೂಡ ವಾಯು ಮಾಲಿನ್ಯದಿಂದ ಆಗುವ ಸಮಸ್ಯೆ ತಡೆಯುವಲ್ಲಿ ಸಹಾಯ ಮಾಡುತ್ತದೆ. ಇದಕ್ಕಾಗಿ ಐದರಿಂದ ಆರು ತುಳಸಿ ಎಲೆ, ಸ್ವಲ್ಪ ತುರಿದ ಶುಂಠಿ ಮತ್ತು ಬೆಲ್ಲವನ್ನು ಒಂದು ಲೋಟಕ್ಕೆ ಹಾಕಿ ಚೆನ್ನಾಗಿ ಐದು ನಿಮಿಷ ಕುದಿಸಿ. ಇದು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಉಸಿರಾಟ ಸಮಸ್ಯೆಗೆ ಮುಕ್ತಿ ಹಾಡುತ್ತದೆ.

ಹಬೆ: ವಾಯು ಮಾಲಿನ್ಯವೂ ಶ್ವಾಸಕೋಶದ ಸಮಸ್ಯೆಗೆ ಕಾರಣವಾಗುತ್ತದೆ. ಇದಕ್ಕೆ ಪ್ರಮುಖ ಪರಿಹಾರ ಹಬೆ ತೆಗೆದುಕೊಳ್ಳುವುದಾಗಿದೆ ಎಂದಿದ್ದಾರೆ ತಜ್ಞರು. ಈ ರೀತಿ ಹಬೆ ತೆಗೆದುಕೊಳ್ಳುವಾಗ ಒಂದೆರಡು ಹನಿ ಯಾವುದಾದರೂ ಎಸೆನ್ಷಿಯಲ್​ ಎಣ್ಣೆಯನ್ನು ಸೇರಿಸುವುದು ಉತ್ತಮ. ಇದರಿಂದ ತಕ್ಷಣಕ್ಕೆ ಪರಿಹಾರ ಸಿಗುತ್ತದೆ.

ಇದನ್ನೂ ಓದಿ: ದೆಹಲಿ ಜನರಲ್ಲಿ ಹೆಚ್ಚಾದ ಕಣ್ಣಿನ ಸಮಸ್ಯೆ; ಇದಕ್ಕೆಲ್ಲ ವಾಯು ಮಾಲಿನ್ಯ ಕಾರಣವೆಂದ ನೇತ್ರತಜ್ಞರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.